Saturday, July 27, 2024
HomeNewsರಾಜ್ಯಾದ್ಯಂತ ಈ ಜಿಲ್ಲೆಗಳಲ್ಲಿ ಭಾರಿ ಮಳೆ: ನಿಮ್ಮ ಊರು ಇದಿಯಾ ನೋಡಿ ..!

ರಾಜ್ಯಾದ್ಯಂತ ಈ ಜಿಲ್ಲೆಗಳಲ್ಲಿ ಭಾರಿ ಮಳೆ: ನಿಮ್ಮ ಊರು ಇದಿಯಾ ನೋಡಿ ..!

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ ಆರಂಭದಿಂದಲೂ ಉತ್ತಮ ಮಳೆ ಯಾಗುತ್ತಿದ್ದು ಯಾವ ರಾಜ್ಯಗಳಲ್ಲಿ ಎಷ್ಟು ಮಳೆ ಆಗಲಿದೆ ಎಂಬುದರ ಬಗ್ಗೆ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಹಾಗಾದರೆ ಹವಾಮಾನ ಇಲಾಖೆಯು ಯಾವ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Heavy rain in these districts across the state
Heavy rain in these districts across the state
Join WhatsApp Group Join Telegram Group

ರಾಜ್ಯದ್ಯಂತ ಭಾರಿ ಮಳೆ :

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ ಆರಂಭದಿಂದಲೂ ಉತ್ತಮ ಮಳೆ ಯಾಗುತ್ತಿದ್ದು ಭಾರಿ ಮಳೆಯು ಈ ತಿಂಗಳ ಪೂರ್ತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಶುಕ್ರವಾರ ಶನಿವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಗಲಿದೆ ಎಂಬುದರ ಬಗ್ಗೆ ಹವಾಮಾನ ಇಲಾಖೆಯ ವರದಿ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಭಾರಿ ಮಳೆಯಾಗಲಿದೆ ಎಂಬುದರ ಬಗ್ಗೆ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಚದುರದಂತೆ ವ್ಯಾಪಕವಾಗಿ ಸಾಧಾರಣ ಮಳೆಯು ಮಲೆನಾಡು ಜಿಲ್ಲೆಗಳಲ್ಲಿ ಆಗಲಿದೆ. ಇದರ ಜೊತೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿಯೂ ಸಹ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಇದಲ್ಲದೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ರಾಜ್ಯಾದ್ಯಂತ ಅಲ್ಲಲ್ಲಿ ಇದೆ ಎಂದು ತನ್ನ ವರದಿಯಲ್ಲಿ ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ತಿಳಿಸಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಿದೆ :

ಬೆಳಿಗ್ಗೆ 8.30 ರಿಂದ ಶುಕ್ರವಾರ ಕೊನೆಯಾಗದಂತೆ 24 ಗಂಟೆಗಳಲ್ಲಿ 165.5 ಮಿಲಿಮೀಟರ್ ಉತ್ತರ ಕನ್ನಡ ದೇವಗಿರಿ ಯಲ್ಲಿ ಮಳೆಯಾಗಿದ್ದು ಭಾರಿ ಮಳೆಯಾದ ಪ್ರದೇಶ ಎಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ. 132 ಮಿ.ಮೀ ಉತ್ತರ ಕನ್ನಡ ಜಿಲ್ಲೆಯ ಹಳದಿಪುರ, 130.5 ಮಿಲಿ ಮೀಟರ್ ಕಡ್ಲೆ, 127 ಮಿಲಿ ಮೀಟರ್ ಕಡತೋಕ ಹಾಗೂ 109.5 ಮಿಲಿಮೀಟರ್ ಚಂದಾವರದಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಜಿಲ್ಲಾವಾರು ಮಳೆ :

ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು ಜಿಲ್ಲಾ ವಾರು ಮಳೆಯ ಬಗ್ಗೆ ಇದೀಗ ನಿಮಗೆ ತಿಳಿಸಲಾಗುತ್ತದೆ. 165.5 ಮಿಲಿಮೀಟರ್ ಉತ್ತರ ಕನ್ನಡ ಜಿಲ್ಲೆಯಲ್ಲಿ 103 ಮಿಲಿ ಮೀಟರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 56.5 ಮಿಲಿಮೀಟರ್ ,ಶಿವಮೊಗ್ಗ ಜಿಲ್ಲೆಯಲ್ಲಿ 54.5 ಮಿಲಿಮೀಟರ್ ಉಡುಪಿ ಜಿಲ್ಲೆಯಲ್ಲಿ ,43.5 ಮಿಲಿಮೀಟರ್ ಕೊಡಗು ಜಿಲ್ಲೆಯಲ್ಲಿ ,38 ಮಿಲಿಮೀಟರ್, ಹಾಸನ ಜಿಲ್ಲೆಯಲ್ಲಿ ,34.5 ಮಿಲಿಮೀಟರ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ತಿಳಿಸಿದೆ.

ಎಲ್ಲೋ ಅಲರ್ಟ್ :

ಕರಾವಳಿ ಜಿಲ್ಲೆಗಳಾದ ಕೆಲವೊಂದು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆಯು ತಿಳಿಸಿದೆ. ಅಂದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ ಶುಕ್ರವಾರ ಮತ್ತು ಶನಿವಾರ ಆಗಲಿದೆ ಎಂದು ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಸಹ ಶುಕ್ರವಾರ ಭಾರಿ ಮಳೆ ಯಾಗಲಿದ್ದು ಆ ಜಿಲ್ಲೆಗಳಲ್ಲಿಯೂ ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.

ಇದನ್ನು ಓದಿ : ನಿಮ್ಮ ಬಳಿ ಪಡಿತರ ಚೀಟಿ ಇದೆಯೇ? ಹಾಗಿದ್ರೆ ಮೊದಲು ಈ ಕೆಲಸ ಮಾಡಿ

ಈ ಜಿಲ್ಲೆಗಳಲ್ಲಿ ಉತ್ತಮ ಮಳೆ :

ಕರ್ನಾಟಕ ರಾಜ್ಯದ ಈ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಉತ್ತಮ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದು ಆ ಜಿಲ್ಲೆಗಳೆಂದರೆ ಹಾವೇರಿ ,ಮೈಸೂರು, ವಿಜಯನಗರ, ಬೀದರ್, ಬೆಂಗಳೂರು ನಗರ, ಕಲಬುರುಗಿ, ಮಂಡ್ಯ, ಬೆಳಗಾವಿ ,ಬೆಂಗಳೂರು ಗ್ರಾಮಾಂತರ ,ಹಾಸನ, ಕೋಲಾರ ,ಗದಗ ,ಧಾರವಾಡ ,ದಾವಣಗೆರೆ ,ಚಿಕ್ಕಬಳ್ಳಾಪುರ ,ಬಾಗಲಕೋಟೆ ,ಚಾಮರಾಜನಗರ ,ಕೊಪ್ಪಳ ಚಿತ್ರದುರ್ಗ, ರಾಮನಗರ ,ಯಾದಗಿರಿ ,ತುಮಕೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಿದ್ದು ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿಯೂ ಸಹ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ರಾತ್ರಿ ಸಹ ಶುಕ್ರವಾರ ಮಧ್ಯಾನವೇ ನಗರದ ಹಲವು ಭಾಗಗಳಲ್ಲಿ ಮಳೆ ಶುರುವಾಗಿದ್ದು ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮುನ್ಸೂಚನೆಯನ್ನು ನೀಡಿದೆ.

ಹೀಗೆ ಹವಾಮಾನ ಇಲಾಖೆಯ ರಾಜ್ಯದ ವಿವಿಧ ಭಾಗಗಳಲ್ಲಿ ಎಷ್ಟು ಮಳೆಯಾಗಿದೆ ಹಾಗೂ ಯಾವಾಗ ಎಷ್ಟು ಮಳೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಕೆಲವೊಂದು ಇಷ್ಟು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ ಎಂಬುದರ ಬಗ್ಗೆ ವರದಿಯನ್ನು ನೀಡಿದೆ. ಹೀಗೆ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರು ಇರುವಂತಹ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ 2 ಕಂತಿನ ಹಣ ಬೇಗ ಬೇಕಾದರೆ: ಈ ಕೆಲಸ ಮಾಡಿ ಬೇಗ

ಸ್ಪ್ರೇ ಪಂಪ್ ಖರೀದಿಸಲು ಸರ್ಕಾರ ರೈತರಿಗೆ ನೀಡಲಿದೆ 2500 ರೂ., ಶೀಘ್ರವೇ ಹೀಗೆ ಅರ್ಜಿ ಹಾಕಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments