Saturday, July 27, 2024
HomeNews8.5 ಕೋಟಿ ರೈತರ ಖಾತೆಗೆ 17,000 ಕೋಟಿ ರೂ ಜಮಾ! ಹಣ ಬಂದಿಲ್ವಾ ಹಾಗಾದ್ರೆ ಕೂಡಲೇ...

8.5 ಕೋಟಿ ರೈತರ ಖಾತೆಗೆ 17,000 ಕೋಟಿ ರೂ ಜಮಾ! ಹಣ ಬಂದಿಲ್ವಾ ಹಾಗಾದ್ರೆ ಕೂಡಲೇ ಈ ಕೆಲಸ ಮಾಡಿ

ನಮಸ್ಕಾರ ಸ್ನೇಹಿತರೇ ಇವತ್ತು ವಿಷಯ ಏನೆಂದರೆ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ಜುಲೈ 27ರಂದು ಕೇಂದ್ರ ಸರ್ಕಾರವು ಮೋದಿ ಅವರಿಂದ 14ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಹುಟ್ಟು 14ನೇ ಕಂತಿನಲ್ಲಿ 8.5 ಕೋಟಿ ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ ನಿಧಿ ಯೋಜನೆಯಲ್ಲಿ 17000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಜಮಾ ಮಾಡಲಾಗಿದೆ. ಅಲ್ಲದೆ 13ನೇ ಕಂತನ್ನು ಫೆಬ್ರವರಿ 27ರಂದು ಈ ಯೋಜನೆಯಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಅದರಂತೆ ಈಗ 14ನೇ ಕಂತನ್ನು ಬಿಡುಗಡೆ ಮಾಡಿದ್ದು ಇದರ ಬಗ್ಗೆ ತಮ್ಮ ಪಾವತಿ ಸ್ಥಿತಿಯನ್ನು ರೈತರು ಹೇಗೆ ಪರಿಶೀಲಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

14th-installment-of-pm-kisan-samman-nidhi-yojana
14th-installment-of-pm-kisan-samman-nidhi-yojana
Join WhatsApp Group Join Telegram Group

ಕೇಂದ್ರ ಸರ್ಕಾರವು ಯೋಜನೆಯಡಿಯಲ್ಲಿ 14ನೇ ಕಂತನ್ನು ಬಿಡುಗಡೆ ಮಾಡಿದ್ದು

ಕೇಂದ್ರ ಸರ್ಕಾರವು ಯೋಜನೆಯಡಿಯಲ್ಲಿ 14ನೇ ಕಂತನ್ನು ಬಿಡುಗಡೆ ಮಾಡಿದ್ದು, 14ನೇ ಕಂತಿನಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲದೆ ನಿಮ್ಮ ಖಾತೆಯಲ್ಲಿ 14ನೇ ಕಂತು ಸಿಗದಿದ್ದರೆ ಕೃಷಿ ಸಚಿವಾಲಯವನ್ನು ಸಂಪರ್ಕಿಸುವುದರ ಮೂಲಕ ಆ ಖಾತೆಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. 14ನೇ ಕಂತನ್ನು ಪರಿಶೀಲಿಸಲು ಪಿಎನ್ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಅದರಲ್ಲಿ ಫಾರ್ಮರ್ ಕಾರ್ನರನ್ನು ಕ್ಲಿಕ್ ಮಾಡಬೇಕು. ಫಾರ್ಮರ್ ಕಾರ್ನರ್ ಅಲ್ಲಿ ಫಲಾನುಭವಿಗಳ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೊದಲು ಅದರಲ್ಲಿ ಸಂಪೂರ್ಣವಾಗಿ ತುಂಬಲಾಗಿದೆ ಎಂಬುದರ ಬಗ್ಗೆ ಪರಿಶೀಲಿಸಬೇಕಾಗುತ್ತದೆ ಅದಾದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆ ಎಂಬುದನ್ನು ಪರಿಶೀಲಿಸಿ. ಈ ಎಲ್ಲವೂ ಸರಿಯಾಗಿದ್ದರೆ 14ನೇ ಕಂತು ನಿಮ್ಮ ಖಾತೆಗೆ ಬರದಿದ್ದರೆ 14ನೇ ಕಂತಿನ ಬಗ್ಗೆ ರೈತರು ಕೃಷಿ ಸಚಿವಾಲಯವನ್ನು ಸಂಪರ್ಕಿಸಬೇಕಾಗುತ್ತದೆ.

ರೈತರು ಸಂಪರ್ಕಿಸಬಹುದಾದ ವೆಬ್ಸೈಟ್ ಹಾಗೂ ಸಹಾಯವಾಣಿಗಳು :

ರೈತರು ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸಲಾಗುತ್ತಿದ್ದು ಈ ಹಣವು ಬಂದಿದೆಯೇ ಇಲ್ಲವೇ ಎಂಬುದನ್ನು ಅಥವಾ ಕಿಸಾನ್ ಯೋಜನೆಗೆ ಸಂಬಂಧಿಸಿ ದಂತೆ ರೈತರಲ್ಲಿ ಯಾವುದೇ ಸಮಸ್ಯೆಗಳು ಇದ್ದರೆ ರೈತರು ಕೇಂದ್ರ ಸರ್ಕಾರದ ಅಧಿಕೃತ ಇಮೇಲ್ ಐಡಿ ಆದ [email protected] ಗೆ ಸಂಪರ್ಕಿಸಬಹುದು. ಈ ಇಮೇಲ್ ಐಡಿಗೆ ಸಂಪರ್ಕಿಸುವುದರ ಮೂಲಕ ರೈತರು ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ. ಸಮಸ್ಯೆಗಳನ್ನು ತಿಳಿಸಲು ಪ್ರಧಾನಮಂತ್ರಿ ಸಂಯೋಜನೆಯು ಒಂದು ಸಹಾಯವಾಣಿಯನ್ನು ತಿಳಿಸಿದ್ದು ಆ ಸಹಾಯವಾಣಿ ಸಂಖ್ಯೆ ಎಂದರೆ 155261. ಸಹಾಯವಾಣಿಯ ಜೊತೆಗೆ ಟೋಲ್ ಫ್ರೀ ನಂಬರ್ ಅನ್ನು ಸಹ ಕಿಸಾನ್ ಯೋಜನೆಯು ನೀಡಿದೆ. ಟೋಲ್ ಫ್ರೀ ನಂಬರ್ ಎಂದರೆ 1800115526 ಅಥವಾ 011-23381092 ಈ ನಂಬರ್ಗೆ ಕರೆ ಮಾಡುವುದರ ಮೂಲಕ ರೈತರು ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಬಗ್ಗೆ ಪರಿಶೀಲಿಸಬಹುದಾಗಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 2 ಹೊಸ ರೂಲ್ಸ್: ಕಡ್ಡಾಯವಾಗಿ ಪಾಲಿಸಬೇಕು ಇಲ್ಲ ಅಂದ್ರೆ ಹಣ ಇಲ್ಲ

ಪಿಎಂ ಕಿಸಾನ್ ನಿಧಿ ಯೋಜನೆ :

ಕೇಂದ್ರ ಸರ್ಕಾರವು ಪಿಎಂ ಕಿಸಾನ್ ನಿಧಿ ಯೋಜನೆಯನ್ನು 2019ರ ಫೆಬ್ರವರಿಯಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯ ರೈತರ ದೈನಂದಿನ ಅಗತ್ಯತೆಗಳನ್ನು ಪೂರೈಸಲು ಹಾಗೂ ರೈತರಿಗೆ ಆರ್ಥಿಕ ನೆರವನ್ನು ನೀಡುವುದರ ಮೂಲಕ ಅವರ ಒಟ್ಟಾರೆ ಕಲ್ಯಾಣಕ್ಕೆ ಕೊಡುಗೆ ನೀಡಲು ಈ ಯೋಜನೆಯು ಸಹಾಯ ಮಾಡುತ್ತದೆ ಎಂದು ಸರ್ಕಾರವು ಹೊರಡಿಸಲಾದ ಪ್ರಕಟಣೆಯಲ್ಲಿ ಹೇಳಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಕೇಂದ್ರ ಸರ್ಕಾರವು ರೈತರ ಕುಟುಂಬಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಪ್ರತಿವರ್ಷ ಮೂರು ಕಂತುಗಳಲ್ಲಿ 6000ಗಳನ್ನು ನೀಡಲಾಗುತ್ತಿದೆ. ಇದುವರೆಗೂ ಸುಮಾರು 11 ಕೋಟಿಗೂ ಹೆಚ್ಚು ರೈತರು 2.42 ಲಕ್ಷ ಕೋಟಿ ರೂಪಾಯಿಗಳಷ್ಟು ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೀಡಲಾಗಿದೆ.

ಹೀಗೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಪಿಎಂ ಕಿಸಾನ್ ನಿಧಿ ಯೋಜನೆ ರೈತರ ಆರ್ಥಿಕ ನೆರವನ್ನು ಹಾಗೂ ದೇಶದಲ್ಲಿನ ಚಿಲ್ಲರೆ ರಸಗೊಬ್ಬರ ಅಂಗಡಿಗಳನ್ನು ಈ ಯೋಜನೆಯ ಅಡಿಯಲ್ಲಿ ಕೇಂದ್ರಗಳಾಗಿ ಸರ್ಕಾರವು ವ್ಯವಸ್ಥಿತವಾಗಿ ಪರಿವರ್ತಿಸುತ್ತದೆ. ಅಲ್ಲದೆ ಯೋಜನೆ ಅಡಿಯಲ್ಲಿ ಈ ಕೇಂದ್ರಗಳು ರೈತರಿಗೆ ಕೃಷಿ ,ಕಚ್ಚಾ ಸಾಮಗ್ರಿಗಳು, ಮಣ್ಣು ಪರೀಕ್ಷೆ, ಬೀಜಗಳು ಮತ್ತು ರಸಗೊಬ್ಬರಗಳನ್ನು ಸಹ ಒದಗಿಸುವುದರ ಮೂಲಕ ರೈತರ ಅಗತ್ಯತೆಗಳನ್ನು ಪೂರೈಸಲು ಈ ಯೋಜನೆಯು ಸಹಕಾರಿಯಾಗಿದೆ. ಹೀಗೆ ಯೋಜನೆಗೆ ಯಾರಿಲ್ಲ ಅರ್ಜಿಗಳನ್ನು ಸಲ್ಲಿಸಿದ್ದಾರೆ ಅವರಿಗೆ 14ನೇ ಕಂತಿನ ಹಣವು ಬಂದಿದೆಯೇ ಇಲ್ಲವೇ ಎಂಬುದನ್ನು ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಪರಿಶೀಲಿಸಿಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಅಪ್ಪುವಿನ ಕೊನೆಯ ಆಸೆ ಮಣ್ಣುಪಾಲು! ನೆರವೇರದ ಈ ಆಸೆ ಯಾವುದು ಗೊತ್ತೇ? ಕೇಳಿದ್ರೆ ನೀವೂ ಕೂಡಾ ಶಾಕ್!

ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಪಡೆಯಿರಿ : ಕ್ಯೂಆರ್ ಕೋಡ್ ರೇಷನ್ ಕಾರ್ಡ್ ಪಡೆಯಲು ಇಂದೇ ಇಲ್ಲಿಂದ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments