Friday, July 26, 2024
HomeTrending Newsಎಂದಾದರೂ ಯೋಚಿಸಿದ್ದೀರಾ ಬಾಹ್ಯಾಕಾಶಕ್ಕೆ ಕೊನೆ ಎಲ್ಲಿ ಎಂದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಎಂದಾದರೂ ಯೋಚಿಸಿದ್ದೀರಾ ಬಾಹ್ಯಾಕಾಶಕ್ಕೆ ಕೊನೆ ಎಲ್ಲಿ ಎಂದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ತಿಳಿಸುವಂತಹ ಮಾಹಿತಿ ಏನೆಂದರೆ, ಭೂಮಿಯ ಯಾವುದೋ ಒಂದು ಚಿಕ್ಕ ಕಣ ಗಾತ್ರದ ಜಾಗದಲ್ಲಿ ನಾವಿದ್ದೇವೆ. ಆದರೆ ಇಡೀ ಬ್ರಹ್ಮಾಂಡದಲ್ಲಿ ಭೂಮಿ ಎಷ್ಟು ದೊಡ್ಡದು. ಭಾರತ ಯಾರು ಕಾಲಿಡದ ದಕ್ಷಿಣ ಧ್ರುವಕ್ಕೆ ಕಾಲಿಟ್ಟು ಇತಿಹಾಸವನ್ನು ಸೃಷ್ಟಿಸಿದೆ. ಅಮೆರಿಕ ಇನ್ನೆರಡು ವರ್ಷಗಳಲ್ಲಿ ಅಲ್ಲಿಗೆ ಮಾನವರನ್ನು ಕಳುಹಿಸುತ್ತಿದೆ. ನಾಸಾದ ವೈವಿಝರ್ ನೌಕೆ ಸೌರ ಮಂಡಲವನ್ನೇ ದಾಟಿ ಹೊರಹೋಗಿದೆ. ಅಂತರ್‌ ಸೌರಮಂಡಲಕ್ಕೆ ಹೋಗಿದೆ. ಬಾಹ್ಯಾಕಾಶ ಯೋಜನೆಗಳ ಬಗ್ಗೆ ಕೇಳಿದಾಗ ಕಿವಿ ಅರಳುತ್ತದೆ. ಆದರೆ ಈ ಬಾಹ್ಯಾಕಾಶಕ್ಕೆ ಕೊನೆ ಎಲ್ಲಿದೆ. ಭೂಮಿಯ ಸುತ್ತ ಏನಿದೆ. ಎಲ್ಲಿಯವರೆಗೆ ಭೂಮಿ ವಿಸ್ತರಿಸಿದೆ. ಭೂಮಿಗೆ ಕೊನೆ ಎಲ್ಲಿದೆ ಅದನ್ನು ಎಲ್ಲಿಡಲಾಗಿದೆ. ಹೀಗೆ ನಾನಾ ರೀತಿಯ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಇದರ ಕುರಿತು ಕಂಪ್ಲೀಟ್‌ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Milky Way Galaxy
Join WhatsApp Group Join Telegram Group

ಸೌರಮಂಡಲದ ಆಚೆ ಏನಿದೆ? ಬ್ರಹ್ಮಾಂಡದ ಅಂಚಿನಲ್ಲಿ ಏನಿದೆ? ಸೃಷ್ಟಿಯ ಅಭೇಧ್ಯ ವೈಶಿಷ್ಯವೇನು ಎಂಬ ಸಂಪೂರ್ಣ ಸಣ್ಣ ಮಾಹಿತಿಯನ್ನು ತಿಳಿಯೋಣ. ಮನುಷ್ಯ ಎಲ್ಲಿಯವರೆಗೆ ಬ್ರಹ್ಮಾಂಡವನ್ನು ಅರಿತಿದ್ದಾನೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಸೌರಮಂಡಲದಲ್ಲಿ ನಾವು ಭೂಮಿಯ ಮೇಲೆ ವಾಸಿಸುತ್ತೇವೆ. ಭೂಮಿ ಸುಮಾರು 12,742 ಕಿಲೋ ಮೀಟರ್‌ ಅಗಲವಿದೆ. ನಮ್ಮಿಂದ ಸುಮಾರು 15 ಕೋಟಿ ಕಿಲೋಮೀಟರ್‌ ದೂರದಲ್ಲಿ ಸೂರ್ಯ ಇದ್ದಾನೆ. ನಾವು ಸೂರ್ಯನ ಸುತ್ತ ಸುತ್ತುತ್ತಿದ್ದೇವೆ. ಭೂಮಿ ಹಾಗೂ ಸೂರ್ಯನ ನಡುವೆ ಬುಧ ಹಾಗೂ ಶುಕ್ರ ಗ್ರಹಗಳು ಇದೆ. ಗಾತ್ರದಲ್ಲಿ ಬುಧ ಭೂಮಿಗಿಂತ ಚಿಕ್ಕದು, ಶುಕ್ರ ಹೆಚ್ಚು ಕಡಿಮೆ ಭೂಮಿಯಷ್ಟೆ ಗಾತ್ರ ಹೊಂದಿದೆ. ಭೂಮಿಯ ನಂತರ ಮಂಗಳ ಗ್ರಹವಿದೆ. ಇದು ಭೂಮಿಯನ್ನೇ ಹೋಲುತ್ತದೆ. ಅದಾದ ನಂತರ ಗುರು, ಶನಿ, ಯುರನೆಸ್‌ ಹಾಗೂ ನೆಪ್ಚೂನ್‌ ಗ್ರಹಗಳಿವೆ. ಎಲ್ಲರಿಗಿಂತ ಗುರು ಗಾತ್ರದಲ್ಲಿದೊಡ್ಡದಾಗಿದೆ.

ಈ ಎಲ್ಲಾ ಗ್ರಹಗಳು ಹಾಗೂ ಸೂರ್ಯನನ್ನು ಸೇರಿ ಸೌರಮಂಡಲ ಎಂದು ಕರೆಯುತ್ತಾರೆ. ಇನ್ನು ನಮ್ಮ ಬ್ರಹ್ಮಾಂಡ ಎಷ್ಟು ದೊಡ್ಡದಿದೆ ಎಂಬುವುದನ್ನು ನೋಡುವುದಾದರೆ. ಇದೂವರೆಗೂ ಮನುಷ್ಯ ನೋಡಿರುವ ಹಾಗೂ ಕಾಲಿಟ್ಟಿರುವ ಚಂದ್ರನ ಮೇಲೆ. ಚಂದ್ರ ಸುಮಾರು 3,84,400 ಕಿಲೋಮೀಟರ್‌ ದೂರದಲ್ಲಿದೆ. ಚಂದ್ರನ ಮೇಲೆ ಕೆಲಸ ಮಾಡುತ್ತಿರುವ ವಿಕ್ರಮ್‌ ಪ್ರಗ್ಯಾನ್‌ ರೋವರ್‌ ಗೆ ಭೂಮಿ ಗೋಲಾಕಾರದಲ್ಲಿ ಕಾಣಿಸುತ್ತದೆ. ಚಂದ್ರನಿಂದ ಮೆಸೇಜ್‌ ಕಳಿಸಲು 2.5 ಸೆಕೆಂಡುಗಳ ಕಾಲಾವಕಾಶ ಬೇಕು. ನಾಸಾದ ಕ್ಯೂರ್ಯಾಸಿಟಿ ರೋವರ್ ಮಂಗಳ ಗ್ರಹದಿಂದ ಭೂಮಿಯೊಂದು ಸಣ್ಣ ಚುಕ್ಕಿಯಾಗಿ ಕಾಣಿಸುತ್ತದೆ. ಯಾವಾಗಲಾದರೂ ಮನುಷ್ಯ ಮಂಗಳ ಗ್ರಹಕ್ಕೆ ಹೋಗಲು ಸಾಧ್ಯವಾದರೆ ಅಲ್ಲಿಂದ ಸಂದೇಶಗಳನ್ನು ರವಾನಿಸಲು 20 ನಿಮಿಷಗಳ ಕಾಲವಕಾಶ ಬೇಕು.

ಇದನ್ನು ಸಹ ಓದಿ: Raksha Bandhana Breaking: ನಿಜವಾದ ರಕ್ಷಾ ಬಂಧನ ಯಾವಾಗ? ರಾಖಿ ಕಟ್ಟಲು ಶುಭ ಸಮಯ ಯಾವುದು? ನಿಮ್ಮ ಈ ಎಲ್ಲಾ ಗೊಂದಲಕ್ಕೆ ಇಲ್ಲಿದೆ ಪರಿಹಾರ

ಇದೂವರೆಗೂ ಮಾನವನ ಅಥವಾ ಭೂಮಿಯ ಕೃತಕ ವಸ್ತುವೊಂದು ಅತ್ಯಂತ ದೂರ ಹೋಗಿರುವ ಉದಾಹರಣೆ ತೆಗೆದುಕೊಳ್ಳುವುದಾದರೆ ನಾವು ವೈವಿಝರ್‌ ನೌಕೆಗಳನ್ನು ನೋಡಬಹುದು. ವೊಯೇಝರ್‌ -1 ನೌಕೆ ಸದ್ಯ ಈಗ ಸೌರಮಂಡಲದಾಚೆ ಭೂಮಿಯಿಂದ 161 AU Astronomical Unit ದೂರದಲ್ಲಿ ಪ್ರಯಾಣ ಮಾಡುತ್ತಿದೆ. ಇಲ್ಲಿ ಆಸ್ಟ್ರನಾಮಿಕಲ್‌ ಯುನಿಟ್‌ ಅಂದರೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರ ಅಂದರೆ ಅದರ ಅರ್ಥ ವೊಯೇಝರ್‌ -1 ನೌಕೆ ಭೂಮಿಯಿಂದ ಸೂರ್ಯನಿಗಿಂತ 169 ಪಟ್ಟು ದೂರದಲ್ಲಿದೆ. ಸೆಕೆಂಡ್‌ ಗೆ 17 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿರುವ 2019ರಲ್ಲಿ ಭೂಮಿಯ ಫೋಟೋ ತೆಗೆದಿತ್ತು.

ಇನ್ನು ಸೌರಮಂಡಲದ ಬೌಂಡರಿಯನ್ನು ಹೀಲಿಯೋಸ್ಪಿಯರ್‌ ಅಂದರೆ ಸೂರ್ಯನ ಪ್ರಭಾವ ಅಂತ್ಯಯಾಗುವಂತಹ ಜಾಗವಾಗಿದೆ. ಇನ್ನು ಸೌರಮಂಡಲದ ಆಚೆ ಇಂಟರ್ ಸ್ಟೆಲ್ಲಾರ್‌ ಪ್ರದೇಶ ಸಿಗುತ್ತದೆ. ಅಂದರೆ ಇದು ನಕ್ಷತ್ರ ಪುಂಜಗಳ ಪ್ರದೇಶಗಳ ನಡುವಿನ ಜಾಗ ಇಲ್ಲಿಂದ ನಾವು ದೂರವನ್ನು ಅಳೆಯೋಕೆ AU ನಿಂದ Light Years ಅಂದರೆ ಜ್ಯೋತಿರ್ವರ್ಷಕ್ಕೆ ಶಿಫ್ಟ ಆಗುತ್ತದೆ.ಬೆಳಕು ಒಂದು ವರ್ಷದಲ್ಲಿ ಎಷ್ಟು ದೂರ ಹೋಗುತ್ತದೆ ಅದನ್ನು ಲೈಟ್‌ ಇಯರ್‌ ಅಥವಾ ಜ್ಯೋತಿರ್ವರ್ಷ ಎಂದು ಹೇಳುತ್ತೇವೆ. ಕಿಲೋ ಮೀಟರ್‌ ಲೆಕ್ಕದಲ್ಲಿ ಹೇಳುವುದಾದರೆ 9.461 ಟ್ರಿಲಿಯನ್‌ ಕಿಲೋಮೀಟರ್‌ ಆಗುತ್ತದೆ. ಭೂಮಿಗೆ ಸೂರ್ಯನ ಅತ್ಯಂತ ಹತ್ತಿರದ ಮತ್ತೊಬ್ಬ ನಕ್ಷತ್ರವೆಂದರೆ ಪ್ರೋಕ್ಸಿಮಾ ಸೆಂಟೌರಿ ಅಥವಾ ಇದನ್ನು ಆಲ್ಫಾ ಸೆಂಟೌರಿ ಎಂದು ಕರೆಯಲಾಗುತ್ತದೆ. ಈ ನಕ್ಷತ್ರ ಭೂಮಿಯಿಂದ 4.24 ಜ್ಯೋತಿರ್ವರ್ಷ ದೂರದಲ್ಲಿದೆ.

ವೊಯೇಝರ್‌ -1 ನೌಕೆ ಈ ಪ್ರೋಕ್ಸಿಮಾ ಸೆಂಟೌರಿ ಕಡೆ ಚಲಿಸಲು ಪ್ರಾರಂಭಿಸಿದರೆ 70 ಸಾವಿರ ವರ್ಷಗಳು ಬೇಕಾಗುತ್ತದೆ. ಈ ರೀತಿ ಕೋಟ್ಯಾಂತರ ನಕ್ಷತ್ರಗಳು ಸೇರಿರುವ ಪ್ರದೇಶವನ್ನು ಗ್ಯಾಲಾಕ್ಸಿ ಅಥವಾ ನಕ್ಷತ್ರ ಪುಂಜ ಎಂದು ಕರೆಯುತ್ತಾರೆ. ನಮ್ಮದು ಮಿಲ್ಕಿವೇ ಅಥವಾ ಹಾಲುಹಾದಿಯ ನಕ್ಷತ್ರಪುಂಜ ಎಂದು ಹೇಳಬಹುದು. ಇನ್ನು ನಮ್ಮ ಗ್ಯಾಲಾಕ್ಸಿಯಲ್ಲಿ ಸೂರ್ಯನ ರೀತಿ 400 ಬಿಲಿಯನ್‌ ನಕ್ಷತ್ರಗಳಿವೆ. ನಮ್ಮ ಗ್ಯಾಲಾಕ್ಸಿಯ ಒಂದು ಬದಿಯಿಂದ ಇನ್ನೊಂದು ಬದಿಯ ಉದ್ದ 1 ಲಕ್ಷ ಜ್ಯೋತಿರ್ವರ್ಷಗಳ ದೂರ ಇದೆ.

ರೈತರಿಗೆ ಬಂತು ರಕ್ಷಾ ಬಂಧನದ ಬಂಪರ್‌ ಆಫರ್, ಸಾಲ ಮನ್ನಾ ಪಟ್ಟಿ ಬಿಡುಗಡೆ, ನಿಮ್ಮ ಹೆಸರನ್ನು ತಕ್ಷಣವೇ ಚೆಕ್‌ ಮಾಡಿ

ಎಂದಿಗೂ ಕೂಡ ಸಂಪೂರ್‌ರ್ಣ ಗ್ಯಾಲಾಕ್ಸಿಯನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಕಣ್ಣಿಗೆ ಕಾಣುವ ಬಾಹ್ಯಾಕಾಶ ಸ್ಪಲ್ಪ ಪ್ರಮಾಣ ಮಾತ್ರ ಆದರೆ ಅದರ ಹೊರಗಿನ ಪ್ರದೇಶಕ್ಕೆ ಹೋಲಿಸಿದರೆ ಎಂತಹ ಬೃಹತ್‌ ಗ್ಯಾಲಾಕ್ಸಿ ಕೂಡ ಏನೂ ಇಲ್ಲ ಎಂದೆನಿಸುತ್ತದೆ. ಏಕೆಂದರೆ ಈರೀತಿ 54 ಗ್ಯಾಲಾಕ್ಸಿಗಳ ಗುಂಪಾಗಿರುವ ಲೋಕಲ್‌ ಗ್ರೂಫ್‌ ಆಫ್‌ ಗ್ಯಾಲಕ್ಸಿ 10 ಮಿಲಿಯನ್‌ ಜ್ಯೋತಿರ್ವರ್ಷಗಳಷ್ಟು ಅಗಲವಾಗಿದೆ. ಇನ್ನು ಕೂಡ ಆಳವಾಗಿ ನೋಡಿದರೆ ವರ್ಗೋ ಸೂಪರ್‌ ಕ್ಲಸ್ಟರ್‌ ಸಿಗುತ್ತದೆ. ಇದರಲ್ಲಿ ಲೋಕಲ್‌ ಗ್ರೂಫ್‌ ಆಫ್‌ ಗ್ಯಾಲಕ್ಸಿ ಚಿಕ್ಕ ಅಂಶವಾಗಿರುತ್ತದೆ. ಇದರಲ್ಲಿ ನಮ್ಮ ಲೋಕಲ್‌ ಗ್ರೂಫ್‌ ಆಫ್‌ ಗ್ಯಾಲಕ್ಸಿ ರೀತಿ ನೂರಾರು ಗ್ಯಾಲಕ್ಸಿ ಗಳ ಗುಚ್ಛವಿದೆ.

ಇದರಲ್ಲಿ ಈ ವರ್ಗೋ ಸೂಪರ್‌ ಕ್ಲಸ್ಟರ್‌ ನ ಒಂದು ಬದಿಯಿಂದ ಮತ್ತೊಂದು ಬದಿಯ ಉದ್ದ 110 ಮಿಲಿಯನ್‌ ಜ್ಯೋತಿರ್ವರ್ಷ ಆದರೆ ಈ ಬೃಹತ್‌ ವರ್ಗೋ ಸೂಪರ್‌ ಕ್ಲಸ್ಟರ್‌ ಕೂಡ ಗ್ರೇಟ್‌ ಲಾನಿಯಕಿಯಾ ಸೂಪರ್‌ ಕ್ಲಸ್ಟರ್‌ನ ಒಂದು ಸಣ್ಣ ಅಣುವಿನಂತಹ ಭಾಗ. ಈ ಸೂಪರ್‌ ಕ್ಲಸ್ಟರ್‌ ನಲ್ಲಿ ಸುಮಾರು 1 ಲಕ್ಷ ಗ್ಯಾಲಕ್ಸಿಗಳಿವೆ. ಈ ಸೂಪರ್‌ ಕ್ಲಸ್ಟರ್‌ ನ ಒಂದು ಬದಿ ಯಿಂದ ಮತ್ತೊಂದು ಬದಿಗೆ ಉದ್ದ 520 ಮಿಲಿಯನ್‌ ಜ್ಯೋತಿರ್ವರ್ಷವಾಗಿದೆ. ಆದರೆ ಇದನ್ನುಮೀರಿ Observable Universe ಸಿಗುತ್ತದೆ. ಅಲ್ಲಿ ಅಂತಹ ಗ್ರೇಟ್‌ ಲಾನಿಯಾಕಿಯಾ ಸೂಪರ್‌ ಕ್ಲಸ್ಟರ್‌ ಒಂದು ಸಣ್ಣ ಧೂಳಿನ ಕಣದಷ್ಸಟು ಚಿಕ್ಕದಾಗಿರುತ್ತದೆ. ಈ Observable Universe ಮಾನವನ ಪರಿಧಿಯ ಒಳಗೆ ಇರುವಂತಹದು. ಇಲ್ಲಿಯವರೆಗೂ ವಿಜ್ಞಾನಿಗಳ ಕಲ್ಪನೆಯನ್ನು ಮಾಡಿ ಅಂದಾಜಿನ ಮೇಲೆ ದೂರವನ್ನು ಲೆಕ್ಕಹಾಕಿ ತಿಳಿಸಿದ್ದಾರೆ. ಇದರ ಆಚೆಗೆ ಏನಿದೆ ಎಂಬುವುದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಾಗುವುದಿಲ್ಲ. ಈ Observable Universe ನಲ್ಲಿ 2 ಟ್ರಿಲಿಯನ್‌ ಗ್ಯಾಲಾಕ್ಸಿಗಳು ಇವೆ. ಇದರ ಆಚೆಗೆ ಏನಿದೆ ಎಂಬುದು ಮಾನವ ಕಲ್ಪನೆ ಕೂಡ ಮಾಡಲು ಸಾಧ್ಯವಾಗುವುದಿಲ್ಲ.

ಇತರೆ ವಿಷಯಗಳು:

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರು ದಂಡ ಕಟ್ಟಬೇಕಾಗುತ್ತದೆ: ಇಂದೇ ಈ ಕೆಲಸ ಮಾಡಿ

ರೈತರಿಗೆ ಹೊಡಿತು ಲಾಟ್ರಿ; 15 ಕಂತಿನ ಹಣದಲ್ಲಿ ಭಾರೀ ಹೆಚ್ಚಳ, ಇನ್ಮುಂದೆ 6 ಸಾವಿರ ಅಲ್ಲ 12 ಸಾವಿರ.! ಕಿಸಾನ್‌ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದ ಸರ್ಕಾರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments