Friday, July 26, 2024
HomeScholarshipಬರೋಬ್ಬರಿ 5 ಲಕ್ಷ ವಿದ್ಯಾರ್ಥಿ ವೇತನ : ಖಾಸಗಿ ವಿದ್ಯಾರ್ಥಿ ವೇತನಕ್ಕೆ ಬೇಗ ಅರ್ಜಿ ಸಲ್ಲಿಸಿ

ಬರೋಬ್ಬರಿ 5 ಲಕ್ಷ ವಿದ್ಯಾರ್ಥಿ ವೇತನ : ಖಾಸಗಿ ವಿದ್ಯಾರ್ಥಿ ವೇತನಕ್ಕೆ ಬೇಗ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಬರೋಬ್ಬರಿ 5 ಲಕ್ಷ ಖಾಸಗಿ ವಿದ್ಯಾರ್ಥಿ ವೇತನವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ. ಇವತ್ತಿನ ಲೇಖನದಲ್ಲಿ ನಿಮಗೆ ರಾಮನ್ ಕಾಂತ್ ಮುಂಜಲ್ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಲಾಗುತ್ತಿದ್ದು ಈ ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಈ ವಿದ್ಯಾರ್ಥಿ ವೇತನದ ಮೊತ್ತ ಎಷ್ಟು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Raman Kant Munjal Scholarship
Raman Kant Munjal Scholarship
Join WhatsApp Group Join Telegram Group

ರಾಮನ್ ಕಾಂತ್ ಮುಂಜಲ್ ವಿದ್ಯಾರ್ಥಿ ವೇತನ :

ಫಿನ್ಕಾರ್ಪ್ ಫೌಂಡೇಶನ್ ಮೂಲಕ ರಾಮನ್ ಕಾಂತ್ ಮುಂಜಲ್ ಹೀರೋ ಬೆಂಬಲಿತವಾಗಿದೆ. ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಿಗೆ ಪ್ರವೇಶ ಪಡೆಯಲು ಮತ್ತು ಭರವಸೆಯ ವೃತ್ತಿ ಹಾಗೂ ತಮ್ಮ ಜೀವನದ ಕನಸನ್ನು ಕಂಡಿರುವಂತಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ನೀಡುವ ಉದ್ದೇಶದಿಂದ ಅಂತಹ ವಿದ್ಯಾರ್ಥಿಗಳಿಗೆ ಹಣಕಾಸು ಸಂಬಂಧಿತ ಕೋರ್ಸ್ ಗಳನ್ನು ಅನುಸರಿಸುವಂತಹ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ಸುಲಭವಾಗಿ ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯುವುದರ ಮೂಲಕ ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಪ್ರಸ್ತುತ ಈ ವಿದ್ಯಾರ್ಥಿ ವೇತನವನ್ನು ಪಡೆಯುವ ಅಭ್ಯರ್ಥಿಗಳು ಒಂದನೇ ವರ್ಷದಲ್ಲಿ ಪದವಿ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಓದುತ್ತಿದ್ದರೆ ಆ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿ ವೇತನದ ಅರ್ಹತೆಗಳು :

ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಪ್ರಸ್ತುತ ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಬಿಬಿಎ, ಬಿ ಎಫ್ ಐ ಎ, ಬಿಕಾಂ, ಇಂಟಿಗ್ರೇಟೆಡ್ ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಂಟ್, ಬ್ಯಾಚುಲರ್ಸ್ ಇನ್ ಬಿಸಿನೆಸ್ ಸ್ಟಡೀಸ್, ಬಿಎ ಎಕನಾಮಿಕ್ಸ್, ಬ್ಯಾಚುಲರ್ಸ್ ಇನ್ ಬ್ಯಾಂಕಿಂಗ್ ಮತ್ತು ವಿಮೆ, ಅಕೌಂಟಿಂಗ್ ಮತ್ತು ಫೈನಾನ್ಸಿಂಗ್ ನಲ್ಲಿ ಪದವಿ ಮತ್ತು ಬಿಎಸ್ಸಿ ಅಥವಾ ಯಾವುದೇ ಇತರ ಕೋರ್ಸ್ ಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಒಂದನೇ ವರ್ಷದ ಪದವಿಯಲ್ಲಿ ಓದುತ್ತಿದ್ದರೆ ಅಂತಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಆರ್ಥಿಕ ನೆರವನ್ನು ಪಡೆಯಬಹುದಾಗಿದೆ. ಹಣಕಾಸು ಸಂಬಂಧಿಸಿದ ಪದವಿ ಕೋರ್ಸ್ಗಳಲ್ಲಿ ಓದುತ್ತಿರುವವರು ಸಹ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿ ವೇತನದ ಮೊತ್ತ :

ಮೂರು ವರ್ಷಗಳ ಅವಧಿಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಈ ವಿದ್ಯಾರ್ಥಿ ವೇತನದ ಮೂಲಕ ಐಎನ್ಆರ್ 5 ವರೆಗೆ ಹಣಕಾಸಿನ ನೆರವನ್ನು ಈ ವಿದ್ಯಾರ್ಥಿ ವೇತನದ ಅರ್ಹತೆಯನ್ನು ಹೊಂದಿದಂತಹ ವಿದ್ಯಾರ್ಥಿಗಳು ಪಡೆಯಬಹುದಾಗಿದೆ.

ವಿದ್ಯಾರ್ಥಿ ವೇತನದ ಅರ್ಹತೆಗಳು :

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಕನಿಷ್ಠ 80% ಅಂಕಗಳನ್ನು ವಿದ್ಯಾರ್ಥಿಗಳು 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಪಡೆದಿರಬೇಕು. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 4 ಲಕ್ಷಕ್ಕಿಂತ ಹೆಚ್ಚಿರೋದೇ ಕಡಿಮೆ ಇರಬೇಕು. ಭಾರತೀಯ ಪ್ರಜೆಗಳು ಮಾತ್ರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ : ಈ ಹುಡುಗನಿಗೆ ಪುಸ್ತಕಗಳ ಗುಂಪಲ್ಲಿ ಅಡಗಿರುವ ಛತ್ರಿಯನ್ನು ಹುಡುಕಿಕೊಡುವಿರಾ?

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, 10 ಮತ್ತು 12ನೇ ತರಗತಿಯ ಅಂಕಪಟ್ಟಿ, ಆಧಾರ್ ಕಾರ್ಡ್, ಪೋಷಕರ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ ,ಪೋಷಕರ ಬ್ಯಾಂಕ್ ಪಾಸ್ ಬುಕ್ ,ಪ್ರಸ್ತುತ ವರ್ಷದ ಪ್ರವೇಶ ಪುರಾವೆ ಕಾಲೇಜು ನೀಡಿದ ಕಾಲೇಜು ಶುಲ್ಕ ರಶೀದಿ ಅಥವಾ ಬೇಡಿಕೆ ರಶೀದಿ ,ಅರ್ಜಿದಾರರು ಒದಗಿಸಿದ ಎಲ್ಲಾ ದಾಖಲೆಗಳು ಅವರ ಜ್ಞಾನಕ್ಕೆ ನಿಜವೆಂದು ಹೇಳುವ ಅಫೈಡೆವಿಟ್ ,ಪಾಸ್ಪೋರ್ಟ್ ಸೈಜ್ ಫೋಟೋ.

ಹೀಗೆ 5 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ಉನ್ನತ ಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇದೊಂದು ಅವಕಾಶ ಎಂದು ಹೇಳಬಹುದಾಗಿದೆ. ಹಾಗಾಗಿ ಈ ವಿದ್ಯಾರ್ಥಿ ವೇತನದ ಬಗ್ಗೆ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಮಕ್ಕಳು ಯಾರಾದರೂ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಈ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಈ ಹುಡುಗನಿಗೆ ಪುಸ್ತಕಗಳ ಗುಂಪಲ್ಲಿ ಅಡಗಿರುವ ಛತ್ರಿಯನ್ನು ಹುಡುಕಿಕೊಡುವಿರಾ?

ಸಿಮ್ ಕಾರ್ಡ್ ಬ್ರೇಕಿಂಗ್‌ ನ್ಯೂಸ್: ಈ ನಿಯಮ ಮೀರಿದ್ರೆ 10 ಲಕ್ಷ ದಂಡ ಕಟ್ಟಿಟ್ಟ ಬುತ್ತಿ..!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments