Saturday, July 27, 2024
HomeTrending Newsಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ | 5 ಗ್ಯಾರಂಟಿ ಜಾರಿಗೆ ಸಿದ್ಧತೆ

ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ | 5 ಗ್ಯಾರಂಟಿ ಜಾರಿಗೆ ಸಿದ್ಧತೆ

ಸಿಎಂ ಸಿದ್ದರಾಮಯ್ಯ :ಕರ್ನಾಟಕದ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ನೀಡಿದ ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿನಂತೆ ತಮ್ಮ ಯೋಜನೆಯನ್ನು ಜಾರಿ ಮಾಡಲು ಗಂಭೀರವಾಗಿ ಪರಿಗಣನಿಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಗಳ ಪ್ರಕ್ರಿಯೆಯನ್ನು ಆರಂಭಿಸಿದ್ದು,

ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ
Join WhatsApp Group Join Telegram Group

ಈ ಯೋಜನೆಗೆ ಸಂಬಂಧಿಸಿದಂತೆ ಇಲಾಖೆಯ ಮುಖ್ಯ ಅಧಿಕಾರಿಗಳೊಂದಿಗೆ ಹಾಗೂ ಆರ್ಥಿಕ ತಜ್ಞರೊಂದಿಗೆ ಚರ್ಚೆ ಮಾಡಿ ಐದು ಇಲಾಖೆಗಳಿಗೂ ಎಷ್ಟು ಹಣ ಬೇಕಾಗಬಹುದು ಎಂದು ಅಂದಾಜು ವರದಿ ಪಡೆದುಕೊಂಡಿದೆ ಒಟ್ಟಾರೆ 57,000 ಕೋಟಿ ಬೇಕಾಗಬಹುದು ಎನ್ನಲಾಗುತ್ತಿದೆ

ಯಾರಿಗೆಲ್ಲ ಸೌಲಭ್ಯ

ಸಭೆಯಲ್ಲಿ ಅನ್ನ ಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 10 ಕೆಜಿ ಉಚಿತ ಅಕ್ಕಿ ನೀಡಲಾಗುವುದು ಎಂದು ತಿಳಿಸಲಾಗಿತ್ತು.ಹಾಗೂ ಇತರೆ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ ಮತ್ತು ಗೃಹಜೋತಿ ಯೋಜನೆ ಹಾಗೂ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಬಸ್ ಇದರೊಂದಿಗೆ ನಿರುದ್ಯೋಗಿ ಪದವಿದರರಿಗೂ ಸಹ 3000 ನೀಡುವುದಾಗಿ ಭರವಸೆ ನೀಡಿದೆ,

ಈ ಯೋಜನೆಗೆ ಎಷ್ಟು ಹಣ ಬೇಕು ಹಾಗೂ ಯೋಜನೆ ಸೌಲಭ್ಯ ಯಾರಿಗೆಲ್ಲ ಸಿಗುತ್ತದೆ ಎಂಬುದನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ

ಯೋಜನೆಗಳಿಗೆ ತೊಡಕು

ಯೋಜನೆಗಳಿವು ಗೊಂದಲಗಳು ಹಾಗೂ ತೊಡಕುಗಳು ಎದುರಾಗುತ್ತಿವೆ ಅವುಗಳಿಗೆ ಸಂಬಂಧಿಸಿದಂತಹ ಪರಿಹಾರ ಕ್ರಮಗಳನ್ನು ಸರಿಪಡಿಸುವಂತೆ ಪರಿಹಾರ ಕ್ರಮವನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ

ಜೂನ್ ಒಂದರಂದು ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಯೋಜನೆ ಜಾರಿ ಸಂಬಂಧಿಸಿದಂತೆ ಸಚಿವರೊಂದಿಗೆ ಸಭೆಯನ್ನು ನಡೆಸಿ ಸುದೀರ್ಘ ಚರ್ಚೆಯನ್ನು ಮಾಡಿದ್ದಾರೆ.ಚರ್ಚೆಯಲ್ಲಿ ಯಾವ ಯಾವ ಇಲಾಖೆಗೆ ಎಷ್ಟು ಹಣ ಬೇಕು ಎಂಬುದರ ಪೂರ್ವ ತಯಾರಿಕೆ ನಡೆಯುತ್ತಿದೆ

ಯಾವೆಲ್ಲ ಚರ್ಚೆಗಳು ನಡೆದವು

ಗೃಹಲಕ್ಷ್ಮಿ ಯೋಜನೆಗೆ ಹಣವನ್ನು ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚೆ ನಡೆದಿದ್ದು ಯಾರನ್ನು ಪರಿಗಣನಿಗೆ ತೆಗೆದುಕೊಳ್ಳಬೇಕು ಎಂಬುದನ್ನು ಯೋಚಿಸಲಾಗಿದ್ದು ಮನೆಯೊಡತಿ ಎಂದು ಯಾರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಚರ್ಚೆ ಮಾಡಿದ್ದಾರೆ

  • ಪ್ರತಿಯೊಬ್ಬರಿಗೂ ಸಹ ಗೃಹಲಕ್ಷ್ಮಿ ಯೋಜನೆ ನೀಡುವುದಾದರೆ ಸರ್ಕಾರಿ ಸೇವೆಯನ್ನು ಸಲ್ಲಿಸುತ್ತಿರುವ ನೌಕರರಿಗೂ ನೀಡಬೇಕಾ ಎಂಬುದರ ಚರ್ಚೆ
  • ಇದರೊಂದಿಗೆ ಗೃಹಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಫಲಾನುಭವಿಗಳಿಗೆ ಇದರೊಂದಿಗೆ ವಿಲೀನಗೊಳಿಸಬೇಕ ಎಂಬುದರ ಕುರಿತು ಚರ್ಚೆ
  • ಹಾಗೆ ಮುಖ್ಯವಾಗಿ ಗೃಹಜೋತಿ ಯೋಜನೆ ಯ ಬಗ್ಗೆ ಚರ್ಚೆ ನಡೆದಿದ್ದು ಈ ಯೋಜನೆಯ ಫಲಾನುಭವಿಗಳಿಗೆ 200 ಯೂನಿಟ್ ಗಿಂತ ಹೆಚ್ಚು ಬಳಸಿದರೆ ಅವರು ಹಣವನ್ನು ಪಾವತಿಸಬೇಕಾ ಅಥವಾ ಪೂರ್ಣ ಬಿಲ್ ಪಾವತಿಸಬೇಕ ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ
  • ಸ್ತ್ರೀಯರಿಗೆ ಉಚಿತ ಪ್ರಯಾಣ ಟಿಕೆಟ್ ಬಗ್ಗೆಯೂ ಸಹ ಚರ್ಚೆ ನಡೆದಿದ್ದು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಯೋಚಿಸಲಾಗಿದೆ .ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ನೀಡುವುದಾಗಿ ಯೋಜನೆ ಮಾಡಿಕೊಳ್ಳಲಾಗಿತ್ತು.ಒಟ್ಟಾರೆ ಸರ್ಕಾರವು ಜೂನ್ 1ರಂದು ಜಾರಿ ಮಾಡುತ್ತಿದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕು

ಗೃಹಲಕ್ಷ್ಮಿ ಯೋಜನೆ
ಸರ್ಕಾರವು ಪ್ರತಿಯೊಂದು ಮನೆಗೆ 2,000ಗಳನ್ನು ನೆರವು ನೀಡುವುದಾದರೆ ಮೂವತ್ತು ಸಾವಿರ ಕೋಟಿ ಬೇಕಾಗಬಹುದು.ಮನೆಯ ಒಡೆತಿಗೆ ನೀಡಲು ಸರ್ಕಾರ ಚಿಂತನೆ ಮಾಡಿದೆಈ ಯೋಜನೆಯಿಂದ ಬಡ ಹಾಗೂ ಮಾಧ್ಯಮ ವರ್ಗದವರ ಜೀವನಕ್ಕೆ ಆರ್ಥಿಕ ನೆರವು ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ

ಗೃಹ ಜ್ಯೋತಿ ಯೋಜನೆ
ಪ್ರತಿಯೊಂದು ಮನೆಗೂ ಸರ್ಕಾರ ತಿಳಿಸಿದಾಗೆ ಇನ್ನೂರು ಯೂನಿಟ್ ಉಚಿತ ವಿದ್ಯುತ್ ನೀಡಿದರೆ ಸರ್ಕಾರಕ್ಕೆ 8,000 ಕೋಟಿ ಹಣ ಬೇಕಾಗುತ್ತದೆ.ಈ ಯೋಜನೆ ಅಡಿ ಮನೆಗೆ 200 ಯೂನಿಟ್ ಬಳಕೆ ಮಾಡಿಕೊಂಡರು ಯಾವುದೇ ರೀತಿಯ ಹಣವನ್ನು ಪಾವತಿ ಮಾಡಬೇಕಿಲ್ಲ 200 ಕಿಂತ ಹೆಚ್ಚಿಗೆ ಉಪಯೋಗಿಸಿಕೊಂಡರೆ ಯಾವ ರೀತಿ ಹಣವನ್ನು ನೀಡಬೇಕು ಪೂರ್ತಿ ಹಣವನ್ನು ನೀಡಬೇಕಾ ಎಂಬುದರ ಕುರಿತು ಇನ್ನು ಮಾಹಿತಿ ಲಭ್ಯವಿಲ್ಲ

ಉಚಿತ ಪ್ರಯಾಣ
ಮಹಿಳೆಯರಿಗೆ ಸಾರಿಗೆ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣ ಕಲ್ಪಿಸಿಕೊಟ್ಟಿದ್ದಲ್ಲಿ 3200 ಕೋಟಿ ಹಣ ಬೇಕಾಗಬಹುದು.ಈಗಾಗಲೇ ಯೋಜನೆಯ ಘೋಷಣೆಯಾಗಿದೆ ಮಹಿಳೆಯರಿಗೆ ಉಚಿತ ಪ್ರಯಾಣ ಯಾವ ಅರ್ಹತೆ ಮಾನದಂಡಗಳನ್ನು ನೀಡಿದೆ ಎಂಬುದು ಕುರಿತು ಮಾಹಿತಿ ದೊರೆಯಬೇಕಾಗಿದೆ ಆದರೆ ಕರ್ನಾಟಕದ ಮಹಿಳೆಯರಿಗೆ ಮಾತ್ರ ಉಚಿತ ಎಂಬುದು ಖಚಿತವಾಗಿದ್ದು ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಿಗೆ ತೆರಳುವ ಬಸ್ಸುಗಳಿಗೆ ಉಚಿತ ಪ್ರಯಾಣ ಅನ್ವಯವಾಗುವುದಿಲ್ಲ

ಯುವನಿಧಿ ಯೋಜನೆ
ನಿರುದ್ಯೋಗಿ ಪದವೀಧರರಿಗೆ ಸರ್ಕಾರ ತಿಳಿಸಿದ ಹಾಗೆ 3000 ನೀಡುವುದಾದರೆ ಸರ್ಕಾರ ವರ್ಷಕ್ಕೆ ಮೂರು ಸಾವಿರ ಕೋಟಿ ಹಣ ಬೇಕಾಗಬಹುದು ಎಂದು ವರದಿ
ತಯಾರಿಸಲಾಗಿದೆ

ಅನ್ನಭಾಗ್ಯ ಯೋಜನೆ
ಪ್ರತಿಯೊಂದು ಮನೆಗೆ ಅಂದರೆ ಬಿಪಿಎಲ್ ಕಾರ್ಡ್ ಹೊಂದಿದ ಜನರಿಗೆ 10 ಕೆಜಿ ಅಕ್ಕಿ ನೀಡುವುದಾದರೆ 10000 ಕೋಟಿ ಬೇಕಾಗುತ್ತದೆ

ಒಟ್ಟಾರೆ ಸರ್ಕಾರ 5 ಭರವಸೆಗಳನ್ನು ಈಡೇರಿಸಬೇಕಾದರೆ ಈ ಮೇಲ್ಕಂಡಂತೆ ಅಂದಾಜು ಹಣ ಬೇಕಾಗುವ ಸಾಧ್ಯತೆ ಹೆಚ್ಚಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments