Thursday, July 25, 2024
HomeTrending Newsಸಾವನ್ನೇ ದೂರವಿಟ್ಟ ಊರು: ಇಲ್ಲಿ ಯಾರು ಸಾಯೋದೇ ಇಲ್ಲಾ..! ಇಲ್ಲಿ ಯಮನಿಗೆ ನೋ ಎಂಟ್ರಿ..! ಆ...

ಸಾವನ್ನೇ ದೂರವಿಟ್ಟ ಊರು: ಇಲ್ಲಿ ಯಾರು ಸಾಯೋದೇ ಇಲ್ಲಾ..! ಇಲ್ಲಿ ಯಮನಿಗೆ ನೋ ಎಂಟ್ರಿ..! ಆ ಚಿರಂಜೀವಿ ಊರು ಯಾವುದು ಗೊತ್ತಾ..?

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ನಮ್ಮ ಭೂಮಿ ಎಂಬುದು ಸಾಕಷ್ಟು ವಿಚಿತ್ರ ವಿಸ್ಮಯಗಳ ಆಗರ. ಇಲ್ಲಿನ ರಹಸ್ಯಗಳನ್ನು ಸಂಪೂರ್ಣವಾಗಿ ತಿಳಿಯಲು ಯಾರಿಗೂ ಕೂಡ ಸಾಧ್ಯವಾಗಿಲ್ಲ. ಅಂತಹದೇ ಒಂದು ವಿಸ್ಮಯಕಾರಿ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ. ಆ ನೆಲದಲ್ಲಿ ಯಾರನ್ನು ಹೂಳಲು ಇಲ್ಲ ಹಾಗೂ ಸುಡಲೂ ಇಲ್ಲ. ಅಲ್ಲಿಗೆ ಯಮಧರ್ಮನಿಗೆ ಪ್ರವೇಶ ಕೂಡ ಇಲ್ಲ. ಎಂದು ಜನ ಮಾತನಾಡಿಕೊಳ್ಳುತ್ತಾರೆ. ಹಾಗಾದ್ರೆ ಯಾವುದ ಆ ಸಾವಿಲ್ಲದ ಊರು? ಅಲ್ಲಿರುವವರೆಲ್ಲಾ ಚಿರಂಜೀವಿಗಳಿದ್ದಾರೆ ಅಂತಹ ಒಂದು ಊರು ಇರಲು ಸಾಧ್ಯಾನಾ ಏನು ಆ ಊರಿನ ಕಥೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಡಲಾಗಿದೆ. ಕೊನೆಯವರೆಗೂ ಓದಿ.

dead body
Join WhatsApp Group Join Telegram Group

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರು ಕೂಡ ಸಾಯಲೇಬೇಕು. ಪ್ರತಿಯೊಂದು ಆರಂಭಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ. ಪ್ರತಿ ಹುಟ್ಟಿಗೂ ಓಂದು ಸಾವಿದೆ. ಆದರೆ ಇಲ್ಲೊಂದು ಊರಿದೆ. ಆ ಊರಿನಲ್ಲಿ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ.

1950ರ ನಂತರ ಇಲ್ಲಿಯವರೆಗೆ ಇಡೀ ಊರು ಸಾವನ್ನೇ ಕಂಡಿಲ್ಲ. ಪ್ರಕೃತಿಯಲ್ಲಿ ನಮಗೆ ಉತ್ತರ ಸಿಗದ ಹಾಗೂ ನಮ್ಮ ಕುತೂಹಲವನ್ನು ತಣಿಸದ ಸಾಕಷ್ಟು ವಿಸ್ಮಯಗಳಿವೆ. ಇಲ್ಲಿನ ನದಿ, ಸರೋವರ, ಸಾಗರ, ಸಮುದ್ರಗಳು, ಕಾಡು , ಬೆಟ್ಟ, ಗುಡ್ಡ, ಗುಹೆ, ಸುರಂಗ, ರಸ್ತೆ ಹೀಗೆ ಸಾಕಷ್ಟು ರಹಸ್ಯಗಳು ಇವೆ. ಈಗ ಈ ಸಾಲಿನಲ್ಲಿ ಆ ಒಂದು ಊರು ಸಹ ಸೇರಿಕೊಳ್ಳುತ್ತದೆ. 1918ರಲ್ಲಿ ಸ್ಪ್ಯಾನಿಷ್‌ ಫ್ಲ್ಯೂ ಬಂದ ಸಂದರ್ಭದಲ್ಲಿ ಅಲ್ಲಿ ಒಂದಿಷ್ಟು ಸಾವುಗಳು ಸಂಂಭವಿಸಿರುವುದು ಬಿಟ್ಟರೆ ಆ ಊರಿನಲ್ಲಿ ಇನ್ಯಾವುದೇ ಸಾವು ಕೂಡ ಸಂಭವಿಸಿಲ್ಲ. ಅಂದಹಾಗೆ ಆ ಊರಿನ ಹೆಸರು ಲಾಂಗ್‌ ಇಯರ್‌ ಬೈನ್.‌

ಈ ಲಾಂಗ್‌ ಇಯರ್‌ ಬೈನ್‌ ಊರು ಇರುವುದು ನಾರ್ವೆ ದೇಶದಲ್ಲಿ. ಅಲ್ಲಿನ ಸ್ವಾಲರ್ಬರ್ಡ್‌ ದ್ವೀಪದಲ್ಲಿನ ಆಡಳಿತಾತ್ಮಕ ನಗರ ಲಾಂಗ್‌ ಇಯರ್‌ ಬೈನ್‌ ಆಗಿದೆ. ಅಲ್ಲಿ 2000 ಕ್ಕೂ ಅಧಿಕ ಮಂದಿ ವಾಸ ಮಾಡುತ್ತಾರೆ. ಲಾಂಗ್‌ ಇಯರ್‌ ವ್ಯಾಲಿಯ ಎಡಭಾಗದಲ್ಲಿರುವ ಈ ನಗರ 1926 ರವರೆಗೆ ಲಾಂಗ್‌ ಇಯರ್‌ ಸಿಟಿಯೆಂದೇ ಪ್ರಸಿದ್ದಿಯನ್ನು ಪಡೆದಿತ್ತು. ಈ ಪ್ರದೇಶವನ್ನು ಮೊಟ್ಟ ಮೊದಲ ಬಾರಿಗೆ ಗುರುತಿಸಿದ ವಿದೇಶಿ ಪ್ರಜೆ ಅಮೆರಿಕ ಮೂಲದ ಜಾನ್ಡ್ರೋ ಲಾಂಗಿಯಾ. ಅಷ್ಟೇ ಅಲ್ಲ ಅವನೇ ಇಲ್ಲೊಂದು ನಗರವನ್ನು ನಿರ್ಮಾಣ ಮಾಡಿದ ಹಾಗಾಗಿ ಅವನ ಹೆಸರನ್ನೇ ಈ ನಗರಕ್ಕೆ ಇಡಲಾಯಿತು.

ಈ ಪ್ರದೇಶದಲ್ಲಿ ಒಂದು ಕಾಲದಲ್ಲಿ ಕೋಲ್‌ ಮೈನಿಂಗ್‌ ನಡೆಯುತ್ತಿತ್ತು. ಅಲ್ಲಿ 2 ನೇ ಮಹಾಯುದ್ದದವರೆಗೆ ಗಣಿಗಾರಿಕೆ ನಡೆಯುತ್ತಲೇ ಇತ್ತು. ಆ ಯುದ್ದದ ಸಂದರ್ಭದಲ್ಲಿ ಜರ್ಮನಿಯ ನೌಕಾದಳ ಈ ನಗರವನ್ನು ಸಂಪೂರ್ಣವಾಗಿ ನಾಶ ಮಾಡಿತು. ಮಹಾಯುದ್ದ ಕೊನೆಗೊಂಡ ನಂತರ ಪುನಃ ಈ ನಗರವನ್ನು ಕಟ್ಟಲಾಯಿತು. 1968ರವರೆಗೆ ಇಲ್ಲಿ ಮೈನಿಂಗ್‌ ಮುಂದುವರೆಸಲಾಯಿತು. ಇದನ್ನು ಮೈನಿಂಗ್‌ ಟೌನ್‌ ಎಂದು ಕರೆಯಲಾಯಿತು. ಇಲ್ಲಿ ವಿಶ್ವವಿದ್ಯಾಲಯ, ಸ್ಕೂಲು, ಶೋರೂಂ, ಮಾರುಕಟ್ಟೆ, ರೆಸ್ಟೋರೆಂಟ್, ಕಮರ್ಷಿಯಲ್‌ ಏರ್ಪೋರ್ಟ್‌, ಬಾರ್‌, ಎಲ್ಲವೂ ಕೂಡ ಇದೆ. ಈ ನಗರಕ್ಕೆ ಭೇಟಿ ಕೊಡಲು, ಹಾಗೂ ಕೆಲಸ ಮಾಡಲು ಯಾವುದೇ ವೀಸಾ ಬೇಕಾಗಿಲ್ಲ. ಆದರೆ ಇಲ್ಲಿ ಶಾಶ್ವತವಾಗಿ ಉಳಿಯುವಂತೆ ಇಲ್ಲ.

ಮುಖ್ಯಮಂತ್ರಿ ಸಾಗರೋತ್ತರ ವಿದ್ಯಾರ್ಥಿವೇತನ: ಸರ್ಕಾರದಿಂದ ಸಿಗುತ್ತೆ 20 ಲಕ್ಷ; ಆನ್‌ಲೈನ್‌ನಲ್ಲಿ ಹೀಗೆ ಅರ್ಜಿ ಸಲ್ಲಿಸಿ

ಒಂದು ವೇಳೆ ಇಲ್ಲಿ ಬಂದವರಿಗೆ ಹಾಗೂ ಅಲ್ಲಿ ಇದ್ದವರಿಗೆ ಹುಷಾರಿಲ್ಲದಿದ್ದರೆ ನಾರ್ವೆಯ ಮುಖ್ಯಭೂಮಿಗೆ ಶಿಫ್ಟ್‌ ಮಾಡಲಾಗುತ್ತದೆ. ಇಡೀ ದ್ವೀಪದಲ್ಲಿ ಹೆರಿಗೆ ಆಸ್ಪತ್ರೆಗಳು ಹಾಗೂ ವಾರ್ಡ್ ಗಳು ಇಲ್ಲವೇ ಇಲ್ಲ. ಹೆರಿಗೆಗೆ ಕೆಲವೇ ವಾರಗಳು ಇರುವಾಗಲೇ ನಾರ್ವೆಯ ಮುಖ್ಯ ಲ್ಯಾಂಡ್‌ ಗೆ ಕರೆದೊಯ್ಯಲಾಗುತ್ತದೆ. ಹಾಗಾಗೀ ಇದೊಂದು ಹುಟ್ಟು ಹಾಗೂ ಸಾವು ಇಲ್ಲದ ಊರಾಗಿದೆ.

ಸಾವು ಯಾರಿಗೂ ಕೂಡ ಹೇಳಿ ಕೇಳಿ ಬರುವುದಿಲ್ಲ . ಆದರೆ ಅಲ್ಲಿನ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಲಾಂಗ್‌ ಇಯರ್‌ ಬೈನ್‌ ನಲ್ಲಿ ಒಂದು ನಿಯಮವಿದೆ ಅಲ್ಲಿ ಯಾರು ಹುಟ್ಟುವ ಹಾಗೂ ಇಲ್ಲ. ಸಾಯುವ ಹಾಗೂ ಇಲ್ಲ. ಅಲ್ಲಿ ಈ ರೀತಿಯ ವಿಚಿತ್ರ ನಿಯಮಗಳನ್ನು ಜಾರಿಗೆ ತರಲು ಕಾರಣ 1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್‌ ಫ್ಯೂ ಜ್ವರ ಸುಮಾರು 11 ಮಂದಿಯ ಜೀವ ತೆಗೆದುಕೊಂಡಿತ್ತು. ಅವರನ್ನು ಮಣ್ಣು ಮಾಡಲಾಯಿತು. ಹಲವಾರು ವರ್ಷಗಳ ನಂತರ ಅಲ್ಲಿ ಹೂತಿಟ್ಟ ಶವಗಳನ್ನು ತೆಗೆಯಬೇಕಾಗಿ ಬಂತು. ಒಂದು ವಿಸ್ಮಯ ಎದುರಾಯಿತು. ಆ ಶವಗಳನ್ನು ಹೂಳುವಾಗ ಹೇಗಿದ್ದವೋ ಹಾಗೆ ಇದ್ದವು. ಕೊಳೆತು ಹೋಗಿರಲಿಲ್ಲ. ಆ ಶವಗಳನ್ನು ಪರಿಶೀಲಿಸಿದೆ ವೈದ್ಯರಿಗೆ ಅವರ ಸಾವಿಗೆ ಕಾರಣವಾದ ವೈರಾಣು ಸಹ ಜೀವಂತವಾಗಿತ್ತು. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡಿತು.

ಇದೆಲ್ಲದಕ್ಕೆ ಕಾರಣವೇನೆಂದು ತಿಳಿಯಲು ಸರ್ಕಾರ ಮುಂದದಾಗ ಅಲ್ಲಿ ಶವಗಳು ಕೊಳೆತು ಮಣ್ಣಿಗೆ ಸೇರುವುದಿಲ್ಲ. ಹಾಗಾಗಿ ಅಲ್ಲಿ ಸಾಯುವುದನ್ನೇ ಬ್ಯಾನ್‌ ಮಾಡಲಾಯಿತು. ಹೀಗಾಗಿ ಲಾಂಗ್‌ ಇಯರ್‌ ಬೈನ್‌ ಹುಟ್ಟು ಸಾವು ಇಲ್ಲದ ನಗರವಾಗಿದೆ. 1918ರಲ್ಲಿ ಹೂತಿಟ್ಟ ಶವಗಳು 1998ರಲ್ಲಿಯೂ ಕೂಡ ಕೊಳೆಯದೇ ಹಾಗೇ ಇವೆ. 80 ವರ್ಷಗಳ ನಂತರ ಶವ ಕೊಳೆಯದೆ ಹಾಗೂ ವೈರಾಣು ಸಹ ಜೀವಂತವಾಗಿರುವುದು ಕಂಡು ಬಂದಿದೆ.

ಈ ವೈಪರೀತ್ಯಕ್ಕೆ ಕಾರಣ ಅಲ್ಲಿನ ಹವಾಮಾನ.‌ ಉತ್ತರ ಧ್ರುವಕ್ಕೆ ತೀರ ಹತ್ತಿರದಲ್ಲಿರುವ ಈ ಲಾಂಗ್‌ ಇಯರ್‌ ಬೈನ್‌ ಶೀತಲ ವಾತರವರಣವನ್ನು ಹೊಂದಿದೆ. ಇಲ್ಲಿ ಸಾಮಾನ್ಯ ಉಷ್ಣಾಂಶ – ಡಿಗ್ರಿಯಲ್ಲಿರುತ್ತದೆ. ಹೆಚ್ಚೆಂದರೆ ಇಲ್ಲಿ 4 ಡಿಗ್ರಿಗೆ ಏರಿಕೆಯಾಗುತ್ತದೆ. ಇಲ್ಲಿ ಇದೂವರೆಗೆ ಹೆಚ್ಚಿನ ಅಧಿಕ ತಾಪಮಾನವೆಂದರೆ 21.7 ಸೆಲ್ಸಿಯಸ್ ಅತೀ ಕಡಿಮೆ ತಾಪಮಾನವೆಂದರೆ -46.3 ಡಿಗ್ರಿ ಸೆಲ್ಸಿಯಸ್‌. ಹೀಗೆ ಕಡಿಮೆ ತಾಪಮಾನ ಹೊಂದಿರುವ ಈ ಮಣ್ಣಿಗೆ ಪರಮಪಾಸ್ಠ್‌ ಗುಣ ಇದೆ. ಇಲ್ಲಿನ ಮಣ್ಣಿನ ಒಳ ಪದರ ಸದಾ ಶೀತಲವಾಗಿರುತ್ತದೆ. ಹೀಗಾಗಿ ಅಲ್ಲಿನ ಶವಗಳು ಮಣ್ಣಿನಲ್ಲಿ ಕೊಳೆಯುವುದಿಲ್ಲ.

ಇತರೆ ವಿಷಯಗಳು:

ಗೃಹಲಕ್ಷ್ಮಿಗೆ ಸಿಕ್ತು ಭರ್ಜರಿ ಚಾಲನೆ.! ಝಣ ಝಣ ಕಾಂಚಾಣ ಜಮೆಯಾಯ್ತು ಖಾತೆಗೆ.! ಹಣ ಬಂದಿಲ್ಲದವರು ಏನು ಮಾಡಬೇಕು?

ಕೆಲಸಗಾರರ ನಿವೃತ್ತಿ ಅವಧಿಯಲ್ಲಿ ಬಂತು ಹೊಸ ನಿಯಮ ಏನಿರಬಹುದು ಹೊಸ ರೂಲ್ಸ್..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments