Thursday, June 20, 2024
HomeNewsಕರ್ನಾಟಕದ ಈ ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಭಾರಿ ಮಳೆ ಗ್ಯಾರಂಟಿ! ಯಾವ್ಯಾವ ಜಿಲ್ಲೆಗಳಲ್ಲಿ ಗೊತ್ತಾ? ಇಲ್ಲಿದೆ...

ಕರ್ನಾಟಕದ ಈ ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಭಾರಿ ಮಳೆ ಗ್ಯಾರಂಟಿ! ಯಾವ್ಯಾವ ಜಿಲ್ಲೆಗಳಲ್ಲಿ ಗೊತ್ತಾ? ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್‌ ಡೀಟೇಲ್ಸ್

ನಮಸ್ಕಾರ ಸ್ನೇಹಿತರೆ, ಮುಂಗಾರು ಮಳೆ ಕರ್ನಾಟಕದಲ್ಲಿ ಕಣ್ಣ ಮುಚ್ಚಾಲೆ ಮುಂದುವರಿಸಿದ್ದು ರೈತರು ಬರದ ಛಾಯೆ ನಡುವೆ ಹೋಗಿದ್ದಾರೆ. ಅದರಲ್ಲೂ ನೀರಾವರಿ ಸೌಲಭ್ಯ ಇಲ್ಲದ ಪ್ರದೇಶಗಳಲ್ಲಿ ಹಾಗೂ ಮಳೆಯನ್ನೇ ನಂಬಿ ಬದುಕುವ ಪ್ರದೇಶಗಳಲ್ಲಿ ನಡುಕ ಶುರುವಾಗಿದೆ. ಭೂಮಿ ಒದ್ದೆಯಾಗುವಷ್ಟು ಆಗಸ್ಟ್ ಮುಗಿಯುತ್ತಿದ್ದರು ಮಳೆ ಸುರಿದಿಲ್ಲ. ಹೀಗಿದ್ದಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಫಿಕ್ಸ್ ಎಂಬ ಗುಡ್ ನ್ಯೂಸ್ ಅನ್ನು ಹವಾಮಾನ ಇಲಾಖೆ ರಾಜ್ಯದ ಜನತೆಗೆ ಕೊಟ್ಟಿದೆ. ಹಾಗಾದರೆ ಆ ಜಿಲ್ಲೆಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

meteorological-department-reports-rain
meteorological-department-reports-rain
Join WhatsApp Group Join Telegram Group

ಹವಾಮಾನ ಇಲಾಖೆ ವರದಿ :

ರಾಜ್ಯದಲ್ಲಿ ಉತ್ತಮವಾಗಿ ಕಳೆದ 5-6 ವರ್ಷದಿಂದ ಮಳೆ ಸುರಿದಿತ್ತು. ಹಾಗಾಗಿ ಬರ ಪರಿಸ್ಥಿತಿ ರಾಜ್ಯದಲ್ಲಿ ಬಂದಿರಲಿಲ್ಲ. ಆದರೆ ಇದೀಗ ಕರ್ನಾಟಕದ ಜನರು ಪ್ರಕೃತಿ ಮಾತೆಯ ಮುನಿಸಿಗೆ ಮತ್ತೆ ನಲುಗಿದ್ದಾರೆ. ಅದರಲ್ಲೂ ಬರೆದ ಛಾಯೆ ನಡುವೆ ಅನ್ನದಾತ ಪ್ರಭು ಕೃಷಿಕರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಮೋಡಗಳು ಮಳೆ ಸುರಿಸುವ ಮುನ್ಸೂಚನೆಗೆ ಮುಗಿಲು ನೋಡುತ್ತಾ ರೈತರು ಕಾಯುತ್ತಿದ್ದಾರೆ. ಹೀಗಿದ್ದಾಗಲೇ ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಉದ್ದಗಲಕ್ಕೂ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಅದರಲ್ಲೂ ಮಳೆ ಅಬ್ಬರ ಉತ್ತರ ಕರ್ನಾಟಕದ ಭಾಗದಲ್ಲಿ ಜೋರಾಗುವುದು ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಆರಂಭ :

ಈ ಬಾರಿ ಭಾರಿ ಮಳೆ ಕರಾವಳಿ ಭಾಗಕ್ಕೆ ಸುರಿದಿತ್ತು. ಇದೇ ಭಾಗದಲ್ಲಿ ಒಣಗಿ ಹೋಗಿದ್ದ ನದಿಗಳು ಬೇಸಿಗೆ ಸಮಯದಲ್ಲಿ ಮಳೆ ಆರಂಭ ಆಗುತ್ತಿದ್ದಂತೆ ತುಂಬಿ ತುಳುಕುತ್ತಿವೆ. ನಿಲ್ಲೋ ನಿಲ್ಲೋ ಮಳೆರಾಯ ಎಂದು ಹೀಗಾಗಿ ಜನರು ಹೇಳುತ್ತಿದ್ದಾರೆ. ಆದರೆ ಜನರ ಕೋರಿಕೆ ಮಳೆಗೆ ಕೇಳಿಸಿಲ್ಲ ಹೀಗಾಗಿ ಭಾರಿ ಮಳೆ ಬೀಳುವ ಬಗ್ಗೆ ಸೂಚನೆಯನ್ನು ಮತ್ತೊಮ್ಮೆ ಕರಾವಳಿ ಭಾಗದಲ್ಲಿ ಸಿಕ್ಕಿದೆ. ಸೆಪ್ಟೆಂಬರ್ 3ರವರೆಗೂ ಕರಾವಳಿಯ ಕೆಲ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮಳೆ ಯಾಗಲಿದೆ ಎಂದು ಹೇಳಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಉಡುಪಿ ,ಧಾರವಾಡ ,ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮುಂದಿನ ಕೆಲದಿನಗಳ ಕಾಲ ಹಾಗೂ ಬೆಂಗಳೂರು ನಗರ ,ಚಿಕ್ಕಬಳ್ಳಾಪುರ ,ಬೆಂಗಳೂರು ಗ್ರಾಮಾಂತರ ,ಹಾಸನ ಮತ್ತು ಚಿಕ್ಕಮಗಳೂರು, ಮಂಡ್ಯ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ರಾಮನಗರ ಸೇರಿದಂತೆ ಈ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆ ಬರದಿದ್ದರೂ ಒಂದಿಷ್ಟು ಮಳೆ ಸುರಿಯುತ್ತಿರುವುದು ರೈತರಿಗೆ ಖುಷಿಯ ಸಂಗತಿಯಾಗಿದೆ ಎಂದು ಹೇಳಬಹುದಾಗಿದೆ.

ಇದನ್ನು ಓದಿ : ರಾಜ್ಯದಲ್ಲಿ ಮಳೆ ಅಭಾವ; ಈ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಆರಂಭ, ನಿಮ್ಮ ತಾಲೂಕುಗಳು ಲಿಸ್ಟ್‌ ನಲ್ಲಿ ಇವೆಯಾ ಚೆಕ್‌ ಮಾಡಿ

ಬೇಸಿಗೆಕಾಲ ಶುರುವಾದ ರಾಜಧಾನಿ ಬೆಂಗಳೂರಿನಲ್ಲಿ :

ಬೇಸಿಗೆಯಂತೆ ಈ ಬಾರಿ ಮಳೆಗಾಲ ಕೂಡ ಭಾಷವಾಗುತ್ತಿದೆ. ಅದರಲ್ಲೂ ಜನ ಸೆಖೆಯಾ ತಾಪಕ್ಕೆ ರಾಜಧಾನಿಯಲ್ಲಿ ನಲುಗಿ ಹೋಗಿದ್ದಾರೆ. ಇದೀಗ ಮುಂದಿನ ಕೆಲವು ದಿನಗಳ ಕಾಲ ಬೆಂಗಳೂರಿಗೆ ಗುಡ್ ನ್ಯೂಸ್ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಉತ್ತಮವಾಗಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ಹೊರಯದಲ್ಲಿ ಭಾರಿ ಮಳೆ ಕೊರತೆ ಎದುರಾಗಿದ್ದು ಬೋರ್ಗಳು ಕೂಡ ಬತ್ತಿ ಹೋಗುತ್ತಿವೆ ಇದರಿಂದಾಗಿ ಮಳೆ ಬಂದರೆ ಮಾತ್ರ ಬೋರ್ವೆಲ್ ಗೆ ನೀರು ಹಾಗೂ ಕೆರೆಗಳು ತುಂಬಿ ನೀರು ಸಿಗಲು ಸಾಧ್ಯ. ಇಲ್ಲದೆ ಮಳೆ ಕೊರತೆ ಹೀಗೆ ಮುಂದುವರೆದರೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರ ಕೂಡ ಪರಿಸ್ಥಿತಿಯಲ್ಲಿನ ನಿಭಾಯಿಸಲು ಸಿದ್ಧವಾಗಿದ್ದು ರಾಜ್ಯದಲ್ಲಿ ಮಳೆ ಕೊರತೆ ಸಾಕಷ್ಟು ಸವಾಲು ತಂದಿದೆ. ತಮಿಳುನಾಡು ಸರ್ಕಾರ ಈ ಮಧ್ಯೆ ನೀರು ಬೇಕು ಎಂದು ಕಿರಿಕ್ ಜೋರು ಮಾಡಿದ್ದು ಸುಪ್ರೀಂಕೋರ್ಟ್ ಮೆಟ್ಟಿಲು ಈ ಇಬ್ಬರ ಕಿತ್ತಾಟ ಏರಿದೆ. ಹೀಗಾಗಿ ಕರ್ನಾಟಕ ರಾಜ್ಯದ ಜನ ಕೂಡ ಮಳೆ ಬರಲಿ ದೇವರೇ ಎಂದು ಕೇಳಿಕೊಳ್ಳುತ್ತಿದ್ದಾರೆ. ಹಾಗೆಯೇ ರೈತ ಸಮುದಾಯವು ಸಹ ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಾ ಕುಳಿತಿದೆ. ಇದರ ನಡುವೆ ರೈತರಿಗೆ ಹವಾಮಾನ ಇಲಾಖೆಯು ಒಂದಿಷ್ಟು ರಿಲೀಫ್ ನೀಡಿದಂತಾಗಿದೆ. ಹೀಗೆ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ ಹೆಸರಿದ್ರೆ ಮಾತ್ರ ಹಣ! ಕೂಡಲೇ ಲಿಸ್ಟ್‌ ಚೆಕ್‌ ಮಾಡಿ

ಜನಧನ್ ಖಾತೆ ಹೊಂದಿದವರಿಗೆ 10,000 ಬಿಡುಗಡೆ :ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments