Thursday, July 25, 2024
HomeInformationವಾಹನಗಳ ಖರೀದಿಗೆ ಸಹಾಯಧನ : ತಡ ಮಾಡದೆ ಅರ್ಜಿ ಸಲ್ಲಿಸಿ 3 ಲಕ್ಷ ಪಡೆಯಿರಿ

ವಾಹನಗಳ ಖರೀದಿಗೆ ಸಹಾಯಧನ : ತಡ ಮಾಡದೆ ಅರ್ಜಿ ಸಲ್ಲಿಸಿ 3 ಲಕ್ಷ ಪಡೆಯಿರಿ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ನಿರುದ್ಯೋಗಿಗಳಿಗೆ ಈ ವಾಹನಗಳನ್ನು ಖರೀದಿಸಲು ರಾಜ್ಯ ಸರ್ಕಾರವು ಸಹಾಯಧನ ನೀಡುತ್ತಿದೆ. ನಿರುದ್ಯೋಗಿಗಳ ಸಂಖ್ಯೆಯನ್ನು ನಿಯಂತ್ರಿಸಲು ರಾಜ್ಯದಲ್ಲಿ ಕರ್ನಾಟಕ ಸರ್ಕಾರವು ಹಾಗೂ ಯುವಕರನ್ನು ಪ್ರೋತ್ಸಾಹಿಸುವ ಸಲುವಾಗಿ ವಾಹನಗಳ ಮೇಲೆ ಸಬ್ಸಿಡಿಯನ್ನು ನೀಡುತ್ತಿದೆ. ಹಾಗಾದರೆ ಯಾವ ವಾಹನಗಳನ್ನು ಖರೀದಿಸಲು ಸಹಾಯಧನ ನೀಡುತ್ತಿದೆ, ಖರೀದಿಸಲು ಬೇಕಾದ ಅರ್ಹತೆಗಳು ಏನು? ಹಾಗೂ ಈ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

subsidy-on-purchase-of-vehicles
subsidy-on-purchase-of-vehicles
Join WhatsApp Group Join Telegram Group

ಸ್ವಾವಲಂಬಿ ಸಾರಥಿ ಯೋಜನೆ :

ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕರಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಸ್ವಾವಲಂಬಿ ಸಾರಥಿ ಯೋಜನೆಯ ಎಂಬ ಹೊಸ ಯೋಜನೆಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ಗಳ ನಿರುದ್ಯೋಗಿ ಯುವಕರು ಹಾಗೂ ಅಲ್ಪಸಂಖ್ಯಾತ ಯುವಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ನಾಲ್ಕು ಚಕ್ರವಾಹನಗಳನ್ನು ಅವರ ಸ್ವಯಂ ಉದ್ಯೋಗ ಪಡೆಯಲು ಖರೀದಿಸುವುದಕ್ಕಾಗಿ ಸಹಾಯಧನವನ್ನು ನೀಡಲಾಗುತ್ತಿದೆ. 50 ಪರ್ಸೆಂಟ್ ನಿಂದ 75% ವರೆಗೆ ಸಬ್ಸಿಡಿಯನ್ನು ಈ ಯೋಜನೆಯ ಅಡಿಯಲ್ಲಿ ಯುವಕರಿಗೆ ಕರ್ನಾಟಕ ಸರ್ಕಾರವು ಒದಗಿಸುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆಯ ವಿಶೇಷತೆಗಳು :

ಕರ್ನಾಟಕ ಸರ್ಕಾರದ ಸ್ವಾವಲಂಬಿಸಾರತಿ ಯೋಜನೆಯ ವಿಶೇಷತೆಗಳೆಂದರೆ ರಾಜ್ಯದ ನಿರುದ್ಯೋಗಿ ನಾಗರೀಕರಿಗೆ ಉದ್ಯೋಗದ ವ್ಯವಸ್ಥೆಯನ್ನು ಈ ಯೋಜನೆಯ ಮೂಲಕ ಮಾಡಲಾಗುತ್ತದೆ. ಈ ಯೋಜನೆಯ ಲಾಭವನ್ನು ಸ್ವಂತ ಉದ್ಯೋಗ ಆರಂಭಿಸಲು ಬಯಸುವ ಯುವಕರಿಗೆ ಒದಗಿಸಲಾಗುತ್ತದೆ. ರಾಜ್ಯದಲ್ಲಿನ ನಿರುದ್ಯೋಗ ದರವನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಯೋಜನೆಯ ಹೊಂದಿದೆ. 4 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ 75% ಸಬ್ಸಿಡಿ ಎಂದು ಎಸ್ ಸಿ ಎಸ್ ಟಿ ಗಳಿಗೆ ಒದಗಿಸಲಾಗುತ್ತದೆ. ಹಾಗೂ 3 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ 50 ಪರ್ಸೆಂಟ್ ಸಬ್ಸಿಡಿ ಯನ್ನು ಅಲ್ಪಸಂಖ್ಯಾತ ವರ್ಗದವರಿಗೆ ಒದಗಿಸಲಾಗುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆಯ ಅರ್ಹತೆಗಳು :

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಅಥವಾ ಎಸ್ಸಿ ಎಸ್ಟಿ ವರ್ಗಕ್ಕೆ ಅರ್ಜಿಯನ್ನು ಸಲ್ಲಿಸುವ ಅರ್ಜಿದಾರರು ಸೇರಿದವರಾಗಿರಬೇಕು. ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿ ಅರ್ಜಿದಾರರು ಇರಬೇಕು. ಅರ್ಜಿದಾರರ ವಯಸ್ಸು 18 ಮತ್ತು 55 ವರ್ಷಗಳ ನಡುವೆ ಇರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 4.50 ಲಕ್ಷ ಮೀರಿರಬಾರದು. ಅರ್ಜಿಯನ್ನು ಸಲ್ಲಿಸುವವ ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಸಾರ್ವಜನಿಕ ವಲಯದ ಘಟಕಗಳ ಉದ್ಯೋಗಿ ಆಗಿರಬಾರದು. ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್ ಪಡೆದಿರಬೇಕು.

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :

ಸ್ವಾವಲಂಬಿ ಸಾರಥಿ ಯೋಜನೆಗೆ ಕರ್ನಾಟಕದ ಯುವಕರು ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ, ಫಲಾನುಭವಿಯ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಎರಡು, ಆನ್ಲೈನ್ ಅಪ್ಲಿಕೇಶನ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ,ಡ್ರೈವಿಂಗ್ ಲೈಸೆನ್ಸ್ ಹಾಗೂ ಸಾಲದ ಅವಧಿಯಲ್ಲಿ ಯೋಜನೆಯ ಅಡಿಯಲ್ಲಿ ಪಡೆದ ವಾಹನವನ್ನು ವರ್ಗಾವಣೆ ಮಾಡದಿರುವ ಬಗ್ಗೆ ಆಫ್ಫಿಡವಿಟನ್ನು ಅರ್ಜಿದಾರರು ಹೊಂದಿರಬೇಕು ಜೊತೆಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಸಹ ಹೊಂದಿರಬೇಕಾಗುತ್ತದೆ.

ಇದನ್ನು ಓದಿ : ಹಬ್ಬಕ್ಕೆ ಊರಿಗೆ ಹೋಗೋರಿಗೆ ಬಿಗ್‌ ಶಾಕ್: ಗಣೇಶ ಚತುರ್ಥಿ ಪ್ರಯುಕ್ತ ಖಾಸಗಿ ಬಸ್ ಪ್ರಯಾಣ ದರ ಏರಿಕೆ.!

ಸ್ವಾವಲಂಬಿ ಸಾರಥಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು :

ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಧಿಕೃತ ವೆಬ್ ಸೈಟ್ ಎಂದರೆ http://kmdc.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಬೇಕಾಗುತ್ತದೆ. ಹೀಗೆ ಆನ್ಲೈನ್ ಅಪ್ಲಿಕೇಶನ್ ಹಾಕುವುದರ ಮೂಲಕ ನೀವು ಟ್ಯಾಕ್ಸಿ ಆಟೋ ರಿಕ್ಷಾ ಅಥವಾ ಸರಕು ವಾಹನಗಳನ್ನು ಖರೀದಿಸಲು ಸರ್ಕಾರದ ವತಿಯಿಂದ ಸಹಾಯಧನವನ್ನು ಪಡೆಯಬಹುದಾಗಿದೆ.

ಒಟ್ಟಾರೆಯಾಗಿ ಕರ್ನಾಟಕ ಸರ್ಕಾರವು ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗವನ್ನು ಕಲ್ಪಿಸುವ ಸಲುವಾಗಿ ಸ್ವಂತ ವಾಹನಗಳನ್ನು ಖರೀದಿಸಲು ಸಹಾಯಧನವನ್ನು ನೀಡುತ್ತಿದ್ದು ಈ ಸ್ವಂತ ವಾಹನದ ಮೂಲಕ ಸ್ವಯಂ ಉದ್ಯೋಗವನ್ನು ಮಾಡಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಕರ್ನಾಟಕ ರಾಜ್ಯದಲ್ಲಿರುವ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರಲ್ಲಿ ಯಾರಾದರೂ ನಿರುದ್ಯೋಗಿಗಳಿದ್ದರೆ ಅವರು ಸ್ವಯಂ ಉದ್ಯೋಗವನ್ನು ಮಾಡಲು ಸಹಾಯ ಮಾಡಿದ ಧನ್ಯವಾದಗಳು.

ಇತರೆ ವಿಷಯಗಳು :

ಮೋದಿ ಹುಟ್ಟುಹಬ್ಬಕ್ಕೆ ನೌಕರರಿಗೆ ಭರ್ಜರಿ ಗಿಫ್ಟ್;‌ ನೌಕರರು ಮತ್ತು ಪಿಂಚಣಿದಾರರಿಗೆ 48‌,000 ರೂ. ಖಾತೆಗೆ ಜಮಾ

ಬಿರಿಯಾನಿಗೆ ಹೆಚ್ಚುವರಿಯಾಗಿ ಮೊಸರು, ಈರುಳ್ಳಿ ಕೇಳಿದ ಗ್ರಾಹಕನನ್ನು ಥಳಿಸಿ ಕೊಂದ ಭೀಕರ ಘಟನೆ..

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments