Sunday, September 8, 2024
HomeTrending Newsಮೊಬೈಲ್ ನಲ್ಲಿಯೇ ಇಂಟರ್ನೆಟ್ ಇಲ್ಲದೆ ಟಿವಿ ಚಾನೆಲ್ ನೋಡಬಹುದು : ಈ ವಿಧಾನ ಅನುಸರಿಸಿ

ಮೊಬೈಲ್ ನಲ್ಲಿಯೇ ಇಂಟರ್ನೆಟ್ ಇಲ್ಲದೆ ಟಿವಿ ಚಾನೆಲ್ ನೋಡಬಹುದು : ಈ ವಿಧಾನ ಅನುಸರಿಸಿ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಹೊಸ ಟೆಕ್ನಾಲಜಿಯ ಬಗ್ಗೆ. ತಂತ್ರಜ್ಞಾನದಲ್ಲಿ ನಾವು ಇಂದು ಬಹಳಷ್ಟು ಮುಂದುವರೆದಿದ್ದೇವೆ. ಇಂದು ನಾವು ಇಂಟರ್ನೆಟ್ ಮೂಲಕ ಡಿಟಿಎಚ್ ಸಂಪರ್ಕವಿಲ್ಲದೆ ಅಂದರೆ ಯಾವುದೇ ಕೇಬಲ್ ಸಂಪರ್ಕವಿಲ್ಲದೆ ಟಿವಿ ಚಾನಲ್ ಅನ್ನು ವೀಕ್ಷಿಸಬಹುದಾಗಿದೆ. ನಮಗೆ ಎಲ್ಲಾ ಸುದ್ದಿಗಳು ಮೊಬೈಲ್ ನಲ್ಲಿ ಲಭ್ಯವಾಗುತ್ತದೆ. ಅದರಂತೆ ಈಗ ಹೊಸ ತಂತ್ರಜ್ಞಾನವನ್ನು ಜಾರಿಗೆ ತರಲು ಸರ್ಕಾರವು ನಿರ್ಧರಿಸಿದೆ. ಆ ಹೊಸ ತಂತ್ರಜ್ಞಾನ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

You can watch TV channel without internet on your mobile
You can watch TV channel without internet on your mobile
Join WhatsApp Group Join Telegram Group

ದೂರಸಂಪರ್ಕ ಇಲಾಖೆ :

ಡೈರೆಕ್ಟ್ ಮೊಬೈಲ್ ಅಂದರೆ ಡಿಟು ಎಂ ತಂತ್ರಜ್ಞಾನದ ಕಾರ್ಯ ಸಾಧ್ಯತೆಯನ್ನು ದೂರಸಂಪರ್ಕ ಇಲಾಖೆ ಸಾರ್ವಜನಿಕ ಸೇವಾ ಪ್ರಸಾರಕ ಪ್ರಸಾರ ಭಾರತ್ನ ಸಹಯೋಗದೊಂದಿಗೆ ಅನ್ವೇಷಿಸುತ್ತಿದೆ. ಇದರಿಂದ ಮೊಬೈಲ್ ಮೂಲಕ ಡಿ ಟು ಎಮ್ ತಂತ್ರಜ್ಞಾನದಿಂದ ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದೆ ಎಲ್ಲಾ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.

ಡೈರೆಕ್ಟ್ ಟು ಮೊಬೈಲ್ ತಂತ್ರಜ್ಞಾನ :

ನೇರವಾಗಿ ಸಕ್ರಿಯ ಇಂಟರ್ನೆಟ್ ಸಂಪರ್ಕವಿಲ್ಲದೆ ಮೊಬೈಲ್ ಫೋನ್ ಗಳಿಗೆ ವಿಡಿಯೋ ಮತ್ತು ಇತರ ಮಲ್ಟಿಮೀಡಿಯಾ ವಿಷಯಗಳನ್ನು ಪ್ರಸಾರ ಮಾಡಲು ಸರ್ಕಾರ ಅನುಮತಿಸುತ್ತದೆ. ಬ್ರಾಡ್ ಬ್ಯಾಂಡ್ ಮತ್ತು ಪ್ರಸಾರದ ಒಮ್ಮುಖವನ್ನು ಇದು ಆಧರಿಸಿದೆ. ಮೊಬೈಲ್ ಫೋನ್ ಗಳು ಟೆರೇಸ್ ರಿಯಲ್ ಡಿಜಿಟಲ್ ಟಿವಿಯನ್ನು ಸ್ವೀಕರಿಸಲು ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಸಾಧ್ಯವಾಗುತ್ತದೆ. ಇದೇ ರೀತಿಯ ಎಫ್ಎಮ್ ರೇಡಿಯೋ ಮೊಬೈಲ್ ಫೋನ್ ಗಳಲ್ಲಿ ಇದ್ದು ಇದು ಫೋನ್ ರೇಡಿಯೋ ಆವರ್ತಗಳನ್ನು ಟ್ಯಾಪ್ ಮಾಡಬಹುದಾಗಿದೆ. ಬ್ರಾಡ್ ಬ್ಯಾಂಡ್ ಮತ್ತು ಸ್ಪೆಕ್ಟ್ರಮ್ ಬಳಕೆಯನ್ನು ಸುಧಾರಿಸುತ್ತದೆ.

ಡಿಟು ಎಮ್ ತಂತ್ರಜ್ಞಾನದ ಪ್ರಯೋಜನಗಳು :

ಇದು ಎಮ್ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ನೇರವಾಗಿ ನಾಗರೀಕ ಕೇಂದ್ರಿತ ಮಾಹಿತಿಗೆ ಸಂಬಂಧಿಸಿದ ವಿಷಯವನ್ನು ಪ್ರಸಾರ ಮಾಡಲು ಸಹಕಾರಿಯಾಗಿದೆ. ಇದರ ಮೂಲಕ ತುರ್ತು ಎಚ್ಚರಿಕೆಗಳನ್ನು ನೀಡಲು, ನಕಲಿ ಸುದ್ದಿಗಳನ್ನು ಎದುರಿಸಲು ಮತ್ತು ವಿಪತ್ತು ನಿರ್ವಹಣೆಯಲ್ಲಿ ನೆರವು ನೀಡಲು ಈ ತಂತ್ರಜ್ಞಾನ ಸಹಾಯಕವಾಗಿದೆ. ಲೈವ್ ಕ್ರೀಡೆಗಳು ಮತ್ತು ಸುದ್ದಿಗಳನ್ನು ಮೊಬೈಲ್ ಫೋನ್ ಗಳಲ್ಲಿ ಪ್ರಸಾರ ಮಾಡಲು ಇದನ್ನು ಬಳಸಬಹುದಾಗಿದೆ.

ಇದನ್ನು ಓದಿ : Breaking News: ಹೊಸ ರೇಷನ್‌ ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಬಿಗ್‌ ಶಾಕ್!‌ ಈ ದಿನಾಂಕದ ನಂತರವೇ ಅರ್ಜಿ ಸಲ್ಲಿಸಲು ಅವಕಾಶ

ಡಿಟು ಎಮ್ ತಂತ್ರಜ್ಞಾನದ ಮಹತ್ವ :

ಗ್ರಾಹಕರು ಮೊಬೈಲ್ ಡೇಟಾವನ್ನು ಖಾಲಿ ಮಾಡದೆಯೇ ಡಿ ಟು ಎಮ್ ತಂತ್ರಜ್ಞಾನದ ಮೂಲಕ ಓವರ್ ದಿ ಟಾಪ್ ಅಥವಾ ವಿಡಿಯೋ ಅಂಡ್ ಡಿಮ್ಯಾಂಡ್ ಕಂಟೆಂಟ್ ಫ್ಲಾಟ್ ಫಾರ್ಮ್ ಗಳಿಂದ ಮಲ್ಟಿಮೀಡಿಯಾವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅತ್ಯಲ್ಪ ದರದಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತದೆ. ಇದು ಸೀಮಿತವಾಗಿರೋ ಗ್ರಾಮೀಣ ಪ್ರದೇಶದ ಜನರಿಗೆ ವಿಡಿಯೋ ವಿಷಯವನ್ನು ವೀಕ್ಷಿಸಲು ಹಾಗೂ ಇಂಟರ್ನೆಟ್ ಪ್ರವೇಶವನ್ನ ಹೊಂದಿರದ ಜನರಿಗೆ ಅವಕಾಶ ನೀಡುತ್ತದೆ. ಹೀಗೆ ಹಲವಾರು ಸೌಲಭ್ಯಗಳನ್ನು ಹಾಗೂ ಮಹತ್ವವನ್ನು ಡಿಟುಎಂ ತಂತ್ರಜ್ಞಾನದ ಮೂಲಕ ನೋಡಬಹುದಾಗಿದೆ. ಹೀಗೆ ಸರ್ಕಾರವು ನೇರವಾಗಿ ಬಳಕೆದಾರರ ಸ್ಮಾರ್ಟ್ಫೋನ್ಗಳಿಗೆ ಸೆಕ್ಟ್ರೆಂ ಕಾರ್ಯಸಾಧನೆಯನ್ನು ಅಧ್ಯಯನ ಮಾಡಲು ತಂತ್ರಜ್ಞಾನವನ್ನು ದೂರಸಂಪರ್ಕ ಇಲಾಖೆ ಸಮಿತಿಯನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಸಹಕಾರಿಯಾಗಲಿದೆ ಎಂದು ಹೇಳಬಹುದಾಗಿದೆ.

ಹೀಗೆ ಸರ್ಕಾರವು ಹೊಸ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಸುಲಭವಾಗಿ ಮೊಬೈಲ್ ನಲ್ಲಿಯೇ ಎಲ್ಲಾ ಕಾರ್ಯಕ್ರಮಗಳನ್ನು ನೋಡಬಹುದು ಎಂಬುದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಹಾಗೂ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡಿ

ಇತರೆ ವಿಷಯಗಳು :

News Update: ಚಂದ್ರಯಾನ- 3 ಲ್ಯಾಂಡಿಂಗ್‌ ದಿನಾಂಕ ಹಾಗೂ ಸಮಯ ಘೋಷಿಸಿದ ಇಸ್ರೋ

IAS Question: ಈ ದೇಶದ ಜನರು ಭಾರತಕ್ಕೆ ಬರುವಂತಿಲ್ಲ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ ಉತ್ತರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments