Thursday, July 25, 2024
HomeTrending News35 ಲಕ್ಷ ರೇಷನ್ ಕಾರ್ಡ್ ಗಳು ಬಂದ್: ಹೊಸ ರೂಲ್ಸ್ ಜಾರಿ, ಕಾರ್ಡ್ ಇದ್ದವರಿಗೂ ಆತಂಕ!...

35 ಲಕ್ಷ ರೇಷನ್ ಕಾರ್ಡ್ ಗಳು ಬಂದ್: ಹೊಸ ರೂಲ್ಸ್ ಜಾರಿ, ಕಾರ್ಡ್ ಇದ್ದವರಿಗೂ ಆತಂಕ! ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್‌ ಡೀಟೇಲ್ಸ್

ನಮಸ್ಕಾರ ಸ್ನೇಹಿತರೆ, ಹೊಸ ರೂಲ್ಸ್ ಗಳನ್ನು ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಜಾರಿ ಮಾಡಲು ನಿರ್ಧರಿಸಿದೆ. ಸರ್ಕಾರವು ಜಾರಿಗೆ ತಂದಂತಹ ಗೃಹ ಜ್ಯೋತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಜನಸಾಮಾನ್ಯರು ಪಡೆದುಕೊಳ್ಳುವುದರಲ್ಲಿ ನಿರತರಾಗಿರುವವರಿಗೆ ಸರ್ಕಾರವು ಈಗ ಶಾಖೆಯನ್ನು ನೀಡುತ್ತಿದೆ. ಅದೇನೆಂದರೆ ಅನೇಕ ಜನರ ರೇಷನ್ ಕಾರ್ಡ್ ರದ್ದಾಗಿವೆ ಹಾಗೂ ಇನ್ನೂ ರದ್ದಾಗುವ ಸಾಧ್ಯತೆ ಹೆಚ್ಚಿದೆ ಹಾಗಾಗಿ ಯಾವುದೆಲ್ಲ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Addition of new rules to ration card
Addition of new rules to ration card
Join WhatsApp Group Join Telegram Group

ಸರ್ಕಾರದಿಂದ ಹೊಸ ರೂಲ್ಸ್ :

ಅನೇಕ ಜನರು ಹೆಚ್ಚಿನ ಜಮೀನು ಮತ್ತು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರು ಬಡತನ ರೇಖೆಗಿಂತ ಕೆಳಗಿಲ್ಲದಿದ್ದರೂ ಸಹ ಬಿಪಿಎಲ್ ಕಾರ್ಡ್ ನ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇಂತಹ ಜನರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಬಿಸಿ ಮುಟ್ಟಿಸಲು ಮುಂದಾಗಿದೆ. ಮನೆ ಮನೆಗೆ ಹೋಗಿ ಕರ್ನಾಟಕದಲ್ಲಿ ಸರ್ವೆ ನಡೆಸುವ ಮೂಲಕ ಬಿಪಿಎಲ್ ಕಾರ್ಡ್ ಸೇವೆಗಳನ್ನು ಆರ್ಥಿಕವಾಗಿ ಸಬಲರಾಗಿದ್ದವರು ಪಡೆಯುತ್ತಿದ್ದರೆ ಅವರನ್ನು ಗುರುತಿಸುವ ಮೂಲಕ ಅಂಥವರ ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರ ರದ್ದು ಮಾಡಲು ನಿರ್ಧರಿಸಿದೆ. ಬಿಪಿಎಲ್ ಕಾರ್ಡ್ ರದ್ದು : ರಾಜ್ಯದಲ್ಲಿ ಸುಮಾರು 1.27 ಕೋಟಿ ಬಿಪಿಎಲ್ ಕಾರ್ಡುಗಳಿದ್ದು ಅದರ ಪ್ರಯೋಜನವನ್ನು 4.36 ಕೋಟಿ ಜನರು ಪಡೆಯುತ್ತಿದ್ದಾರೆ. ಆದರೆ ಈ ರೇಷನ್ ಕಾರ್ಡ್ ನಲ್ಲಿ ಅರ್ಹರಲ್ಲದ ಫಲಾನುಭವಿಗಳು ಸಹ ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಅರ್ಹರಲ್ಲದ ಬಿಪಿಎಲ್ ಕಾರ್ಡ್ ಫಲಾನುಭವಿಗಳ ಸೂಕ್ತ ದಾಖಲೆಗಳನ್ನು ಪಡೆಯುವ ಮೂಲಕ ಬರೋಬ್ಬರಿ 35 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರದ್ದು ಮಾಡಿದೆ.

ಬರೋಬ್ಬರಿ 4 ಲಕ್ಷ ರೇಷನ್ ಕಾರ್ಡ್ ಗಳನ್ನು ಕಳೆದ ವರ್ಷ 2022 ರಲ್ಲಿ ರಾಜ್ಯದಲ್ಲಿ ರದ್ದು ಮಾಡಿ ಸುಮಾರು 13 ಕೋಟಿ ರೂಪಾಯಿಗಳಷ್ಟು ದಂಡವನ್ನು ಅರ್ಹರಲ್ಲದ ರೇಷನ್ ಕಾರ್ಡ್ ದಾರದಿಂದ ವಸೂಲಿ ಮಾಡಲಾಗಿದೆ. ಅದರ ಪ್ರಕಾರ ಬಿಪಿಎಲ್ ಕಾರ್ಡ್ಗೆ ಅರ್ಹರಲ್ಲದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಮೂಲಕ ಈ ವರ್ಷವೂ ಸಹಿತ ಚುರುಕಿನ ಕಾರ್ಯಾಚರಣೆ ನಡೆಸಿ ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ಲಾಭವನ್ನು ನೀಡಲು ಆಹಾರ ಮತ್ತು ಸರಬರಾಜು ಇಲಾಖೆಯು ಭರವಸೆಯನ್ನು ನೀಡಿದೆ.

ಹೊಸ ಬಿಪಿಎಲ್ ಕಾರ್ಡ್ ಪಡೆಯಲು 6 ರೂಲ್ಸ್ :

ಹೊಸದಾಗಿ ಬಿಪಿಎಲ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುತ್ತಿರುವವರಿಗೆ ಸರ್ಕಾರವು ಈಗ ಆರು ರೂಲ್ಸ್ ಗಳನ್ನು ಜಾರಿಗೆ ತಂದಿದೆ ಅವುಗಳೆಂದರೆ,

  1. ಮೂರು ಹೆಟರ್ ಗಿಂತ ಹೆಚ್ಚಿನ ಭೂಮಿಯನ್ನು ಬಿಪಿಎಲ್ ಕಾರ್ಡ್ ಪಡೆಯುವ ರೈತರು ಹೊಂದಿರಬಾರದು.
  2. ಬಿಪಿಎಲ್ ಕಾರ್ಡ್ಗಳನ್ನು ವೈಯಕ್ತಿಕವಾಗಿ ವೈಟ್ ಬೋರ್ಡ್ ಸ್ವಂತ ಕಾರು ಹೊಂದಿರುವವರು ಪಡೆಯಲು ಸಾಧ್ಯವಿಲ್ಲ.
  3. ನಗರ ಪ್ರದೇಶಗಳಲ್ಲಿ ವಾಸ ಮಾಡುವವರು ಸಾವಿರಾರುಗಳಿಗಿಂತ ದೊಡ್ಡ ಮನೆಯನ್ನು ಹೊಂದಿರಬಾರದು.
  4. ರೇಷನ್ ಕಾರ್ಡ್ ಸೌಲಭ್ಯವು ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ದೊರೆಯುವುದಿಲ್ಲ.
  5. ಬಿಪಿಎಲ್ ರೇಷನ್ ಕಾರ್ಡ್ ತೆರಿಗೆ ಪಾವತಿ ಮಾಡುವವರಿಗೆ ನೀಡಲಾಗುತ್ತಿಲ್ಲ.
  6. 1.2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ವಾರ್ಷಿಕವಾಗಿ ಪಡೆಯುತ್ತಿರುವವರಿಗೆ ಮಾತ್ರ ಬಿಪಿಎಲ್ ಕಾರ್ಡನ್ನು ಸರ್ಕಾರ ನೀಡುತ್ತಿದೆ.

ರದ್ದಾಗಿರುವ ರೇಷನ್ ಕಾರ್ಡ್ ನೋಡುವ ವಿಧಾನ :

ರಾಜ್ಯದಲ್ಲಿ ಅನೇಕ ಜನರ ರೇಷನ್ ಕಾರ್ಡ್ ರದ್ದಾಗಿರುವುದರ ಬಗ್ಗೆ ಈಗಾಗಲೇ ನಿಮಗೆ ತಿಳಿಸಿದ್ದೇವೆ. ಅದರಂತೆ ರದ್ದಾಗಿರುವ ರೇಷನ್ ಕಾರ್ಡ್ ಅನ್ನು ನೋಡಬೇಕಾದರೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಎಂದರೇ https://ahara.kar.nic.in/Home/EServices ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ರದ್ದಾಗಿರುವ ರೇಷನ್ ಕಾರ್ಡ್ ಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ.

ಹೀಗೆ ರಾಜ್ಯದಲ್ಲಿ ಸುಮಾರು 6 ಲಕ್ಷ ಪಡಿತರ ಚೀಟಿಯನ್ನು ಹೊಂದಿದಂತಹ ಬಡತನ ರೇಖೆಗಿಂತ ಮೇಲಿರುವ ಜನರ ಪಡಿತರ ಚೀಟಿಯನ್ನು ಸರ್ಕಾರ ರದ್ದು ಮಾಡಿದೆ,, ಇದರಿಂದ ಸುಲಭವಾಗಿ ಬಡತನ ರೇಖೆಗಿಂತ ಕೆಳಗಿರುವವರು ಪ್ರಯೋಜನವನ್ನು ಪಡೆಯಲು ಸರ್ಕಾರವು ಸಹಾಯ ಮಾಡುತ್ತಿದೆ. ಹಾಗಾಗಿ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಬಡತನ ರೇಖೆಗಿಂತ ಕಡಿಮೆ ಇಲ್ಲದಿದ್ದರೆ ಅವರು ಆರ್ಥಿಕವಾಗಿ ಸಬಲರಾಗಿದ್ದರೆ ಅವರ ರೇಷನ್ ಕಾರ್ಡ್ ರದ್ದಾಗುತ್ತದೆ ಎಂಬ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮೊಬೈಲ್ ನಲ್ಲಿಯೇ ಇಂಟರ್ನೆಟ್ ಇಲ್ಲದೆ ಟಿವಿ ಚಾನೆಲ್ ನೋಡಬಹುದು : ಈ ವಿಧಾನ ಅನುಸರಿಸಿ

ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಬಗ್ಗೆ ನೇರಪ್ರಸಾರ : ಮೊಬೈಲ್ ಮುಖಾಂತರ ನೋಡಬಹುದು ಇಲ್ಲಿದೆ ಲಿಂಕ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments