Saturday, July 27, 2024
HomeNews113 ಬರಪೀಡಿತ ತಾಲೂಕುಗಳಿಗೆ ಪರಿಹಾರ ಸಿಗುತ್ತಾ? ಸರ್ಕಾರದಿಂದ ರೈತರಿಗೆ ಲಾಭ ಏನು ..?

113 ಬರಪೀಡಿತ ತಾಲೂಕುಗಳಿಗೆ ಪರಿಹಾರ ಸಿಗುತ್ತಾ? ಸರ್ಕಾರದಿಂದ ರೈತರಿಗೆ ಲಾಭ ಏನು ..?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯ ಸರ್ಕಾರವು 113 ತಾಲ್ಲೂಕುಗಳ ಬರ ಪಟ್ಟಿ ಬಿಡುಗಡೆ ಮಾಡಿರುವುದರ ಬಗ್ಗೆ. ಪ್ರಸಾದ ವರ್ಷ ರಾಜ್ಯದಲ್ಲಿ ವಾಡಿಕೆ ಎಷ್ಟು ಮಳೆಯಾಗದ ಕಾರಣ ಈ ಬಾರಿ ರಾಜ್ಯದ ಕೆಲವು ತಾಲೂಕುಗಳಲ್ಲಿ ಸರ್ಕಾರವು ಬರಗಾಲ ಘೋಷಿಸಲಾಗಿದೆ. ಈ ಬಾರಿ 40% ರಷ್ಟು ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಇದರಿಂದ ರೈತರು ಕಂಗಲಾಗಿದ್ದು ನೀರಿಲ್ಲದೆ ಬೆಳೆಗಳಿಗೆ ಬೆಳೆಗಳು ಹಾಳಾಗುತ್ತಿವೆ. ಈ ಕಾರಣದಿಂದ ರಾಜ್ಯದ 113 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರವು ಘೋಷಿಸಿದೆ. ಹಾಗಾದರೆ ಯಾವ ತಾಲೂಕುಗಳು ಬರಪೀಡಿತ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಿ.

drought-prone taluks
drought-prone taluks
Join WhatsApp Group Join Telegram Group

ರಾಜ್ಯದಲ್ಲಿ ಮಳೆಯ ಕೊರತೆ :

ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆಯ ಕೊರತೆ ಆಗಿರುವ ಕಾರಣ ಬರಗಾಲ ಘೋಷಣೆಗೆ ರಾಜ್ಯ ಸರ್ಕಾರದಿಂದ ಪ್ರಾಥಮಿಕ ತಾಲೂಕುಗಳ ಪಟ್ಟಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರಿನಿಂದ ತೀವ್ರ ಮಳೆ ಕೊರತೆಯನ್ನು ಹೊಂದಿರುವಂತಹ ತಾಲೂಕುಗಳ ಪಟ್ಟಿಯನ್ನು ಸರ್ಕಾರಕ್ಕೆ ತಿಳಿಸುವ ಮೂಲಕ ಈ ತಾಲೂಕುಗಳು ಬರಗಾಲ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಲು ಹೊರಟಿದೆ.

ಬರಪೀಡಿತ ತಾಲೂಕುಗಳ ಪಟ್ಟಿ :

ರಾಜ್ಯ ಸರ್ಕಾರವು ಈ ಪಟ್ಟಿಯ ಆಧಾರದ ಮೇಲೆ ಕಂದಾಯ ಕೃಷಿ ಮತ್ತು ಇತರೆ ಇಲಾಖೆಯಿಂದ ಬೆಳೆ ಸಮೀಕ್ಷೆ ಕಾರ್ಯವನ್ನು ಅಧಿಕಾರಿಗಳು ಪ್ರಾರಂಭ ಮಾಡಿದ್ದು ಈ ತಿಂಗಳ ಅಂತ್ಯದಲ್ಲಿ ಸಮೀಕ್ಷೆ ಮುಗಿದು ಸೆಪ್ಟೆಂಬರ್ ನ ಮೊದಲಾದ ಎರಡನೇ ವಾರದಲ್ಲಿ ಕೊನೆಯದಾಗಿ ರಾಜ್ಯ ಸರ್ಕಾರದಿಂದ ಬರಗಾಲದ ತಾಲೂಕುಗಳ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಬಹುದಾಗಿದೆ. ಪ್ರಸ್ತುತ ಮಳೆ ಕೊರತೆಯು ರಾಜ್ಯದಲ್ಲಿ 113 ತಾಲ್ಲೂಕುಗಳಲ್ಲಿ ಉಂಟಾಗಿದ್ದು ಈ 113 ತಾಲ್ಲೂಕುಗಳಲ್ಲಿ 38 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯದ ಜನತೆಗೆ ಮಾಹಿತಿಯನ್ನು ನೀಡಿದೆ.

113 ಮಳೆ ಕೊರತೆಯ ತಾಲೂಕುಗಳು :

ಎರಡು ವಿಭಾಗವನ್ನು 113 ತಾಲೂಕುಗಳ ಪಟ್ಟಿಯಲ್ಲಿ ಮಾಡಲಾಗಿದೆ ಅವುಗಳೆಂದರೆ ತೀವ್ರ ಮಳೆ ಕೊರತೆ ತಾಲೂಕುಗಳು ಹಾಗೂ ಮಳೆ ಕೊರತೆ ತಾಲೂಕುಗಳ ಪಟ್ಟಿ ಎಂದು ಮಾಡಲಾಗಿದ್ದು ಅವುಗಳೆಂದರೆ,

  1. ತೀವ್ರ ಮಳೆ ಕೊರತೆ ತಾಲೂಕುಗಳು :

ಇದರಲ್ಲಿ ತೀವ್ರ ಮಳೆ ಕೊರತೆ ತಾಲೂಕುಗಳ ಪಟ್ಟಿಯನ್ನು ನೋಡಬಹುದಾಗಿತ್ತು ಆ ತಾಲೂಕುಗಳೆಂದರೆ, ಬಳ್ಳಾರಿಯ ಸಿರಗುಪ್ಪ ಹಾಗೂ ಬಳ್ಳಾರಿ ಎರಡು ತಾಲೂಕುಗಳು. ಬಾಗಲಕೋಟೆ ಜಿಲ್ಲೆಯಲ್ಲಿ ಬಾಗಲಕೋಟೆ ಹುನಗುಂದ ಬೀಳಗಿ ಜಮಖಂಡಿ ಇಳಕಲ್ ಮುಧೋಳ ರಬಕವಿ ಹಾಗೂ ಬನಹಟ್ಟಿ ಈ ಏಳು ತಾಲೂಕುಗಳು. ಬೆಳಗಾವಿ ಜಿಲ್ಲೆಯ ಅಥಣಿ ಸವದತ್ತಿ ಬೈಲಹೊಂಗಲ ಯರಗಟ್ಟಿ ಈ ನಾಲ್ಕು ತಾಲೂಕುಗಳು. ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಾಗೇಪಲ್ಲಿ ಗೌರಿಬಿದನೂರು ಶಿಡ್ಲಘಟ್ಟ 4 ತಾಲೂಕುಗಳು. ಬೆಂಗಳೂರು ನಗರದ ಆನೇಕಲ್ ನ ಒಂದು ತಾಲೂಕು. ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ಎರಡು ತಾಲೂಕುಗಳು. ಕೊಪ್ಪಳ ವ್ಯಾಪ್ತಿಯ ಗಂಗಾವತಿ ಮತ್ತು ಕನಕಗಿರಿ 2 ತಾಲೂಕುಗಳು. ರಾಯಚೂರು ಜಿಲ್ಲೆಯ ಲಿಂಗಸೂರು ಮತ್ತು ಮಾನ್ವಿ ತಾಲೂಕುಗಳು. ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಳವಳ್ಳಿ ಎರಡು ತಾಲೂಕು. ರಾಮನಗರ ಜಿಲ್ಲೆಯ ರಾಮನಗರ ಕನಕಪುರ ಮತ್ತು ಹಾರೋಹಳ್ಳಿ 3 ತಾಲೂಕುಗಳು. ಶಿವಮೊಗ್ಗದ ಸಾಗರ ತಾಲ್ಲೂಕು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಗೂ ಮಧುಗಿರಿ ಎರಡು ತಾಲೂಕುಗಳು. ವಿಜಯಪುರದ ನಿಡಗುಂದಿ ಮತ್ತು ಬಬಲೇಶ್ವರ ತಾಲೂಕುಗಳು. ಉತ್ತರ ಕನ್ನಡದ ಶಿರಸಿ ತಾಲೂಕು ಹಾಗೂ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕುಗಳನ್ನು ತೀವ್ರ ಮಳೆ ಕೊರತೆಯ ತಾಲೂಕುಗಳೆಂದು ಗುರುತಿಸಲಾಗಿದೆ.

ಇದನ್ನು ಓದಿ : ಹಳೆಯ ನಾಣ್ಯಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವೇ? ಭಾರತೀಯ ಕಾನೂನು ಏನು ಹೇಳುತ್ತದೆ?

  1. ಮಳೆ ಕೊರತೆ ತಾಲೂಕುಗಳ ಪಟ್ಟಿ :

ಬರಿ ಮಳೆ ಕೊರತೆ ತಾಲೂಕುಗಳ ಪಟ್ಟಿಯನ್ನು ಗುರುತಿಸಲಾಗಿದ್ದು ಅವುಗಳೆಂದರೆ ಹಾವೇರಿ ಜಿಲ್ಲೆಯ ಹಿರೇಕೆರೂರು ಸವಣೂರು ಹಾಗೂ ರಟ್ಟಿಹಳ್ಳಿ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮತ್ತು ಬಾದಾಮಿ. ಬೆಳಗಾವಿ ಜಿಲ್ಲೆಯ ಗೋಕಾಕ್ ಚಿಕ್ಕೋಡಿ ಹುಕ್ಕೇರಿ ನಿಪ್ಪಾಣಿ ರಾಯಭಾಗ ಕಾಗವಾಡ ಮತ್ತು ಮುದಗಲಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳು. ಕಲಬುರ್ಗಿಯ ಆಳಂದ ಅಪಲಪುರ ಚಿತ್ತಾಪುರ ಕಾಳಗಿ ಕಲಬುರ್ಗಿ ಮತ್ತು ಶಾಬಾದ ತಾಲೂಕುಗಳು. ಬೆಂಗಳೂರು ನಗರದ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಾಲೂಕುಗಳು. ಕೊಡಗು ಜಿಲ್ಲೆಯ ವಿರಾಜಪೇಟೆ ಕುಶಲನಗರ ಮತ್ತು ಮಡಿಕೇರಿ ಜಿಲ್ಲೆಗಳು. ಬೀದರ್ ಜಿಲ್ಲೆಯ ಹುಲಸೂರು ಮತ್ತು ಬಾಲ್ಕಿ ತಾಲೂಕುಗಳು. ಕೋಲಾರ ಜಿಲ್ಲೆಯ ಕೋಲಾರ ಮಾಲೂರು ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕುಗಳು.

ಅಜ್ಜಂಪುರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹೊಳಲ್ಕೆರೆ ಮತ್ತು ತಾಲೂಕುಗಳು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕು. ಚಿಕ್ಕಮಗಳೂರು ಜಿಲ್ಲೆಯ ಕಡೂರು, ಶೃಂಗೇರಿ ತಾಲೂಕುಗಳು. ದಾವಣಗೆರೆ ಜಿಲ್ಲೆಯ ಜಗಳೂರು ಮತ್ತು ಹರಿಹರ ತಾಲೂಕುಗಳು. ಹಾಸನ ಜಿಲ್ಲೆಯ ಅರಕಲಗೂಡು ಹೊಳೆನರಸೀಪುರ ಮತ್ತು ಸಕಲೇಶಪುರ ತಾಲೂಕುಗಳು. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ ಕುಂದಗೋಳ ಧಾರವಾಡ ಮತ್ತು ಹುಬ್ಬಳ್ಳಿ ತಾಲೂಕಗಳು. ಗದಗ ಜಿಲ್ಲೆಯ ಗಜೇಂದ್ರಗಡ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮುಖನೂರು ಮತ್ತು ಕುಷ್ಟಗಿ ತಾಲೂಕುಗಳು. ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕುಗಳು. ಶಿವಮೊಗ್ಗ ಜಿಲ್ಲೆಯ ಹೊಸನಗರ ಶಿವಮೊಗ್ಗ ಶಿಕಾರಿಪುರ ಭದ್ರಾವತಿ ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳು. ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಗುಬ್ಬಿ ತಾಲೂಕು. ಮೈಸೂರು ಜಿಲ್ಲೆಯ ಟಿ ನರಸೀಪುರ ಮತ್ತು ಹೆಗ್ಗಡದೇವನಕೋಟೆ ತಾಲೂಕು. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಪಾವಗಡ ಧಾರವಾಡ ಮತ್ತು ಶಿರ ತಾಲೂಕುಗಳು. ಜಯನಗರ ಜಿಲ್ಲೆಯ ಕೊಟ್ಟೂರು ಮತ್ತು ಹರಪ್ಪನಹಳ್ಳಿ ತಾಲೂಕು. ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತ್ತು ಎಲ್ಲಾಪುರ ತಾಲೂಕು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಚಾಡಚಣ ಮತ್ತು ದೇವರಹಿಪ್ಪರಗಿ ತಾಲೂಕುಗಳು ಮಳೆ ಕೊರತೆ ತಾಲೂಕುಗಳೆಂದು ರಾಜ್ಯ ಸರ್ಕಾರವು ಪಟ್ಟಿ ಬಿಡುಗಡೆ ತಿಳಿಸಿದೆ.

ಒಟ್ಟಾರೆ ಯಾಗಿ ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಬರಪೀಡಿತ ಪ್ರದೇಶಗಳೆಂದು 113 ತಾಲ್ಲೂಕುಗಳನ್ನು ಗುರುತಿಸಲಾಗಿದ್ದು ಇವುಗಳಿಗೆ ಬರ ಪರಿಹಾರ ಕ್ರಮವನ್ನು ಸಹ ರಾಜ್ಯ ಸರ್ಕಾರವು ಕೈಗೊಳ್ಳಲು ಮುಂದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಉಚಿತ ಲ್ಯಾಪ್ಟಾಪ್ ವಿತರಣೆ : ಸೆಪ್ಟೆಂಬರ್ 20ರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ

ಫೋನ್‌ ಪೇ ಗೂಗಲ್‌ ಪೇ ಬಳಕೆದಾರರಿಗೆ ಸಿಹಿ ಸುದ್ದಿ: ಅಕೌಂಟ್‌ ಬ್ಯಾಲೆನ್ಸ್ ಖಾಲಿಯಾಗಿದ್ರೂ‌ UPI ಪಾವತಿ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments