Thursday, July 25, 2024
HomeNews2000 ಹಣ ಯಾರಿಗೆಲ್ಲ ಬಂದಿಲ್ಲ: ತಪ್ಪದೇ ಈ ಕೆಲಸಗಳನ್ನು ಮಾಡಿ, ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಿರಿ

2000 ಹಣ ಯಾರಿಗೆಲ್ಲ ಬಂದಿಲ್ಲ: ತಪ್ಪದೇ ಈ ಕೆಲಸಗಳನ್ನು ಮಾಡಿ, ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಿರಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಯ 2000 ಹಣವು ಇದುವರೆಗೂ ಯಾರಿಗೆಲ್ಲ ಬಂದಿಲ್ಲವೋ ಈ ಮೂರು ಕೆಲಸಗಳನ್ನು ಕಡ್ಡಾಯವಾಗಿ ಮೊಬೈಲ್ ನಲ್ಲಿ ಮಾಡುವುದರ ಮೂಲಕ ಅವರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಬರುವಂತೆ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಆ ಮೂರು ಕೆಲಸಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

get-gruhalkshmii-yojana-fund
get-gruhalkshmii-yojana-fund
Join WhatsApp Group Join Telegram Group

ಗೃಹಲಕ್ಷ್ಮಿ ಯೋಜನೆಯ ಮೂರು ಕ್ರಮಗಳು :

ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಬರಲು ಏನಿಲ್ಲ ಕೆಲಸಗಳನ್ನು ಅಥವಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಈ ಕೆಳಗಿನಂತೆ ನಿಮಗೆ ತಿಳಿಸಲಾಗುತ್ತಿದೆ. ಹಾಗಾಗಿ ಇದುವರೆಗೂ ಸಹ ನಿಮಗೆ ಗೃಹಲಕ್ಷ್ಮಿ ಯೋಜನೆ ಅಥವಾ ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲದಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಕೆಳಗೆ ತಿಳಿಸುತ್ತಿರುವಂತಹ ಈ ಮೂರು ಕ್ರಮಗಳನ್ನು ಸರಿಯಾಗಿ ಮಾಡಿದರೆ ನಿಮಗೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಖಾತೆಗೆ ಬರುತ್ತದೆ.

  1. ನಿಮ್ಮ ರೇಷನ್ ಕಾರ್ಡಿಗೆ ಈಕೆ ವೈ ಸಿ ಮೊದಲು ಆಗಿರಬೇಕು. ಈಕೆ ವೈ ಸಿ ಎಂದರೆ ರೇಷನ್ ಕಾರ್ಡ್ ಸ್ಥಿತಿಯನ್ನು ಚೆಕ್ ಮಾಡಲು ನೀವು ಮೊದಲು ಕರ್ನಾಟಕ ಸರ್ಕಾರದ ಮಾಹಿತಿ ಕಣಜ ವೆಬ್ಸೈಟ್ ಗೆ ಭೇಟಿ ನೀಡಬೇಕು. ಮಾಹಿತಿ ಕಣಜ ವೆಬ್ ಸೈಟ್ https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010 ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಅದರಲ್ಲಿ ನೀವು ಮೈ ರೇಷನ್ ಕಾರ್ಡ್ ಡೀಟೇಲ್ಸ್ ಎಂಬ ವಿವರಗಳ ಪುಟವನ್ನು ತೆಗೆಯಬೇಕು. ಅದಾದ ನಂತರ ನೀವು ನಿಮ್ಮ ಜಿಲ್ಲೆ ಹಾಗೂ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಅದರಲ್ಲಿ ನಮೂದಿಸಬೇಕು. ಅದಾದ ನಂತರ ನೀವು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ನಂತರ ಮೈ ರೇಷನ್ ಶಾಪ್ ಡೀಟೇಲ್ಸ್ ಎಂಬ ಪುಟ್ಟ ನಿಮಗೆ ತೆರೆಯುತ್ತದೆ. ಅದರಲ್ಲಿ ನೀವು ಕಾರ್ಡ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಆಕ್ಟಿವ್ ಎಂದು ತೋರಿಸಿದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ ಎಂದು ತಿಳಿಯಬಹುದಾಗಿದೆ.
  2. ನಿಮ್ಮ ರೇಷನ್ ಕಾರ್ಡ್ ನಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ನಿಮ್ಮ ಹೆಸರು ಒಂದೇ ರೀತಿಯಾಗಿ ಇದ್ದು ಅದರಲ್ಲಿ ಏನಾದರೂ ಹೆಸರಿನಲ್ಲಿ ಬದಲಾವಣೆಗಳಿದ್ದರೆ ಅದನ್ನು ಅಯಾಧಕಲೆಗಳಲ್ಲಿ ಸರಿಯಾಗಿ ತಿದ್ದುಪಡಿ ಮಾಡಿಸಬೇಕಾಗುತ್ತದೆ.
  3. ಯಾವ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದನ್ನು ನೀವು ಚೆಕ್ ಮಾಡಿಕೊಂಡು ಆಧಾರ್ ಕಾರ್ಡ್ ಲಿಂಕ್ ಆಗಿರುವ ಖಾತೆಯೂ ಶಾಂತಿಯಲ್ಲಿದೆ ಎಂಬುದನ್ನು ನೀವು ಬ್ಯಾಂಕಿಗೆ ಹೋಗಿ ಒಂದು ಬಾರಿ ವಿಚಾರಿಸಬೇಕು. ಹೀಗೆ ಈ ಮೇಲಿನ ಕ್ರಮಗಳು ಸರಿಯಾಗಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಬಂದು ತಲುಪುತ್ತದೆ. ಅಲ್ಲದೆ ಕೆಲವು ರೇಷನ್ ಕಾರ್ಡ್ ಗಳು ಇತ್ತೀಚಿನ ದಿನಗಳಲ್ಲಿ ರದ್ದಾಗುತ್ತಿದ್ದು ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಆಕ್ಟಿವಿಧಿಯೇ ಇಲ್ಲವೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಡಿಬಿಟಿ ಲಿಂಕ್ ಮಾಡುವ ವಿಧಾನ :

ಆಧಾರ್ ಕಾರ್ಡ್ ನೊಂದಿಗೆ ಡಿಬಿಟಿ ಲಿಂಕ್ ಅನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಈಗ ತಿಳಿಸಲಾಗುತ್ತಿದೆ. ಡಿಬಿಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ. ಈ ಮೂಲಕವೇ ಮಹಿಳೆಯರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000ಗಳು ಹಾಗೂ ಅನ್ನಭಾಗ್ಯ ಯೋಜನೆಯ 170 ರೂಪಾಯಿಗಳು ನೇರವಾಗಿ ಜಮಾ ಆಗುತ್ತದೆ. ಹಾಗಾಗಿ ಎಲ್ಲ ಸೌಲಭ್ಯಗಳನ್ನು ಪಡೆಯಬೇಕಾದರೆ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣವು ವರ್ಗಾವಣೆಯಾಗಲು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಇರುವುದು ಕಡ್ಡಾಯವಾಗಿದೆ ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ನಿಮ್ಮ ಆಧಾರ್ ಕಾರ್ಡ್ ಡಿಬಿಟಿ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ದೃಢಪಡಿಸಿಕೊಂಡ ನಂತರವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ.

ಇದನ್ನು ಓದಿ : ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಕುಶಲಕರ್ಮಿಗಳಿಗೆ ಸಿಕ್ತು ದೊಡ್ಡ ಉಡುಗೊರೆ! ದೇಶಾದ್ಯಂತ ವಿಶ್ವಕರ್ಮ ಯೋಜನೆಗೆ ಚಾಲನೆ

ಆಧಾರ್ ಕಾರ್ಡ್ ಹಾಗೂ ಡಿಬಿಟಿ ಲಿಂಕ್ ಮಾಡುವ ವಿಧಾನ :

ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಡಿಬಿಟಿ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ನೋಡಬೇಕಾದರೆ ಆಧಾರ್ ಕಾರ್ಡಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://resident.uidai.gov.in/bank-mapper ಈ ವೆಬ್ಸೈಟ್ಗೆ ಭೇಟಿ ನೀಡಿದ ನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿದ ನಂತರ ಕ್ಯಾಪ್ಚರನ್ನು ಎಂಟರ್ ಮಾಡಬೇಕು. ಅದರಲ್ಲಿ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದಾದ ನಂತರ ನೀವು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಅದು ತೋರಿಸುತ್ತದೆ. ಒಂದು ವೇಳೆ ಲಿಂಕ್ ಆಗದೆ ಇದ್ದರೆ ನೀವು ಹತ್ತಿರದ ಶಾಖೆಗೆ ಹೋಗುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕಾಗುತ್ತದೆ. ಹೀಗೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ನೊಂದಿಗೆ ಡಿ ಬಿ ಟಿ ಲಿಂಕ್ ಆಗಿರಬೇಕು ಹಾಗೂ ರೇಷನ್ ಕಾರ್ಡ್ ಸಕ್ರಿಯವಾಗಿರಬೇಕು ಎಂದು ಈ ಲೇಖನದ ಮೂಲಕ ತಿಳಿಸಲಾಗುತ್ತಿದೆ.

ಹಾಗಾಗಿ ಸರ್ಕಾರದ ಯೋಜನೆಗಳನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಚಾಲ್ತಿಯಲ್ಲಿರುವುದು ಮುಖ್ಯವಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಮನೆ ಕಟ್ಟುವವರಿಗೆ ಬಿಗ್‌ ಶಾಕ್; ಮನೆ ನಿರ್ಮಿಸಲು ಅನುಮತಿ ಶುಲ್ಕ ಹೆಚ್ಚಳ! ಕಟ್ಟಬೇಕು ದುಬಾರಿ ಪರವಾನಗಿ ಶುಲ್ಕ

ನೌಕರರಿಗೆ ಸಿಗಲಿದೆ ಹಬ್ಬದ ಭತ್ಯೆ; DA ಯನ್ನು ದಿಢೀರನೆ 46% ಹೆಚ್ಚಿಸಿದ ಸರ್ಕಾರ! ಈ ದಿನ ಎಲ್ಲರ ಖಾತೆಗೆ ಜಮಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments