Saturday, June 22, 2024
HomeNewsಒಂದೇ ಕುಟುಂಬದಲ್ಲಿ 2 ರಿಂದ 3 ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್

ಒಂದೇ ಕುಟುಂಬದಲ್ಲಿ 2 ರಿಂದ 3 ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್

ನಮಸ್ಕಾರ ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಬಹಳಷ್ಟು ಡಿಮ್ಯಾಂಡ್ ರೇಷನ್ ಕಾರ್ಡ್ ಗಳಿಗೆ ಬಂದಿದೆ. ಅದರಲ್ಲಿಯೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಶೈಕ್ಷಣಿಕ ಶುಲ್ಕ ವೈದ್ಯಕೀಯ ಮತ್ತು ಉಚಿತ ಪಡಿತರದಲ್ಲಿ ಹೆಚ್ಚು ರಿಯಾಯಿತಿ ಸಿಗುತ್ತಿರುವುದರಿಂದ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಅನುಕೂಲಸ್ಥರು ಸಹ ಪಡೆಯುವುದಕ್ಕೆ ಹಾಗೂ ತಮ್ಮ ಎಪಿಎಲ್ ಕಾರ್ಡ್ಗಳನ್ನು ಬಿಪಿಎಲ್ ಕಾರ್ಡ್ ಗಳಾಗಿ ಬದಲಾಯಿಸಿಕೊಳ್ಳುವುದಕ್ಕೆ ಸಾಕಷ್ಟು ಜನರು ಬಯಸುತ್ತಿದ್ದಾರೆ. ಗಾಂಧವರಿಗೆ ಸರ್ಕಾರವು ಹೊಸ ರೂಲ್ಸ್ ಅನ್ನು ಮಾಡಿದ್ದು ಆ ಹೊಸ ರೂಲ್ಸ್ ಏನು ಎಂಬುದರ ಬಗ್ಗೆ ಇದೀಗ ನೀವು ನೋಡಬಹುದು.

ration cards in a family
Join WhatsApp Group Join Telegram Group

ಸರ್ಕಾರದಿಂದ ಖಡಕ್ ಎಚ್ಚರಿಕೆ :

ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ಕುರಿತು 2016ರಲ್ಲಿಯೇ ಮಾನದಂಡವನ್ನು ಜಾರಿಗೆ ತಂದಿದೆ. ಅದನ್ನು ಮೀರಿ ರೇಷನ್ ಕಾರ್ಡ್ ಅನ್ನು ಸರ್ಕಾರಕ್ಕೆ ವಂಚಿಸಿ ಹೊಂದಿರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಇದೀಗ ಸರ್ಕಾರ ಮಾಡುತ್ತಿದ್ದು ಅದಕ್ಕೆ ಇದು ಸಕಾಲವಾಗಿದೆ ಎಂದು ಹೇಳಬಹುದಾಗಿದೆ. ಅನರ್ಹರಲ್ಲದವರು ಸಹ ರೇಷನ್ ಕಾರ್ಡ್ ಹೊಂದಿದ್ದರೆ ಅಂಥವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರವು ಜನತೆಗೆ ಖಡಕ್ ಎಚ್ಚರಿಕೆಯನ್ನು ನೀಡುತ್ತಿದೆ. ಇದರೊಂದಿಗೆ ಮತ್ತೊಂದು ಸಮಸ್ಯೆ ಸರ್ಕಾರಕ್ಕೆ ಎದುರಾಗಿದ್ದು ಅದೇನೆಂದರೆ ಕೆಲವರು ಒಂದೇ ಕುಟುಂಬದಲ್ಲಿ ವಾಸಿಸುತ್ತಿದ್ದರು ಸಹ ಬೇರೆ ಬೇರೆ ರೇಷನ್ ಕಾರ್ಡ್ ಅನ್ನು ಹೊಂದಿರುತ್ತಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಹೆಚ್ಚು ಉದಾಹರಣೆಗಳನ್ನು ಕಾಣಬಹುದಾಗಿದೆ ಅಂದರೆ ಒಂದು ಕುಟುಂಬದಲ್ಲಿ ತಂದೆ ತಾಯಿ ಅವರ ಹಿರಿಯ ಮಗ ಹಿರಿಯ ಸೊಸೆ, ಹಿರಿಯ ಮಗನ ಮಕ್ಕಳು ಕಿರಿಯ ಮಗ ಕಿರಿಯ ಸೊಸೆ ಕಿರಿಯ ಮಗನ ಮಕ್ಕಳು ಹೀಗೆ ಎಲ್ಲರೂ ಒಟ್ಟಿಗೆ ವಾಸ ಮಾಡುತ್ತಿದ್ದರು ಸಹ ಪ್ರತಿಯೊಬ್ಬರೂ ಸಹ ಪ್ರತ್ಯೇಕವಾಗಿ ಒಂದು ರೇಷನ್ ಕಾರ್ಡ್ ಅನ್ನು ಮಾಡಿಸಿಕೊಂಡಿರುತ್ತಾರೆ.

ಪ್ರತ್ಯೇಕ ರೇಷನ್ ಕಾರ್ಡ್ :

ಒಂದು ರೇಷನ್ ಕಾರ್ಡ್ ಅನ್ನು ತಂದೆ ತಾಯಿ ಹಾಗೂ ಇನ್ನೊಂದು ರೇಷನ್ ಕಾರ್ಡ್ ಅನ್ನು ಹಿರಿಯ ಮಗ ಹಿರಿಯ ಸಸ್ಯ ಅವರ ಮಕ್ಕಳು ಅಲ್ಲದೆ ಇನ್ನೊಂದು ರೇಷನ್ ಕಾರ್ಡ್ ಅನ್ನು ಕಿರಿಯ ಮಗ ಕಿರಿಯ ಸೊಸೆ ಅವರ ಮಕ್ಕಳು ಹೊಂದಿರುತ್ತಾರೆ ಆದರೆ ಇವರೆಲ್ಲರ ವಿಳಾಸವು ರೇಷನ್ ಕಾರ್ಡ್ ನಲ್ಲಿ ಒಂದನ್ನೇ ತೋರಿಸುತ್ತದೆ. ಇದು ಸಹ ಒಂದು ರೀತಿಯಲ್ಲಿ ಸರ್ಕಾರವನ್ನು ವಂಚಿಸುವ ಉದ್ದೇಶವೇ ಆಗಿರುತ್ತದೆ ಯಾಕೆಂದರೆ ಒಂದು ಕುಟುಂಬಕ್ಕೆ ಒಂದು ರೇಷನ್ ಕಾರ್ಡ್ ಅನ್ನು ಸರ್ಕಾರವು ಹೇಳಿರುವುದರಿಂದ ಇವರು ಎಲ್ಲರೂ ಒಟ್ಟಿಗೆ ಇದ್ದ ಅವರೆಲ್ಲರ ಹೆಸರುಗಳನ್ನು ಒಳಗೊಂಡಿರುವ ಒಂದೇ ರೇಷನ್ ಕಾರ್ಡ್ ಅನ್ನು ಹಾಕೊಟುಂಬ ಹೊಂದಿರಬೇಕಾಗುತ್ತದೆ ಆದರೆ ಪ್ರತ್ಯೇಕವಾದ ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳುವ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಇವರು ಪಡೆಯುತ್ತಿರುತ್ತಾರೆ. ಹಾಗಾಗಿ ಸರ್ಕಾರವು ಮುಂದೆ ಏನಾದರೂ ಈ ಕುರಿತು ಕ್ರಮಗಳನ್ನು ಕೈಗೊಂಡರೆ ಇಂತಹ ಜನರಿಗೆ ಇದು ಸಮಸ್ಯೆ ಆಗಲಿದೆ. ಒಂದು ವೇಳೆ ಪ್ರತ್ಯೇಕ ರೇಷನ್ ಕಾರ್ಡ್ ಗೆ ಪ್ರತ್ಯೇಕ ವಿಳಾಸಗಳನ್ನು ಅವರು ಹೊಂದಿದ್ದರೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ ಏಕೆಂದರೆ ಮನೆಯ ವಿಳಾಸವನ್ನು ಒಂದೇ ರೀತಿಯಾಗಿ ತೋರಿಸುತ್ತಿದ್ದರೆ ಅವರು ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು ಅವರ ರೇಷನ್ ಕಾರ್ಡ್ ಗಳು ರದ್ದಾಗುವ ಪರಿಸ್ಥಿತಿಯು ಕೂಡ ಬರಬಹುದು.

ಇದನ್ನು ಓದಿ : ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ರೇಷನ್ ಕಾರ್ಡ್ ತಿದ್ದುಪಡಿ ಇನ್ನೂ ಮಾಡಿಸಲಿಲ್ಲದಿರುವುದು :

ಅಲ್ಲದೆ ಕೆಲವರು ರೇಷನ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಮೃತಪಟ್ಟವರ ಹೆಸರನ್ನು ತೆಗೆದುಹಾಕಿಸದೆ ಅದೇ ರೀತಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಈ ರೀತಿಯ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ಸರ್ಕಾರದ ಕ್ರಮಕ್ಕೆ ಬಂದಿದ್ದು ಹಾಗಾಗಿ ಇದರ ಕುರಿತು ಲಿಸ್ಟ್ ಕೊಡುವಂತೆ ಆಹಾರ ಇಲಾಖೆಯು ಸೂಚಿಸಿದೆ ಮತ್ತು ನಕಲಿ ಕಾರ್ಡ್ ಗಳನ್ನು ಈಗ ಪತ್ತೆ ಹಚ್ಚುವುದು ಹಾಗೂ ನಕಲಿ ಫಲಾನುಭವಿಗಳನ್ನು ತೆಗೆದು ಹಾಕುವುದು ಅಲ್ಲದೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಅರ್ಹತಾ ಮಾಲದಂಡಮೀರಿ ಪಡೆದಿದ್ದರೆ ಅವರ ಬಗ್ಗೆ ತನಿಖೆಗೆ ಗಮನ ಮಾಡುವಂತೆ ರಾಜ್ಯ ಸರ್ಕಾರ ತಿಳಿಸಿದೆ.

ಹೀಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಅಕ್ರಮವಾಗಿ ಕೆಲವೊಂದಿಷ್ಟು ಜನರು ಹೊಂದಿದ್ದು ಅಂತಹ ಜನರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರವು ಯೋಚಿಸುತ್ತಿದ್ದು ಈ ರೀತಿಯ ಹೊಸ ರೂಲ್ಸ್ ಮುಂದಿನ ದಿನಗಳಲ್ಲಿ ಬರಲಿದೆ ಎಂಬುದರ ಬಗ್ಗೆ ಈ ಮೂಲಕ ನಿಮಗೆ ತಿಳಿಸಲಾಗುತ್ತಿದೆ. ಹಾಗಾಗಿ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವುದರ ಮೂಲಕ ನಿಮ್ಮ ಸ್ನೇಹಿತರು ಯಾರಾದರೂ ಅಕ್ರಮವಾಗಿ ರೇಷನ್ ಕಾರ್ಡ್ಗಳನ್ನು ಹೊಂದಿದ್ದರೆ ಅವರಿಗೆ ಈ ಬಗ್ಗೆ ಮಾಹಿತಿ ನೀಡಿ ಧನ್ಯವಾದಗಳು.

ಇತರೆ ವಿಷಯಗಳು :

ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ಗೃಹಲಕ್ಷ್ಮಿ 2,000 ಹಣ ಬರದಿದ್ದವರಿಗೆ ಡಬಲ್ ಧಮಾಕ! ಹಣ ಬರದೆ ಇರುವವರು ತಪ್ಪದೇ ಈ ಸುದ್ದಿ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments