Thursday, July 25, 2024
HomeNewsATM ಬಳಸುವ ಗ್ರಾಹಕರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ ನೋಡಿ

ATM ಬಳಸುವ ಗ್ರಾಹಕರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ ನೋಡಿ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಎಟಿಎಂ ಬಳಸುವವರಿಗೆ ಹೊಸ ಸೇವೆಯನ್ನು ಈಗ ನೀಡಲಾಗುತ್ತಿದೆ. ದೇಶದ ಎಲ್ಲ ಬ್ಯಾಂಕುಗಳು ಸಾಮಾನ್ಯವಾಗಿ ತಮ್ಮ ಗ್ರಾಹಕರಿಗೆ ಎಟಿಎಂ ಕಾರ್ಡ್ ಗಳನ್ನು ಸೌಲಭ್ಯವನ್ನು ನೀಡುವುದು ಸರ್ವೇಸಾಮಾನ್ಯವಾಗಿದೆ. ಗ್ರಾಹಕರು ಎಟಿಎಂನಿಂದಾಗಿ ಸುಲಭವಾಗಿ ಹಣವನ್ನು ತೆಗೆಯಲು ಅವಕಾಶ ನೀಡಲಾಗುತ್ತದೆ. ಹಣವನ್ನು ತೆಗೆಯಲು ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಅದರಂತೆ ಈಗ ಎಟಿಎಂ ಕಾರ್ಡ್ ಬಳಸುವವರಿಗೆ ಇನ್ನೊಂದು ಸೇವೆಯನ್ನು ನೀಡಲು ನಿರ್ಧರಿಸಲಾಗಿದೆ.

another-service-for-atm-card-users
another-service-for-atm-card-users
Join WhatsApp Group Join Telegram Group

ಎಟಿಎಂ ಕಾರ್ಡ್ ಬಳಸುವವರಿಗೆ ಮತ್ತೊಂದು ಸೇವೆ :

ಸಾಕಷ್ಟು ಸೌಲಭ್ಯಗಳು ಎಟಿಎಂ ಕಾರ್ಡ್ ಬಳಸುತ್ತಿರುವವರಿಗೆ ಎಟಿಎಂ ನಲ್ಲಿ ಲಭ್ಯವಿರುವುದರ ಬಗ್ಗೆ ತಿಳಿದಿರುವುದಿಲ್ಲ. ಕೇವಲ ಹಣವನ್ನು ಮಾತ್ರ ಎಟಿಎಂಗಳಲ್ಲಿ ತೆಗೆಯಬಹುದು ಹೆಚ್ಚೆಂದರೆ ಬ್ಯಾಲೆನ್ಸ್ ಚೆಕ್ ಅನ್ನು ಎಟಿಎಂ ಗಳಲ್ಲಿ ಮಾಡಿಕೊಳ್ಳಲು ಸಾಧ್ಯ ಎಂದು ತಿಳಿದಿರುತ್ತಾರೆ. ಆದರೆ ಎಟಿಎಂ ನಲ್ಲಿ ನಿಮಗೆ ತಿಳಿದಿರುವ ವಿಷಯ ಏನೆಂದರೆ ಹಣವನ್ನು ಹಿಂತೆಗೆದುಕೊಳ್ಳುವುದರ ಜೊತೆಗೆ ಇತರ ಹಲವು ಹಣಕಾಸಿನೇತರ ವಹಿವಾಟುಗಳನ್ನು ಎಟಿಎಂ ಮೂಲಕ ಮಾಡಬಹುದಾಗಿದೆ.

ಇದನ್ನು ಓದಿ : Isro: ಚಂದ್ರಯಾನ ಆಯ್ತು – ಈಗ ಸೂರ್ಯನತ್ತ ಇಸ್ರೋ ಚಿತ್ತ! ಆದಿತ್ಯ L1 ಕಳುಹಿಸುವ ನಿರೀಕ್ಷೆ, ಮುಹೂರ್ತ ಫಿಕ್ಸ್!

ಎಟಿಎಂ ಕಾರ್ಡ್ ಬಳಸುವವರಿಗೆ ಇರುವ ಸೌಲಭ್ಯಗಳು :

  1. ಎಟಿಎಂ ಮೂಲಕ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಹಾಗೂ ಕೊನೆಯ ವಹಿವಾಟುಗಳ ಕೆಲವು ಮಾಹಿತಿಗಳನ್ನು ಪಡೆಯಬಹುದಾಗಿದೆ. ಎಟಿಎಂ ಮೂಲಕ ಖಾತೆಯಲ್ಲಿನ ಸುಮಾರು 10 ವಹಿವಾಟುಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
  2. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ಎಟಿಎಂ ಮೂಲಕ ವರ್ಗಾಯಿಸಬಹುದಾಗಿದೆ. ಸುಮಾರು ಹದಿನಾರು ಖಾತೆಗಳಿಗೆ ಎಟಿಎಂನಿಂದ ಹಣವನ್ನು ವರ್ಗಾಯಿಸುವ ಸೌಲಭ್ಯವನ್ನು ನೀಡಲಾಗಿದೆ.
  3. ಒಂದು ಡೆಬಿಟ್ ಕಾರ್ಡ್ ನಿಂದ ಮತ್ತೊಂದು ಡೆಬಿಟ್ ಕಾರ್ಡ್ ಗೆ ಗ್ರಾಹಕರು ಹಣವನ್ನು ಕಳುಹಿಸಬಹುದು ಎಂದು ಎಸ್‌ಬಿಐ ವೆಬ್ಸೈಟ್ ತಿಳಿಸಿದೆ. ಈ ಸೇವೆಯು ಒಂದು ಮುಚಿತ ಸೇವೆಯಾಗಿದೆ ಇದರಲ್ಲಿ ಸುಮಾರು ಹತ್ತು ಸಾವಿರ ರೂಪಾಯಿಗಳನ್ನು ನಗದು ರೂಪದಲ್ಲಿ ಪ್ರತಿದಿನ ಕಳುಹಿಸಬಹುದು. ಈ ವಹಿವಾಟಿಗಾಗಿ ಎಟಿಎಂ ಕಾರ್ಡ್ ಮತ್ತು ವರ್ಗಾವಣೆಗೊಂಡವರ ಎಟಿಎಂ ಕಾರ್ಡ್ ಮಾತ್ರ ಬೇಕಾಗಿರುತ್ತದೆ.
  4. ಎಟಿಎಂ ಅನ್ನು ಯಾವುದೇ ಬ್ಯಾಂಕಿನಿಂದ ಬಳಸಿಕೊಂಡು ನೀವು ನಿಮ್ಮ ಪಾಲಿಸಿಗೆ ಪಾವತಿಸಬಹುದಾಗಿದೆ. ಎಟಿಎಂ ಗಳ ಮೂಲಕ ಎಲ್ ಐ ಸಿ, ಎಚ್ ಡಿ ಎಫ್ ಸಿ, ಲೈಫ್ ಮತ್ತು ಎಸ್‌ಬಿಐ ನಂತಹ ವಿಮಾದಾರರು ಪ್ರೀಮಿಯಂ ಪಾವತಿಸಲು ಬ್ಯಾಂಕುಗಳೊಂದಿಗೆ ಅನುಕೂಲವಾಗುವಂತೆ ಒಪ್ಪಂದ ಮಾಡಿ ಕೊಡಲಾಗಿದೆ.
  5. ಎಟಿಎಂ ಅನ್ನು ಯಾವುದೇ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಬಳಸಬಹುದು.
  6. ಚೆಕ್ ಬುಕ್ ಅನ್ನು ಯಾವುದೇ ಶಾಖೆಗೆ ಹೋಗದೆ ಆರ್ಡರ್ ಮಾಡಬಹುದು.
  7. ಮೊಬೈಲ್ ಬ್ಯಾಂಕಿಗ್ ಗಾಗಿ ಎಟಿಎಂ ಮೂಲಕ ನೊಂದಾಸಿಕೊಳ್ಳಬಹುದು ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೀವು ಬಳಸಬಹುದು.
  8. ಡೆಬಿಟ್ ಕಾರ್ಡ್ ತಿನ್ನನ್ನು ಯಾವುದೇ ಎಟಿಎಂನಲ್ಲಿ ನೀವು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಹೀಗೆ ಎಟಿಎಂ ಕಾರ್ಡ್ ನಲ್ಲಿ ಹಲವಾರು ಸೌಲಭ್ಯಗಳನ್ನು ಗ್ರಾಹಕರಿಗೆ ಬ್ಯಾಂಕುಗಳು ಒದಗಿಸುವ ಮೂಲಕ ಸುಲಭವಾಗಿ ಅವರು ವ್ಯಾಪಾರ ವಹಿವಾಟನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದರoತೆನಿಮ್ಮ ಸ್ನೇಹಿತರು ಎಟಿಎಂ ಕಾರ್ಡ್ ಅನ್ನು ಬಳಸುತ್ತಿದ್ದರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಮೊದಲು ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯುತ್ತಿದ್ದಂತೆ ಏನು ಮಾಡಲಿದೆ ಗೊತ್ತಾ? ಕೇಳಿದ್ರೆ ಶಾಕ್‌ ಆಗ್ತೀರ

ಸರ್ಕಾರದಿಂದ ಹೊಸ ಪೋರ್ಟಲ್‌ ಬಿಡುಗಡೆ; ಇಲ್ಲಿ ರಿಜಿಸ್ಟರ್‌ ಆದರೆ ಮಾತ್ರ ಸಿಗುತ್ತೆ ಸರ್ಕಾರದ ಎಲ್ಲಾ ಸೌಲಭ್ಯ, ಮುಖ್ಯಮಂತ್ರಿಗಳಿಂದ ಮಹತ್ವದ ಘೋಷಣೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments