Friday, June 14, 2024
HomeNewsಗೃಹಲಕ್ಷ್ಮಿ ಯೋಜನೆ ಫೈನಲ್ ಲಿಸ್ಟ್ ಮಾಡಿದ ಸರ್ಕಾರ : ಹೆಸರಿದ್ದವರಿಗೆ ಮಾತ್ರ ಹಣ ಕೂಡಲೇ...

ಗೃಹಲಕ್ಷ್ಮಿ ಯೋಜನೆ ಫೈನಲ್ ಲಿಸ್ಟ್ ಮಾಡಿದ ಸರ್ಕಾರ : ಹೆಸರಿದ್ದವರಿಗೆ ಮಾತ್ರ ಹಣ ಕೂಡಲೇ ನೊಂದಾಯಿಸಿಕೊಳ್ಳಿ

ನಮಸ್ಕಾರ ಸ್ನೇಹಿತರೆ, ಇತ್ತೀಚಿನ ವರದಿಯಲ್ಲಿ ತಿಳಿಸಿರುವಂತೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ದೊರೆತ ನಂತರ ಅರ್ಹರ ಪಟ್ಟಿಯನ್ನು ಹಾಗೂ ತಿರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಅದರಂತೆ ಇವತ್ತಿನ ಲೇಖನದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಅರ್ಹರ ಪಟ್ಟಿ ಮತ್ತು ತಿರಸ್ಕೃತ ಪಟ್ಟಿಯ ಬಗ್ಗೆ ತಿಳಿಸಲಾಗುತ್ತಿದೆ. ಲಕ್ಷ್ಮಿ ಯೋಜನೆಗೆ ಈಗಾಗಲೇ ಒಂದು ಪಾಯಿಂಟ್ ಮೂವತ್ತು ಕೋಟಿ ಜನರು ಅರ್ಜಿಯನ್ನು ಸಲ್ಲಿಸಿದ್ದು ಕೆಲವೊಂದಿಷ್ಟು ಜನರು ಈಗಾಗಲೇ ಈ ಯೋಜನೆ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಇನ್ನೂ ಕೆಲವರಿಗೆ ಈ ಯೋಜನೆಯ ಮೂಲಕ ಹಣವನ್ನು ಬಂದಿರುವುದಿಲ್ಲ ಹಾಗಾಗಿ ಅರ್ಹ ಮತ್ತು ಅನರ್ಹರ ಲಿಷ್ಟನ್ನು ಈ ವರದಿಯಲ್ಲಿ ನೀಡಲಾಗಿದೆ. ಇದರಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಈ ಕೂಡಲೇ ಚೆಕ್ ಮಾಡಿಕೊಳ್ಳಿ.

gruhalkshmi-yojana-final-list
gruhalkshmi-yojana-final-list
Join WhatsApp Group Join Telegram Group

ಇವರಿಗೆ ಹಣ ಬರುವುದಿಲ್ಲ :

ಸರ್ಕಾರವು ಒಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದು ಇನ್ನೇನು ಎಲ್ಲ ಮಹಿಳೆಯರಿಗು ಹಣ ಬರುತ್ತದೆ ಎಂಬ ಖುಷಿಯಲ್ಲಿದ್ದವರಿಗೆ ಇದು ಬೇಸರ ಸಂಗತಿ ಆಗಿದೆ ಎಂದು ಹೇಳಬಹುದು. ಅದೇನೆಂದರೆ 2000 ರೂಪಾಯಿಗಳು ಬಿಪಿಎಲ್ ಕುಟುಂಬದ ಯಜಮಾನನಿಗೆ ಮಾತ್ರ ಎಂದು ಹೇಳಲಾಗಿದ್ದು, 5 ಎಕರೆ ಮೀರಿದ ಒಣ ಭೂಮಿಯನ್ನು ಹೊಂದಿದಂತಹ ರೈತರಿಗೆ ಅಥವಾ ಜನರಿಗೆ ಈ ಗೃಹಲಕ್ಷ್ಮಿ ಯೋಜನೆಯಗಳು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲದೆ ನಾಲ್ಕು ಚಕ್ರದ ವಾಹನವನ್ನು ಹೊಂದಿದಂತಹ ಕುಟುಂಬದವರಿಗೂ ಸಹ ಈ ಹಣವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೂ ಸಹಾಯ ಹಣವನ್ನು ನೀಡಲಾಗುವುದಿಲ್ಲ ಎಂದು ಹೇಳಲಾಗುತ್ತಿದ್ದು ಇದರ ಜೊತೆಗೆ ಸರ್ಕಾರಿ ಉದ್ಯೋಗ ಮತ್ತು ಪೆನ್ಷನ್ ಪಡೆಯುವವರೆಗೂ ಸಹ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇವರುಗಳಲ್ಲದೆ ಸರ್ಕಾರದ ಇನ್ಕಮ್ ಟ್ಯಾಕ್ಸ್ ಪಾವತಿದಾರರ ಕುಟುಂಬಕ್ಕೂ ಈ ಯೋಜನೆಯ ಹಣ ಸಿಗುವುದಿಲ್ಲ ಹಾಗೂ ಮಹಿಳೆಯರು ಜಿ ಎಸ್ ಟಿ ರಿಟರ್ನ್ ಪಾವತಿಸುತ್ತಿದ್ದಾರೆ ಅವರಿಗೂ ಸಹ ಈ ಯೋಜನೆಯ ಲಾಭವನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ. ಮತ್ತೆ ಪ್ರೊಫೆಷನಲ್ ಟ್ಯಾಕ್ಸ್ ಪಾವತಿದಾರರಿಗೂ ಸಹ ಸರ್ಕಾರವು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಅದೇನೇ ಇದ್ದರೂ ಸಹ ಗೃಹಲಕ್ಷ್ಮಿ ಯೋಜನೆಯ ಹಣವು ಒಂದೇ ಒಂದು ಬಾರಿ ಜಮಾ ಆದರೆ ಈ ಹಣವು ಯಾರ್ಯಾರಿಗೆ ಬರುತ್ತದೆ ಎಂದು ತಿಳಿದುಕೊಳ್ಳಬಹುದು.

ಅನರ್ಹರ ಪಟ್ಟಿ ಚೆಕ್ ಮಾಡುವ ವಿಧಾನ :

ಅನರ್ಹರ ಪೆಟ್ಟಿಯನ್ನು ಚೆಕ್ ಮಾಡಲು ಅಭ್ಯರ್ಥಿಗಳು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. https://ahara.kar.nic.in/Home/EServices ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಈ ರೇಷನ್ ಕಾರ್ಡ್ ಎಂಬ ಆಯ್ಕೆಯ ಮೇಲೆ ಶೋ ಕ್ಯಾನ್ಸಲ್ಡ್ ಅಥವಾ ಸಸ್ಪೆನ್ಸ್ಡ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಲಿಸ್ಟ್ ಓಪನ್ ಆದ ನಂತರ ಅದರಲ್ಲಿ ನೀವು ನಿಮ್ಮ ಜಿಲ್ಲೆ ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಬೇಕು. ಇದಾದ ನಂತರ ನೀವು ಅನರ್ಹರ ಪಟ್ಟಿಯನ್ನು ಅದರಲ್ಲಿ ನೋಡಬಹುದು ಹಾಗೂ ರದ್ದು ಆಗಿರುವುದಕ್ಕೆ ಕೆಲವು ಕಾರಣಗಳನ್ನು ಸಹ ನೀವು ನೋಡಬಹುದು.

ಅರ್ಹರ ಪಟ್ಟಿಯನ್ನು ಚೆಕ್ ಮಾಡುವ ವಿಧಾನ :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ಫಲಾನುಭವಿಗಳ ಅಂದರೆ ಅರ್ಹರ ಪಟ್ಟಿಯನ್ನು ಚೆಕ್ ಮಾಡಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://ahara.kar.nic.in/Home/EServices ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ನೀವು ಈ ರೇಷನ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಅದರಲ್ಲಿ ಶೋ ವಿಲೇಜ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿದ ನಂತರ ಆ ಬಾಕ್ಸ್ ನಲ್ಲಿ ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಪಂಚಾಯಿತಿ ಮತ್ತು ತಮ್ಮ ಗ್ರಾಮವನ್ನು ಸೆಲೆಕ್ಟ್ ಮಾಡಿ ಎಂಬುದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಡಿಟೈಲ್ಸ್ ನೋಡಬಹುದಾಗಿದೆ.

ಇದನ್ನು ಓದಿ : ಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮತ್ತೊಂದು ಹೊಸ ಯೋಜನೆ ಜಾರಿ, ನಿಮಗೂ ಸಿಗಲಿದೆ ನಿವೇಶನ

ಈ ಖಾತೆಗೆ ಹಣ ಜಮಾ ಆಗುತ್ತದೆ :

ಈಗಾಗಲೇ ಅನ್ನ ಭಾಗ್ಯ ಯೋಜನೆಯ ಹಣವು ಹಲವಾರು ಜನರಿಗೆ ಬಂದಿದ್ದು ಮನೆ ಯಜಮಾನಿಯ ಅಂದರೆ ಬಿಪಿಎಲ್ ಕಾರ್ಡ್ ಹೊಂದಿದ ಮನೆ ಯಜಮಾನ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಬಂದಿರುತ್ತದೆ ಆದ್ದರಿಂದ ಅದೇ ರೀತಿಯಾಗಿ ಗೃಹಲಕ್ಷ್ಮಿ ಯೋಜನೆಯ ಹಣವು ಸಹ ಆ ಖಾತೆಗೆ ಬರುತ್ತದೆ. ಮನೆಯ ಯಜಮಾನಿಯ ಖಾತೆಯು ಆಧಾರ್ ಕಾರ್ಡ್ ಗೆ ಮ್ಯಾಪಿಂಗ್ ಆಗಿರುವ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಹೀಗೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಕೆಲವೊಂದಿಷ್ಟು ವಿಷಯಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದ್ದು ಈ ಲೇಖನದಲ್ಲಿ ಅನರ್ಹರ ಬಗ್ಗೆಯೂ ಸಹ ತಿಳಿಸಲಾಗಿದೆ. ಹೀಗೆ ಗೃಹಲಕ್ಷ್ಮಿ ಯೋಜನೆಯ ಈ ಮಾಹಿತಿಯನ್ನು ನಿಮ್ಮ ಮಹಿಳಾ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

15ನೇ ಕಂತು ಬಿಡುಗಡೆಗೂ ಮುನ್ನ ಈ ಕೆಲಸ ಪೂರ್ಣಗೊಳಿಸಿ; ಇಲ್ಲದಿದ್ದರೆ ಹೊಸ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ.!

ಬರಪೀಡಿತ ತಾಲೂಕುಗಳ ಲಿಸ್ಟ್ ಬಿಡುಗಡೆ; ನಿಮ್ಮ ತಾಲೂಕಿನ ಹೆಸರಿದೆಯಾ ಚೆಕ್‌ ಮಾಡಿ; ಪಟ್ಟಿಯಲ್ಲಿರುವ ತಾಲೂಕಿಗೆ ಪರಿಹಾರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments