Saturday, September 7, 2024
HomeGovt Schemeಆಧಾರ್ ತಿದ್ದುಪಡಿಗೆ ನಿಮ್ಮ ಸಮೀಪದ ಶಾಲಾ ಆವರಣದಲ್ಲಿಯೇ ವ್ಯವಸ್ಥೆ: ಎಷ್ಟು ದಿನಗಳು ತಿದ್ದುಪಡಿ ಮಾಡುತ್ತಾರೆ ಗೊತ್ತಾ?...

ಆಧಾರ್ ತಿದ್ದುಪಡಿಗೆ ನಿಮ್ಮ ಸಮೀಪದ ಶಾಲಾ ಆವರಣದಲ್ಲಿಯೇ ವ್ಯವಸ್ಥೆ: ಎಷ್ಟು ದಿನಗಳು ತಿದ್ದುಪಡಿ ಮಾಡುತ್ತಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಆಧಾರ ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದಂತೆ ಶಾಲಾ ಆವರಣದಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಅಗತ್ಯವಾಗಿರುವ ಆಧಾರ್ ತಿದ್ದುಪಡಿ ಕಾರಣ ಮಕ್ಕಳ ಆಧಾರ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಸೂಚಿಸಿದೆ. ಆದರೆ ಮಕ್ಕಳ ಕಲಿಕೆಗೆ ಆಧಾರ ಕೇಂದ್ರಗಳ ಕೊರತೆಯಿಂದ ತೊಂದರೆ ಆಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ತಿದ್ದುಪಡಿ ವ್ಯವಸ್ಥೆಯನ್ನು ಶಾಲೆಗಳ ಆವರಣದಲ್ಲಿಯೇ ಮಾಡಲಾಗಿದೆ. ಹಾಗಾದರೆ ಎಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಪ್ರಾರಂಭವಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Arrangement in school premises for Aadhaar correction
Arrangement in school premises for Aadhaar correction
Join WhatsApp Group Join Telegram Group

ಶಾಲಾ ಆವರಣದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ :

ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೆರೆ ಅವರು ಆಧಾರ್ ಕಾರ್ಡ್ ತಿದ್ದುಪಡಿ ವ್ಯವಸ್ಥೆ ಶಾಲೆಗಳ ಆವರಣದಲ್ಲಿಯೇ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಮಲ್ಲಾಪುರ ಪಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ಅವರು ಭೇಟಿಯಾಗಿದ್ದು ಶಿಕ್ಷಣ ಇಲಾಖೆಯ ಹೊಸ ನಿಯಮದಿಂದ ಶಾಲಾ ಮಕ್ಕಳ ಆಧಾರ್ ಕಾರ್ಡ್ ಗಳ ತಿದ್ದುಪಡಿಗಾಗಿ ಅವರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದರ ಕುರಿತು ಚರ್ಚಿಸಿದರು. ಈಗಾಗಲೇ ಮೂಡಲಗಿ ಹಾಗೂ ಗೋಕಾಕ್ ತಹಶೀಲ್ದಾರರೊಂದಿಗೆ ಶಾಲಾ ಮಕ್ಕಳ ತಿದ್ದುಪಡಿಯನ್ನು ಶಾಲಾ ಆವರಣದಲ್ಲಿಯೇ ಮಾಡಲು ಚರ್ಚಿಸಿ ಲಿಖಿತ ರೂಪದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಆಯಾ ಶಾಲೆಗಳ ಆವರಣದಲ್ಲಿಯೇ ಕೂಡಲೇ ಆಧಾರ್ ಕ್ಯಾಂಪ್ಗಳನ್ನು ಮಾಡುವ ಮೂಲಕ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿಯಲ್ಲಿ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಕೋರಲಾಗಿದೆ.

ಮಕ್ಕಳ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು :

ಆಧಾರ್ ಕಾರ್ಡ್ ತಿದ್ದುಪಡಿ ಗಾಗಿ ಶಿಕ್ಷಕರು ಪಾಲಕರ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬಾರದೆಂದು ಸೂಚಿಸಲಾಗಿದೆ. ತಮ್ಮ ಮಕ್ಕಳ ದಾಖಲೆಗಳನ್ನು ಪಾಲಕರು ಕೂಡ ಸರಿಪಡಿಸಿಕೊಳ್ಳಲು ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಶಿಕ್ಷಣಾಧಿಕಾರಿ ಮನವಿ ಮಾಡಿಕೊಂಡರು.

ಅನುದಾನಿತ ಶಾಲೆಗಳ ಬಗ್ಗೆ ಕ್ರಮ :

ಒಂದು ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಫೀಸ್ ವಸೂಲಿ ಹಾಗೂ ಫೀಸ್ ತುಂಬಲು ವಿದ್ಯಾರ್ಥಿಗಳಿಂದ ವಿಳಂಬವಾದ ಕಾರಣ ವಿದ್ಯಾರ್ಥಿಗಳನ್ನು ಬೆಂಚ ಮೇಲೆ ನಿಲ್ಲಿಸುವುದು, ಫೀಸ್ ತೆಗೆದುಕೊಂಡ ಶಾಲೆಗೆ ಬರಬೇಕು ಎಂದು ಮನೆಗೆ ವಿದ್ಯಾರ್ಥಿಗಳನ್ನು ಕಳುಹಿಸಿರುವ ಸಮಸ್ಯೆಗಳ ಕುರಿತು ಕನ್ನಡ ಪರ ಸಂಘಟನೆಗಳ ಮುಖಂಡರುಗಳು ಬಿ ಇ ಓ ಅವರ ಗಮನಕ್ಕೆ ತಂದಾಗ ಪ್ರಮುಖವಾಗಿ ಅನುದಾನಿತ ಶಾಲೆಗಳಿಗೆ ಸರ್ಕಾರಿ ಅನುದಾನಿತ ಶಾಲೆ ಎಂದು ನಾಮಫಲಕ ಹಾಕುವುದು ಹಾಗೂ ಸರ್ಕಾರ ಪಾಲಕರಿಂದ ನಿಗದಿಪಡಿಸಿದ ಫೀಸ್ ಮಾತ್ರ ತೆಗೆದುಕೊಳ್ಳುವ ಕುರಿತು ಅಜಿತ್ ಮುನ್ನಿ ಕೇರೆ ಅವರು ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದರು. ಮತ್ತು ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದನ್ನು ಓದಿ : 5 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ: ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ಸಭೆಯ ಉಸ್ಪಸ್ಥಿತಿಯಲ್ಲಿದ್ದವರು :

ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆಂಪಣ್ಣ ಚೌಕಷಿಯವರು ಜಿಎಸ್ ರಜಪೂತ, ಕೆಂಪಣ್ಣ ಪುರಾಣಿಕ, ಆಫ್ತಾ ಸಾಬ ಮುಲ್ಲಾ, ಸಿ ಆರ್ ಸಿ ರಂಗನಾಥ ಗುಡ್ಡೇರ, ಪ್ರಶಾಂತ್ ಅರಳಿ ಕಟ್ಟಿ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಳಸನ್ನ ವರ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಹೀಗೆ ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆದ ಅಜಿತ ಮುನ್ನಕೇರಿಯವರು ಶಾಲಾ ಮಕ್ಕಳಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಶಾಲಾ ಆವರಣದಲ್ಲಿಯೇ ಮಕ್ಕಳ ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಸುತ್ತೋಲೆಯನ್ನು ಹೊರಡಿಸಲು ತಿಳಿಸಿದ್ದಾರೆ. ಹೀಗೆ ಇವರು ಹೇಳಿರುವ ಪ್ರಕಾರ ಶಾಲ ಮಕ್ಕಳು ಸುಲಭವಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಬಹುದಾಗಿದೆ. ಹೀಗೆ ಶಾಲಾವರಣದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಬಹುದು ಎಂಬುದರ ಬಗ್ಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ತಲೆ ಬೇರ್ಪಟ್ಟ ನಂತರವೂ ಸಹ ಯಾವ ಜೀವಿಯು ಸಾಕಷ್ಟು ದಿನ ಬದುಕಿರುತ್ತದೆ ? ನೀವು ಯೋಚಿಸಿದ ಉತ್ತರ ಸರಿ ಇದೆಯಾ?

ಟಾಪ್ ಹೀರೋಯಿನ್ ಗಳು ಪಡೆದ ಶಿಕ್ಷಣ, ಜೀವನ ವ್ಯವಸ್ಥೆ ಹೇಗಿದೆ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments