Saturday, July 27, 2024
HomeInformationರೇಷನ್ ಕಾರ್ಡ್ ಇಲ್ಲದೇ ಇರುವವರಿಗೆ ಸಿಹಿ ಸುದ್ದಿ : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ...

ರೇಷನ್ ಕಾರ್ಡ್ ಇಲ್ಲದೇ ಇರುವವರಿಗೆ ಸಿಹಿ ಸುದ್ದಿ : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ

ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾದಂತಹ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರವು ಘೋಷಿಸಿದಂತಹ ಇದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿಯೂ ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಾಂತಿನ ಹಣವು ಬಿಡುಗಡೆಯಾಗಿದ್ದು ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ 1.10 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದು ಅದರಲ್ಲಿ ಆರ ರಿಂದ ಏಳು ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಹಾಕಲಾಗಿದೆ. ಉಳಿದಂತಹ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಈ ಹಣವನ್ನು ಸೆಪ್ಟೆಂಬರ್ ಅಂತ್ಯದ ಒಳಗಾಗಿ ವರ್ಗಾವಣೆ ಆಗಲಿದೆ ಎಂಬುದರ ಭರವಸೆಯನ್ನು ಈಗಾಗಲೇ ರಾಜ್ಯ ಸರ್ಕಾರ ನೀಡಿದೆ.

good-news-for-those-who-do-not-have-a-ration-card
good-news-for-those-who-do-not-have-a-ration-card
Join WhatsApp Group Join Telegram Group

ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರುವ ಮಹಿಳೆಯರಲ್ಲಿ ಇರುವ ಪ್ರಶ್ನೆಗಳು :

ಇನ್ನು ಅನೇಕ ಮಹಿಳೆಯರಿಗೆ ಇದರ ನಡುವೆ ಗೃಹಲಕ್ಷ್ಮಿ ಯೋಜನೆಯ ಕುರಿತು ಸಾಕಷ್ಟು ಪ್ರಶ್ನೆಗಳಿವೆ ಏಕೆಂದರೆ ಕೆಲವೊಂದಿಷ್ಟು ಜನರ ಬಳಿ ರೇಷನ್ ಕಾರ್ಡ್ ಇಲ್ಲ ಹಾಗೂ ಕೆಲವರ ರೇಷನ್ ಕಾರ್ಡ್ ನಲ್ಲಿ ಮಹಿಳೆಯರು ಕುಟುಂಬದ ಮುಖ್ಯಸ್ಥರಾಗಿರುವುದಿಲ್ಲ ಅಲ್ಲದೇ ಅವರ ಬ್ಯಾಂಕ್ ಖಾತೆಗಳು ಸಹ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ ಅಲ್ಲದೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಅಕೌಂಟ್ ನೀಡಿರುವ ದಾಖಲೆಯಲ್ಲಿ ಸಾಕಷ್ಟು ಹೆಸರಿನ ವ್ಯತ್ಯಾಸವಿರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಂತಹ ಮಹಿಳೆಯರು ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾ ಅರ್ಜಿ ಸಲ್ಲಿಸಿದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆಯೋ ಇಲ್ಲವೇ ಎಂಬುದರ ಕುರಿತು ರಾಜ್ಯ ಸರ್ಕಾರವು ಸ್ಪಷ್ಟ ಮಾಹಿತಿಯನ್ನು ನೀಡಿದ್ದು ಇದೀಗ ಈ ಅಂಕಣದಲ್ಲಿ ರಾಜ್ಯ ಸರ್ಕಾರ ನೀಡಿರುವ ಹೊಸ ಆದೇಶವನ್ನು ತಿಳಿಸಲಾಗುತ್ತಿದೆ.

ರೇಷನ್ ಕಾರ್ಡ್ ದಾಖಲೆ ಮುಖ್ಯ :

ರೇಷನ್ ಕಾರ್ಡ್ ಮುಖ್ಯ ದಾಖಲೆಯಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕೇ ಬೇಕು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಇಲ್ಲದೆ ಇದ್ದರೆ ಸಾಧ್ಯವಾಗುವುದಿಲ್ಲ. ರೇಷನ್ ಕಾರ್ಡ್ ಇಲ್ಲದೇ ಇರುವವರು ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದ ನಂತರ ರೇಷನ್ ಕಾರ್ಡ್ ಪಡೆದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ. ಯಾವುದೇ ಕಡೆಯ ದಿನಾಂಕವನ್ನು ಗುರುಹಲಕ್ಷ್ಮಿ ಯೋಜನೆಗೆ ನಿಗದಿಪಡಿಸಿಲ್ಲದಿದ್ದರಿಂದ ನೀವು ಯಾವಾಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತೀರಾ ಆ ತಿಂಗಳ ಮುಂದಿನ ತಿಂಗಳಿನಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಎಂಬುದರ ಬಗ್ಗೆ ಸರ್ಕಾರವು ಭರವಸೆ ನೀಡಿದೆ.

ರೇಷನ್ ಕಾರ್ಡ್ ತಿದ್ದುಪಡಿ :

ಮಹಿಳೆಯರ ಮುಖ್ಯಸ್ಥರ ಸ್ಥಾನದಲ್ಲಿ ರೇಷನ್ ಕಾರ್ಡ್ ಇಲ್ಲದೇ ಇದ್ದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ ವಾಗುವುದಿಲ್ಲ. ಒಂದು ವೇಳೆ ಹಿರಿಯ ಮಹಿಳೆಯರು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಈಗಾಗಲೇ ಇದ್ದು ಅವರು ನಿಧನ ಹೊಂದಿದ್ದರೆ ಬೇರೆ ಮಹಿಳೆಯು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ತಕ್ಷಣವೇ ತಿದ್ದುಪಡಿ ಮಾಡುವುದರ ಮೂಲಕ ಹಾಗೂ ರೇಷನ್ ಕಾರ್ಡ್ ನಲ್ಲಿ ಇಲ್ಲದವರ ಹೆಸರನ್ನು ತೆಗೆದುಹಾಕಿಸಿದ ನಂತರ ಬದಲಾಯಿಸುವುದರ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ : ರೈಲು ಟಿಕೆಟ್ ಪಡೆದ ನಂತರವೂ ಪ್ರಯಾಣಿಕರು ದಂಡ ಪಾವತಿಸಬೇಕು, ಏನಿದು ರೈಲ್ವೆಯ ವಿಶಿಷ್ಟ ನಿಯಮ?

ಆಧಾರ್ ಕಾರ್ಡ್ ಕಡ್ಡಾಯ :

ಬ್ಯಾಂಕ್ ವಿವರಗಳನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪಡೆಯುತ್ತಿಲ್ಲ ಏಕೆಂದರೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆಯೋ ಆ ಖಾತೆಗೆ ಡಿ ಬಿ ಟಿ ಮೂಲಕ ನೇರವಾಗಿ ಹಣವನ್ನು ಸರ್ಕಾರವು ವರ್ಗಾವಣೆ ಮಾಡುತ್ತದೆ. ಹಾಗಾಗಿ ಧಾರ್ ಫೀಡಿಂಗ್ ಎನ್‌ಪಿಸಿಐ ಮ್ಯಾಪಿಂಗ್ ಅನ್ನು ಖಾತೆಗೆ ಆಗಿರದಿದ್ದರೆ ಮತ್ತು ಲಿಂಕ್ ಆಗಿದ್ದರು ಸಹ ನಿಮ್ಮ ಖಾತೆ ಹ್ಯಾಪಿ ಆಗಿರದೆ ಇದ್ದರೆ ಗೃಹ ಲಕ್ಷ್ಮಿ ಯೋಜನೆಯ ಹಣವು ಮಹಿಳೆಯರಿಗೆ ಸಿಗುವುದಿಲ್ಲ. ಹಾಗಾಗಿ ಇದನ್ನು ಸಹ ಮಹಿಳೆಯರು ಸರಿಪಡಿಸಿಕೊಳ್ಳುವುದರ ಮೂಲಕ ತಕ್ಷಣವೇ ತಿದ್ದುಪಡಿ ಮಾಡಿಕೊಂಡು ಇಂತಹ ಸಮಸ್ಯೆಗಳಿದ್ದರೆ ಸರಿ ಮಾಡಿಕೊಳ್ಳುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ತಾಲೂಕಿನ ಮಹಿಳಾ ಮತ್ತು ಕಲ್ಯಾಣ ಇಲಾಖೆಗೆ ಭೇಟಿ :

ಇನ್ನು ನೀವು ಲಕ್ಷ್ಮಿ ಯೋಜನೆಗೆ ಎಲ್ಲ ಮಾಹಿತಿಯನ್ನು ನೀಡಿರುವುದರ ಮೂಲಕ ಅರ್ಜಿ ಸಲ್ಲಿಸಿದ್ದರೆ ಹಣ ಬರುತ್ತಿಲ್ಲ ಎಂದರೆ ನೀವು ನಿಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಸಹಾಯಕಿ ಅಥವಾ ಕಾರ್ಯಕರ್ತರು ಸಹಾಯದಿಂದ ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡುವುದರ ಮೂಲಕ ಈ ಕುರಿತು ಮನವಿಯನ್ನು ಇಲಾಖೆಗೆ ಸಲ್ಲಿಸಿ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು ಈ ಕ್ರಮಗಳು ಸರಿಯಾಗಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ತಲುಪುತ್ತದೆ ಎಂದು ಹೇಳಬಹುದು ಆಗಿದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಈ ಲೇಖನದ ಮಾಹಿತಿಯನ್ನು ಎಲ್ಲರಿಗೂ ಕಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಈ ಮರದ ಕೆಳಗೆ ಮಲಗಿದರೆ ವ್ಯಕ್ತಿ ಸಾಯುತ್ತಾನೆ? ಸರಿ ಉತ್ತರ ನೀಡಿದವರೆ ಇಲ್ಲ!

ಒಬ್ಬ ವ್ಯಕ್ತಿಯ ಬಳಿ ಇದಕ್ಕಿಂತ ಹೆಚ್ಚಿನ ಬ್ಯಾಂಕ್‌ ಖಾತೆ ಇದ್ರೆ ದಂಡ ಗ್ಯಾರಂಟಿ…! ಆರ್‌ಬಿಐ ಹೊಸ ಅಪ್ಡೇಟ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments