Friday, June 14, 2024
HomeGovt Schemeತಾತ್ಕಾಲಿಕವಾಗಿ ಗೃಹಲಕ್ಷ್ಮಿ ನೋಂದಣಿ ಸ್ಥಗಿತ : ಹಣ ಖಂಡಿತಾ ಬರುತ್ತೆ ಹೀಗೆ...

ತಾತ್ಕಾಲಿಕವಾಗಿ ಗೃಹಲಕ್ಷ್ಮಿ ನೋಂದಣಿ ಸ್ಥಗಿತ : ಹಣ ಖಂಡಿತಾ ಬರುತ್ತೆ ಹೀಗೆ ಮಾಡಿ ಕೂಡಲೇ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವುದು ಗೃಹಲಕ್ಷ್ಮಿ ಯೋಜನೆಯ ನೋಂದಣಿ ಬಗ್ಗೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ನೊಂದಣಿ ಸ್ಥಗಿತ ಆಗಿದೆ ಎಂಬ ವಿಷಯ ತಿಳಿದುಕೊಳ್ಳುವ ಆಶ್ಚರ್ಯಪಟ್ಟಿದ್ದಾರೆ. ಗೃಹಲಕ್ಷ್ಮಿ ತಾತ್ಕಾಲಿಕವಾಗಿ ಸ್ಥಗಿತವಾಗಿರುವುದರ ಬಗ್ಗೆ ಟ್ವೀಟ್ ಸಂಬಂಧಿಸಿದಂತೆ ಎಲ್ಲರಿಗೂ ನೋಟಿಸ್ ಅನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಬಹಳ ಸೀರಿಯಸ್ ಆಗಿ ವಿಚಾರವನ್ನು ತೆಗೆದುಕೊಂಡಿದ್ದೇವೆ ಹಾಗೂ ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತವಾಗಿದೆಯೇ ಇಲ್ಲವೇ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

Gruhalkshmi Yojana Registration Stopped
Gruhalkshmi Yojana Registration Stopped
Join WhatsApp Group Join Telegram Group

ಗೃಹಲಕ್ಷ್ಮಿ ಯೋಜನೆ ನೊಂದಣಿ ಸ್ಥಗಿತ :

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ನೊಂದಣಿ ಸ್ಥಗಿತ ಆಗಿದೆ ಎಂದು ಕೇಳಿ ಆಶ್ಚರ್ಯವಾಯಿತು ಎಂದು ರಾಜ್ಯದ ಜನತೆಗೆ ತಿಳಿಸಿದ್ದಾರೆ. ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರನ್ನು ಕರೆದು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸ್ವೀಟ್ ನಮ್ಮ ಇಲಾಖೆಯಿಂದ ತಾಚೂರಿಯದಿಂದ ಆಗಿದೆ ಇದು ಏಕೆ ಆಯ್ತು ಹೇಗೆ ಆಯ್ತು ಎಂಬುದು ಗೊತ್ತಾಗುತ್ತಿಲ್ಲ ಹಾಗಾಗಿ ಎಲ್ಲರಿಗೂ ಸಹ ಈ ಟ್ವೀಟ್ ಸಂಬಂಧವಾಗಿ ನೋಟಿಸ್ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು. ಸೀರಿಯಸ್ ಆಗಿ ವಿಚಾರವನ್ನು ತೆಗೆದುಕೊಂಡಿದ್ದು ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

ನಿರಂತರವಾದ ಪ್ರಕ್ರಿಯೆ :

ಈಗಾಗಲೇ ಹಣ ವರ್ಗಾವಣೆಯು ನಮ್ಮ ಇಲಾಖೆಯಿಂದ ಆಗಿದ್ದು ಬ್ಯಾಂಕ್ನಿಂದ ಮಾತ್ರ ಹಣ ನಿಧಾನವಾಗಿ ಜಮಾ ಆಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನೂ ನಾಲ್ಕೈದು ದಿನಗಳಲ್ಲಿ ಎಲ್ಲರಿಗೂ ವರ್ಗಾವಣೆಯಾಗುತ್ತದೆ ಈ ಪ್ರಕ್ರಿಯೆಯು ನಿಧಾನವಾಗಿ ಆಗುತ್ತಿರುವುದರಿಂದ ನೊಂದಣಿ ಪ್ರಕ್ರಿಯೆಯು ಸಹ ಗೃಹಲಕ್ಷ್ಮಿ ಯೋಜನೆಗೆ ನಿಧಾನವಾಗಿ ಆಗುತ್ತಿದೆ. ನಮ್ಮ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣವನ್ನು ಕಳಿಸುತ್ತಿದ್ದೇವೆ ಹಾಗೂ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಂಡವರಿಗೂ ಸಹ ಇದರ ಲಾಭವನ್ನು ನೀಡಲಾಗುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆ ನಿರಂತರವಾಗಿ ನಡೆಯುವ ಯೋಜನೆ ಎಂದು ರಾಜ್ಯದ ಜನತೆಗೆ ತಿಳಿಸಿದ್ದಾರೆ.

1.28 ಕೋಟಿ ಫಲಾನುಭವಿಗಳು :

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿಯವರೆಗೂ 1.8 ಕೋಟಿ ರೂಪಾಯಿಗಳು ಅಕೌಂಟ್ಗೆ ಡಿಬಿಟಿ ಪ್ರೊಸೆಸ್ ಮೂಲಕ ಇಲ್ಲಿಯವರೆಗೆ ಹಣ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 63 ಲಕ್ಷ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಹಣ ಜಮಾ ಆಗಿದೆ. ಬ್ಯಾಂಕ್ನಿಂದ ಮಾತ್ರ ಈ ಹಣ ವರ್ಗಾವಣೆಯು ನಿಧಾನವಾಗುತ್ತಿದ್ದು ಈಗಾಗಲೇ ನಮ್ಮಿಂದ ಹಣ ವರ್ಗಾವಣೆ ಆಗಿದೆ ಸರ್ಕಾರದಿಂದ ಈ ಹಣ ವರ್ಗಾವಣೆಯಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದು ಸಚಿವೆ ತಿಳಿಸಿದರು. ಸರ್ಕಾರದ ಖಜನೆಯಲ್ಲಿ ಹಣ ಇದ್ದು ಇನ್ನು ಕೈದು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಲಿದೆ ಎಂದು ಹೇಳಿದರು. ಈ ಹಣ ವರ್ಗಾವಣೆಯು 1.28 ಕೋಟಿ ಯಜಮಾನಿಯರಿಗೆ ಆಗುತ್ತಿದ್ದು ಹೊಸದಾಗಿ ನೋಂದಣಿ ಮಾಡಿಕೊಂಡವರು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು.

ಇದನ್ನು ಓದಿ : ರಾಜ್ಯದಲ್ಲೇ ಮೊದಲ ಬಾರಿಗೆ, ತನ್ನದೇ ಆದ ವಿಮಾನಯಾನ ಸಂಸ್ಥೆಯ ಪ್ರಾರಂಭ

ತಾತ್ಕಾಲಿಕವಾಗಿ ಸ್ಥಗಿತ :

ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಟ್ವೀಟ್ ಮಾಡಲಾಗಿತ್ತು ಎಂದು ಹೇಳಿದರು. ಈ ಮಾಹಿತಿಯು ಸ್ಥಗಿತ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಯಾಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚನೆಯ ಮೇರೆಗೆ ಈ ಟ್ವೀಟನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ. ಅಲ್ಲಿಗೆ ಇಲಾಖೆಗೂ ಸಚಿವರಿಗೂ ಸಮನ್ವಯದ ಕೊರತೆ ಉಂಟಾಗಿದೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ತಿಳಿಸಿದರು.

ಹೀಗೆ ಗೃಹಲಕ್ಷ್ಮಿ ಯೋಜನೆಯ ಸ್ಥಗಿತ ಆಗಿದೆ ಎಂಬುದರ ಬಗ್ಗೆ ಟ್ವೀಟ್ ಆಗುತ್ತಿದ್ದಂತೆ ಇದರ ಬಗ್ಗೆ ಜನರಿಗೆ ಗೊಂದಲಗಳು ಸೃಷ್ಟಿಯಾಗಿದ್ದು ಇದರಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಸಚಿವರು ಸ್ಪಷ್ಟವಾದ ಮಾಹಿತಿಯನ್ನು ನೀಡುವ ಮೂಲಕ ಜನರ ಗೊಂದಲಗಳಿಗೆ ತೆರೆ ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಗೃಹಲಕ್ಷ್ಮಿ ಯೋಜನೆಯ ಒಂದು ನಿರಂತರವಾದ ಯೋಜನೆಯಾಗಿದೆ ಎಂದು ಹೇಳಬಹುದಾಗಿದೆ ಹಾಗಾಗಿ ಈ ಯೋಜನೆ ಸ್ಥಗಿತ ಆಗಿಲ್ಲ ಎಂಬುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಲೇಖನದ ಮಾಹಿತಿಯನ್ನು ಕಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸೌರ ಮಂಡಲದಲ್ಲಿ ಮತ್ತೊಂದು ಭೂಮಿ ಪತ್ತೆ! ಹೇಗಿದೆ ಗೊತ್ತಾ ಈ ಭೂಮಿ?

ISRO ಚಂದ್ರಯಾನ 3 ರಸಪ್ರಶ್ನೆ: ಆನ್‌ಲೈನ್‌ ಸ್ಪರ್ಧೆಯಲ್ಲಿ ಗೆದ್ದವರಿಗೆ 1 ಲಕ್ಷದ ಜೊತೆಗೆ ಪ್ರಮಾಣ ಪತ್ರ.! ಇಲ್ಲಿಂದ ಹೆಸರನ್ನು ನೋಂದಾಯಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments