Saturday, July 27, 2024
HomeInformationಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಹಳೆ ಪಿಂಚಣಿ ಯೋಜನೆ ಮರುಜಾರಿ

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಹಳೆ ಪಿಂಚಣಿ ಯೋಜನೆ ಮರುಜಾರಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ನೀಡುವುದಾಗಿ ಗುಡ್ ನ್ಯೂಸ್ ನೀಡುತ್ತಿದೆ. ಹಳೆ ಪಿಂಚಣಿ ಯೋಜನೆಯನ್ನು ಇತ್ತೀಚೆಗೆ ನೌಕರರು ಮರು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ದೇಶದಾದ್ಯಂತ ಹಲವು ಚರ್ಚೆಗಳು ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿವೆ. ಕೇಂದ್ರ ಸರ್ಕಾರ ನೌಕರರು ಹಾಗೂ ರಾಜ್ಯ ಸರ್ಕಾರಿ ನೌಕರರು ಮರು ಜಾರಿಗೊಳಿಸುವಂತೆ ಹಳೆ ಪಿಂಚಣಿ ಯೋಜನೆಯನ್ನು ಒತ್ತಾಯಿಸುತ್ತಿದ್ದಾರೆ. ಹಾಗಾದರೆ ಇದರ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Old government pension scheme relaunched
Old government pension scheme relaunched
Join WhatsApp Group Join Telegram Group

ಹಳೆ ಪಿಂಚಣಿ ಯೋಜನೆ ಮರುಜಾರಿ :

ಹಳೆಯ ಪಿಂಚಣಿ ಯೋಜನೆ ಮರು ಜಾರಿಯಾಗಲಿದೆ ಎಂದು ಇದೀಗ ಸಿಕ್ಕಿಂನಲ್ಲಿ ವರದಿಯಾಗಿದೆ. ಸೋಮವಾರ ಈ ಶುಭ ಸುದ್ದಿಯನ್ನು ಸಿಕ್ಕಿ ಮುಖ್ಯಮಂತ್ರಿ ಬಿಎಸ್ ತಮಾಂಗ್ ಕೋಲೆ ಪ್ರಕಟಿಸಿದ್ದಾರೆ. ಸಿಕ್ಕಿಂ ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರಿ ಜಾರಿಗೆ ಗೊಳಿಸಲು ತಜ್ಞರ ಸಮಿತಿಯು ಸಲ್ಲಿಸಿದ ವರದಿಯನ್ನು ಆಧರಿಸಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಸಿಕ್ಕಿಂ ಸರ್ಕಾರವು ಕಳೆದ ವರ್ಷ ಡಿಸೆಂಬರ್ ನಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕರಿಸುವ ಸಾಧ್ಯತೆಯನ್ನು ಪರಿಶೀಲಿಸಲು ಈ ಸಮಿತಿಯನ್ನು ರಚಿಸಿತು. ಸಿಕ್ಕಿಂ ಸಿಬ್ಬಂದಿ ಇಲಾಖೆ ಕಾರ್ಯದರ್ಶಿ, ರಿಂಗ್ಸಿಂಗ್ ಚೇವಾನ್ ಬುಟಿಯ ಎಂಬುವವರು ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಹಳೆಯ ಪಿಂಚಣಿ ಯೋಜನೆ ಕರ್ನಾಟಕದಲ್ಲಿ :

ಸಿಕ್ಕಿಂ ರಾಜ್ಯದಲ್ಲಿ ಸೇರಿದಂತೆ ಹಳೆಯ ಪಿಂಚಣಿ ಯೋಜನೆಗಾಗಿ ಕರ್ನಾಟಕದಲ್ಲಿಯೂ ಸಹ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರಿ ನೌಕರರು ನಿರಂತರವಾಗಿ ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ. ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತನ್ನ ಪ್ರಣಾಳಿಕೆಯಲ್ಲಿ ಈ ಬಗ್ಗೆ ತಿಳಿಸಿತ್ತು. ಹಾಗಾಗಿ ವಿವಿಧ ಸಂಘಟನೆಗಳು, ವಿವಿಧ ಪ್ರತಿಭಟನೆಗಳನ್ನು ಕಳೆದ ಕೆಲವು ದಿನಗಳಿಂದ ನಡೆಸುತ್ತಿವೆ.

ರಾಷ್ಟ್ರೀಯ ಪಿಂಚಣಿ ಯೋಜನೆ v/s ಹೊಸ ಪಿಂಚಣಿ ಯೋಜನೆಯ ವ್ಯತ್ಯಾಸ :

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ 10 ಪ್ರತಿಶತವನ್ನು ನ್‌ಪಿಎಸ್ ನಲ್ಲಿ ಉದ್ಯೋಗಿಯ ಮೂಲವೇದನ ಮತ್ತು ಭತ್ಯಗಳಿಂದ ಕಡಿತಗೊಳಿಸಲಾಗುತ್ತದೆ. ಷೇರು ಮಾರುಕಟ್ಟೆ ಆಧಾರಿತವಾಗಿ ರಾಷ್ಟ್ರೀಯ ಪಿಂಚಣಿ ಯೋಜನೆ ಇದೆ ಆದ್ದರಿಂದ ತುಳನಾತ್ಮಕವಾಗಿ ಇದು ಕಡಿಮೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. 40% ರಷ್ಟು ಎಂಪಿಸಿ ನಿಧಿಯಲ್ಲಿ ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬೇಕು. ಸ್ಥಿರ ಪಿಂಚಣಿ ಯೋಜನೆಯನ್ನು ನಿವೃತ್ತಿಯ ನಂತರ ಈ ಯೋಜನೆ ಖಾತರಿಪಡಿಸುವುದಿಲ್ಲ. ಆರು ತಿಂಗಳಿಗೊಮ್ಮೆ ಹೊಸ ಪಿಂಚಣಿ ಯೋಜನೆಯಲ್ಲಿ ತುಟ್ಟಿ ಭತ್ಯೆ ಪಾವತಿಸುವುದಿಲ್ಲ.

ಇದನ್ನು ಓದಿ : ‌ಹಬ್ಬಕ್ಕೆ ಊರಿಗೆ ಹೋಗೋರಿಗೆ ಬಿಗ್‌ ಶಾಕ್: ಗಣೇಶ ಚತುರ್ಥಿ ಪ್ರಯುಕ್ತ ಖಾಸಗಿ ಬಸ್ ಪ್ರಯಾಣ ದರ ಏರಿಕೆ.!

ಹಳೆ ಪಿಂಚಣಿ ಯೋಜನೆ :

ಹಳೆ ಪಿಂಚಣಿ ಯೋಜನೆಯ ಅಡಿಯಲ್ಲಿ 50 ಪ್ರತಿಶತವನ್ನು ಕೊನೆಯದಾಗಿ ಪಡೆದ ಸಂಬಳದಲ್ಲಿ ನಿವೃತ್ತಿಯ ನಂತರ ಮಾಸಿಕ ಪಿಂಚಣಿಯಾಗಿ ಒಟ್ಟು ಮೊತ್ತದಿಂದ ಪಾವತಿಸಲಾಗುತ್ತದೆ. ಜಿಪಿಎಫ್ 80 ವರ್ಷಗಳ ನಂತರ ಪಿಂಚಣಿ ಹೆಚ್ಚಿಸುವ ನಿಬಂಧನೆಯು ಇದೆ ಹಾಗೂ ಅವಕಾಶವೂ ಇದೆ. 20 ಲಕ್ಷ ರೂಪಾಯಿಗಳವರೆಗೆ ಗ್ರಾಜುಟಿಯನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ. ರಾಜ್ಯದ ಖಜಾನೆಯಿಂದ ಹಳೆಯ ಪಿಂಚಣಿ ಯೋಜನೆಯನ್ನು ಪಾವತಿಸಲಾಗುತ್ತದೆ ಹಾಗೂ ಹಣವನ್ನು ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸುವುದಿಲ್ಲ. ಹೆಂಡತಿಗೆ ಪಿಂಚಣಿಯನ್ನು ನಿವೃತ್ತಿ ನೌಕರನ ಮರಣದ ನಂತರ ಒದಗಿಸಲಾಗುತ್ತದೆ ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ಇದರ ಅಡಿಯಲ್ಲಿ ಡಿಎ ಕೂಡ ನೀಡಲಾಗುತ್ತದೆ ಹಾಗಾಗಿ ಪಿಂಚಣಿ ಮೊತ್ತವು ಹೆಚ್ಚಾಗುತ್ತಲೇ ಇರುತ್ತದೆ.

ಹೀಗೆ ಹೊಸ ಪಿಂಚಣಿ ಯೋಜನೆ ಹಾಗೂ ಹಳೆ ಪಿಂಚಣಿ ಯೋಜನೆಗೆ ಸಂಬಂಧಿಸಿ ದಂತೆ ಸಾಕಷ್ಟು ಬದಲಾವಣೆಗಳು ನೋಡಬಹುದಾಗಿದ್ದು ಹಳೆಯ ಪಿಂಚಣಿ ಯೋಜನೆಯನ್ನು ನೌಕರರು ಜಾರಿಗೊಳಿಸುವಂತೆ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಸರ್ಕಾರಗಳು ಯಾವಾಗ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುತ್ತವೆ ಎಂಬುದರ ಬಗ್ಗೆ ಸ್ಪಷ್ಟನೆ ಇರುವುದಿಲ್ಲ.
ಹೀಗೆ ಹಳೆಯ ಪಿಂಚಣಿ ಯೋಜನೆ ಬಗ್ಗೆ ನಿಮ್ಮ ಸರ್ಕಾರಿ ನೌಕರರು ಯಾರಾದರೂ ಸ್ನೇಹಿತರಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮೋದಿ ಹುಟ್ಟುಹಬ್ಬಕ್ಕೆ ನೌಕರರಿಗೆ ಭರ್ಜರಿ ಗಿಫ್ಟ್;‌ ನೌಕರರು ಮತ್ತು ಪಿಂಚಣಿದಾರರಿಗೆ 48‌,000 ರೂ. ಖಾತೆಗೆ ಜಮಾ

ಶಕ್ತಿ ಯೋಜನೆ ದುರುಪಯೋಗ; ತಮಿಳುನಾಡು ಮಹಿಳೆಯನ್ನು ಕೊಳ್ಳೇಗಾಲದಲ್ಲಿ ಬಂಧಿಸಿದ ಪೋಲಿಸರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments