Friday, July 26, 2024
HomeTrending NewsBreaking News: ಬಸ್‌ನಲ್ಲಿ ಹೋಗುವವರಿಗೆ ಬಂತು ಕಂಟಕ, ಬಸ್‌ ಟಿಕೆಟ್‌ ದರ ಹೆಚ್ಚಳ! ಪ್ರಯಾಣಿಕರಿಗೆ ಶಾಕ್‌...

Breaking News: ಬಸ್‌ನಲ್ಲಿ ಹೋಗುವವರಿಗೆ ಬಂತು ಕಂಟಕ, ಬಸ್‌ ಟಿಕೆಟ್‌ ದರ ಹೆಚ್ಚಳ! ಪ್ರಯಾಣಿಕರಿಗೆ ಶಾಕ್‌ ಕೊಟ್ಟ ಸರ್ಕಾರ, ಊರಿನತ್ತ ಪ್ರಯಾಣಿಸಲು ಜನರ ಹಿಂದೇಟು

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಇದೀಗ ಶಕ್ತಿ ಯೋಜನೆಯ ಪ್ರಭಾವದಿಂದಾಗಿ ಖಾಸಗಿ ಬಸ್‌ಗಳನ್ನು ಹತ್ತಲು ಪ್ರಯಾಣಿಕರು ಮನಸು ಮಾಡುತ್ತಿಲ್ಲ. ಆದರೆ ಈ ಆಗಸ್ಟ್‌ ತಿಂಗಳಲ್ಲಿ ಶನಿವಾರದಿಂದ ಸಾಲು ಸಾಲು ರಜೆಗಳು ಆರಂಭವಾಗ್ತಿವೆ. ನಾಲ್ಕು ದಿನದ ರಜೆ ಕಳೆಯಲು, ಊರಿಗೆ ಹೋಗೋ ಪ್ಲಾನ್ ಮಾಡಿದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಎನ್ನಲಾಗುತ್ತಿದೆ. ಈ ಸಂದರ್ಭವನ್ನೇ ಕಾಯುತ್ತಿದ್ದಂತಹ ಎಲ್ಲ ಬಸ್‌ನವರು ಇದೀಗ ಬಸ್ಸಿನ ಟಿಕೆಟ್‌ ದರವನ್ನು ಹೆಚ್ಚಳ ಮಾಡಿದ್ದಾರೆ. ಎಷ್ಟು ಹೆಚ್ಚಳ ಮಾಡಲಾಗಿದೆ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ.

bus ticket price increase
Join WhatsApp Group Join Telegram Group

ಆಗಸ್ಟ್ 15ರ ಹಿನ್ನೆಲೆ ನಾಲ್ಕು ದಿನ ಸಾಲು ಸಾಲು ರಜೆಗಳು ಬರುತ್ತಿವೆ. ಶನಿವಾರ, ಭಾನುವಾರ, ಮಂಗಳವಾರ ಆಗಸ್ಟ್ 15ರ ರಜೆ, ಸೋಮವಾರ ಸೇರಿ ನಾಲ್ಕು ದಿನ ರಜೆ ಸಿಗಲಿದೆ. ಹೀಗಾಗಿ ಬೆಂಗಳೂರಿನ ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಕೆಎಸ್‍ಆರ್ ಟಿಸಿ ಬಸ್‍ಗಳಲ್ಲಿ ಶಕ್ತಿ ಯೋಜನೆಯಿಂದ ಬಸ್‍ಗಳು ರಶ್ ಆಗ್ತಿವೆ. ಹೀಗಾಗಿ ಜನ ಖಾಸಗಿ ಬಸ್‍ಗಳತ್ತ ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಹೆಚ್ಚಿಸಿದ್ದಾರೆ. ಇಂದು ರಾತ್ರಿ ಹಾಗೂ ಶನಿವಾರ ರಾತ್ರಿ ಹೊರಡುವ ಖಾಸಗಿ ಬಸ್‍ಗಳ ದರವನ್ನು ದುಪ್ಪಟ್ಟು ಮಾಡಿದೆ. ಟಿಕೆಟ್ ದರ ಒನ್ ಟು ಡಬ್ಬಲ್ ಮಾಡಿದ್ದಕ್ಕೆ ಪ್ರಯಾಣಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚು ಹೆಚ್ಚು ಬಸ್ ಟಿಕೆಟ್ ಬುಕ್ಕಿಂಗ್ ಆಗ್ತಿದ್ದಂತೆ ಏಕಾಏಕಿ ಟಿಕೆಟ್ ದರವನ್ನು ಖಾಸಗಿ ಬಸ್ ಮಾಲೀಕರು ಏರಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಆಪ್‍ನಲ್ಲಿ ಒನ್ ಟು ಡಬಲ್ ರೇಟ್ ತೋರಿಸುತ್ತಿವೆ. 

ರಾತ್ರಿಯ ಬಸ್ ಟಿಕೆಟ್ ದರ ಎಷ್ಟಿದೆ?

  • * ಬೆಂಗಳೂರು TO ಶಿವಮೊಗ್ಗ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 450 ರೂ. ನಿಂದ 550 ರೂ. – ಇಂದಿನ ಟಿಕೆಟ್ ದರ 1,200 ರೂ.
    * ಬೆಂಗಳೂರು TO ಹುಬ್ಬಳ್ಳಿ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 700 ರೂ. -900 ರೂ.- ಇಂದಿನ ಟಿಕೆಟ್ ದರ 1,600 ರೂ.
    * ಬೆಂಗಳೂರು TO ಮಂಗಳೂರು: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 850 ರೂ. – 900 ರೂ. – ಇಂದಿನ ಟಿಕೆಟ್ ದರ 1,400 ರೂ. – 2,100 ರೂ.
    * ಬೆಂಗಳೂರು TO ಉಡುಪಿ (ಎಸಿ ಬಸ್): ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 1000 ರೂ. – 1200 ರೂ.- ಇಂದಿನ ಟಿಕೆಟ್ ದರ 2100 ರೂ. – 3500 ರೂ.
  • * ಬೆಂಗಳೂರು TO ಧಾರವಾಡ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 800 ರೂ. – 1000 ರೂ. – ಇಂದಿನ ಟಿಕೆಟ್ ದರ 1,300 ರೂ. – 1,600 ರೂ.
    * ಬೆಂಗಳೂರು TO ಬೆಳಗಾವಿ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 750 ರೂ. – 1100 ರೂ. – ಇಂದಿನ ಟಿಕೆಟ್ ದರ 1,200 ರೂ. – 1,900 ರೂ.
    * ಬೆಂಗಳೂರು TO ದಾವಣಗೆರೆ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 500 ರೂ. – 700 ರೂ. – ಇಂದಿನ ಟಿಕೆಟ್ ದರ 750 ರೂ. – 1200 ರೂ.
    * ಬೆಂಗಳೂರು TO ಚಿಕ್ಕಮಗಳೂರು: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 650 ರೂ. – 800 ರೂ.- ಇಂದಿನ ಟಿಕೆಟ್ ದರ 1500 ರೂ.
    * ಬೆಂಗಳೂರು TO ಹಾಸನ: ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 750 ರೂ. – 950 ರೂ.- ಇಂದಿನ ಟಿಕೆಟ್ ದರ 1,300 ರೂ. – 1,800 ರೂ.

ಒಟ್ಟಿನಲ್ಲಿ ಈ ಖಾಸಗಿ ಬಸ್‍ಗಳ ಹಗಲು ದರೋಡೆಗೆ ಪ್ರಯಾಣಿಕರು ರೋಸಿಹೋಗಿದ್ದು, ಊರುಗಳಿಗೆ ಹೋಗುವ ಪ್ಲಾನ್ ಕ್ಯಾನ್ಸಲ್ ಮಾಡಿಕೊಳ್ಳಬೇಕಾ ಅಥವಾ ದುಪ್ಪಟ್ಟು ಹಣ ಕೊಟ್ಟು ಹೋಗಬೇಕಾ ಅನ್ನೋ ಗೊಂದಲದಲ್ಲಿದ್ದಾರೆ.

ಇತರೆ ವಿಷಯಗಳು:

ರಾಜ್ಯದ ಮಹಿಳೆಯರಿಗಾಗಿ ಫ್ರೀ ಬಸ್: ಪುರುಷರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್! ಸರ್ಕಾರದ ಮಹತ್ವದ ನಿರ್ಧಾರ

Pan card New Update: ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದಿಯೇ ಎಂದು ತಿಳಿಯುವುದು ಈಗ ಇನ್ನೂ ಸುಲಭ: ಕೇವಲ ಒಂದು SMS ಕೇವಲ 2 ಸೆಕೆಂಡ್! ಸಂಪೂರ್ಣ ಮಾಹಿತಿಗಾಗಿ…

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments