Saturday, July 27, 2024
HomeNewsಅಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆ : ಜನಸಾಮಾನ್ಯರಿಗೆ ಪ್ರವೇಶ ಇದೆಯಾ..?

ಅಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆ : ಜನಸಾಮಾನ್ಯರಿಗೆ ಪ್ರವೇಶ ಇದೆಯಾ..?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಕೋಟ್ಯಂತರ ಹಿಂದುಗಳ ಕನಸು ನನಸಾಯಿಸಲು ದಿನಾಂಕವನ್ನು ನಿಗದಿಪಡಿಸಲಾಗುತ್ತಿದೆ. ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲಿಯೇ ಉದ್ಘಾಟಿಸಲಿದ್ದು ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಯಾವಾಗ ಮಾಡಲಾಗುತ್ತದೆ ಎಂದು ದಿನಾಂಕವನ್ನು ನಿಗದಿಪಡಿಸಲಾಗಿದೆ. ಹಾಗಾದರೆ ಕೋಟ್ಯಂತರ ಹಿಂದುಗಳ ಕನಸಾಗಿದ್ದ ಶ್ರೀರಾಮ ಮಂದಿರ ಯಾವಾಗ ಉದ್ಘಾಟನೆಯಾಗಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಲಾಗುತ್ತಿದೆ.

Inauguration of Ayodhya Sri Rama Mandir
Inauguration of Ayodhya Sri Rama Mandir
Join WhatsApp Group Join Telegram Group

ಅಯೋಧ್ಯ ರಾಮ ಮಂದಿರ ಉದ್ಘಾಟನೆ :

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಜನವರಿ 22 2024 ರಂದು ಉದ್ಘಾಟಿಸಲಿದ್ದು ಅದೇ ದಿನದಂದು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಗುತ್ತದೆ ಎಂದು ಕೆಲವೊಂದು ಮೂಲಗಳು ತಿಳಿಸುತ್ತೇವೆ. ರಾಮಲಲ್ಲ ಮೂರ್ತಿಯನ್ನು ಈಗಾಗಲೇ ಅಯೋಧ್ಯೆಯಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರಚಿಸಿದ್ದಾರೆ. ರಾಮ ಮಂದಿರ ಮಾದರಿಯಲ್ಲಿ ಅಯೋಧ್ಯ ಪ್ರವೇಶ ದ್ವಾರ ನಿರ್ಮಾಣವಾಗಲಿದ್ದು , ರಾಷ್ಟ್ರೀಯ ಹೆದ್ದಾರಿ 28 ರ ದ್ವಾರಕ್ಕೆ ಯೋಗಿ ಸರ್ಕಾರವು ಶ್ರೀರಾಮದ್ವಾರ ಎಂದು ಹೆಸರನ್ನು ಇಡಲು ನಿರ್ಧಾರವನ್ನು ಕೈಗೊಂಡಿದೆ.

ಡಿಸೆಂಬರ್ ಮೂವತ್ತರ ಒಳಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ :

ನಂಬರ್ 30ರ ಒಳಗಾಗಿ ಅಯೋಧ್ಯೆಯಲ್ಲಿ ರಾಮಮಂದಿರದ ಮೊದಲ ಹಂತದ ನಿರ್ಮಾಣವು ಪೂರ್ಣಗೊಳ್ಳಲಿದ್ದು ಭಕ್ತರಿಗೆ ದರ್ಶನ ಮಾಡಲು ಅನುವು ಮಾಡಿಕೊಡಲಾಗುತ್ತದೆ ಎಂದು ನೃಪೇಂದ್ರ ಮಿಶ್ರ ಅವರು ರಾಮಮಂದಿರ ಸಮಿತಿಯ ಅಧ್ಯಕ್ಷರಾಗಿದ್ದು ಈ ಹಿಂದೆ ಭಕ್ತರಿಗೆ ತಿಳಿಸಿದ್ದಾರೆ. ದೇವಸ್ಥಾನದ ಟ್ರಸ್ಟ್ 2023ರ ಡಿಸೆಂಬರ್ 30ರ ಒಳಗೆ ರಾಮ ಮಂದಿರದ ನಿರ್ಮಾಣದ ಮೊದಲ ಹಂತವನ್ನು ಪೂರ್ಣಗೊಳಿಸಲು ನಿರ್ಧರಿಸಿದೆ. ನೆಲಮಹಡಿಯಲ್ಲಿ 5 ಮಂಟಪಗಳು ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಗರ್ಭಗುಡಿ ಮೊದಲ ಹಂತದಲ್ಲಿರುತ್ತದೆ. ದೇವರ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಸುಮಾರು 160 ಕಂಬಗಳನ್ನು 5 ಮಂಟಪಗಳ ನಿರ್ಮಾಣದಲ್ಲಿ ಬಳಸಲಾಗಿದೆ. ಶ್ರೀ ರಾಮನ ಸಂಕ್ಷಿಪ್ತ ವಿವರಣೆಯನ್ನು ದೇವಾಲಯದ ಕೆಳಗಿನ ಸ್ತಂಭದಲ್ಲಿ ಪ್ರಾರಂಭಿಸಲಾಗುತ್ತದೆ. ಅಯೋಧ್ಯ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ವಿದ್ಯುತ್ ಸೌಲಭ್ಯ ಹಾಗೂ ಇತರ ಸೌಲಭ್ಯಗಳನ್ನು ಪೂರ್ಣಗೊಳಿಸಬೇಕಾಗಿದ್ದು ಡಿಸೆಂಬರ್ 30ರ ಒಳಗಾಗಿ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ. 2024ರ ಡಿಸೆಂಬರ್ 30ರೊಳಗಾಗಿ ಎರಡನೇ ಮಹಡಿಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿದೆ.

ಇದನ್ನು ಓದಿ : ಕರ್ನಾಟಕದಲ್ಲಿ ಪ್ರತಿದಿನ 2 ಗಂಟೆ ಕರೆಂಟ್ ಇರುವುದಿಲ್ಲ : ಯಾವ ಸಮಯದಲ್ಲಿ ಗೊತ್ತಾ..?

ಏಪ್ರಿಲ್ ನಲ್ಲಿ ನಡೆದ ಸಭೆ :

ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ಚನ್ನಪತ್ ರಾಯ್ ರವರು ಏಪ್ರಿಲ್ ನಡೆದ ಸಭೆಯಲ್ಲಿ ಉಡುಪಿ ಪೇಜಾವ ಮಠದ ಪೀಠಾಧೀಶ್ವರ ,ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕಾಮೇಶ್ವರ ಚೌಪಾಲ್, ಡಾಕ್ಟರ್ ಅನಿಲ್ ಮಿಶ್ರಾ, ಅಯೋಧ್ಯ ರಾಜ ವಿಮಲೇಂದ್ರ ಮೋಹನ್ ಮಿಶ್ರಾ ಮತ್ತು ನಿರ್ಮೂಹಿ ಅಖಾಡದ ಮಹಾಂತ ಜಿನೇಂದ್ರ ದಾಸ್ ಏಪ್ರಿಲ್ ನಲ್ಲಿ ನಡೆದ ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ರಾಮಮಂದಿರಕ್ಕೆ ಭೂಮಿ ಪೂಜೆಯನ್ನು ಮಾಡಿದ್ದು ಅವರೇ ಪ್ರಾಣ ಪ್ರತಿಷ್ಠೆ ಮತ್ತು ದೇಗುಲದ ಉದ್ಘಾಟನಾ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ಜೂನ್ ಮಧ್ಯ ಭಾಗದಲ್ಲಿ ಮಾಧ್ಯಮಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಿಳಿಸಿದರು. ವಿದ್ವಾಂಸರಿಂದ ಪ್ರಾಣ ಪ್ರತಿಷ್ಠಾ ಕಾರ್ಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಹೇಳಲಾಗಿದ್ದು ರಾಮಲಲ್ಲ ವಿಗ್ರಹಗಳನ್ನು ಮಾಡಲು ಸಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದ್ದು ಅಯೋಧ್ಯೆಗೆ ಅದಕ್ಕಾಗಿ ಶಿಲ್ಪಿಗಳು ತಲುಪಿದ್ದು ಈ ಕಾರ್ಯವು ಪ್ರಗತಿಯಲ್ಲಿದೆ ಎಂದು ರಾಜ್ಯದ ಜನತೆಗೆ ಟ್ರಸ್ಟ್ ತಿಳಿಸಿದೆ.

ಹೀಗೆ ಅಯೋಧ್ಯ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ಹಿಂದುಗಳ ಕನಸು 2024 ಜನವರಿ 22ರಂದು ನನಸಾಗಲಿದ್ದು ಪ್ರಾಣ ಪ್ರತಿಷ್ಠಾಪನೆ ಮಾಡುವುದರ ಮೂಲಕ ಅಯೋಧ್ಯೆಯ ರಾಮಮಂದಿರ ಸ್ಥಾಪನೆಯಾಗಲಿದೆ ಎಂದು ಈ ಮೂಲಕ ನಿಮಗೆ ತಿಳಿಸಲಾಗುತ್ತಿದೆ. ಹೀಗೆ ಅಯ್ಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಬಗ್ಗೆ ನಿಮ್ಮೆಲ್ಲ ಹಿಂದೂ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನಲ್ಲಿ ಗಣನೀಯ ಹೆಚ್ಚಳ..! ಈ ನೌಕರರಿಗೆ 3 ವರ್ಷ ಹೆಚ್ಚು ಕೆಲಸ ಮಾಡುವ ಸುವರ್ಣಾವಕಾಶ

ಕಡಿಮೆ ಜಮೀನು ಹೊಂದಿದ ರೈತರಿಗೆ ಅರ್ಜಿ ಆಹ್ವಾನ : ಒಂದು ಬಾರಿ ಮಾತ್ರ ಅವಕಾಶ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments