Saturday, July 27, 2024
HomeAstrologyಆಂಜನೇಯ ಸ್ವಾಮಿ ವಿಶೇಷ ಪೂಜೆ ವಿಧಾನ, ಮಂತ್ರ ಪ್ರಯೋಜನವಿದು..! ಭಗವಂತನನ್ನು ಒಲಿಸಿಕೊಳ್ಳುವ ವಿಧಾನ ಇಲ್ಲಿದೆ!

ಆಂಜನೇಯ ಸ್ವಾಮಿ ವಿಶೇಷ ಪೂಜೆ ವಿಧಾನ, ಮಂತ್ರ ಪ್ರಯೋಜನವಿದು..! ಭಗವಂತನನ್ನು ಒಲಿಸಿಕೊಳ್ಳುವ ವಿಧಾನ ಇಲ್ಲಿದೆ!

ನಮಸ್ಕಾರ ಸ್ನೇಹಿತರೆ, ಆಂಜನೇಯ ಸ್ವಾಮಿಯ ಅನೇಕ ಜನರು ಭಕ್ತರಾಗಿರುತ್ತಾರೆ. ಅವರು ಹೆಚ್ಚಾಗಿ ಆಂಜನೇಯ ಸ್ವಾಮಿಯನ್ನು ಪೂಜಿಸಲು ಇಷ್ಟಪಡುತ್ತಾರೆ ಹಾಗೂ ಗೌರವ, ಭಕ್ತಿ ಮನೋಭಾವದಿಂದ ನೋಡುತ್ತಿರುತ್ತಾರೆ. ಹಾಗಾದರೆ ಆಂಜನೇಯ ಸ್ವಾಮಿಯನ್ನು ಹೇಗೆ ಪೂಜಿಸುದು ಗೊತ್ತಾ, ಆಂಜನೇಯ ಸ್ವಾಮಿ ಪೂಜೆ ಮಾಡುವುದರಿಂದ ಆಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ. ಆಂಜನೇಯ ಸ್ವಾಮಿ ಪೂಜೆ : ವೈಯಕ್ತಿಕ ನಂಬಿಕೆಗಳು ಅಥವಾ ಸಮಾಜದ ಕಾರಣದಿಂದ ಹಿಂದಿನ ಕಾಲದಲ್ಲಿ ಅನೇಕ ಮಹಿಳೆಯರು ಹನುಮಂತನನ್ನು ಪೂಜಿಸುತ್ತಿರಲಿಲ್ಲ. ಆದರೆ ಇಂದಿನ ದಿನ ಮಗನ ಗಳಲ್ಲಿ ಪ್ರಸ್ತುತ ಸಮಯ ಗಮನಾರ್ಹವಾಗಿ ಬದಲಾಗಿರುವ ಕಾರಣ ಪ್ರಬಲ ಭಗವಂತನಾದ ಆಂಜನೇಯ ಸ್ವಾಮಿಯನ್ನು ಹಿಂದಿನ ದಿನಗಳಲ್ಲಿ ಅನೇಕ ಮಹಿಳೆಯರು ಪ್ರಾರ್ಥಿಸುತ್ತಾರೆ ಹಾಗೂ ಅವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಿರುತ್ತಾರೆ. ನಾವು ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ ನಾವು ಹೇಗೆ ಆಂಜನೇಯ ಸ್ವಾಮಿಯನ್ನು ಪೂಜಿಸಬೇಕು ಆಂಜನೇಯ ಸ್ವಾಮಿಯನ್ನು ಯಾವ ವಿಧಿ ವಿಧಾನಗಳ ಮೂಲಕ ಪೂಜಿಸಬೇಕು ಎಂಬುದರ ಬಗ್ಗೆ ನೀವು ಇದೀಗ ತಿಳಿದುಕೊಳ್ಳಬಹುದಾಗಿದೆ.

Anjaneya Swami Special Puja Method Mantra
Anjaneya Swami Special Puja Method Mantra
Join WhatsApp Group Join Telegram Group

ಶುದ್ಧವಾದ ಮನಸ್ಸಿನಿಂದ ಪೂಜಿಸಬೇಕು :

ವಿವಿಧ ರೀತಿಯಲ್ಲಿ ನಾವು ಹನುಮಂತನ ಆಶೀರ್ವಾದವನ್ನು ಪಡೆಯಬಹುದಾಗಿದೆ. ದೇವರ ಆಶೀರ್ವಾದವನ್ನು ಯಾವುದೇ ರೀತಿಯಲ್ಲಿ ಪಡೆಯಲು ಅತ್ಯಂತ ಮುಖ್ಯವಾದ ಹೆಜ್ಜೆ ಎಂದರೆ ಸ್ಪಷ್ಟ ಮತ್ತು ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸುವುದು. ನಾವು ದೇವರಿಂದ ಕಲಿತ ಉತ್ತಮ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು ಹಾಗೂ ಅದನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಬೇಕು. ಒಟ್ಟಾರೆಯಾಗಿ ಶುದ್ಧ ಮನಸ್ಸಿನಿಂದ ದೇವರ ವಿಚಾರಗಳನ್ನು ಕಲಿತರೆ ನಾವು ಭಗವಂತನ ಆಶೀರ್ವಾದ ಪಡೆಯಬಹುದಾಗಿದೆ ಹಾಗೂ ಕೆಲಸದಲ್ಲಿ ಯಶಸ್ಸು ಕಾಣಬಹುದಾಗಿದೆ.

ಹನುಮಾನ್ ಮಂತ್ರ ಪಠಿಸುವುದು :

ಪ್ರಾಮಾಣಿಕ ಮತ್ತು ಶ್ರದ್ಧಾಪೂರ್ವಕ ಹೃದಯದಿಂದ ಪ್ರಾರ್ಥನೆಯನ್ನು ಹನುಮಂತನಿಗೆ ಸಲ್ಲಿಸಬೇಕು ಇದಾದ ನಂತರ ನೀವು ಹನುಮಾನ್ ಚಾಲೀಸವನ್ನು ಪಡಿಸಬಹುದು ಅಥವಾ ಈ ಮಂತ್ರವನ್ನು ಹೇಳಬಹುದಾಗಿದೆ ಅದೇನೆಂದರೆ “ಓಂ ಹನುಮತೇ ನಮಃ “ಅಥವಾ “ಜೈ ಹನುಮಾನ್” ಅಂತಹ ಮಂತ್ರಗಳನ್ನು ಪಡಿಸಬಹುದಾಗಿದೆ. ಈ ಮಂತ್ರಗಳನ್ನು ನಿಯಮಿತವಾಗಿ ಪಠಿಸುವುದರಿಂದ ಆಳವಾದ ಸಂಪರ್ಕವನ್ನು ಹನುಮಂತನೊಂದಿಗೆ ನೀವು ರಚಿಸುವಿರಿ ಹಾಗೂ ಅವರ ಆಶೀರ್ವಾದವನ್ನು ಪಡೆದುಕೊಳ್ಳುವಬಹುದಾಗಿದೆ.

ಇದನ್ನು ಓದಿ : ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞರ ತಿಂಗಳ ಸಂಬಳ ಎಷ್ಟು ಗೊತ್ತಾ? ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ

ಪ್ರಾರ್ಥನೆ ಸಲ್ಲಿಸುವ ವಿಧಾನ :

ನೀವು ಪ್ರಾರ್ಥನೆ ಮತ್ತು ಕಾಣಿಕೆಗಳನ್ನು ಹನುಮ ದೇವಾಲಯಗಳಿಗೆ ಭೇಟಿ ನೀಡಿ ಸಲ್ಲಿಸಬೇಕಾಗುತ್ತದೆ. ಅಲ್ಲದೆ ಸಿಂಧೂರವನ್ನು ನೀವು ಅರ್ಪಿಸಬಹುದು ಮತ್ತು ಸುಂದರಕಾಂಡವನ್ನು ಕೇಳಬಹುದು. ಹನುಮಂತನನ್ನು ಪ್ರಾರ್ಥಿಸಲು ಹೆಚ್ಚುವರಿಯಾಗಿ ನೀವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬಹುದಾಗಿದೆ. ದೀಪದ ಆರತಿಯನ್ನು ನೀವು ಹನುಮಂತನಿಗೆ ಬೆಳಗುವುದರ ಮೂಲಕ ಅವನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಹನುಮಂತನ ದೇವಾಲಯಕ್ಕೆ ಹೆಚ್ಚಾಗಿ ಮಂಗಳವಾರ ಮತ್ತು ಶನಿವಾರದಂದು ಭೇಟಿ ನೀಡುವುದು ಉತ್ತಮ.

ಹೀಗೆ ನೀವು ದೇವಾಲಯಗಳಿಗೆ ಭೇಟಿ ನೀಡುವುದರ ಮೂಲಕ ಹನುಮಂತನ ಪೂಜೆಯನ್ನು ಮಾಡುವಾಗ ಪೂಜೆಯಲ್ಲಿ ಸೇವೆ ಮತ್ತು ಸೇವೆಯ ಕಾರ್ಯಗಳಲ್ಲಿ ಇತರರನ್ನು ತೊಡಗಿಸಿಕೊಳ್ಳುವುದರ ಮೂಲಕ ಹನುಮಂತನ ಭಕ್ತರಿಗೆ ಇದು ಉಪಯುಕ್ತ ಮಾಹಿತಿ ಎಂದು ಹೇಳಬಹುದಾಗಿದೆ. ತನ್ನ ಭಕ್ತರಿಗೆ ಹನುಮಂತನು ಅಂತ್ಯವಿಲ್ಲದ ದಯೆ ಮತ್ತು ಸೇವೆ ಗುಣಗಳನ್ನು ಹೊಂದಿದ್ದಾನೆ ಆದ್ದರಿಂದ ನೀವು ಸಹ ಅಗತ್ಯವಿರುವವರಿಗೆ ಹನುಮಂತನ ಮೂಲಕ ಸಹಾಯ ಮಾಡುವುದರಿಂದ ಹನುಮಂತನನ್ನು ಮೆಚ್ಚಿಸಬಹುದು ಮತ್ತು ಆತನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.

ಹೀಗೆ ಹನುಮಂತನಿಗೆ ಹೆಚ್ಚಾಗಿ ಚಯ ಸಿಂಧೂರವನ್ನು ಅರ್ಪಿಸುವುದರಿಂದ ಉತ್ತಮ ಲಾಭವನ್ನು ಪಡೆಯಬಹುದು ಹಾಗೂ ಸೂರ್ಯಸ್ತದ ನಂತರ ಹನುಮಂತನ ವಿಗ್ರಹದ ಮುಂದೆ ಸಾಸಿವೆ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸುವುದರ ಮೂಲಕ ಆತನ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಒಟ್ಟಾರೆ ಹನುಮಂತನನ್ನು ಪ್ರಾರ್ಥಿಸಬೇಕಾದರೆ ದೀಪವನ್ನು ಬೆಳಗಿಸಿದ ನಂತರ ಹನುಮಾನ್ ಚಾಲೀಸವನ್ನು ಹೆಚ್ಚಾಗಿ ಪಠಿಸಿ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಹೆಚ್ಚಾಗಿ ಹನುಮಂತನ ಭಕ್ತರಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಬ್ಯಾಂಕ್‌ ನೌಕರರಿಗೆ ಗುಡ್‌ ನ್ಯೂಸ್; ಈಗ ವಾರದಲ್ಲಿ 5 ದಿನ ಮಾತ್ರ ಕೆಲಸ! RBI ನಿಂದ ಹೊಸ ಸುದ್ದಿ

ಕೇಳ್ರಪ್ಪೋ ಕೇಳಿ: ಮಗುಚಿ ಬಿತ್ತು ಗ್ಯಾಸ್‌ ಬೆಲೆ, ನಿಮ್ಮ ಬಳಿ ಈ ಪಡಿತರ ಚೀಟಿ ಇದ್ದರೆ ಕೇವಲ ರೂ.400 ಕ್ಕೆ LPG

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments