Friday, July 26, 2024
HomeNewsಕೆಲಸಗಾರರ ನಿವೃತ್ತಿ ಅವಧಿಯಲ್ಲಿ ಬಂತು ಹೊಸ ನಿಯಮ ಏನಿರಬಹುದು ಹೊಸ ರೂಲ್ಸ್..?

ಕೆಲಸಗಾರರ ನಿವೃತ್ತಿ ಅವಧಿಯಲ್ಲಿ ಬಂತು ಹೊಸ ನಿಯಮ ಏನಿರಬಹುದು ಹೊಸ ರೂಲ್ಸ್..?

ನಮಸ್ಕಾರ ಸ್ನೇಹಿತರೆ, ಸರ್ಕಾರವು ಈಗ ಸಾರ್ವಜನಿಕ ಬ್ಯಾಂಕು ವಲಯಗಳಲ್ಲಿ ಕೆಲಸ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ. ಇನ್ನು ಹೆಚ್ಚು ಸಮಯ ಕೆಲಸವನ್ನು ಮಾಡಬಹುದು ಎಂದು ಪಿ ಎಸ್ ಡಿ ಯಲ್ಲಿ ಕೆಲಸದಲ್ಲಿ ತೊಡಗಿರುವ ಜನರಿಗೆ ಸರ್ಕಾರ ಗಮನಿಸಿದೆ. ಹಾಗಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಅಂದರೆ ಎಲ್ಐಸಿ ಹಾಗೂ ಎಸ್ ಬಿ ಐ ನಂತಹ ಬ್ಯಾಂಕ್ ಗಳಲ್ಲಿ ಉನ್ನತ ಅಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವವರು ನಿವೃತ್ತಿಯನ್ನು 62 ವರ್ಷಕ್ಕೆ ಹೊಂದುತ್ತಿದ್ದರು. ಆದರೆ ಇದೀಗ ಅವರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಮುಂದೂಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Big change in government employees
Big change in government employees
Join WhatsApp Group Join Telegram Group

ನಿವೃತ್ತಿ ವಯಸ್ಸು ಹೆಚ್ಚಳ :

ನಿವೃತ್ತಿ ವಯಸ್ಸು ಹೆಚ್ಚಳದ ಬಗ್ಗೆ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಹಂಚಿಕೊಂಡಿದ್ದು ಪಿ ಎಸ್ ಬಿಗಳಲ್ಲಿ ಅಧಿಕಾರಿಗಳ ಅಧಿಕಾರ ಅವಧಿಯನ್ನು ವಿಸ್ತರಿಸಲು ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 62 ವರ್ಷದಿಂದ 65 ವರ್ಷಕ್ಕೆ ಿವೃತ್ತಿ ವಯಸ್ಸನ್ನು ಹೆಚ್ಚಿಸುವಂತೆ ಎಲ್ಐಸಿ ಹಾಗೂ ಎಸ್‌ಬಿಐ ಅಧ್ಯಕ್ಷರು ಕೋರಲಾಗಿದೆ. ನಿವೃತ್ತಿ ವಯಸ್ಸನ್ನು ಹಿರಿಯ ಹುದ್ದೆಗಳಲ್ಲಿ ಇರುವ ಅಧಿಕಾರಿಗಳ ವಯಸ್ಸು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 62 ರಿಂದ 65 ವರ್ಷಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮುಖ್ಯಸ್ಥರ ಸ್ಥಾನದಲ್ಲಿ ನಿರ್ವಹಿಸುತ್ತಿರುವವರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಿಳಿದುಬರುತ್ತದೆ. ಅಂದರೆ ಅಧಿಕಾರಿಗಳಿಗೆ ಹೆಚ್ಚುವರಿ ಸೇವೆ ನಡೆಸಲು ಒಂದರಿಂದ ಎರಡು ವರ್ಷಗಳ ಕಾಲ ಅವಕಾಶ ನೀಡಲಾಗುತ್ತದೆ.

ಸದ್ಯದಲ್ಲಿಯೇ ಜಾರಿಯಾಗದಲಿದೆ :

ಸದ್ಯದಲ್ಲಿಯೇ ಈ ನಿಯಮ ಜಾರಿಯಾದರೆ ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿರುವ ದಿನೇಶ್ ಕಾರ ಅವರು ಇನ್ನು ಎರಡು ವರ್ಷಗಳ ಕಾಲ ಅಧಿಕಾರವನ್ನು ನಡೆಸಬಹುದಾಗಿದೆ. ಅಂದರೆ ಅವರು ಆಗಸ್ಟ್ 23ರಲ್ಲಿ 63ನೇ ವಯಸ್ಸಿಗೆ ಕಾಲಿಡುತ್ತಾರೆ ಹಾಗಾಗಿ ಅವರು ನಿವೃತ್ತಿಯನ್ನು ತೆಗೆದುಕೊಳ್ಳಬೇಕು ಆದರೆ ಈ ಹೊಸ ನಿಯಮ ಏನಾದರೂ ಜಾರಿಗೆ ಬಂದರೆ ಅವರು ತಮ್ಮ ಕೆಲಸವನ್ನು ಎರಡು ವರ್ಷಗಳ ಕಾಲ ವಿಸ್ತರಿಸಿಕೊಂಡು 65ನೇ ವರ್ಷದವರೆಗೆ ಸೇವೆಯನ್ನು ಸಲ್ಲಿಸಲು ಅವಕಾಶ ನೀಡಿದಂತಾಗುತ್ತದೆ. ಅದರಂತೆ ಈಗ ಪ್ರಸ್ತುತ ಎಲ್ಐಸಿ ಅಧ್ಯಕ್ಷ ಸಿದ್ಧಾರ್ಥ್ ಮೋಹನ್ ಅವರ ಅಧಿಕಾರ ಅವಧಿ 2024 ಜೂನ್ 29ಕ್ಕೆ ಮುಗಿಯಲಿದೆ ಇಲ್ಲಿಯೂ ನಿವೃತ್ತಿಯ ವಯಸ್ಸು ಹೆಚ್ಚಿಗೆ ಯಾದರೆ ಇನ್ನು ಸ್ವಲ್ಪ ಸಮಯದವರೆಗೆ ತಮ್ಮ ಕೆಲಸವನ್ನು ಎಲ್ಐಸಿ ಅಧ್ಯಕ್ಷರು ಮುಂದುವರಿಸಲಿದ್ದಾರೆ.

ಇದನ್ನು ಓದಿ : ಎಂದಾದರೂ ಯೋಚಿಸಿದ್ದೀರಾ ಬಾಹ್ಯಾಕಾಶಕ್ಕೆ ಕೊನೆ ಎಲ್ಲಿ ಎಂದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ವಯಸ್ಸು ಹೆಚ್ಚಳ ಮಾಡಲು ಕಾರಣ :

ಸರ್ಕಾರವು ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣವೇನೆಂದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿರ್ಧಾರಗಳಲ್ಲಿ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ ಈ ರೀತಿ ನಿವೃತ್ತಿಯ ಅವಧಿಯನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಬಹುದಾಗಿದೆ. ಇದರಿಂದ ಸುಲಭವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ. ಬಹುಶಹ ತಿಂಗಳ ವಿಸ್ತರಣೆ ಎಸ್‌ಬಿಐ ಅಧ್ಯಕ್ಷ ದಿನೇಶ್ ಕಾರ ಅವರಿಗೆ ಸಿಗಬಹುದು. ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಿಯಮದ ಪ್ರಕಾರ 2021 ರಲ್ಲಿ 1960ರ ತಿದ್ದುಪಡಿ ಮಾಡಲಾಗಿತ್ತು. ಇದಾದ ನಂತರ 62 ವರ್ಷಕ್ಕೆ ಎಲ್ಐಸಿ ಅಧ್ಯಕ್ಷರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲಾಗಿತ್ತು ಈ ವಯಸ್ಸು ಇದೀಗ 65 ವರ್ಷಗಳವರೆಗೆ ಏರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೀಗೆ ಸರ್ಕಾರವು ಸಾರ್ವಜನಿಕ ಬ್ಯಾಂಕ್ ವಲಯಗಳಲ್ಲಿ ಕೆಲಸ ಮಾಡುವವರಿಗೆ ನಿವೃತ್ತಿಯ ವಯಸ್ಸನ್ನು ಹೆಚ್ಚಿಗೆ ಮಾಡಿದ್ದು ಇದರಿಂದ ಅವರು ಎರಡು ವರ್ಷಗಳ ಕಾಲ ಹೆಚ್ಚಿನ ಕೆಲಸವನ್ನು ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಬ್ಯಾಂಕಿಂಗ್ ವಲಯಗಳಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರ ವಿಷಯಗಳು :

Viral News: ಮನುಷ್ಯ ಸತ್ತ ನಂತರ ನಿಜಕ್ಕೂ ಏನಾಗುತ್ತೆ ಗೊತ್ತಾ..? ಅಧ್ಯಯನದಿಂದ ಬಯಲಾಯ್ತು ಭಯಾನಕ ರಹಸ್ಯ!

Blue Moon: ನಾಳೆ ಆಗಸದಲ್ಲಿ ಕಾಣಲಿದೆ ಸೂಪರ್‌ ಬ್ಲೂ ಮೂನ್! ಆಕಾಶದಲ್ಲಿ ಅದ್ಭುತ ವಿಸ್ಮಯ, ನೀವು ಕೂಡ ಕಣ್ತುಂಬಿಕೊಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments