Thursday, June 20, 2024
HomeTrending Newsಚಿಕ್ಕ ವಯಸ್ಸಲ್ಲೇ ಕೂದಲು ಬಿಳಿಯಾಗುವುದು ಏಕೆ? ಇದನ್ನು ಮಾಡದಿದ್ದರೆ ಅಪಾಯ ಖಂಡಿತ

ಚಿಕ್ಕ ವಯಸ್ಸಲ್ಲೇ ಕೂದಲು ಬಿಳಿಯಾಗುವುದು ಏಕೆ? ಇದನ್ನು ಮಾಡದಿದ್ದರೆ ಅಪಾಯ ಖಂಡಿತ

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ತಲೆಕೂದಲಿನ ಬಗ್ಗೆ ನಮಗೆಷ್ಟು ಗೊತ್ತು..? ತಲೆಕೂದಲು ಏಕೆ ಉದುರುತ್ತದೆ. ಏಕೆ ಚಿಕ್ಕ ವಯಸ್ಸಿಗೆ ಬಿಳಿಯಾಗುತ್ತದೆ. ಇದಕ್ಕೆ ಕಾರಣಗಳೇನು? ಯಾವ ರೀತಿಯ ಆಹಾರ ಶೈಲಿಯನ್ನು ರೂಪಿಸಿಕೊಳ್ಳಬೇಕು ಹಾಗೂ ಯಾವ ಅಂಶಗಳನ್ನು ದಿನನಿತ್ಯ ರೂಢಿಸಿಕೊಳ್ಳಬೇಕು ಮತ್ತು ಕೂದಲಿನ ಬಗ್ಗೆ ಇರುವಂತಹ ಅಪನಂಬಿಕೆಗಳೇನು? ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಈ ಲೇಖನವನ್ನು ಓದಿ.

Hair problem
Join WhatsApp Group Join Telegram Group

ವ್ಯಕ್ತಿಯ ಬಾಹ್ಯ ಸೌಂದರ್ಯದ ಮೇಲೆ ಕೂದಲು ತನ್ನದೇ ಆದ ಪಾತ್ರವನ್ನು ನಿಭಾಯಿಸುತ್ತದೆ. ಈ ಕೂದಲ ರಚನೆ ಹಾಗೂ ಆಕಾರ ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ನೇರ ಕೂದಲು ಗುಂಗುರು ಕೂದಲು ಬಿಳಿಗೂದಲು ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ಸಾಕಷ್ಟು ವ್ಯತ್ಯಾಸಗಳಿರುತ್ತದೆ. ಈ ರೀತಿಯ ಇನ್ನು ಅನೇಕ ವಿಧಗಳನ್ನು ಹೊಂದಿದೆ.

ಎಷ್ಟೋ ಜನ ತಮ್ಮ ಕೂದಲನ್ನು ಇದ್ದಹಾಗೆ ಒಪ್ಪಿಕೊಳ್ಳೋಕೆ ಕಷ್ಟಪಡುತ್ತಾರೆ. ಅದರಲ್ಲೂ ಗುಂಗುರು ಕೂದಲು ಹೊಂದಿರುವ ಬಹುತೇಕ ಜನರು ದಿನಕ್ಕೊಮ್ಮೆಯಾದರೂ ನೇರ ಕೂದಲ ಬಗ್ಗೆ ಯೋಚಿಸುತ್ತಾರೆ. ಇನ್ನು ಕೆಲವರು ಇರುವಂತಹ ಕೂದಲನ್ನೇ ಕೇರ್‌ ಮಾಡಿಕೊಳ್ಳುತ್ತಾರೆ. ಪಾರ್ಲರ್‌ಗಳ ಮೊರೆ ಹೋಗಿ ತಮಗೆ ಬೇಕಾದಂತಹ ರೀತಿಯಲ್ಲಿ ಕೂದಲನ್ನು ನೇರ ಅಥವಾ ಗುಂಗುರು ಕೂದಲನ್ನು ಮಾಡಿಸಿಕೊಳ್ಳುತ್ತಾರೆ.

ಕೂದಲು ಪ್ರತಿಯೊಬ್ಬರಿಗೂ ಭಿನ್ನವಾಗಿರುವುದೇಕೆ? ಕೂದಲಿನ ಆಕಾರದ ಮೇಲೆ ಯಾವ ಅಂಶಗಳು ಪ್ರಭಾವ ಬೀರುತ್ತದೆ. ಕೂದಲು ಗುಂಗುರು ಆಗಲು ಕಾರಣಗಳೇನು? ಎಲ್ಲಾ ಅಂಶಗಳನ್ನು ಕೂಡ ಈ ಲೇಖನದಲ್ಲಿ ತಿಳಿಯೋಣ.

ಕೂದಲನ್ನು ಮುಖ್ಯವಾಗಿ 4 ವಿಧಗಳಾಗಿ ವಿಂಗಂಡಿಸಿದ್ದಾರೆ.

  • ನೇರ ಕೂದಲು: ಈ ಕೂದಲು ಬಾಗುವುದಿಲ್ಲ. ನೇರವಾಗಿ ಬೆಳೆಯುತ್ತವೆ.
  • ಅಲೆಅಲೆಯಾದ ಕೂದಲು:ಈ ಕೂದಲುಗಳು ಗುಂಗುರು ಹಾಗೂ ನೇರ ಕೂದಲುಗಳ ನಡುವೆ ಬೆಳೆಯುತ್ತದೆ. ಹೆಸರೇ ಹೇಳುವಂತೆ ಅಲೆಗಳ ರೀತಿ ಇರುತ್ತದೆ.
  • ಗುಂಗುರು ಕೂದಲು
  • ಒತ್ತಾಗಿ ತಿರುಚಿದ ಕೂದಲು: ಈ ಕೂದಲು ತುಂಬಾ ಗುಂಗುರು ಕೂದಲು ಇರುತ್ತದೆ.

‌ಇದನ್ನು ಸಹ ಓದಿ: ಇದೀಗ ಬಂದ ಬಿಸಿ ಬಿಸಿ ಸುದ್ದಿ; ಇನ್ಮುಂದೆ ದೇಶಾದ್ಯಂತ ನೋಟು ಮುದ್ರಣ ಬಂದ್!‌ RBI ನ್ಯೂ ರೂಲ್ಸ್

ಈ 4 ವಿಧದಲ್ಲಿ 3 ಶೇಪ್‌ ಗಳು ಇರುತ್ತದೆ. ಆ ಶೇಪ್‌ ಗಳು ಹೇಗೆ ಉಂಟಾಗುತ್ತದೆ ಎಂಬುದನ್ನ ನೋಡುವುದಾದರೆ, ಕೂದಲಿನಲ್ಲಿ 2 ಭಾಗಗಳಿವೆ. ಪೈಬರ್‌ ಹಾಗೂ ಪಾಲಿಕಲ್‌ ಗಳು.

ತಲೆಕೂದಲು ಪೈಬರ್‌ ಕೆರಾಟಿನ್‌ ಎಂಬ ಪ್ರೋಟೀನ್‌ನಿಂದ ಮಾಡಲ್ಪಟ್ಟಿರುತ್ತದೆ. ಕೂದಲಿನ ಬೆಳವಣಿಗೆಯಲ್ಲಿ ಈ ಪಾಲಿಕಲ್‌ ಗಳು ಪ್ರಮುಖ ಪಾತ್ರ ವಹಿಸುತ್ತದೆ. ಈ ಪಾಲಿಕಲ್‌ಗಳಿಂದಾನೆ ಕೂದಲು ಬೆಳೆಯುತ್ತದೆ. ಬೆಳವಣಿಗೆ ಮಾತ್ರವಲ್ಲದೇ ಅವುಗಳ ಶೇಪ್‌ ಅನ್ನು ಸಹ ನಿರ್ಧರಿಸುತ್ತದೆ.

ಕೂದಲಿನ ಮೇಲೆ ಪಾಲಿಕಲ್‌ ಪ್ರಭಾವ:

ಪಾಲಿಕಲ್‌ ವೃತ್ತಾಕಾರದಲ್ಲಿದ್ದರೆ ಕೂದಲು ನೇರವಾಗಿ ಬೆಳವಣಿಗೆಯಾಗುತ್ತದೆ. ನೇರ ಕೂದಲುಗಳಲ್ಲಿ ಕೆರಾಟಿನ್‌ ಸಮನಾಗಿರುತ್ತದೆ. ಪಾಲಿಕಲ್‌ ಗಳು ಮೊಟ್ಟೆಯಾಕಾರದಲ್ಲಿ ಕೂದಲು ಅಲೆ ಅಲೆಯಾಗಿರುತ್ತದೆ. ಗುಂಗುರು ಕೂದಲಿನಲ್ಲಿ ಕೆರಾಟಿನ್‌ ಸರಿಯಾಗಿ ಹಂಚಿಕೆಯಾಗಿರುವುದಿಲ್ಲ.

ಕೇವಲ ಪಾಲಿಕಲ್‌ ಗಳು ಮಾತ್ರವಲ್ಲ. ಜಿನ್‌ ಗಳು ಹಾಗೂ ಹೆರಿಡಿಟಿ ಕೂಡ ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಪೋಷಕರಿಂದ ಬಂದ ಹೇರ್‌ ಜಿನ್‌ ಗಳು ಮಕ್ಕಳ ಕೂದಲಿನ ಶೇಪ್‌ ಮೇಲೆ ಪ್ರಭಾವ ಬೀರುತ್ತದೆ. ಟ್ರೈಕೋ ಹೈಲೀನ್‌ TCHH ಎನ್ನುವ ಪ್ರೋಟೀನ್‌ ಅನ್ನು ಬಿಡುಗಡೆ ಮಾಡುತ್ತದೆ. ಇದು ಕೂದಲ ಸುರಕ್ಷತೆಯನ್ನು ಮಾಡುತ್ತದೆ.

TCHH ಪಾಲಿನ್‌ ಆಫಿಸಂ ಎಂಬ ಸಣ್ಣ ವೇರಿಯಂಟ್‌ ಅನ್ನು ಒಳಗೊಂಡಿದೆ. ಇದು ಜಗತ್ತಿನಾದ್ಯಂತ ಇರುವ ಜನರ ಕೂದಲಿನ ಶೇಪ್‌ ಗೆ ಸಂಬಂಧಿಸಿದೆ. ಜನರ ಕೂದಲಿನ ಆಕಾರದ ಮೇಲೆ ಇದು ಪ್ರಭಾವವನ್ನು ಹೊಂದಿದೆ. ಹೇರ್‌ ಪಾಲಿಕಲ್‌ ಹಾಗೂ ಜೀನ್‌ ನಿಂದ ಜನರ ಕೂದಲು ಶೇಪ್‌ ಅನ್ನು ಪಡೆದುಕೊಂಡಿರುತ್ತದೆ.

ಇನ್ನು ಜಗತ್ತಿನಲ್ಲಿ ಗುಂಗುರು ತಲೆಕೂದಲು ಹೊಂದಿದವರನ್ನು ವಿಚಿತ್ರವಾಗಿ ನೋಡಲಾಗುತ್ತಿತ್ತು. ಶಾಲೆಗಳನ್ನು ಸಹ ಗುಂಗುರು ತಲೆ ಕೂದಲು ಹೊಂದಿರುವವರಿಗೆ ತಮಾಷೆಯನ್ನು ಮಾಡುತ್ತಿದ್ದರು. ಎಷ್ಟೋಜನ ಗುಂಗುರು ತಲೆಕೂದಲಿನ ಬಗ್ಗೆ ಅಸಮಧಾನ ಹೊಂದಿದ್ದರು. ಕೇವಲ ನೇರ ಕೂದಲು ಇದ್ದರೆ ಮಾತ್ರ ಸುಂದರವಾಗಿರುತ್ತಾರೆ ಎಂಬ ಮನೋಭಾವನೆ ಈ ಹಿಂದೆ ಇತ್ತು. ಆದರೆ ಈಗ ಗುಂಗುರು ತಲೆಕೂದಲು ಟ್ರೆಂಡ್‌ ಆಗಿದೆ.

ಇನ್ನೊಂದು ಕಡೆ ವಯಸ್ಸಾಗುವುದಕ್ಕೂ ಮುಂಚೆ ತಲೆಕೂದಲು ಬಿಳಿಯಾಗಿರುತ್ತದೆ. ಇದು ಕೂಡ ಒಂದು ದೊಡ್ಡ ಸಮಸ್ಯೆಯಾಗಿದೆ. ಮುಂಚೆ ವಯಸ್ಸಾದವರಲ್ಲಿ ಮಾತ್ರ ಬಿಳಿ ಕೂದಲು ಕಾಣಿಸುತ್ತಿತ್ತು. ಈ ಸಮಸ್ಯೆ ಒಂದು ದೊಡ್ಡ ತಲೆನೋವಾಗಿದೆ.

ಕೂದಲು ಬಣ್ಣವನ್ನು ಹೇಗೆ ಬದಲಾಯಿಸುತ್ತದೆ?

ಯುವಕ-ಯುವತಿಯರು, ಚಿಕ್ಕ ಮಕ್ಕಳಲ್ಲಿ ಈ ಸಮಸ್ಯೆ ಏಕೆ ಉಂಟಾಗುತ್ತದೆ. ವಯಸ್ಸಾದಂತೆ ದೇಹ ಕೂದಲಿಗೆ ಬಣ್ಣ ಕೊಡುವ ಪಿಗ್ಮೆಂಟ್‌ ಅನ್ನು ಕಳೆದುಕೊಳ್ಳಲು ಶುರುಮಾಡುತ್ತದೆ. ಯುವ ಜನತೆಯಲ್ಲಿ ಬಿಳಿಕೂದಲು ಕಾಣಿಸುಕೊಳ್ಳಲು ಒತ್ತಡ ಕಾರಣ ಎಂದು ಹೇಳಲಾಗುತ್ತದೆ. ಕಡಿಮೆ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುಕ್ಕೆ ಮೇರಿ ಆಂಟ್ಮಿನೆಂಟ್ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ.‌ ಒತ್ತಡದಿಂದ ನಮ್ಮ ದೇಹದಲ್ಲಿ ಕೆಲ ನಿರ್ದಿಷ್ಟ ನರಗಳು ಕೂದಲಿನ ಬೆಳವಣಿಗೆ ಕಾರಣವಾಗಿ ಕೂದಲ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಕೂದಲು ಬಣ್ಣವನ್ನು ಕಳೆದುಕೊಳ್ಳುತ್ತದೆ. ಇದರ ಜೊತೆಗೆ ಆಹಾರ ಶೈಲಿ, ಡಯೆಟ್‌, ವಿಟಮಿನ್‌ B12 ಕೊರತೆ ಹಲವಾರು ರೀತಿಯ ಅಂಶಗಳು ಕೂಡ ಕೂದಲು ಬಣ್ಣ ಕಳೆದುಕೊಳ್ಳಲು ಕಾರಣವಾಗುತ್ತದೆ.

ಕೂದಲಿನ ಬಗ್ಗೆ ಇರುವ ಅಪನಂಬಿಕೆಗಳು:

  • ಕೂದಲನ್ನು ಕತ್ತರಿಸಿದರೆ ಬೇಗ ಕೂದಲು ಬೆಳವಣಿಗೆ ಆಗುತ್ತದೆ.
  • ಒಂದು ಬಿಳಿಕೂದಲು ಕಿತ್ತರೆ 7 ಬಿಳಿಕೂದಲು ಬೆಳೆಯುತ್ತದೆ.

ಒಂದು ಬಿಳಿಕೂದಲು ಕಿತ್ತರೆ 7 ಬಿಳಿಕೂದಲು ಬೆಳೆಯುತ್ತದೆ. ಈ ಮಾಹಿತಿ ಸುಳ್ಳು. ಏಕೆಂದರೆ ಪ್ರತಿಯೊಂದು ಹೇರ್‌ ಪೈಬರ್‌ ಗೆ ಪ್ರತ್ಯೇಕ ಪಾಲಿಕಲ್‌ ಗಳು ಇರುತ್ತದೆ. ಹೀಗಾಗಿ ಒಂದು ಕೂದಲಿಗು ಇನ್ನೊಂದು ಕೂದಲಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.

ಕೂದಲನ್ನು ಕತ್ತರಿಸಿದರೆ ಬೇಗ ಕೂದಲು ಬೆಳವಣಿಗೆ ಆಗುತ್ತದೆ. ಇದು ಕೂಡ ಕಲ್ಪನೆಯಾಗಿದೆ. ಕೂದಲನ್ನು ಕತ್ತರಿಸುವುದರಿಂದ. ಶೇವ್‌ ಮಾಡುವುದರಿಂದ ಕೂದಲು ದಪ್ಪವಾಗಿ ಬರುವುದಿಲ್ಲ ಹಾಗೂ ಕೂದಲು ಬೆಳವಣಿಗೆಯನ್ನು ಹೊಂದುವುದಿಲ್ಲ. ಬದಲಾಗಿ ಅವುಗಳ ಪಾಲಿಕಲ್‌ ಬೆಳವಣಿಗೆಯಿಂದ ಕೂದಲು ಬೆಳವಣಿಗೆಯನ್ನು ಹೊಂದುತ್ತದೆ. ಹೆರಿಡಿಟಿ ಮೇಲೆ ಸಹ ನಮ್ಮ ಕೂದಲ ಬೆಳವಣಿಗೆ ನಿಂತಿರುತ್ತದೆ. ಹಾಗೂ ನಮ್ಮ ಆರೋಗ್ಯ ಚೆನ್ನಾಗಿದ್ದರೆ ನಮ್ಮ ತಲೆಕೂದಲ ಬೆಳವಣಿಗೆ ಸರಿಯಾಗಿರುತ್ತದೆ.

ಇತರೆ ವಿಷಯಗಳು:

IMD ಮಳೆ ಎಚ್ಚರಿಕೆ: ಇಂದಿನಿಂದ ಮುಂದಿನ 72 ಗಂಟೆಗಳ ಕಾಲ 7 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ.!

ನೌಕರರಿಗೆ ರಜೆ: ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಛೇರಿಗಳು 21 ದಿನ ಬಂದ್‌.!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments