Thursday, June 13, 2024
HomeInformationವಾಹನ ಖರೀದಿಸುವವರಿಗೆ ಶಾಕಿಂಗ್‌ ಸುದ್ದಿ; ದಿಢೀರನೆ ಹೊಸ ವಾಹನಗಳ ಬೆಲೆ ಏರಿಕೆ..! ಕಾರಣ ಏನು ಗೊತ್ತಾ?

ವಾಹನ ಖರೀದಿಸುವವರಿಗೆ ಶಾಕಿಂಗ್‌ ಸುದ್ದಿ; ದಿಢೀರನೆ ಹೊಸ ವಾಹನಗಳ ಬೆಲೆ ಏರಿಕೆ..! ಕಾರಣ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೊಸ ವಾಹನ ಖರೀದಿದಾರರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಡೀಸೆಲ್ ಎಂಜಿನ್ ವಾಹನಗಳ ಮೇಲೆ 10% ಹೆಚ್ಚುವರಿ ಜಿಎಸ್‌ಟಿ ವಿಧಿಸುವ ಪ್ರಸ್ತಾವನೆಯನ್ನು ಇಂದು ಸಂಜೆ ಹಣಕಾಸು ಸಚಿವರ ಮುಂದೆ ಇಡಲಾಗುವುದು ಎಂದು ಅವರು ಹೇಳಿದರು. ಇಂದು ನಡೆಯುತ್ತಿರುವ 63ನೇ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ವಾರ್ಷಿಕ ಸಮಾವೇಶದ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. 

Price Hike of New All Vehicles
Join WhatsApp Group Join Telegram Group

ಹೆಚ್ಚುವರಿ ಜಿಎಎಸ್ ಟಿಯನ್ನು ಮಾಲಿನ್ಯ ತೆರಿಗೆ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ನಿತಿನ್ ಗಡ್ಕರಿ ಅವರು ಡೀಸೆಲ್ ವಾಹನಗಳ ಉತ್ಪಾದನೆಯನ್ನು ಕಡಿಮೆ ಮಾಡುವಂತೆ ತಯಾರಕರಿಗೆ ಸಲಹೆ ನೀಡಿದರು. ಇದೇ ವೇಳೆ ನಮ್ಮ ದೇಶದಲ್ಲಿ ಸದುದ್ದೇಶದಿಂದ ತಂದಿರುವ ನಿಯಮಾವಳಿಗಳು ದುರ್ಬಳಕೆಯಾಗುತ್ತಿವೆ. ಪ್ರೋಟೋಕಾಲ್‌ನ ಭಾಗವಾಗಿ ವಿಐಪಿ ವಾಹನಗಳಿಗೆ ಸೈರನ್ ಇವುಗಳಲ್ಲಿ ಒಂದಾಗಿದೆ. ಸಚಿವರು ಮತ್ತು ಪ್ರಮುಖ ಅಧಿಕಾರಿಗಳು ಸೈರನ್ ಮೊಳಗಿಸುತ್ತಾ ವಾಹನಗಳಲ್ಲಿ ಹೋಗುತ್ತಿದ್ದರೆ, ಅವರಿಗಾಗಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುತ್ತಾರೆ.

ಇದನ್ನೂ ಸಹ ಓದಿ: ಚಂದ್ರಯಾನ ಸೂರ್ಯಯಾನ ಆಯ್ತು; ಈಗ ಮತ್ತೊಂದು ಯಾನವನ್ನು ಕೈಗೆತ್ತಿಕೊಂಡ ಭಾರತ

ಆದರೆ ಕೆಲವರು ಸೈರನ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಧ್ವನಿ ಮಾಲಿನ್ಯವೂ ಹೆಚ್ಚುತ್ತಿದೆ. ವಿಐಪಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಸೈರನ್ ಅನ್ನು ಕೊನೆಗೊಳಿಸುವ ಯೋಜನೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ. ಧ್ವನಿ ಮಾಲಿನ್ಯಕ್ಕೆ ಕಾರಣವಾಗುವ ಸೈರನ್‌ಗಳ ಬದಲಿಗೆ ಭಾರತೀಯ ಸಂಗೀತ ವಾದ್ಯಗಳಿಂದ ತಯಾರಿಸಿದ ಸಂಗೀತವನ್ನು ಪರಿಚಯಿಸುವ ಚಿಂತನೆ ಇದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಪುಣೆಯ ಚಾಂದಿನಿ ಚೌಕ್ ಫ್ಲೈಓವರ್ ಉದ್ಘಾಟನಾ ಸಮಾರಂಭದಲ್ಲಿ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡಿ.. ‘ಶಬ್ದ ಮಾಲಿನ್ಯ ನಿಯಂತ್ರಣ ಬಹಳ ಮುಖ್ಯ. ನನ್ನ ಅಧಿಕಾರಾವಧಿಯಲ್ಲಿ ವಿಐಪಿ ವಾಹನಗಳಿಗೆ ಕೆಂಪು ದೀಪ (ಬೀಕನ್) ನಿಷೇಧಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈಗ ವಿಐಪಿ ವಾಹನಗಳ ಸೈರನ್ ನಿಲ್ಲಿಸಲು ಯೋಚಿಸುತ್ತಿದ್ದೇನೆ. ಭಾರತೀಯ ಸಂಗೀತದಲ್ಲಿ ಕೊಳಲು, ತಬಲಾ ಮತ್ತು ಶಂಖ ಶಬ್ದಗಳೊಂದಿಗೆ ಸೈರನ್ ಮತ್ತು ಹಾರ್ನ್ ಧ್ವನಿಯನ್ನು ಬದಲಾಯಿಸುವ ವ್ಯವಸ್ಥೆಯನ್ನು ನಾವು ರಚಿಸುತ್ತಿದ್ದೇವೆ. ಜನರು ಶಬ್ದ ಮಾಲಿನ್ಯದಿಂದ ಮುಕ್ತಿ ಪಡೆಯಬೇಕೆಂದು ನಾವು ಬಯಸುತ್ತೇವೆ’ ಎಂದು ಹೇಳಿದರು. ಎಂದು ಎಎನ್‌ಐ ಹೇಳಿದೆ.

ಇತರೆ ವಿಷಯಗಳು:

ಭಾಗ್ಯಲಕ್ಷ್ಮಿ ಯೋಜನೆ : ರಾಜ್ಯ ಸರ್ಕಾರದಿಂದ 2 ಲಕ್ಷ ನೀಡಲಾಗುತ್ತಿದೆ ಕೂಡಲೇ ಅರ್ಜಿ ಹಾಕಿ

ನಾಳೆಯಿಂದ ಪೆಟ್ರೋಲ್-ಡೀಸೆಲ್‌ಗೆ ಹೊಸ ಬೆಲೆ.! ಇಂದೆ ಟ್ಯಾಂಕ್‌ ಫುಲ್‌ ಮಾಡಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments