Sunday, September 8, 2024
HomeTrending Newsಮಹಿಳೆಯರಿಗೆ ಸರ್ಕಾರದಿಂದ ಹೊಸ ಯೋಜನೆ : 19 ದೈನಂದಿನ ಬಳಕೆಯ ವಸ್ತು ಉಚಿತವಾಗಿ ಸಿಗಲಿದೆ

ಮಹಿಳೆಯರಿಗೆ ಸರ್ಕಾರದಿಂದ ಹೊಸ ಯೋಜನೆ : 19 ದೈನಂದಿನ ಬಳಕೆಯ ವಸ್ತು ಉಚಿತವಾಗಿ ಸಿಗಲಿದೆ

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಗರ್ಭಿಣಿಯರ ಕಲ್ಯಾಣಕ್ಕಾಗಿ ಕರ್ನಾಟಕ ಮಡಿಲು ಯೋಜನೆ ಎಂಬ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿದೆ. ಕರ್ನಾಟಕ ಮಡಿಲು ಕಿಟ್ಟಿ ಯೋಜನೆಯನ್ನು 2007 ರಲ್ಲಿ ಕರ್ನಾಟಕ ಸರ್ಕಾರವು ಪ್ರಾರಂಭಿಸಿತು. ಈ ಯೋಜನೆಯನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಯೋಜನೆಯ ನೋಡಲ್ ಇಲಾಖೆಯಾಗಿದೆ ಎಂದು ಹೇಳಲಾಗುತ್ತಿದೆ.

New scheme from Govt
New scheme from Govt
Join WhatsApp Group Join Telegram Group

ಮಡಿಲು ಕಿಟ್ ಯೋಜನೆಯ ಉದ್ದೇಶ :

ಕರ್ನಾಟಕ ಸರ್ಕಾರವು ಆರಂಭಿಸಿದ ಮಡಿಲು ಕಿಟ್ ಯೋಜನೆಯ ಪ್ರಮುಖ ಉದ್ದೇಶ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯನ್ನು ಉತ್ತೇಜಿಸುವುದಾಗಿದೆ ಹಾಗೂ ತಾಯಿ ಮತ್ತು ಮಗುವಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕ ಮಡಿಲು ಕಿಟ್ ಯೋಜನೆಯ ಅಡಿಯಲ್ಲಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ತಾಯಿಗೆ ಕ್ಷೇಮಕಿಟ್ ನ್ನು ಕರ್ನಾಟಕ ಸರ್ಕಾರವು ನೀಡುತ್ತದೆ. ಈ ಕಿಟ್ನ ಮೂಲಕ ತಾಯಿ ಮತ್ತು ಮಗುವಿಗೆ ಅವರ ಪ್ರಸವದ ನಂತರ ದ ಅವರಿಗೆ ಹೆಚ್ಚು ಉಪಯೋಗವಾಗುತ್ತದೆ. 19 ದೈನಂದಿನ ಬಳಕೆಯ ವಸ್ತುಗಳನ್ನು ಈ ಕಿಟ್ ಹೊಂದಿರುತ್ತದೆ. ತಾಯಿ ಮತ್ತು ಮಗುವಿಗೆ ಈ ಯೋಜನೆಯ ತುಂಬಾ ಪ್ರಯೋಜನಕಾರಿಯಾಗಿದೆ. 1500 ರೂಪಾಯಿಗಳನ್ನು ಮಡಿಲು ಕಿಟ್ ಯೋಜನೆಗೆ ನಿಗದಿಪಡಿಸಲಾಗಿದೆ. ಬಿಪಿಎಲ್ ಕಾರ್ಡನ್ನು ಹೊಂದಿದಂತವರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದಂತಹ ಮಹಿಳೆಯರು ಈ ಮಡಿಲು ಕಿಟ್ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಅರ್ಹತೆಗಳು :

ಮಡಿಲು ಕಿಟ್ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಮಹಿಳೆಯರು ಕರ್ನಾಟಕದ ನಿವಾಸಿ ಆಗಿರಬೇಕು. ಗರ್ಭಿಣಿ ಮಹಿಳೆಯರಾಗಿರಬೇಕು. ಮಗುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ನೀಡಿರಬೇಕು.

ಮಡಿಲು ಕಿಟ್ ನಲ್ಲಿ ಲಭ್ಯವಾಗುವ ವಸ್ತುಗಳು :

ಸೊಳ್ಳೆ ಪರದೆ, ಹತ್ತಿಯ ಕಾರ್ಪೆಟ್,ತಾಯಿಗೆ ಕಾಟನ್ ಹೊದಿಕೆ, ಬೆಡ್ ಶೀಟ್, ತಾಯಿಗೆ ಸ್ನಾನದ ಸೋಪು ಎರಡು, ಬಟ್ಟೆ ಒಗೆಯುವ ಸೋಪ್ 4, ಹೊಟ್ಟೆಗೆ ಬಟ್ಟೆ ಕಟ್ಟಲು ಒಂದು, ಸ್ಯಾನಿಟರಿ ಪ್ಯಾಡ್ 4, ತೆಂಗಿನ ಎಣ್ಣೆ ಒಂದು, ತಾಯಿಗೆ ಟವಲ್ 2, ಟೂತ್ಪೇಸ್ಟ್ ಮತ್ತು ಬ್ರಷ್ ಒಂದು, ಮಗುವಿಗೆ ಒಂದು ಹೊದಿಕೆ, ಬೆಡ್ ಶೀಟ್ ಎರಡೂ, ಸೋಪ್ ಎರಡು, ರಬ್ಬರ್ ಶೀಟ್ ಮಗುವಿಗೆ ಒಂದು, ಆರು ಡೈಪರ್, ಮಗುವಿಗೆ ಬಟ್ಟೆ ಮೂರು, ಮಗುವಿಗೆ ಉಲಾನ್ ಸ್ವೆಟರ್ ಕ್ಯಾಪ್ ಸಾಕ್ಸ್ ತಲಾ ಒಂದು, ಈ ಎಲ್ಲಾ ಐಟಂಗಳನ್ನು ಇಡಲು ಒಂದು ಬ್ಯಾಗ್ ಅನ್ನು ಸಹ ಮಡಿಲು ಕಿಟ್ಟಿ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ.

ಇದನ್ನು ಓದಿ : Instagram ಬಳಕೆದಾರರೇ ಎಚ್ಚರ..! ಬ್ಯಾನ್ ಆಗುತ್ತಿದೆ ಇನ್ಸ್ಟಾಗ್ರಾಮ್, ನಿಮ್ಮ ಖಾತೆ ಕೂಡಲೇ ನಿಷ್ಕ್ರಿಯಗೊಳಿಸಿ

ಅರ್ಜಿಯನ್ನು ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು :

ಗರ್ಭಿಣಿ ಮಹಿಳೆಯು ಮಡಿಲು ಕಿಟ್ಟನ್ನು ಪಡೆಯಬೇಕಾದರೆ ಕೆಲವೊಂದಿಷ್ಟು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ ಕರ್ನಾಟಕದ ನಿವಾಸ ಪುರಾವೆ, ಬಿಪಿಎಲ್ ಕಾರ್ಡ್ ಅಥವಾ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ ,ಆಧಾರ್ ಕಾರ್ಡ್ ಾಗೂ ಎಎನ್‌ಸಿ ನೋಂದಣಿ ಸಂಖ್ಯೆ ಜೊತೆಗೆ ಮೊಬೈಲ್ ನಂಬರ್.
ಹೀಗೆ ಗರ್ಭಿಣಿ ಮಹಿಳೆಯರು ಮಡಿಲು ಕಿಟ್ಟನ್ನು ಹೊಂದುವುದರ ಮೂಲಕ ಹೀಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಪಡೆಯಬಹುದಾಗಿದೆ.

ಹೀಗೆ ಕರ್ನಾಟಕ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯ ಸಂಪೂರ್ಣ ಲಾಭವನ್ನು ಗರ್ಭಿಣಿ ಮಹಿಳೆಯರು ಅರ್ಜಿಯನ್ನು ಸಲ್ಲಿಸುವುದರ ಮೂಲಕ ಆಸ್ಪತ್ರೆಯಲ್ಲಿರುವಾಗ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ತಾಯಿ ಹಾಗೂ ಮಗು ಇಬ್ಬರೂ ಸಹ ಪಡೆಯಬಹುದಾಗಿದೆ ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

LPG ಬಳಕೆದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ! ಗ್ಯಾಸ್ ಸಿಲಿಂಡರ್ ಅನ್ನು ಕೇವಲ 200‌ ರೂಪಾಯಿಗೆ ಇಲ್ಲಿಂದ ಪಡೆಯಿರಿ

ಮೊಬೈಲ್ ನಲ್ಲಿಯೇ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಳ್ಳಿ! ಕೇವಲ ಒಂದೇ ನಿಮಿಷದಲ್ಲಿ ಟೋಕನ್ ಮೆಸೇಜ್ ಪಡೆಯಿರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments