Saturday, July 27, 2024
HomeNewsಸರ್ಕಾರವು ಪಾಲಿ ಹೌಸ್ ಕೃಷಿ ಯೋಜನೆಯ ಮೂಲಕ 50% ಸಬ್ಸಿಡಿ ಒದಗಿಸುತ್ತಿದೆ ಸಬ್ಸಿಡಿ 21 ಲಕ್ಷ...

ಸರ್ಕಾರವು ಪಾಲಿ ಹೌಸ್ ಕೃಷಿ ಯೋಜನೆಯ ಮೂಲಕ 50% ಸಬ್ಸಿಡಿ ಒದಗಿಸುತ್ತಿದೆ ಸಬ್ಸಿಡಿ 21 ಲಕ್ಷ !

ನಮಸ್ಕಾರ ಸ್ನೇಹಿತರೇ, ಇಂದು ನಿಮಗೆ ತಿಳಿಸುತ್ತಿರುವ ಸರ್ಕಾರದ ಯೋಜನೆಗಳಲ್ಲಿ ಪಾಲಿ ಹೌಸ್ ಕೃಷಿ ಯೋಜನೆಯು ಒಂದಾಗಿದೆ. ಈ ಪಾಲಿ ಹೌಸ್ ಎಂದರೇನು? ಅದನ್ನು ಹೇಗೆ ನಿರ್ಮಾಣ ಮಾಡಬೇಕು?, ಅದರಿಂದಾಗುವ ಪ್ರಯೋಜನವೇನು?, ಈ ಪಾಲಿ ಹೌಸ್ ಯೋಜನೆಯು ರೈತರಿಗೆ ಹೇಗೆ ಸಹಕಾರಿಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನಿಮಗೆ ತಿಳಿಸ ಬಯಸುತ್ತೇನೆ.

Pali House Farming Scheme
Pali House Farming Scheme
Join WhatsApp Group Join Telegram Group

ಪಾಲಿಹೌಸ್ ಫಾರ್ಮಿಂಗ್ ಎಂದರೇನು? :

ಪಾಲಿಥೀನ್ ವಸ್ತುಗಳಿಂದ ಮಾಡಿದ ಹಾಗೂ ಆಧುನಿಕ ಕೃಷಿ ಪದ್ಧತಿಯನ್ನು ಒಳಗೊಂಡಿರುವ ಹಸಿರು ಮನೆಯ ಬಳಕೆಯನ್ನು ಪಾಲಿಹೌಸ್ ಫಾರ್ಮಿಂಗ್ ಎಂದು ಕರೆಯಲಾಗುತ್ತದೆ. ಪಾಲಿಥಿಲಿನ್ ಎಂಬ ಪದದಿಂದ ಪಾಲಿಹೌಸ್ ಎಂಬ ಪದವು ಬಂದಿದೆ. ಪಾಲಿಥಿಲಿನ್ ಎಂದರೆ ವ್ಯಾಪಕವಾಗಿ ಹಸಿರು ಮನೆ ನಿರ್ಮಾಣದಲ್ಲಿ ಬಳಸಲಾಗುವ ಪ್ಲಾಸ್ಟಿಕ್ ನ ಒಂದು ವಿಧವಾಗಿದೆ.

ಭಾರತದಲ್ಲಿ ಪಾಲಿಹೌಸ್ ಕೃಷಿ ತರಬೇತಿ ಕೇಂದ್ರಗಳು :

ಪಾಲಿಹೌಸ್ ಕೃಷಿ ತರಬೇತಿ ಕೇಂದ್ರಗಳು ಭಾರತದಲ್ಲಿ ಸಾಕಷ್ಟಿವೆ ಅವುಗಳಲ್ಲಿ ಪ್ರಮುಖ ಕೃಷಿ ಕೇಂದ್ರವೆಂದರೆ, ಇಂಡಿಯನ್ ಕೌನ್ಸಿಲ್ ಅಗ್ರಿಕಲ್ಚರಲ್ ರಿಸರ್ಚ್ ಸಂಸ್ಥೆಗಳು (ಐಸಿಎಆರ್). ಭಾರತದದ್ಯಂತ ಹಲವಾರು ಸಂಸ್ಥೆಗಳನ್ನು ಹೊಂದಿರುವ ಐಸಿಎಆರ್ ಸಂಸ್ಥೆಯು ಪಾಲಿ ಹೌಸ್ ಫಾರ್ಮಿಂಗ್ ತರಬೇತಿ ಕಾರ್ಯಕ್ರಮಗಳನ್ನು ವಿಧ್ಯಾರ್ಥಿಗಳಿಗೆ ನೀಡುತ್ತಿದೆ. ಐಸಿಎಆರ್‌‌ನ ಪ್ರಮುಖ ತರಬೇತಿ ಕೇಂದ್ರಗಳ ಬಗ್ಗೆ ಗಮನ ಹರಿಸುವುದಾದರೆ ಸಮಗ್ರ ಕೀತಾ ನಿರ್ವಹಣೆಗಾಗಿರುವ ರಾಷ್ಟ್ರೀಯ ಸಂಶೋಧನಾ ಕೇಂದ್ರ, ಬೀಜ ಮಸಾಲೆಗಳ ರಾಷ್ಟ್ರೀಯ ಸಂಶೋಧನಾ ಕೇಂದ್ರ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಹಾರ್ವೆಸ್ಟ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಜೊತೆಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮೊದಲಾದವು.

ಎನ್ ಹೆಚ್ ಬಿ ತರಬೇತಿ ಕೇಂದ್ರಗಳು :

ಎನ್ ಹೆಚ್ ಬಿ ಅಂದರೆ ರಾಷ್ಟ್ರೀಯ ತೋಟಗಾರಿಕಾ ಮಂಡಳಿ ತರಬೇತಿ ಕೇಂದ್ರಗಳು ಭಾರತದ ಅತ್ಯಂತ ಇದ್ದು, ಈ ಮಂಡಳಿಗಳು ಪಾಲಿ ಹೌಸ್ ಕೃಷಿ ಸೇರಿದಂತೆ ತೋಟಗಾರಿಕೆಯ ಬಗ್ಗೆ ಇರುವ ಹಲವಾರು ಅಂಶಗಳ ಬಗ್ಗೆ ತರಬೇತಿಯನ್ನು ನೀಡುತ್ತವೆ. ರಾಷ್ಟ್ರೀಯ ತೋಟಗಾರಿಕಾ ಮಂಡಳಿ ತರಬೇತಿ ಕೇಂದ್ರಗಳು ದೆಹಲಿ, ಬೆಂಗಳೂರು, ಕೊಲ್ಕತ್ತಾ ಮತ್ತು ಪುಣೆಯಲ್ಲಿವೆ.

ಭಾರತದಲ್ಲಿರುವ ಕೆವಿಕೆಗಳು :

ಕೃಷಿ ವಿಜ್ಞಾನ ಕೇಂದ್ರಗಳು, ರೈತರಿಗೆ ತಾಂತ್ರಿಕ ಬೆಂಬಲವನ್ನು ಒದಗಿಸುವ ಮೂಲಕ ಭಾರತ ಸರ್ಕಾರದಿಂದ ಈ ಕೃಷಿ ವಿಸ್ತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಸಹ ಪಾಲಿಹೌಸ್ ಕೃಷಿ ತರಬೇತಿಯನ್ನು ನೀಡುವ ಮೂಲಕ ರೈತರು ಪಾಲಿ ಹೌಸ್ ಹೌಸ್ ಫಾರ್ಮಿಂಗ್ ಬೆಂಬಲಿಸುತ್ತಿದೆ.

ಪ್ರೈವೇಟ್ ಪಾಲಿ ಹೌಸ್ ಕೃಷಿ ತರಬೇತಿ ಕೇಂದ್ರಗಳು:

ಭಾರತದಲ್ಲಿ ಸರ್ಕಾರಿ ಪಾಲಿ ಹೌಸ್, ಕೃಷಿ ತರಬೇತಿ ಕೇಂದ್ರಗಳಲ್ಲದೆ, ಖಾಸಗಿ ಕೃಷಿ ತರಬೇತಿ ಕೇಂದ್ರಗಳನ್ನು ನೋಡಬಹುದು. ಅವುಗಳೆಂದರೆ ಹೈಟೆಕ್ ಕೃಷಿ ತರಬೇತಿ ಕೇಂದ್ರ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಟಿಕಲ್ಚರಲ್ ರಿಸರ್ಚ್ ಅಂಡ್ ಅಗ್ರಿಟೆಕ್ ಇಂಡಿಯಾ.

ಪಾಲಿಹೌಸ್ ಗಳನ್ನು ಸ್ಥಾಪಿಸಲು ಸಬ್ಸಿಡಿ :

ಪಾಲಿ ಹೌಸ್ ಗಳನ್ನು ಸ್ಥಾಪಿಸಲು ಭಾರತ ಸರ್ಕಾರ ಕೃಷಿಕರಿಗೆ ಸಬ್ಸಿಡಿಗಳನ್ನು ಒದಗಿಸುತ್ತಿದೆ. ಈ ಸಬ್ಸಿಡಿಗಳಿಂದ ರೈತರು ತಮ್ಮ ಬೆಳೆ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಜೊತೆಗೆ ಭಾರತ ಸರ್ಕಾರವು ಸುರಕ್ಷಿತ ಹಾಗೂ ಸಂರಕ್ಷಿತ ಕೃಷಿ ತಂತ್ರಗಳ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಗರಿಷ್ಟ ಪ್ರತಿ ಹೆಕ್ಟೇರ್ಗೆ 21 ಲಕ್ಷ ನೀಡುವ ಮೂಲಕ ಶೇಕಡ 50ರಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆಂಧ್ರಪ್ರದೇಶ ರಾಜ್ಯ ಸರ್ಕಾರವು ಗರಿಷ್ಠ ಪ್ರತಿ ಹೆಕ್ಟೇರ್ಗೆ 21 ಲಕ್ಷ ನೀಡುವ ಮೂಲಕ 70% ರಷ್ಟು ಪಾಲಿ ಹೌಸ್ ಸ್ಥಾಪನೆಗೆ ವೆಚ್ಚ ಮಾಡಿದೆ.

ಇದನ್ನು ಓದಿ : ಪೋಸ್ಟ್ ಆಫೀಸ್‌ ನಲ್ಲಿ 50 ರೂ ಹೂಡಿಕೆ 35 ಲಕ್ಷ ಹಣ ಗಳಿಕೆ; ಹೊಸ ಯೋಜನೆ ಜನರೇ ಸದುಪಯೋಗಪಡಿಸಿಕೊಳ್ಳಿ, ಇಲ್ಲಿದೆ ಸಂಪೂರ್ಣ ಮಾಹಿತಿ

ಪಾಲಿಹೌಸ್ ಸಬ್ಸಿಡಿ ಯೋಜನೆಗಾಗಿ ಅರ್ಜಿ ಸಲ್ಲಿಸುವಿಕೆ :

ರೈತರು ತಮ್ಮ ಪಾಲಿ ಹೌಸ್ ಫಾರ್ಮಿಂಗ್ ಯೋಜನೆಗೆ ಸಬ್ಸಿಡಿಯನ್ನು ಪಡೆಯಲು ರೈತರು ತಮ್ಮ ಸ್ಥಳೀಯ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬೇಕು ಅಥವಾ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ವೆಬ್ಸೈಟ್ಗೆ ಭೇಟಿ ನೀಡಬೇಕು.

ಈ ಯೋಜನೆಯ ಬಗ್ಗೆ ಹೇಳುವುದಾದರೆ ಈ ಪಾಲಿ ಹೌಸ್ ಸಬ್ಸಿಡಿ ಯೋಜನೆಯು ಒಂದು ಉಪಯುಕ್ತ ಯೋಜನೆಯಾಗಿ ರೈತರಿಗೆ ಸಹಾಯಕವಾಗುತ್ತದೆ. ಹೊಸಹೊಸ ತಂತ್ರಜ್ಞಾನಗಳನ್ನು ಬಳಸಿ ಬೆಳೆಯನ್ನು ಬೆಳೆಯಲು ಸಹಕಾರಿಯಾಗುತ್ತಿದೆ. ಈ ಯೋಜನೆಗಾಗಿ ಭಾರತದಾದ್ಯಂತ ಅನೇಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವಂತೆ ಮಾಡಲು ಕೇಂದ್ರ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ.

ಯೋಜನೆಯ ಸಬ್ಸಿಡಿ ಹಣ ಎಷ್ಟು ?

21 ಲಕ್ಷ

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ?

ರಾಷ್ಟ್ರೀಯ ತೋಟಗಾರಿಕಾ ಮಂಡಳಿ

ಯೋಜನೆಯ ಹೆಸರನ್ನು ತಿಳಿಸಿ ?

ಪಾಲಿ ಹೌಸ್ ಕೃಷಿ ಯೋಜನೆ

ಇದನ್ನು ಓದಿ : ಸಂಜು ಬಸಯ್ಯ ನವರ ಹೆಂಡತಿ ಇವರೇ ನೋಡಿ, ರಿಜಿಸ್ಟರ್ ಮದುವೆಯಾದರೂ 8 ವರ್ಷದ ಪ್ರೀತಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments