Friday, July 26, 2024
HomeNewsರೈತರಿಗೆ ಕೈ ಕೊಟ್ಟ ಮಳೆ : ಸರ್ಕಾರವು ಬರ ಪರಿಸ್ಥಿತಿ ಘೋಷಣೆಗೆ ಮಾನದಂಡಗಳನ್ನು ಸಿದ್ಧಪಡಿಸುತ್ತಿದೆ

ರೈತರಿಗೆ ಕೈ ಕೊಟ್ಟ ಮಳೆ : ಸರ್ಕಾರವು ಬರ ಪರಿಸ್ಥಿತಿ ಘೋಷಣೆಗೆ ಮಾನದಂಡಗಳನ್ನು ಸಿದ್ಧಪಡಿಸುತ್ತಿದೆ

ನಮಸ್ಕಾರ ಸ್ನೇಹಿತರೆ, ಈ ಬಾರಿ ನೈರುತ್ಯ ಮುಂಗಾರು ಮಳೆ, ಕರ್ನಾಟಕದಲ್ಲಿ ಕೈಕೊಟ್ಟಿದೆ. ಬರ ಪರಿಸ್ಥಿತಿ ವಿವಿಧ ಜಿಲ್ಲೆಗಳಲ್ಲಿ ಕರ್ನಾಟಕದಲ್ಲಿ ಎದುರಾಗಿದೆ. ಬರಪೀಡಿತ ಎಂದು ಕೆಲವು ಜಿಲ್ಲೆಗಳನ್ನು ಕಂದಾಯ ಇಲಾಖೆಯು ಘೋಷಣೆ ಮಾಡುವ ತಯಾರಿಯನ್ನು ನಡೆಸುತ್ತಿದೆ. ಕಂದಾಯ ಸಚಿವರಾಧ್ಯಕ್ಷತೆಯಲ್ಲಿ ಆಗಸ್ಟ್ 22ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚೆಗಳನ್ನು ಸಭೆಯಲ್ಲಿ ನಡೆಸಲಾಯಿತು. ಈ ಸಭೆಯ ಬಳಿಕ ಕಂದಾಯ ಇಲಾಖೆ ಸುತ್ತೋಲೆಯೊಂದನ್ನು ಟಿಸಿ ಕಾಂತರಾಜ್ ಸರ್ಕಾರದ ಜಂಟಿ ಕಾರ್ಯದರ್ಶಿ, ಹೊರಡಿಸಿದ್ದಾರೆ. ಹಾಗಾದರೆ ಕರ್ನಾಟಕ ರಾಜ್ಯದಲ್ಲಿ ಯಾವೆಲ್ಲ ಜಿಲ್ಲೆಗಳು ಆಗಿವೆ , ಇದಕ್ಕೆ ಯಾವ ಮಾನದಂಡಗಳನ್ನು ಸರ್ಕಾರವು ಯೋಚಿಸುತ್ತಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡ ಬಹುದಾಗಿದೆ.

List of drought affected taluks
List of drought affected taluks
Join WhatsApp Group Join Telegram Group

ಸಚಿವ ಸಂಪುಟ ಉಪ ಸಮಿತಿ ಸಭೆ :

ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ಕಂದಾಯ ಸಚಿವರಾಧ್ಯಕ್ಷತೆಯಲ್ಲಿ ಬರಪೀಡಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಚರ್ಚಿಸಿ ನಿರ್ದೇಶಿಸಿದಂತೆ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯ ಹಾಗೂ ಕೇಂದ್ರ ಸರ್ಕಾರದ ಪರಿಷ್ಕೃತ ಬರಕೈಪಿಡಿ 2022 ರಲ್ಲಿ ಇದರ ಅನ್ವಯ,

ಹಂತ-01 :

ಹಂತ ಒಂದರಲ್ಲಿ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳು ಕಡ್ಡಾಯ ಮಾನದಂಡಗಳ ಪ್ರಕಾರ ಮಳೆಯ ಕೊರತೆ ಮತ್ತು ಸತತ ಮೂರು ವಾರಗಳ ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಶುಷ್ಕ ವಾತಾವರಣ ಕಂಡು ಬಂದಿರಬೇಕು ಎಂದು ಮಾನದಂಡಗಳು ತಿಳಿಸಿವೆ.

ಹಂತ 2 :

ಬರಪೀಡಿತ ಪ್ರದೇಶಗಳೆಂದು ಗುರುತಿಸಬೇಕಾದರೆ ಕಂದಾಯ ಇಲಾಖೆಯು ಹಂತ ಎರಡರಲ್ಲಿ ತತ್ಪರಿಣಾಮದಂಡಗಳಾದ ಕೃಷಿ ಬಿತ್ತನೆ ಪ್ರದೇಶ ,ತೇವಾಂಶ ಕೊರತೆ ಹಾಗೂ ನದಿಗಳಲ್ಲಿನ ಹರಿವು, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ, ಜಲಾಶಯ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟದ ಸೂಚ್ಯಂಕಗಳಲ್ಲಿನ ತೀವ್ರತೆಯನ್ನು ಆಧರಿಸುವ ಮೂಲಕ ಅಂತಹ ತಾಲೂಕುಗಳನ್ನು ಬರಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳೆಂದು ಕಂದಾಯ ಇಲಾಖೆಯ ಗುರುತಿಸಲಾಗುತ್ತದೆ ಎಂದು ಹೇಳಿದೆ.

113 ಬರಪೀಡಿತ ತಾಲೂಕುಗಳ ಪಟ್ಟಿ :

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸರ್ಕಾರದ ಪರಿಷ್ಕೃತ ಬರಕೈಪಿಡಿ 2020ರ ಅನ್ವಯ ಕಂದಾಯ ಇಲಾಖೆಯ ಹಂತ ಒಂದು ಮತ್ತು ಹಂತ ಎರಡರಲ್ಲಿ ಸೂಚಿಸಿರುವ ಮಾನದಂಡಗಳ ಅನ್ವಯ ಪರಿಶೀಲಿಸಿ ಪ್ರಸಕ್ತ ಅವಧಿಯಲ್ಲಿ ಅಂದರೆ ಮುಂಗಾರಿನ ಅವಧಿಯಲ್ಲಿ ಅಂದರೆ ಜೂನ್ ಒಂದರಿಂದ 19ನೇ ಆಗಸ್ಟ್ ವರೆಗೆ 38 ತಾಲೂಕುಗಳನ್ನು ರಾಜ್ಯದಲ್ಲಿ ತೀವ್ರ ಬರ ಹಾಗೂ ಸಾಧಾರಣ ಬರ ಪರಿಸ್ಥಿತಿ 75 ತಾಲೂಕುಗಳಲ್ಲಿ ಕಂಡು ಬಂದಿರುವುದನ್ನು ನೋಡಬಹುದಾಗಿದೆ ಒಟ್ಟಾರೆಯಾಗಿ ಬರ ಪರಿಸ್ಥಿತಿ ಉದ್ದವಿರುವ ತಾಲೂಕುಗಳನ್ನು ಒಟ್ಟು 113 ತಾಲ್ಲೂಕುಗಳು ಎಂದು ಗುರುತಿಸಿ ಕಂದಾಯ ಇಲಾಖೆಯು ಬರಪೀಡಿತ ತಾಲೂಕುಗಳ ಎಂಬ ಪಟ್ಟಿಯನ್ನು ಮಾಡಿದೆ.

ಮೂರನೇ ಹಂತ :

ಶೇಕಡಾ ಹತ್ತರಷ್ಟು ಗ್ರಾಮಗಳನ್ನು ಮೂರನೇ ಹಂತದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ತಾಲೂಕುಗಳಲ್ಲಿ ಗ್ರಾಮಗಳನ್ನು ರಾಂಡಮ್ ಆಗಿ ಆಯ್ಕೆ ಮಾಡಿ ಅಲ್ಲಿನ ಪ್ರಮುಖ ಬೆಳೆಗಳನ್ನು ಗುರುತಿಸುವ ಮೂಲಕ ಸುಮಾರು ಐದು ಸೀಟ್ಸ್ ಈ ಆಡಳಿತಕ್ಕೆ ಇಲಾಖೆ ಅಭಿವೃದ್ಧಿಪಡಿಸಿರುವ ಆಪ್ ಮೂಲಕ ಪ್ರತಿ ಬೆಳೆಗಳಿಗೆ ಗ್ರೌಂಡ್ ತ್ರೋಟಿಂಗ್ ಹಾಗೂ ವೆರಿಫಿಕೇಶನ್ ಮಾಡಲಾಗುತ್ತದೆ.

ಫಾರ್ಮ್ ನಂಬರ್ 11 :

ಫಾರಂ ನಂಬರ್ 11ರಲ್ಲಿ ಈ ಸಂಬಂಧವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಕೃಷಿ ತೋಟಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆಯನ್ನು ಕೈಗೊಂಡು ಬರಕೈಪಿಡಿಯಲ್ಲಿ ನಮೂದಿಸಿರುವುದರ ಬಗ್ಗೆ ದೃಡೀಕರಣ ವರದಿಯನ್ನು ರಾಜ್ಯಕ್ಕೆ ಸಲ್ಲಿಸಬೇಕಾಗಿರುತ್ತದೆ. ಬರ ಕೈಪಿಡಿ 2020ರಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಮುನ್ನ ಪೂರಕವಾಗಿ ಸೂಚಿಸಿರುವಂತೆ ಮಾಹಿತಿಯನ್ನು ವಿವಿಧ ಇಲಾಖೆಗಳಿಂದ ಪಡೆಯಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ಪರಿಷ್ಕೃತ ಬರ ಕೈಪಿಡಿ 2020 ರ ಅನ್ವಯ ಗ್ರೌಂಡ್ ಫ್ಲೋಟಿಂಗ್ ಅಥವಾ ವೆರಿಫಿಕೇಶನ್ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಕಂದಾಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿಗಳ ಜೊತೆಗೆ ಜಂಟಿ ಸಮೀಕ್ಷೆ ತಂಡಗಳನ್ನು ಈ ಆಡಳಿತ ಇಲಾಖೆಯಿಂದ ರಚಿಸಿ, ಅಭಿವೃದ್ಧಿಪಡಿಸಿರುವ ಆಪ್ ಮತ್ತು ವೆಬ್ ಅಪ್ಲಿಕೇಶನ್ ನಂತೆ ದೃಢೀಕರಣ ನೀಡಿಸಲು ಕ್ರಮ ಕೈಗೊಳ್ಳುವುದು ಎಂದು ರಾಜ್ಯ ಸರ್ಕಾರ ಸುತ್ತೋಲೆ ವಿವರಣೆಯನ್ನು ನೀಡಿದೆ.

ಇದನ್ನು ಓದಿ : 35 ಲಕ್ಷ ರೇಷನ್ ಕಾರ್ಡ್ ಗಳು ಬಂದ್: ಹೊಸ ರೂಲ್ಸ್ ಜಾರಿ, ಕಾರ್ಡ್ ಇದ್ದವರಿಗೂ ಆತಂಕ! ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್‌ ಡೀಟೇಲ್ಸ್

ವರದಿ ದಿನಾಂಕ :

ಅರ್ಜಿ 11ರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗ್ರೌಂಡ್ ಥ್ರೋಟಿನ್ ಅಥವಾ ವೆರಿಫಿಕೇಶನ್ ಮಾಹಿತಿಯನ್ನು ಪಡೆದು ಕ್ರೂಢೀಕರಿಸಿ 31 8 2023 ಕ್ಕೆ ದೃಢೀಕೃತ ದಾಖಲೆಗಳನ್ನು ಕಂದಾಯ ಇಲಾಖೆ ಸಲ್ಲಿಸಬೇಕೆಂದು ಸೂಚನೆ ನೀಡಿದೆ.

ಹೀಗೆ ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೆ ಮುಂಗಾರು ಮಳೆ ಬರದ ಕಾರಣ ಸುಮಾರು 113 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರವು ಘೋಷಣೆ ಮಾಡಲು ಹೊರಟಿದೆ. ಹೀಗೆ ಈ ಬಗ್ಗೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯದಲ್ಲಿ ಮಳೆ ಅಭಾವ; ಈ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಆರಂಭ, ನಿಮ್ಮ ತಾಲೂಕುಗಳು ಲಿಸ್ಟ್‌ ನಲ್ಲಿ ಇವೆಯಾ ಚೆಕ್‌ ಮಾಡಿ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ ಹೆಸರಿದ್ರೆ ಮಾತ್ರ ಹಣ! ಕೂಡಲೇ ಲಿಸ್ಟ್‌ ಚೆಕ್‌ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments