Saturday, June 15, 2024
HomeNewsಭೂತಾನ್ ಅಡಿಕೆ ಭಾರತಕ್ಕೆ ಬಂದರೆ ನಮ್ಮ ಅಡಿಕೆ ಬೆಲೆ ಎಷ್ಟಾಗುತ್ತೆ...? ಪಾತಾಳಕ್ಕೆ ಕುಸಿಯುತ್ತಾ ಅಡಿಕೆ ರೇಟ್?

ಭೂತಾನ್ ಅಡಿಕೆ ಭಾರತಕ್ಕೆ ಬಂದರೆ ನಮ್ಮ ಅಡಿಕೆ ಬೆಲೆ ಎಷ್ಟಾಗುತ್ತೆ…? ಪಾತಾಳಕ್ಕೆ ಕುಸಿಯುತ್ತಾ ಅಡಿಕೆ ರೇಟ್?

ನಮಸ್ಕಾರ ಸ್ನೇಹಿತರೇ, ಅಡಿಕೆ ಬೆಳೆಗಾರರಿಗೆ ಇತ್ತೀಚಿಗೆ ರಾಜ್ಯದಲ್ಲಿ ಎಲೆ ಚುಕ್ಕಿ ರೋಗದಿಂದಾಗಿ ಬೆಳೆ ನಾಶವಾಗುತ್ತಿರುವ ಆತಂಕ ಒಂದು ಕಡೆಯಾದರೆ ಅಡಿಕೆ ಆಮದು ಭೂತಾನ್ ನಿಂದ ಮಾಡಿಕೊಳ್ಳಲಾಗುತ್ತಿದೆ ಎನ್ನುವ ವಿಷಯ ಮತ್ತೊಂದು ಕಡೆ ಅಡಿಕೆ ಬೆಳೆಗಾರರಿಗೆ ಚಿಂತೆಯನ್ನು ಹೆಚ್ಚಿಸಿದೆ. ಅಡಿಕೆ ಆಮದು ಈ ವರ್ಷ ಭೂತಾನ್ ನಿಂದ ಮಾಡಿಕೊಳ್ಳಲಾಗಿದೆ. ಪ್ರತಿವರ್ಷವೂ ಕೂಡ ಅದೇ ರೀತಿ ಅಡಿಕೆ ಆಮದು ಮಾಡಿಕೊಂಡರೆ ರಾಜ್ಯದಲ್ಲಿ ಬೆಳೆಯುವ ಅಡಿಕೆಗಳು ಎಲ್ಲಿ ಹೋಗುತ್ತವೆ ನಮಗೆ ಬೆಲೆ ಎಲ್ಲಿ ಸಿಗುತ್ತದೆ ಎಂದು ರಾಜ್ಯದಲ್ಲಿ ಹಲವು ರೈತರು ಆತಂಕದಲ್ಲಿದ್ದಾರೆ. ಆದರೆ ಆಮದು ಭೂತಾನ್ ನಿಂದ ಮಾಡಿಕೊಂಡರೆ ಸ್ಥಳೀಯ ಅಡಿಕೆ ಬೆಳೆಗಾರರಿಗೆ ನಿಜಕ್ಕೂ ತೊಂದರೆ ಆಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಿ.

nut-import-from-bhutan
nut-import-from-bhutan
Join WhatsApp Group Join Telegram Group

ಭೂತಾನ್ ನಿಂದ ಅಡಿಕೆ ಆಮದು :

17000 ಟನ್ ಹಸಿ ಅಡಿಕೆಯನ್ನು ಈ ವರ್ಷ ಭೂತಾನ್ ರಾಷ್ಟ್ರದಿಂದ ಭಾರತವು ಆಮದು ಮಾಡಿಕೊಳ್ಳಲಾಗಿದೆ. ಶರತುರಹಿತ ಆಮದಿಗೆ ಪ್ರತಿ ವರ್ಷ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. ಒಟ್ಟಾರೆ ನಾಲ್ಕು ಪಾಯಿಂಟ್ 20 ಲಕ್ಷ ಹೆಕ್ಟರ್ ಭೂಮಿಯಲ್ಲಿ ನಮ್ಮ ರಾಜ್ಯದಲ್ಲಿ ಅಡಿಕೆಯನ್ನು ರೈತರು ಬೆಳೆಯುತ್ತಿದ್ದಾರೆ. ಶೇಕಡ 35 ರಷ್ಟು ದೇಶದಲ್ಲಿ ಅಡಿಕೆ ಉತ್ಪಾದನೆಯನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ಬೆಳೆಯಲಾಗುತ್ತದೆ ಅದರಲ್ಲೂ ರಾಜ್ಯದಲ್ಲಿ ಅಡಿಕೆ ಉತ್ಪಾದನೆಯು ಕಳೆದ ಮೂರು ವರ್ಷಗಳಲ್ಲಿ ಶೇಕಡಾ 30 ರಷ್ಟು ಹೆಚ್ಚಿದೆ ಎಂದು ಹೇಳಬಹುದು. ಆದರೂ ಈಗ ಸುಮಾರು ಮೂರು ಲಕ್ಷ ಟನ್ ಅಡಿಕೆಯ ಕೊರತೆ ದೇಶದಲ್ಲಿ ಇರುವುದನ್ನು ನೋಡಬಹುದಾಗಿದೆ ಇದನ್ನ ಬಗೆಹರಿಸುವ ಸಲುವಾಗಿ ಕೇಂದ್ರ ಸರ್ಕಾರವು ಅಡಿಕೆ ಆಮದನ್ನು ಭೂತಾನ್ ನಿಂದ ಮಾಡಿಕೊಳ್ಳಲು ನಿರ್ಧರಿಸಿದೆ.

ಇತರ ರಾಷ್ಟ್ರಗಳಲ್ಲಿ ಅಡಿಕೆ ಆಮದು :

ಮಯನ್ಮಾರ್ ಶ್ರೀಲಂಕಾ ಹಾಗೂ ಇಂಡೋನೇಷ್ಯಾದಿಂದ ಕಳೆದ ಎರಡು ವರ್ಷಗಳಲ್ಲಿ ಸ್ಥಳೀಯವಾಗಿ ಅಡಿಕೆ ಲಭ್ಯತೆ ಕಡಿಮೆ ಇರುವುದರಿಂದ ಅಡಿಕೆಯನ್ನು ಅಗತ್ಯಕ್ಕೆ ತಕ್ಕ ಹಾಗೆ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ.

ರೈತರು ಆತಂಕ ಪಡುವುದು ಬೇಡ :

ಅಡಿಕೆ ಆಮದನ್ನು ಇನ್ನು ಭೂತಾನ್ ನಿಂದ ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ಅಡಿಕೆ ಬೆಳೆಗೆ ಹೋಲಿಸಿದರೆ ಭೂತಾನನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣ ದೊಡ್ಡ ಪ್ರಮಾಣವೇನು ಅಲ್ಲ. ಶೇಕಡಾ ಎರಡರಷ್ಟು ಅಡಿಕೆಯನ್ನು ನಮ್ಮ ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಮಾತ್ರ ಆಮದು ಮಾಡಿಕೊಳ್ಳಲಾಗಿದೆ. ಇದರಿಂದ ಯಾವುದೇ ರೀತಿಯ ಪರಿಣಾಮ ಸ್ಥಳೀಯ ಅಡಿಕೆ ದರದ ಮೇಲೆ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನು ಓದಿ : ಸ್ಕಾಲರ್ಶಿಪ್ ಬಗ್ಗೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದುಕೊಳ್ಳಿ ಹೊಸ ಅಪ್ಡೇಟ್ ಬಂದಿದೆ

ಭೂತಾನ್ ಅಡಿಕೆ ಆಮದಿನ ಬೆಲೆ :

ಯುಪಿಎ ಸರ್ಕಾರ ಹೊರದೇಶದಿಂದ 2004 ರಿಂದ 2014ರ ವರೆಗೆ ಆಮದಾಗುವ ಅಡಿಕೆಗೆ 15,000ಗಳನ್ನು ಪ್ರತಿ ಟನ್ ಗೆ ಕೊಡುತ್ತಿತ್ತು. ನಂತರ ಪ್ರತಿ ಟನ್ ಗೆ 2020ರ ವರೆಗೆ 25500ಗಳನ್ನು ನೀಡಲಾಗುತ್ತಿತ್ತು. ಈ ದರದಲ್ಲಿ ಈಗ ಇನ್ನಷ್ಟು ಹೆಚ್ಚಳವಾಗಿದ್ದು 35,000ಗಳನ್ನು ಪ್ರತಿ ಟನ್ ಆಮದು ಅಡಿಕೆಗೆ ಕೊಡಲಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಅಡಿಕೆ ಬೆಲೆ ಕುಸಿಯುವುದಿಲ್ಲ ಎಂದು ಹೇಳಿದ್ದು ಸ್ಥಳೀಯ ರೈತರು ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಈಗಾಗಲೇ 40 ರಿಂದ 50 ಸಾವಿರಕ್ಕೂ ಮೀರಿದ ಅಡಿಕೆ ಧಾರಣೆ ನಮ್ಮ ದೇಶದಲ್ಲಿ ನೋಡಬಹುದು. ಪ್ರತಿ ಅಡಿಕೆಗೆ 50 ರಿಂದ 52,000ಗಳವರೆಗೆ ಈ ಬಾರಿ ಬೆಲೆ ಇದೆ. ಹಾಗಾಗಿ ಭೂತಾನ್ ನಿಂದ ಆಮದಾಗಿ ಭೂತಾನ್ ನಿಂದ ಬಂದಿರುವ ಅತ್ಯಲ್ಪ ಅಡಿಕೆಯಿಂದಾಗಿ ಆತಂಕವನ್ನು ಸ್ಥಳೀಯ ರೈತರು ಪಡುವ ಅಗತ್ಯವಿಲ್ಲ ಎಂದು ಕ್ಯಾಂಪ್ಕೋ ಕೂಡ ತಿಳಿಸಿದೆ.

ಹೀಗೆ ಭಾರತಕ್ಕೆ ಭೂತಾನ್ ಇಂದ ಅಡಿಕೆ ಆಮದನ್ನ ಮಾಡಿಕೊಳ್ಳಲಾಗಿದ್ದು, ಸ್ಥಳೀಯ ರೈತರು ಇದರಿಂದ ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರವು ಸ್ಥಳೀಯ ರೈತರು ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ರೈತರಿಗೆ ಹೇಳುವ ಮೂಲಕ ಸ್ವಲ್ಪ ನೆಟ್ಟುಸಿರು ಬಿಡುವಂತಾಗಿದೆ. ಹೀಗೆ ಭೂತಾನ್ ಇಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ವಿಷಯವನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಅಡಿಕೆ ಬೆಳೆಗಾರ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ.

ಇತರೆ ವಿಷಯಗಳು :

ಮುಖ್ಯಮಂತ್ರಿ ಸಾಗರೋತ್ತರ ವಿದ್ಯಾರ್ಥಿವೇತನ: ಸರ್ಕಾರದಿಂದ ಸಿಗುತ್ತೆ 20 ಲಕ್ಷ; ಆನ್‌ಲೈನ್‌ನಲ್ಲಿ ಹೀಗೆ ಅರ್ಜಿ ಸಲ್ಲಿಸಿ

2 ರೂಪಾಯಿ ಹಳೆಯ ನಾಣ್ಯ ಇದ್ರೆ ನಿಮ್ಮ ಅದೃಷ್ಟ ಬದಲಾಗೋದು ಗ್ಯಾರಂಟೀ..! ಪ್ರತಿಯೊಬ್ಬರು ಈ ವಿಷಯವನ್ನು ನೋಡಲೇಬೇಕಾದ ಸುದ್ದಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments