Thursday, July 25, 2024
HomeNewsಮತ್ತೆ ವರುಣನ ಆರ್ಭಟ ಇಂದಿನಿಂದ ಪ್ರಾರಂಭ : ರಾಜ್ಯದಲ್ಲಿ ಮಳೆಯಿಂದಾಗಿ ರೈತರು ಫುಲ್ ಖುಷ್

ಮತ್ತೆ ವರುಣನ ಆರ್ಭಟ ಇಂದಿನಿಂದ ಪ್ರಾರಂಭ : ರಾಜ್ಯದಲ್ಲಿ ಮಳೆಯಿಂದಾಗಿ ರೈತರು ಫುಲ್ ಖುಷ್

ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯದಲ್ಲಿರುವ ಜನತೆಯು ಬಿಸಿಲಿನ ಬೇಗೆಯಲ್ಲಿ ಬೆಂದವರಿಗಾಗಿ ಇದೀಗ ರಾಜ್ಯದಲ್ಲಿ ಮುಂಗಾರು ಇಂದಿನಿಂದ ಮತ್ತೆ ಚುರುಕುಗೊಂಡಿದೆ. ಇದರಿಂದಾಗಿ ಜನತೆಯ ಮುಖದಲ್ಲಿ ಮಂದಹಾಸ ನೋಡಬಹುದಾಗಿದೆ. ಹಾಗಾದರೆ ಇವತ್ತಿನ ಲೇಖನದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆ ಆಗುತ್ತದೆ ಹಾಗೂ ಹೆಚ್ಚು ಮಳೆ ಸುರಿಯುವ ಜಿಲ್ಲೆ ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

Farmers are happy due to rain in the state
Farmers are happy due to rain in the state
Join WhatsApp Group Join Telegram Group

ಭಾರಿ ಮಳೆ :

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ರಾಜ್ಯದ ಜನತೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವದ ಮೂರು ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡದಲ್ಲಿರುವ ಕೆಲವು ಗ್ರಾಮಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ತಾಲೂಕುಗಳಲ್ಲಿ ಸಾಕಷ್ಟು ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಉಳಿದಿರುವಂತಹ ಬಹುತೇಕ ಕಡೆಗಳಲ್ಲಿ ಹವಾಮಾನ ಇಲಾಖೆಯು ಸಾಧಾರಣ ಮಳೆ ಆಗಲಿದ್ದು ಹಗುರದ ಮಳೆ ರಾಜ್ಯದ ಕರಾವಳಿ ಹಾಗೂ ಪಶ್ಚಿಮ ಭಾಗದಲ್ಲಿ ಆಗಲಿದೆ ಎಂದು ಮಾಹಿತಿ ನೀಡಿದೆ.

ಹೆಚ್ಚು ಮಳೆ ಆಗುವ ಪ್ರದೇಶ :

ಪೂರ್ವದ ಕಡೆಗೆ ಮಳೆ ಮಾರುತಗಳು ತಿರುಗಿರುವುದರಿಂದ ಹೆಚ್ಚು ಮಳೆಯುರಾಯಚೂರು ಭಾಗದಲ್ಲಿ ಆಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಎಚ್ಚರಿಸಿದ್ದಾರೆ. ರಾಯಚೂರು ತಾಲೂಕು ದೇವದುರ್ಗ ತಾಲೂಕು ಸಿಂಧನೂರು ತಾಲೂಕು ಹಾಗೂ ಮಾನ್ವಿ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹಿಂದಿನಿಂದ ಹವಾಮಾನ ಇಲಾಖೆಯ ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಅಂದಾಜು 32.1 ಮಿಲಿ ಮೀಟರ್ ನಿಂದ 34 ಮಿಲಿ ಮೀಟರ್ನಷ್ಟು ಮಳೆಾಗಬಹುದು ಎಂದು ಹವಾಮಾನ ಇಲಾಖೆಯ ನಿರೀಕ್ಷಿಸಿದೆ.

ದೊಡ್ಡ ಪ್ರಮಾಣದಲ್ಲಿ ಮಳೆ :

ದೊಡ್ಡ ಪ್ರಮಾಣದಲ್ಲಿ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆ ಪ್ರದೇಶ ಒಂದು ಬಿಟ್ಟರೆ ಮಂಡ್ಯ ಜಿಲ್ಲೆಯ ಕೇಂದ್ರ ಭಾಗದಲ್ಲಿರುವ ರಾಮನಗರದಲ್ಲಿ ಹಾಗೂ ಚಾಮರಾಜನಗರದ ಪೂರ್ವದಲ್ಲಿರುವ ಕೊಳ್ಳೇಗಾಲದಲ್ಲಿ ಹೆಚ್ಚು ಮಳೆ ಆಗಲಿದೆ ಎಂಬುದರ ಬಗ್ಗೆ ಹವಾಮಾನ ಇಲಾಖೆಯ ಅಂದಾಜಿಸಿದೆ.

ಇದನ್ನು ಓದಿ : ಭಾರತದಲ್ಲಿ ಚಿನ್ನದ ಬೆಲೆ 2024 ರಲ್ಲೀ ಎಷ್ಟಾಗುತ್ತದೆ : ಇಲ್ಲಿದೆ ಸಂಪೂರ್ಣ ಮಾಹಿತಿ

ಮಳೆ :

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು ಹವಾಮಾನ ಇಲಾಖೆಯು ಸಾಕಷ್ಟು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಭಾಗಗಳಾದ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಬೆಳಗಾವಿ ಧಾರವಾಡ ಬೀದರ್ ಹಾವೇರಿ ಕಲಬುರ್ಗಿ ಗದಗ ಯಾದಗಿರಿ ವಿಜಯಪುರ ಬೆಂಗಳೂರು ಗ್ರಾಮಾಂತರ ಚಾಮರಾಜನಗರ ಬೆಂಗಳೂರು ನಗರ ಚಿಕ್ಕಮಗಳೂರು ಚಿಕ್ಕಬಳ್ಳಾಪುರ ಹಾಸನ ಮಂಡ್ಯ ಚಿತ್ರದುರ್ಗ ಕೊಡಗು ಶಿವಮೊಗ್ಗ ಮೈಸೂರು ರಾಮನಗರ ವಿಜಯನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಹವಮಾನ ಇಲಾಖೆಯು ವರ್ಣನೆ ಆರ್ಭಟ ಇಂದಿನಿಂದ ಮತ್ತೆ ಶುರುವಾಗಿದೆ ಎಂದು ಹೇಳುವುದರ ಮೂಲಕ ಕಂಗಲಾಗಿದ್ದ ರೈತರಿಗೆ ರಾಜ್ಯದಲ್ಲಿ ಮಳೆಯಾಗುತ್ತಿರುವ ಕಾರಣ ಸಾಕಷ್ಟು ಸಂತೋಷವನ್ನುಂಟು ಮಾಡಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತದೆ ಎಂಬುದರ ಬಗ್ಗೆ ಈ ಲೇಖನದ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಈ ವಯಸ್ಸಿನ ಮೇಲ್ಪಟ್ಟವರಿಗೆ ಮಾತ್ರ, ಇನ್ಸ್ಟಾಗ್ರಾಮ್‌, ಫೇಸ್‌ಬುಕ್ ಬಳಕೆಗೆ ಅವಕಾಶ

ವಿದ್ಯಾರ್ಥಿಗಳಿಗೆ ಬಂಪರ್‌ ಸುದ್ದಿ: ಸಿಗುತ್ತೆ ಉಚಿತ ಸೈಕಲ್!‌ ನಿಮ್ಮ ಶಾಲೆಗೆ ಈ 2 ದಾಖಲೆಗಳನ್ನು ನೀಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments