Sunday, September 8, 2024
HomeNewsರಾಜ್ಯದ್ಯಂತ ಬಾರೀ ಮಳೆಯ ಮುನ್ಸೂಚನೆ! ಇನ್ನು 4-5 ದಿನ ಈ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಮಳೆ,...

ರಾಜ್ಯದ್ಯಂತ ಬಾರೀ ಮಳೆಯ ಮುನ್ಸೂಚನೆ! ಇನ್ನು 4-5 ದಿನ ಈ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಮಳೆ, ಹವಮಾನ ಇಲಾಖೆಯಿಂದ ಸ್ಪಷ್ಟನೆ

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದಲ್ಲಿ ಕೆಲವೇ ದಿನದಲ್ಲಿ ಮಳೆ ಅತಿ ಹೆಚ್ಚು ಆಗಿದ್ದು,ಇದೀಗ ಮಳೆಯೇ ಇಲ್ಲದೇ ರೈತರು ಕಂಗಾಲಾಗಿದ್ದರು. ಹಾಗೆಯೇ ಇದರಿಂದಾಗಿ ಬೆಳೆ ಬೆಳೆಯಲು ತುಂಬಾ ತೊಂದರೆ ಉಂಟಾಗಿದ್ದು, ರೈತರಿಗೆ ನೀರಿನ ಅವಶ್ಯಕತೆ ಬಹಳ ಮುಖ್ಯವಾಗಿ ಬೇಕಾಗಿತ್ತು. ಆದರೆ ಇದೀಗ ಹವಮಾನ ಇಲಾಖೆಯು ಮತ್ತೆ ರಾಜ್ಯದಲ್ಲಿ ಮಳೆ ಚುರುಕುಗೊಳ್ಳುವ ಎಲ್ಲ ಸನ್ನಿವೇಶವು ಕಾಣುತ್ತಿದೆ ಎಂದು ಹೇಳಿದೆ. ಮಳೆಯು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗುತ್ತದೆ ಎಂಬುದರ ಸಂಪೂರ್ಣ ವಿವರವನ್ನು ನಾವು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

heavy rain karnataka
Join WhatsApp Group Join Telegram Group

ನೋಡ ನೋಡುತ್ತಲೇ ಮೋಡಗಳು ಮರೆಯಾಗಿವೆ. ಭಾರಿ ಮಳೆ ಕೊರತೆ ಎದುರಾಗಿದ್ದು, ಕೃಷಿ ಚಟುವಟಿಕೆಗೆ ಪೆಟ್ಟು ಬಿದ್ದಿದೆ. ಆಗಸ್ಟ್ ತಿಂಗಳಲ್ಲಿ ಮೊದಲ ಅರ್ಧಕ್ಕೆ ಶೇಕಡಾ 39 ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ನಡೆದಿದ್ದು. ಕೆಲವು ಕಡೆಗಳಲ್ಲಿ ಜುಲೈ ಕೊನೆಯ ವಾರದಲ್ಲಿ ಭತ್ತದ ಕೃಷಿ ನಡೆದಿದೆ. ಆದರೆ ಹೆಚ್ಚಿನ ಪ್ರದೇಶದಲ್ಲಿ ಮಳೆ ಕೊರತೆ ಪರಿಣಾಮ ಭತ್ತ ನಾಟಿ ಮಾಡೇ ಇಲ್ಲ. ಈ ಮೂಲಕ ಮಳೆ ಕೊರತೆ ಜೊತೆಗೆ ಆಹಾರದ ಅಭಾವದ ಆತಂಕ ಕೂಡ ಆವರಿಸಿದೆ.

ಮಳೆರಾಯ ಕೈಕೊಟ್ಟು ಹೋಗಿದ್ದು, ಧೋ ಅಂತಾ ಮಳೆ ಸುರಿಯಬೇಕಿದ್ದ ಸಮಯದಲ್ಲೇ ಬಿಸಿಲು ಧಗಧಗಿಸುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದು, ಮುಂದಿನ ಪರಿಸ್ಥಿತಿ ಬಗ್ಗೆ ಚಿಂತೆ ಶುರುವಾಗಿದೆ. ಇವತ್ತಿನಿಂದ ಮತ್ತೆ ಮುಂಗಾರು ಮಳೆ ಚುರುಕು ಪಡೆದುಕೊಳ್ಳುವ ಸಾಧ್ಯತೆ ಇದೆ. ಭಾರೀ ಮಳೆ ಮುನ್ಸೂಚನೆಯನ್ನು ಹವಮಾನ ಇಲಾಖೆ ಪಡೆದುಕೊಂಡಿದೆ. ಮುಂದಿನ 4-5 ದಿನಗಳ ಕಾಲ ರಾಜ್ಯದಲ್ಲಿ ಬಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕೆಲವು ಪ್ರದೇಶಗಳಲ್ಲಿ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹೇಳಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಸಹ ಓದಿ: ಆರ್‌ಬಿಐ ಹೊಸ ಮಾರ್ಗಸೂಚಿ: ಪ್ರತಿಯೊಬ್ಬ ಬ್ಯಾಂಕ್‌ ಖಾತೆದಾರರು ನೋಡಲೇಬೇಕಾದ ಸುದ್ದಿ.!

ಈ ಜಿಲ್ಲೆಗಳಲ್ಲಿ ಮಳೆಯಾಗತ್ತೆ?

ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಕೆಲವೆಡೆ ಹಗುರ ಮಳೆಯಾಗಿದೆ. ಇಂದು ಕೂಡ ಮೋಡಕವಿದ ವಾತಾವರಣ ಮುಂದುವರೆದೆ. ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯಾದ್ಯಂತ ಮುಂಗಾರು ಮತ್ತೆ ಚುರುಕುಗೊಳ್ಳಲಿದೆ. ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆಯಂತೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ರಾಯಚೂರುನಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ,ವಿಜಯಪುರ, ಯಾದಗಿರಿ, ಬಳ್ಳಾರಿಯಲ್ಲೂ ಮಳೆಯಾಗಲಿದೆ. ಮುಂದುವರೆದು ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಅಲ್ಲದೇ ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇತರೆ ವಿಷಯಗಳು:

ವಿದ್ಯಾರ್ಥಿಗಳ ಶೂನ್ಯ ದಾಖಲಾತಿ, ಈ ಜಿಲ್ಲೆಯ 13 ಪ್ರಾಥಮಿಕ ಶಾಲೆಗಳು ಬಂದ್.! ಮುಂದೇನ್‌ ಗತಿ?

ಆರ್‌ಬಿಐ ಹೊಸ ಮಾರ್ಗಸೂಚಿ: ಪ್ರತಿಯೊಬ್ಬ ಬ್ಯಾಂಕ್‌ ಖಾತೆದಾರರು ನೋಡಲೇಬೇಕಾದ ಸುದ್ದಿ.!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments