Friday, June 14, 2024
HomeTrending Newsಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಪಡೆಯಿರಿ : ಕ್ಯೂಆರ್ ಕೋಡ್ ರೇಷನ್ ಕಾರ್ಡ್ ಪಡೆಯಲು...

ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಪಡೆಯಿರಿ : ಕ್ಯೂಆರ್ ಕೋಡ್ ರೇಷನ್ ಕಾರ್ಡ್ ಪಡೆಯಲು ಇಂದೇ ಇಲ್ಲಿಂದ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಈಗಾಗಲೇ ಹೊಸ ರೇಷನ್ ಕಾರ್ಡ್ ಮಾಹಿತಿಯ ಬಗ್ಗೆ ನಿಮಗೆ ಲೇಖನದಲ್ಲಿ ತಿಳಿಸಿದ್ದು ಈ ಹೊಸ ರೇಷನ್ ಕಾರ್ಡ್ ಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಯಾವು ಎಲ್ಲಾ ದಾಖಲೆಗಳು ಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

new-ration-card
new-ration-card
Join WhatsApp Group Join Telegram Group

ಹೊಸ ಪಡಿತರ ಚೀಟಿ :

ಭಾರತದಲ್ಲಿರುವ ಇತರ ರಾಜ್ಯ ಸರ್ಕಾರಗಳಂತೆ ಕರ್ನಾಟಕ ರಾಜ್ಯ ಸರ್ಕಾರವು ಸಹ ಈಗ ತಮ್ಮ ನಿವಾಸಿಗಳ ಪಡಿತರ ಚೀಟಿ ಯೋಜನೆಯನ್ನು ನವೀಕರಣಗೊಳಿಸಲು ಮುಂದಾಗುತ್ತಿದೆ. ಈ ಹೊಸ ಪಡಿತರ ಚೀಟಿಯ ಮೂಲಕ ಬಡ ದವರು ಯಾವುದೇ ಮೋಸವಿಲ್ಲದೆ ತಮ್ಮ ಪಡಿತರ ಚೀಟಿಯಲ್ಲಿ ಲಭ್ಯವಿರುವ ವಸ್ತುಗಳನ್ನು ಪಡೆಯಬಹುದಾಗಿದೆ. ಹೀಗೆ ಕರ್ನಾಟಕ ಸರ್ಕಾರವು ಹೊಸ ಪಡಿತರ ಚೀಟಿಯನ್ನು ಜಾರಿಗೊಳಿಸಿರುವುದರ ಮೂಲಕ ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಇದ್ದು ಸರ್ಕಾರಿ ದಾಖಲೆಯಾಗಿದೆ ಎಂದು ಹೇಳಬಹುದಾಗಿದೆ. ಮುಖ್ಯವಾಗಿ ಪಡಿತರ ಚೀಟಿಗಳಲ್ಲಿ ಮೂರು ವಿಧಗಳನ್ನು ನೋಡಬಹುದಾಗಿದೆ. ಇದರ ಪ್ರಕಾರ ಮಾರುಕಟ್ಟೆ ಗಿಂತ ಕಡಿಮೆ ದರದಲ್ಲಿ ಬಡ ಕುಟುಂಬಕ್ಕೆ ಪಡಿತರವನ್ನು ನೀಡಲಾಗುತ್ತದೆ.

ಮೂರು ಪಡಿತರ ಚೀಟಿ ಗಳೆಂದರೆ ಬಿಪಿಎಲ್ ಪಡಿತರ ಚೀಟಿ., ಅಂತ್ಯದಯ ಪಡಿತರ ಚೀಟಿ ಹಾಗೂ ಎಪಿಎಲ್ ಪಡಿತರ ಚೀಟಿ. ಹೀಗೆ ಪಡಿತರ ಚೀಟಿಯನ್ನು ಪಡೆಯುವುದರ ಮೂಲಕ ಸರ್ವಜನಿಕ ವಿತರಣಾ ವ್ಯವಸ್ಥೆಯಿಂದ ಗ್ರಾಹಕರು ಅಕ್ಕಿ ಗೋಧಿ ಬೇಳೆಕಾಳುಗಳು ಹಾಗೂ ಮುಂತಾದ 35 ಕೆಜಿ ಹಾಗೂ 25 ಕೆಜಿ ಪಡಿತರವನ್ನು ತಮ್ಮ ಕುಟುಂಬಕ್ಕೆ ಪಡೆಯಬಹುದಾಗಿದೆ.

ಆನ್ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು :

ಕರ್ನಾಟಕ ಸರ್ಕಾರವು ರಾಜ್ಯದ ಬಡ ನಾಗರಿಕರು ಉತ್ತಮ ಭವಿಷ್ಯಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅದರಂತೆ ಈಗ ಹೊಸ ಯೋಜನೆಯನ್ನು ಜಾರಿಗೆ ತಂದಿರುವುದನ್ನು ನೋಡಬಹುದಾಗಿದೆ. ಆ ಯೋಜನೆ ಏನೆಂದರೆ ರಾಜ್ಯದ ಬಡವು ಕುಟುಂಬಗಳಿಗೆ ಸಂಬಂಧಿಸಿದಂತೆ ಪಡಿತರ ಚೀಟಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಸರ್ಕಾರವು ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಕೆಲವೊಂದೆರಡು ಗ್ಯಾರಂಟಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಹೊಸ ರೇಷನ್ ಕಾರ್ಡ್ ಅಗತ್ಯವಿದೆ.

ಅದರಂತೆ ಈಗ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಪಡೆಯಬೇಕಾದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಒಂದು ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದ್ದು ಈ ವೆಬ್ಸೈಟ್ನ ಮೂಲಕ ಅಭ್ಯರ್ಥಿಗಳು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಎಂದರೆ www.ahar.kar.nic.in ಈ ವೆಬ್ಸೈಟ್ನ ಮೂಲಕ ಹೊಸ ರೇಷನ್ ಕಾರ್ಡ್ ಗಾಗಿ ರೇಷನ್ ಕಾರ್ಡ್ ಇಲ್ಲದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ : ಪ್ರತಿಯೊಬ್ಬರ ಖಾತೆಗೆ ₹2000 ಜಮಾ! ಕೇಂದ್ರ ಸರ್ಕಾರದಿಂದ ಘೋಷಣೆ, ಯಾವ ದಿನ ಬರಲಿದೆ ಗೊತ್ತಾ ?

ರೇಷನ್ ಕಾರ್ಡ್ ಗೆ ಅಗತ್ಯವಿರುವ ದಾಖಲೆಗಳು :

ಅರ್ಜಿದಾರರು ಹೊಸ ರೇಷನ್ ಕಾರ್ಡ್ ಅನ್ನು ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ ಅರ್ಜಿದಾರರ ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ಆದಾಯ ಪ್ರಮಾಣ ಪತ್ರ ,ವಿದ್ಯುತ್ ರಶೀದಿ ಬಿಲ್ ,ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ,ಮೊಬೈಲ್ ನಂಬರ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಸ ರೇಷನ್ ಕಾರ್ಡ್ ಅರ್ಜಿದಾರರು ಹೊಂದಿರಬೇಕಾಗುತ್ತದೆ. ಹೀಗೆ ಹೊಸ ರೇಷನ್ ಕಾರ್ಡ್ ಗಾಗಿ ರಾಜ್ಯ ಸರ್ಕಾರವು ಒಂದು ಲಿಂಕ್ ಅನ್ನು ಬಿಡುಗಡೆ ಮಾಡಿರುವುದರ ಮೂಲಕ ಈ ಲಿಂಕ್ ಬಳಸಿಕೊಂಡು ರೇಷನ್ ಕಾರ್ಡ್ ಇಲ್ಲದವರು ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಬಹುದಾಗಿದೆ.

ಹೀಗೆ ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದರ ಮೂಲಕ ರಾಜ್ಯ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ಆರು ರೇಷನ್ ಕಾರ್ಡ್ ಮಾಡಿಸಿಲ್ಲವೋ ಅವರಿಗೆ ಶೇರ್ ಮಾಡುವುದರ ಮೂಲಕ ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಸಹಾಯ ಮಾಡಿ. ಜೊತೆಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಹೊಸ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್!‌ ಕೂಡಲೇ ಈ ಕೆಲಸ ಮಾಡಿ ಲಕ್ಷ ಲಕ್ಷ ಹಣ ನಿಮ್ಮದಾಗಿಸಿ, ಈ ದಾಖಲೆ ಕಡ್ಡಾಯ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಗುಡ್‌ ನ್ಯೂಸ್!‌ ಇನ್ಮುಂದೆ ಮಾತೃಭಾಷೆಯಲ್ಲಿಯೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ, ಸರ್ಕಾರದಿಂದ ಹೊಸ ಆದೇಶ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments