ನಮಸ್ಕಾರ ಸ್ನೇಹಿತರೆ, 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಈಗಾಗಲೇ ಸರ್ಕಾರವು ತಮ್ಮ ಆಧಾರ್ ಕಾರ್ಡ್ ಅನ್ನು ತಪ್ಪದೇ ನವೀಕರಿಸಬೇಕೆಂದು ಆದೇಶವನ್ನು ಹೊರಡಿಸಿದೆ. ಒಂದು ವೇಳೆ ಹತ್ತು ವರ್ಷಗಳಿಗಿಂತ ಜಾಸ್ತಿ ದಿನಗಳು ಆಧಾರ್ ಕಾರ್ಡ್ ಮಾಡಿಸಿದ್ದರೆ ಕೂಡಲೇ ತಪ್ಪದೆ ಆಧಾರ್ ಕಾರ್ಡನ್ನು ನವೀಕರಿಸಿ. ಹಾಗಾದರೆ ಆಧಾರ್ ಕಾರ್ಡನ್ನು ನವೀಕರಿಸಲು ಕೊನೆ ದಿನಾಂಕ ಯಾವುದು ಎಂಬುದರ ಬಗ್ಗೆ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಆಧಾರ್ ಕಾರ್ಡ್ ನವೀಕರಿಸುವುದು :
ಈಗಾಗಲೇ ಸರ್ಕಾರವು 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನು ನವೀಕರಿಸಲು ಆದೇಶವನ್ನು ಹೊರಡಿಸಿದ್ದು, ನಿಮ್ಮ ಗುರುತಿನ ದಾಖಲೆಗಳನ್ನು ನೀಡುವುದರ ಮೂಲಕ ಡಾಕ್ಯುಮೆಂಟ್ ಅಪ್ಡೇಟ್ ಅನ್ನು ಆಧಾರ್ ಕಾರ್ಡ್ ಮಾಡಿಸಿ ಹತ್ತು ವರ್ಷವಾಗಿದ್ದಲ್ಲಿ ಈ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕಾಗುತ್ತದೆ. ನಿಮ್ಮ ಗುರುತಿನ ದಾಖಲೆಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಪ್ರತಿಯೊಬ್ಬರು ಸಹ ಆಧಾರ ಅಪ್ಡೇಟ್ ಮಾಡಿಸಿಕೊಳ್ಳಲೇಬೇಕು.
ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕ :
ಉಚಿತವಾಗಿ ಆಧಾರ್ ಕಾರ್ಡನ್ನು ನವೀಕರಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ ಎಂದು ಸರ್ಕಾರವು ತಿಳಿಸಿದೆ. ಆರಂಭಿಕವಾಗಿ ಸರ್ಕಾರವು ಜನರಿಗೆ ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಮಾಡಿಸಿಕೊಳ್ಳಲು ಉಚಿತವಾಗಿ ಅವಕಾಶ ನೀಡಿದ್ದು ಈ ಹಿಂದೆ ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಲು ಸೆಪ್ಟೆಂಬರ್ 14ರ ತನಕ ಅವಕಾಶ ನೀಡಿದ್ದು ಅವಧಿಯನ್ನು ಡಿಸೆಂಬರ್ 14ರವರೆಗೆ ಸರ್ಕಾರವು ವಿಸ್ತರಿಸಿದೆ. 10 ವರ್ಷಕ್ಕಿಂತ ಆಧಾರ್ ಕಾರ್ಡ್ ಹಳೆಯದಾಗಿದ್ದರೆ ಡಿಸೆಂಬರ್ 14ರ ಒಳಗಾಗಿ ತಪ್ಪದೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ.
ಇದನ್ನು ಓದಿ : ಉಚಿತ ಸಿಲೆಂಡರ್ ವಿತರಣೆ : ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಆಫರ್
ಆಧಾರ್ ಕಾರ್ಡ್ ಅಪ್ಲೈ ಮಾಡಿಸಲು ಬೇಕಾದ ದಾಖಲೆಗಳು :
ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ, ಪ್ರೂಫ್ ಆಫ್ ಐಡೆಂಟಿಟಿ ಡಾಕ್ಯುಮೆಂಟ್ ಹಾಗೂ ಪ್ರೂಫ್ ಆಫ್ ಅಡ್ರೆಸ್ ಡಾಕುಮೆಂಟ್ ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಿಸಬೇಕಾಗಿದ್ದು ನಿಮ್ಮ ಗುರುತಿಗಾಗಿ ಫೋಟೋ ಇರುವಂತಹ ಸರ್ಕಾರದ ಅಧಿಕೃತ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್ ಸ್ಕೂಲ್ ಮಾರ್ಕ್ಸ್ ಕಾರ್ಡ್ ಪ್ಯಾನ್ ಕಾರ್ಡ್ ಹೀಗೆ ಕೆಲವೊಂದು ದಾಖಲೆಗಳನ್ನು ಸೇರಿದಂತೆ ಪಾಸ್ಪೋರ್ಟ್ ನಂತರ ಕೆಲವೊಂದು ಅಗತ್ಯ ದಾಖಲೆಗಳನ್ನು ಆಧಾರ್ ಕಾರ್ಡ್ ನವೀಕರಿಸಿಕೊಳ್ಳಲು ನೀಡಬೇಕಾಗುತ್ತದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ವಿಧಾನ :
ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಅನ್ನು ಪ್ರತಿ 10 ವರ್ಷಗಳಿಗೊಮ್ಮೆ ಮಾಡಿಸಲೇ ಬೇಕಾಗಿದ್ದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಹತ್ತಿರದ ಆನ್ಲೈನ್ ಸೆಂಟರ್ ಗಳಲ್ಲಿ ಅಥವಾ ಆಧಾರ್ ಕೇಂದ್ರಕ್ಕೆ ಹೋಗಿ ಅಪ್ ಡೇಟ್ ಮಾಡಿಸಬೇಕಾಗುತ್ತದೆ. ಆಧಾರ್ ಅಪ್ಡೇಟ್ ಮಾಡಿಸಲು ಆಧಾರದ ಅಧಿಕೃತ ವೆಬ್ಸೈಟ್ ಎಂದರೆ : https://myaadhaar.uidai.gov.in ಈ ವೆಬ್ಸೈಟ್ನ ಮೂಲಕ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸುವುದು ಅಗತ್ಯವಾಗಿದೆ.
ಹೀಗೆ ಈ ಲೇಖನದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸುವುದರ ಬಗ್ಗೆ ತಿಳಿಸಲಾಗಿದ್ದು ಅಲ್ಲದೆ ಉಚಿತವಾಗಿ ನವೀಕರಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಲಾಗುತ್ತಿದೆ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರಲ್ಲಿ ಯಾರಾದರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕಾಯುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಡಿಸೆಂಬರ್ 14ರ ಒಳಗಾಗಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವಂತೆ ತಿಳಿಸಿ ಧನ್ಯವಾದಗಳು
ಇತರೆ ವಿಷಯಗಳು :
ಭಾರತದಲ್ಲಿ ಚಿನ್ನದ ಬೆಲೆ 2024 ರಲ್ಲೀ ಎಷ್ಟಾಗುತ್ತದೆ : ಇಲ್ಲಿದೆ ಸಂಪೂರ್ಣ ಮಾಹಿತಿ
113 ಬರಪೀಡಿತ ತಾಲೂಕುಗಳಿಗೆ ಪರಿಹಾರ ಸಿಗುತ್ತಾ? ಸರ್ಕಾರದಿಂದ ರೈತರಿಗೆ ಲಾಭ ಏನು ..?