Saturday, July 27, 2024
HomeNewsಬಂದ್ ಯಾವಾಗ ಕೊನೆಗೊಳ್ಳಲಿದೆ ಗೊತ್ತಾ..? ವಿದ್ಯಾರ್ಥಿಗಳಿಗೆ ಉದ್ಯೋಗಿಗಳಿಗೆ ರಜಾ ಇದೆಯಾ.? ಇಲ್ಲಿದೆ ಡಿಟೇಲ್ಸ್

ಬಂದ್ ಯಾವಾಗ ಕೊನೆಗೊಳ್ಳಲಿದೆ ಗೊತ್ತಾ..? ವಿದ್ಯಾರ್ಥಿಗಳಿಗೆ ಉದ್ಯೋಗಿಗಳಿಗೆ ರಜಾ ಇದೆಯಾ.? ಇಲ್ಲಿದೆ ಡಿಟೇಲ್ಸ್

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಸೋಮವಾರ ಖಾಸಗಿ ಮುಷ್ಕರಕ್ಕೆ ಕರೆ ನೀಡಿರುವ ಬಗ್ಗೆ. ಸೋಮವಾರ ಖಾಸಗಿ ಬಸ್ ಶಾಲಾ ಬಸ್ ಕ್ಯಾಬ್ ಹಾಗೂ ಆಟೋ ಸೇರಿದಂತೆ ಹಲವು ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ಖಾಸಗಿ ಬಸ್ ಮೇಲೆ ಅವಲಂಬಿತರಾಗಿರುವ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗುವುದು ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದ್ದು ಆ ದಿನ ಶಾಲೆಗಳಿಗೆ ರಜೆ ಇದೆಯೇ ಇಲ್ಲವೇ ಎಂಬುದನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.

How will Bangalore be on Monday
How will Bangalore be on Monday
Join WhatsApp Group Join Telegram Group

ಖಾಸಗಿ ಮುಷ್ಕರ :

ಸೋಮವಾರ ಖಾಸಗಿ ಮುಷ್ಕರ ಇರುವ ಕಾರಣದಿಂದಾಗಿ ಖಾಸಗಿ ಬಸ್ ಮೇಲೆ ಅವಲಂಬಿತ ಆಗಿರುವಂತಹ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಕಷ್ಟವಾಗಲಿದ್ದು ಕೆಲವರು ತಮ್ಮದೇ ಆದಂತಹ ಸ್ವಂತ ವಾಹನಗಳನ್ನು ಹೊಂದಿರುವುದನ್ನು ನಾವು ನೋಡಬಹುದು. ಆದರೆ ಕೆಲವೊಂದಿಷ್ಟು ಶಾಲೆಗಳು ಈ ರೀತಿಯಾದಂತಹ ಸ್ವಂತ ವಾಹನಗಳನ್ನು ಹೊಂದಿಲ್ಲದ ಕಾರಣ ಈ ಮುಷ್ಕರದ ಎಫೆಕ್ಟ್ ಕೆಲವೊಂದು ಶಾಲೆಗಳಿಗೆ ಇರುತ್ತದೆ. ಹಾಗಾಗಿ ಆಯಾ ಶಾಲೆಗಳ ಆಡಳಿತ ಮಂಡಳಿಗಳು ಈ ಬಗ್ಗೆ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆ ಇದೆ. ಖಾಸಗಿ ಪ್ರಯಾಣಿಕರ ವಾಹನಗಳ ಮುಷ್ಕರ ಭಾನುವಾರ ಮಧ್ಯರಾತ್ರಿಯಿಂದ ನಡೆಯಲಿದ್ದು ಆಟೋ ಕ್ಯಾಬ್ ಬಸ್ ಸೇರಿದಂತೆ ಎಲ್ಲಾ ವಾಹನಗಳ ಸಂಚಾರವು ಸ್ಥಗಿತಗೊಳ್ಳಲಿದೆ. ಅಲ್ಲದೆ ಶಾಲಾ ಮಕ್ಕಳ ವಾಹನಗಳು ಕೂಡ ಸಂಚಾರವನ್ನು ಸ್ಥಗಿತ ಮಾಡಲಿವೆ. ಹಾಗಾದರೆ ಸೋಮವಾರ ಶಾಲೆಗಳಿಗೆ ಸರ್ಕಾರವು ರಜೆ ಘೋಷಿಸುತ್ತದೆಯೇ ಇಲ್ಲವೇ ಎಂಬುದಕ್ಕೆ ಸ್ಪಷ್ಟನೆ ನೀಡಿರುವುದಿಲ್ಲ. ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲದಲ್ಲಿದ್ದು ಸೂಕ್ತ ಉತ್ತರವು ಅವರಿಗೆ ಲಭ್ಯವಾಗುತ್ತಿಲ್ಲ.

ಸೋಮವಾರ ಶಾಲೆಗಳಿಗೆ ರಜೆ ಇದೆಯೇ? ಇಲ್ಲವೋ? :

ಸೋಮವಾರ ಶಾಲೆಗಳಿಗೆ ರಜೆ ಇರುತ್ತದೆಯೇ ಇಲ್ಲವೇ ಎಂಬುದನ್ನು ಕರ್ನಾಟಕ ರಾಜ್ಯ ಸರ್ಕಾರವು ಯಾವುದೇ ರೀತಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಿ ರುವುದಿಲ್ಲ. ಈ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿಗಳು ಕೂಡ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಆದರೆ ಕೆಲವೊಂದು ಖಾಸಗಿ ಶಾಲೆಗಳು ಮಾತ್ರ ವಾಹನಗಳನ್ನು ಹೊಂದಿವೆ. ಎಂದಿನಂತೆ ಈ ವಾಹನಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಆದರೆ ತಮ್ಮದೇ ಆದಂತಹ ವಾಹನಗಳನ್ನು ಬಹುತೇಕ ಶಾಲೆಗಳು ಹೊಂದಿರುವುದಿಲ್ಲ ಹೀಗಾಗಿ ವಾರಾಂತ್ಯಗಳಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಂಡು ಸೋಮವಾರ ರಜೆ ನೀಡಿ ಬಾಕಿ ಉಳಿದ ಪಾಠಗಳನ್ನು ಮುಗಿಸಬಹುದಾಗಿದೆ. ಈಗಾಗಲೇ ಪೋಷಕರಿಗೆ ಈ ಕುರಿತಾಗಿ ಕೆಲವು ಶಾಲೆಗಳು ಸಂದೇಶ ರವಾನಿಸಿದ್ದು ಸ್ವಂತ ವಾಹನ ಇಲ್ಲದ ಶಾಲೆಗಳು ಖಾಸಗಿ ವಾಹನಗಳ ಮೇಲೆ ಅವಲಂಬಿತವಾದ ಶಾಲೆಗಳು ಸೋಮವಾರ ರಜೆ ಘೋಷಿಸಬಹುದಾಗಿದೆ ಎಂದು ಹೇಳಬಹುದು ಆಗಿದೆ.

ಕೆಸಿಸಿ ಕಿಸಾನ್ ಸಾಲ ಮನ್ನಾ ಹೊಸ ಪಟ್ಟಿ ಬಿಡುಗಡೆ : ಕೂಡಲೇ ಹೆಸರು ಸೇರ್ಪಡೆ ಮಾಡಿ

32 ಸಂಘಟನೆಗಳು :

32 ಸಂಘಟನೆಗಳು ಖಾಸಗಿ ಪ್ರಯಾಣಿಕರ ವಾಹನ ಸಂಘಟನೆಗಳಿರುವುದನ್ನು ನೋಡಬಹುದಾಗಿದ್ದು ಸರ್ಕಾರಕ್ಕೆ ಈ ಸಂಘಟನೆಗಳು 28 ಬೇಡಿಕೆಗಳನ್ನು ಮುಂದಿಟ್ಟಿವೆ. ಈ ಸಂಘಟನೆಗಳಲ್ಲಿ ಶಾಲಾ ಬಸ್, ಟ್ಯಾಕ್ಸಿ ಖಾಸಗಿ ಬಸ್ ಕ್ಯಾಬ್ ಆಟೋರಿಕ್ಷಾ ಸೇರಿದಂತೆ ಹಲವು ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದಲೇ ಜಂಟಿಯಾಗಿ ಈ ಎಲ್ಲಾ ಸಂಘಟನೆಗಳು ಮುಷ್ಕರಕ್ಕೆ ಮುಂದಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ :

ಬಹುತೇಕ ಶಾಲೆಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಲ್ಲಿ ಇರುವುದನ್ನು ಕಾಣಬಹುದಾಗಿದ್ದು ಎಂದಿನಂತೆ ಅವು ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗುತ್ತಿದೆ. ಬಹುತೇಕ ಶಾಲೆಗಳು ರಜೆ ನೀಡುವುದಿಲ್ಲ ಎಂದು ಹೇಳುತ್ತಿದ್ದು ಪೋಷಕರೇ ತಮ್ಮ ಮಕ್ಕಳನ್ನು ಶಾಲೆಗೆ ತಲುಪಿಸಲು ಹಾಗೂ ವಾಪಸ್ ಕರೆದೊಯ್ಯಲು ತಮ್ಮದೇ ಆದಂತಹ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದು ಶಾಲೆಗಳು ತಿಳಿಸಿವೆ. ಆದರೆ ಶಾಲೆಗೆ ಕರೆಸಿಕೊಳ್ಳಲು ಖಾಸಗಿ ವಾಹನಗಳ ಮೇಲೆ ಅವಲಂಬಿತವಾಗಿರುವ ಶಾಲೆಗಳು ಮಕ್ಕಳನ್ನು ಹಾಗೂ ಮನೆಗೆ ವಾಪಸ್ ಪ್ರವಾನಿಸಲು ಸವಾಲು ಎದುರಿಸುತ್ತಿವೆ ಎಂದು ಒಕ್ಕೂಟ ಕಾರ್ಯದರ್ಶಿಯಾದ ಶಶಿಕುಮಾರ್ ಅವರು ತಿಳಿಸಿದ್ದಾರೆ.

ಹೀಗೆ ಖಾಸಗಿ ವಾಹನಗಳ ಸಂಘಟನೆಗಳು ಮುಷ್ಕರ ಹೂಡುತ್ತಿದ್ದು ಸೋಮವಾರ ರಜೆ ಸಿಗಲಿದೆಯೇ ಇಲ್ಲವೇ ಎಂಬುದು ಇನ್ನೂ ಗೊಂದಲವಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಅವರು ತಮ್ಮ ಮಕ್ಕಳು ಶಾಲೆಗೆ ಕಳುಹಿಸಬೇಕೇ ಇಲ್ಲವೇ ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಧನ್ಯವಾದಗಳು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ : ಈ ಕೂಡಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ

ಅಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆ : ಜನಸಾಮಾನ್ಯರಿಗೆ ಪ್ರವೇಶ ಇದೆಯಾ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments