Thursday, June 13, 2024
HomeGovt Schemeಜನಧನ್ ಖಾತೆ ಹೊಂದಿದವರಿಗೆ 10,000 ಬಿಡುಗಡೆ :ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ...

ಜನಧನ್ ಖಾತೆ ಹೊಂದಿದವರಿಗೆ 10,000 ಬಿಡುಗಡೆ :ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ. ಹಲವು ರೀತಿಯ ಯೋಜನೆಗಳನ್ನು ಸರ್ಕಾರವು ಜನಸಾಮಾನ್ಯರಿಗಾಗಿ ಜಾರಿಗೆ ತರುತ್ತಲಿದೆ. ಅದರಂತೆ ಪ್ರಧಾನಮಂತ್ರಿಯವರು ಹಿಂದುಳಿದ ಜನರಿಗೆ ಹಾಗೂ ಬಡವರಿಗೆ ಆರ್ಥಿಕ ಸಹಾಯವನ್ನು ನೀಡಲು ಸರ್ಕಾರ ಜನ್ ಧನ್ ಯೋಜನೆಯನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಖಾತೆಯನ್ನು ರಚಿಸಿಕೊಂಡ ಎಲ್ಲರಿಗೂ ನೇರವಾಗಿ 10,000 ವರ್ಗಾವಣೆಯನ್ನೂ ಮಾಡಲು ನಿರ್ಧರಿಸಿದೆ. ಇದರ ಜೊತೆಗೆ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಲು ಜನ್ ಧನ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಈ ಯೋಜನೆ ಹೇಗೆ ಪ್ರಾರಂಭವಾಯಿತು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Pradhan Mantri Jan Dhan Yojana
Pradhan Mantri Jan Dhan Yojana
Join WhatsApp Group Join Telegram Group

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ :

ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಸೌಲಭ್ಯಗಳನ್ನು ಹಿಂದುಳಿದವರು ಮತ್ತು ಬಡವರಿಗೆ ಒದಗಿಸುವ ಉದ್ದೇಶದಿಂದ ಹಾಗೂ ಆರ್ಥಿಕ ಒಳಗೊಳ್ಳುವಿಕೆಯ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು ಪ್ರಾರಂಭಿಸಿದೆ. 500 ಮಿಲಿಯನ್ ಗಿಂತಲೂ ಹೆಚ್ಚು ಅಂದರೆ 50 ಕೋಟಿಗೂ ಹೆಚ್ಚು ಖಾತೆಗಳನ್ನು ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ತೆರೆದಿದೆ. 2.03 ಲಕ್ಷ ಕೋಟಿಗೊ ಹೆಚ್ಚು ಹಣವನ್ನು ಈ ಖಾತೆಯಲ್ಲಿ ನೋಡಬಹುದಾಗಿದೆ. ಇತ್ತೀಚಿನ ವರದಿಯ ಪ್ರಕಾರ ಆಗಸ್ಟ್ 9.2023ರ ವೇಳೆಗೆ ಬ್ಯಾಂಕ್ ಬಿಡುಗಡೆ ಮಾಡಿದ ಮಾಹಿತಿ ಆಧಾರದ ಮೇಲೆ 50 ಕೋಟಿ ಜನ್ ಧನ್ ಖಾತೆಗಳ ಸಂಖ್ಯೆ ದಾಟಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ. 67% ರಷ್ಟು ಗ್ರಾಮೀಣ ಅಥವಾ ಆರ್ ನಗರ ಪ್ರದೇಶಗಳಲ್ಲಿ ಹಾಗೂ 56% ರಷ್ಟು ಮಹಿಳೆಯರಿಗಾಗಿ ಈ ಖಾತೆಗಳನ್ನು ತೆರೆಯಲಾಗಿದೆ.

ಜನ್ ಧನ್ ಖಾತೆಯ ಓವರ್ ಡ್ರಾಫ್ಟ್ :

ಹತ್ತು ಸಾವಿರ ರೂಪಾಯಿಗಳ ಓವರ್ ಡ್ರಾಫ್ಟ್ ಸೌಲಭ್ಯವನ್ನು ಜನಧನ್ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಸಹ ಪಡೆಯಬಹುದಾಗಿದೆ. ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬೇಕಾದರೆ ಖಾತೆಯನ್ನು ಹೊಂದಿದವರು ಕನಿಷ್ಠ ಆರು ತಿಂಗಳ ಹಳೆಯ ಖಾತೆಯಾಗಿರಬೇಕು. ಆರು ತಿಂಗಳಿಗಿಂತ ಹೆಚ್ಚು ಜನಧನ್ ಖಾತೆಯು ಹಳೆಯದಾಗಿದ್ದರೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ಅವರು ಸ್ವಯಂ ಚಾಲಿತವಾಗಿ ಪಡೆಯುತ್ತಾರೆ. ಇದಾದ ನಂತರ ಓವರ್ ಡ್ರಾಫ್ಟ್ ಅಡಿಯಲ್ಲಿ ನೀವು ಯಾವಾಗ ಬೇಕಾದರೂ ಹತ್ತು ಸಾವಿರ ರೂಪಾಯಿಗಳನ್ನು ಹಿಂಪಡೆಯಬಹುದು. ಅದೇ ಸಮಯದಲ್ಲಿ ಎರಡು ಸಾವಿರ ರೂಪಾಯಿಗಳ ಓವರ್ ಡ್ರಾಫ್ಟ್‌ನ ಸಲಭವನ್ನು ನೀವು ಖಾತೆಯನ್ನು ತೆರೆದ ತಕ್ಷಣ ಪಡೆಯಬಹುದಾಗಿದೆ.

ಜನ್ ಧನ್ ಖಾತೆಯ ಸೌಲಭ್ಯಗಳು :

ಜನ್ ಧನ್ ಖಾತೆಯಲ್ಲಿ ಅನೇಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ನೀವು ಯಾವುದೇ ಬ್ಯಾಂಕಿನಲ್ಲಿ ನಿಮ್ಮ ಖಾತೆಯನ್ನು ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ತೆರೆಯಬಹುದಾಗಿದೆ. ಖಾತೆಯ ಉಳಿದಂತೆ ಠೇವಣಿ ಮಾಡಿದ ಮೊತ್ತದ ಬಡ್ಡಿಯ ಸೌಲಭ್ಯವನ್ನು ನೀವು ಈ ಯೋಜನೆಯಡಿಯಲ್ಲಿ ಪಡೆಯಬಹುದಾಗಿದೆ. ಇದಲ್ಲದೆ ರೂಪೇ ಎಟಿಎಂ ಕಾರ್ಡ್ ಅನ್ನು ಸಹ ಈ ಯೋಜನೆಯಡಿಯಲ್ಲಿ ನಿಮಗೆ ನೀಡಲಾಗುತ್ತದೆ. 30,000ಗಳ ವಿಮೆಯನ್ನು ಹಾಗೂ ಎರಡು ಲಕ್ಷ ರೂಪಾಯಿಗಳ ಅಪಘಾತ ವಿಮೆಯನ್ನು ನಿಮಗೆ ಇದರಲ್ಲಿ ನೀಡಲಾಗುತ್ತದೆ.

ಇದನ್ನು ಓದಿ : ‘ಒಂದು ಭಾರತ-ಒಂದು ಟಿಕೆಟ್’! ಭಾರತೀಯ ರೈಲ್ವೇಯಲ್ಲಿ ಹೊಸ ನಿಯಮ, ಇದರ ವಿಶೇಷತೆ ಏನು ಗೊತ್ತಾ?

ಜನ್ ಧನ್ ಖಾತೆ ತೆರೆಯಲು ಬೇಕಾದಂತಹ ಅರ್ಹತೆಗಳು :

ಪ್ರಧಾನಮಂತ್ರಿ ಜನ್ ಧನ್ ಖಾತೆಯನ್ನು ತೆರೆಯಬೇಕಾದರೆ ಅಭ್ಯರ್ಥಿಗಳು ಕೆಲವೊಂದಿಷ್ಟು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಜನಧನ್ ಯೋಜನೆಯನ್ನು ಪ್ರತಿಯೊಬ್ಬ ವ್ಯಕ್ತಿಯನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು ಪ್ರಾರಂಭಿಸಲಾಗಿದೆ. ಯಾವುದೇ ಬ್ಯಾಂಕಿನಲ್ಲಿ ಜನಧನ್ ಖಾತೆಯನ್ನು 10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ನೀವು ಯಾವುದೇ ಬ್ಯಾಂಕ್ ಶಾಖೆ ಅಥವಾ ಬ್ಯಾಂಕ್ ಮಿತ್ರ ಔಟ್ಲೆಟ್ ನಲ್ಲಿ ಈ ಖಾತೆಯನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಖಾತೆಯನ್ನು ತೆರೆಯಬೇಕಾದರೆ ಮೊದಲು ಈ ಯೋಜನೆಯ ಫಾರ್ಮನ್ನು ಭರ್ತಿ ಮಾಡಬೇಕಾಗುತ್ತದೆ. ಈ ಯೋಜನೆಯ ಫಾರ್ಮ್ನಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ,ಬ್ಯಾಂಕ್ ಶಾಖೆಯ ಹೆಸರು, ವಿಳಾಸ ಹಾಗೂ ಇತರ ಎಲ್ಲಾ ಮಾಹಿತಿಯನ್ನು ನೀಡುವುದರ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಭಾರತದಲ್ಲಿರುವ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದಂತಿರುವ ವ್ಯಕ್ತಿಗಳಿಗೆ ಈ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯುವುದರ ಮೂಲಕ ಅವರ ಬ್ಯಾಂಕ್ ಖಾತೆಗೆ 10,000 ಓವರ್ ಡ್ರಾಫ್ಟ್ ಹಣವನ್ನು ನೀಡಲು ನಿರ್ಧರಿಸಿದೆ. ಹೀಗೆ ಈ ಯೋಜನೆಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಅವರು ಸಹ ಈ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯಲು ಅವಕಾಶ ಕಲ್ಪಿಸಿಕೊಡಿ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯದಲ್ಲಿ ಮಳೆ ಅಭಾವ; ಈ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಆರಂಭ, ನಿಮ್ಮ ತಾಲೂಕುಗಳು ಲಿಸ್ಟ್‌ ನಲ್ಲಿ ಇವೆಯಾ ಚೆಕ್‌ ಮಾಡಿ

35 ಲಕ್ಷ ರೇಷನ್ ಕಾರ್ಡ್ ಗಳು ಬಂದ್: ಹೊಸ ರೂಲ್ಸ್ ಜಾರಿ, ಕಾರ್ಡ್ ಇದ್ದವರಿಗೂ ಆತಂಕ! ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್‌ ಡೀಟೇಲ್ಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments