Thursday, July 25, 2024
HomeGovt Schemeಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್ : ಅತಿ ಹೆಚ್ಚು ಲಾಭ ಕೊಡುವ ಯೋಜನೆ ಇಲ್ಲಿದೆ

ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್ : ಅತಿ ಹೆಚ್ಚು ಲಾಭ ಕೊಡುವ ಯೋಜನೆ ಇಲ್ಲಿದೆ

ನಮಸ್ಕಾರ ಸ್ನೇಹಿತರೆ, ಉಳಿತಾಯದ ಹವ್ಯಾಸವನ್ನು ದೇಶದಲ್ಲಿ ನಾಗರೀಕರಲ್ಲಿ ಬೆಳೆಸುವ ಸಲುವಾಗಿ ವಿವಿಧ ಯೋಜನೆಗಳನ್ನು ಸರ್ಕಾರ ಪ್ರಾರಂಭಿಸುತ್ತಿದೆ. ಅಂತಹ ಒಂದು ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಆಗಿದೆ. ದೀರ್ಘಾವಧಿಯ ಹೂಡಿಕೆಯು ಈ ಯೋಜನೆಯ ಲಾಭವನ್ನು ಪಡೆಯಲು ಅಗತ್ಯವಾಗಿರುತ್ತದೆ. ರಿಸ್ಕ್ ಅನ್ನು ತೆಗೆದುಕೊಳ್ಳಲು ಇಷ್ಟಪಡದ ಜನರಿಗಾಗಿ ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ಯೋಜನೆಗೆ ಸಂಬಂಧಿಸಿ ದಂತೆ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಲಾಗುತ್ತದೆ.

Kisan Vikas Patra Scheme
Kisan Vikas Patra Scheme
Join WhatsApp Group Join Telegram Group

ಕಿಸಾನ್ ವಿಕಾಸ್ ಪತ್ರ ಯೋಜನೆ :

ಕಿಸಾನ್ ವಿಕಾಸ್ ಪತ್ರ ಯೋಜನೆಯ ಪೋಸ್ಟ್ ಆಫೀಸ್ನ ಯೋಜನೆಯಾಗಿದ್ದು ಇದು ಒಂದು ರೀತಿಯಲ್ಲಿ ಉಳಿತಾಯದ ಯೋಜನೆಯಾಗಿದೆ ಎಂದು ಹೇಳಬಹುದಾಗಿದೆ. ಈ ಯೋಜನೆಯಿಂದಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ ಅವಧಿಯ ನಂತರ ಹೂಡಿಕೆಯ ಮೊತ್ತವು ದ್ವಿಗುಣಗೊಳ್ಳುತ್ತದೆ ಎಂದು ಹೇಳಬಹುದಾಗಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೀವು ಬ್ಯಾಂಕ್ ಅಥವಾ ಹಂಚಿ ಕಛೇರಿಗೆ ಭೇಟಿ ನೀಡಬೇಕಾಗುತ್ತದೆ. ಹೂಡಿಕೆದಾರರು 9 ವರ್ಷಗಳು ಮತ್ತು ಏಳು ವರ್ಷಗಳ ಹೂಡಿಕೆಯನ್ನು ಈ ಯೋಜನೆಯ ಅಡಿಯಲ್ಲಿ ಮಾಡಬೇಕಾಗುತ್ತದೆ ಮತ್ತು ಇದರ ಹಣವನ್ನು 115 ತಿಂಗಳ ನಂತರ ದುಪ್ಪಟ್ಟಾಗಿ ಪಡೆಯಬಹುದಾಗಿದೆ.

ಯೋಜನೆಯ ಅರ್ಹತೆಗಳು :

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಭಾರತದ ಕಾಯಂ ನಿವಾಸಿ ಆಗಿರಬೇಕಾಗುತ್ತದೆ. 18 ವರ್ಷಕ್ಕಿಂತ ಹೆಚ್ಚಿನ ವಯಸ್ಸನ್ನು ಅರ್ಜಿದಾರರು ಹೊಂದಿರಬೇಕು. ಪೋಸ್ಟ್ ಆಫೀಸ್ ಯೋಜನೆಯಲ್ಲಿ ಅರ್ಜಿದಾರರು ಅಪ್ರಾಪ್ತರಾಗಿದ್ದರೆ ಅವರ ಪೋಷಕರು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಡಿಯಲ್ಲಿ ಎನ್ ಆರ್ ಐ ಗಳು ಮತ್ತು ಹೆಚ್ ಯು ಎಫ್ ಗಳು ಹೂಡಿಕೆ ಮಾಡಲು ಅರ್ಹರಾಗಿರುವುದಿಲ್ಲ. ಕಂಪನಿಗಳು ಕಿಸಾನ್ ವಿಕಾಸ್ ಪತ್ರ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಈ ಯೋಜನೆಗೆ ಅರ್ಜಿಯನ್ನು ದೇಶದಲ್ಲಿರುವ ಎಲ್ಲಾ ರೈತರು ಅರ್ಜಿ ಸಲ್ಲಿಸಬಹುದು ಹಾಗೂ ಭಾರತದ ಯಾವುದೇ ನಾಗರೀಕರು ಸಹ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಕೆ ವಿ ಪಿ ಪ್ರಮಾಣ ಪತ್ರವನ್ನು ಕಿಸಾನ್ ವಿಕಾಸ್ ಪತ್ರ ಯೋಜನೆ 2023 ಕ್ಕಾಗಿ ಖರೀದಿಸಬೇಕಾಗುತ್ತದೆ. ಕನಿಷ್ಠ ಸಾವಿರ ರೂಪಾಯಿ ಹೂಡಿಕೆಯನ್ನು ಈ ಯೋಜನೆಯ ಅಡಿಯಲ್ಲಿ ಮಾಡಬೇಕು. ಅಲ್ಲದೆ ಈ ಯೋಜನೆಗೆ ಯಾವುದೇ ಹೆಚ್ಚಿನ ಮಿತಿಯನ್ನು ಹೂಡಿಕೆ ಮಾಡಲು ಇರುವುದಿಲ್ಲ ನಿಮಗೆ ಎಷ್ಟು ಹೂಡಿಕೆ ಮಾಡಬೇಕು ಎನಿಸುತ್ತದೆ ಅಷ್ಟು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಡಿಯಲ್ಲಿ ಪೋಸ್ಟ್ ಆಫೀಸ್ ಅಲ್ಲಿ 50,000 ಕ್ಕಿಂತ ಹೆಚ್ಚು ಹೂಡಿಕೆಯನ್ನು ಮಾಡಬೇಕಾದರೆ ನೀವು ಪ್ಯಾನ್ ಕಾರ್ಡ್ ವಿವರಗಳನ್ನು ಪೋಸ್ಟ್ ಆಫೀಸ್ಗೆ ಒದಗಿಸಬೇಕಾಗುತ್ತದೆ.

ಪೋಸ್ಟ್ ಆಫೀಸ್ ಕೆ ವಿ ಪಿ ಸ್ಕೀಮ್ :

ಪ್ರಸ್ತುತ ಈ ಯೋಜನೆಯ ಅಡಿಯಲ್ಲಿ ಬಡ್ಡಿದರವು 7.5% ರಷ್ಟು ಆಗಿದ್ದು ನೀವು ಹೂಡಿಕೆಯ ಮೊತ್ತವನ್ನು 115 ತಿಂಗಳ ನಂತರ ಪಡೆಯಬಹುದಾಗಿದೆ. ಅಲ್ಲದೆ ಈ ಯೋಜನೆಯ ಮೂಲಕ ಹೂಡಿಕೆದಾರರು ಮುಂಚಿತವಾಗಿಯೇ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ : LPG ಸೆಪ್ಟೆಂಬರ್ ಧಮಾಕ: ಮತ್ತೆ ಇಳಿಕೆ ಕಂಡ ಸಿಲಿಂಡರ್.!‌ ಈಗ ಕೇವಲ 428 ರೂ.ಗೆ ಗ್ಯಾಸ್ ಸಿಲಿಂಡರ್ ಹೇಗೆ ಗೊತ್ತಾ?

ಕಿಸಾನ್ ಪತ್ರ ಯೋಜನೆಯ ಪ್ರಯೋಜನಗಳು :

ಕಿಸಾನ್ ವಿಕಾಸ್ ಪತ್ರ ಯೋಜನೆಯ ಒಂದು ರೀತಿಯಲ್ಲಿ ಉಳಿತಾಯ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರು ತಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬಹುದಾಗಿದೆ. ಕನಿಷ್ಠ 115 ತಿಂಗಳು ರವರೆಗೆ ಹೂಡಿಕೆದಾರರು ಹಣವನ್ನು ಹೂಡಿಕೆ ಮಾಡಿದಾಗ ಮಾತ್ರ ಹೂಡಿಕೆಯು ದ್ವಿಗಣಗೊಳಿಸಬಹುದು.

ಹೀಗೆ ಕೇಂದ್ರ ಸರ್ಕಾರವು ಭಾರತದ ನಾಗರಿಕರಿಗಾಗಿ ಪೋಸ್ಟ್ ಆಫೀಸ್ನ ಮೂಲಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಯೋಜನೆಯಡಿಯಲ್ಲಿ ಭಾರತದ ನಾಗರಿಕರು ಸುಲಭವಾಗಿ ಉಳಿತಾಯ ಮಾಡಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸೆಪ್ಟೆಂಬರ್‌ನಲ್ಲಿ ಎಲ್ಲ ಶಾಲಾ ಕಾಲೇಜುಗಳು ಬಂದ್.! ಒಂದರ ಹಿಂದೊಂದು ರಜೆಯೋ ರಜೆ…! ಖುಷಿಯಿಂದ ಕುಪ್ಪಳಿಸಿದ ವಿದ್ಯಾರ್ಥಿಗಳು

ಬೆವರಿನಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಕಾಳಜಿ ತೋರದಿದ್ದರೆ ಈ ರೋಗಗಳು ಕಾಡದೆ ಬಿಡುವುದಿಲ್ಲ.!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments