Saturday, July 27, 2024
HomeTrending Newsರದ್ದಾಗಿರುವ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ : ಈ ತಿಂಗಳ ರೇಷನ್ ಈ ಪಟ್ಟಿಯಲ್ಲಿ...

ರದ್ದಾಗಿರುವ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ : ಈ ತಿಂಗಳ ರೇಷನ್ ಈ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ

ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವಂತಹ 5 ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಅಗತ್ಯವಾಗಿದೆ ಎಂದು ಹೇಳಬಹುದಾಗಿದೆ. ರೇಷನ್ ಕಾರ್ಡ್ ನ ಆಧಾರದ ಮೇಲೆ ಫಲಾನುಭವಿಗಳನ್ನು ರಾಜ್ಯ ಸರ್ಕಾರವು ಆಯ್ಕೆ ಮಾಡುತ್ತದೆ ಇದರಿಂದಾಗಿ ಹಲವಾರು ಮಹಿಳೆಯರು ಅಥವಾ ಜನರು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದುಕೊಂಡರೆ ಇನ್ನೂ ಕೆಲವೊಂದಿಷ್ಟು ಮಹಿಳೆಯರು ಈ ಯೋಜನೆಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೀಗೆ ಈ ಯೋಜನೆಗಳಿಂದ ವಂಚಿತರಾಗಲು ಮುಖ್ಯ ಕಾರಣ ಏನಂದರೆ, ಪಡಿತರ ಚೀಟಿಯೇ ಆಗಿದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗೆ ಸಹಕಾರಿಯಾಗುವ ಉದ್ದೇಶದಿಂದ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಸರ್ಕಾರವು ಅವಕಾಶ ನೀಡಿದೆ.

Release of list of canceled ration cards
Release of list of canceled ration cards
Join WhatsApp Group Join Telegram Group

ಈ ಹಿಂದೆ ವೆಬ್ಸೈಟ್ ಮೇಲೆ ಲೋಡ್ ಹೆಚ್ಚಾಗ ಕಾರಣಕ್ಕಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಆದರೆ ಇದೀಗ ರಾಜ್ಯ ಸರ್ಕಾರವು ಮತ್ತೆ ಆರಂಭ ಮಾಡಿದ್ದು ತಿದ್ದುಪಡಿ ಮಾಡಲು ದಿನಾಂಕವನ್ನು ಕೂಡ ವಿಸ್ತರಣೆ ಮಾಡಿದೆ. ಇದರ ನಡುವೆ ರೇಷನ್ ಕಾರ್ಡ್ ತಿರಸ್ಕೃತರ ಪಟ್ಟಿಯನ್ನು ಸಹ ಈ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಬಹುದಾಗಿದೆ. ಹಾಗಾದರೆ ಯಾವ ತಾಲೂಕುಗಳಲ್ಲಿ ಎಷ್ಟು ರೇಷನ್ ಕಾರ್ಡ್ ಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ತಿರಸ್ಕಾರ ಮಾಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

ತಿರಸ್ಕೃತ ವಿತರಣೆ ಪಟ್ಟಿ, ಚೆಕ್ ಮಾಡುವ ವಿಧಾನ :

ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದು ಈ ಅರ್ಜಿಯು ಯಾವ ಹಂತದಲ್ಲಿದೆ ಹಾಗೂ ಸ್ವೀಕಾರ ಆಗಿದೆಯಾ ಅಥವಾ ತಿರಸ್ಕೃತಗೊಂಡಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಬಳಿ ಸ್ಮಾರ್ಟ್ಫೋನ್ ಇದ್ದರೆ ಸಾಕು ಅದರಲ್ಲಿ ನೀವು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ರೇಷನ್ ಕಾರ್ಡ್ ಪಟ್ಟಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಫೋನ್ನಲ್ಲಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅದರಲ್ಲಿ ರೇಷನ್ ಕಾರ್ಡ್ ಸ್ಟೇಟಸ್ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. https://ahara.kar.nic.in/Home/Home ಈ ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ ನಿಮಗೆ ಸೇವೆ ಮಾಡುವ ಪೇಜ್ ಕಾಣಿಸಿಕೊಳ್ಳುತ್ತದೆ ಅದರಲ್ಲಿ ನೀವು ಈ ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ಅದರಲ್ಲಿ ನಿಮಗೆ ಹಲವಾರು ವಿಭಾಗಗಳು ಅಥವಾ ಆಯ್ಕೆಗಳು ಲಭ್ಯವಾಗುತ್ತದೆ ಅದರಲ್ಲಿ ನೀವು ಅಗತ್ಯವಿರುವ ಸೇವೆಗಾಗಿ ಈ ಪಡಿತರ ಚೀಟಿ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ನಿಮಗೆ ಮತ್ತೆ ಕೆಲವೊಂದಿಷ್ಟು ಆಯ್ಕೆಗಳು ತೆರೆಯುತ್ತವೆ ಅದರಲ್ಲಿ ನೀವು ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ಪಟ್ಟಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇಷ್ಟೆಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮಾಹಿತಿಯನ್ನು ಭರ್ತಿ ಮಾಡಬೇಕಾದ ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಅದರಲ್ಲಿ ತಾಲೂಕು ಈ ತಿಂಗಳನ್ನು ಆಯ್ಕೆ ಮಾಡಿದ ನಂತರ ನಿಮಗೆ ಸೆಪ್ಟೆಂಬರ್ ತಿಂಗಳ ಮೇಲೆ ಕ್ಲಿಕ್ ಮಾಡಿದ ನಂತರ ಪಕ್ಕದಲ್ಲಿಯೇ ಯಾವ ಇಸವಿಯನ್ನು ಸಹ ಹಾಕಬೇಕು ಎಂಬುದರ ಮೇಲೆ ಆಯ್ಕೆ ಮಾಡಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನಿಮಗೆ ಗೋ ಎಂಬ ಆಯ್ಕೆ ಕಾಣಿಸುತ್ತದೆ ಅದರಲ್ಲಿ ನೀವು ಟ್ಯಾಪ್ ಮಾಡಿದ ನಂತರ ತಾಲೂಕಿನ ನರ್ಹತವರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ಪಟ್ಟಿಯನ್ನು ಕಾಣಬಹುದಾಗಿದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಕಂಡರೆ ನೀವು ತಕ್ಷಣವೇ ಸಂಬಂಧಿಸಿದೆ ಅಧಿಕಾರಿಗಳನ್ನು ಭೇಟಿ ಮಾಡಿ ಏನೆಲ್ಲಾ ಪ್ರಕ್ರಿಯೆಗಳನ್ನು ಮಾಡಬೇಕು ಇದಕ್ಕೆ ಸಂಬಂಧಿಸಿದಂತೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಇದನ್ನು ಓದಿ : ಬರೋಬ್ಬರಿ 100 ಕೋಟಿ ಬಜೆಟ್‌ನಲ್ಲಿ ಕಾಂತಾರ 2..! ಬಾಯ್ಬಿಟ್ಟ ರಾಜ್ ಬಿ ಶೆಟ್ಟಿ

ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಣೆ :

ಯಾರಿಲ್ಲ ಈವರೆಗೂ ಅನ್ನ ಭಾಗ್ಯದ ಹೆಚ್ಚುವರಿ ಪಡಿತರ ಹಣ ಹಾಗೂ ಗೃಹಲಕ್ಷ್ಮಿ ಹಣವನ್ನು ಈ ನಡುವೆ ಪಡೆದಿರುವುದಿಲ್ಲವೋ ಅವರು ಈ ಕೂಡಲೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರವು ಅವಕಾಶ ನೀಡಿತ್ತು. ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿಗೆ ಈ ತಿಂಗಳ 14ನೇ ತಾರೀಖಿನವರೆಗೆ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೊಂದಾಯಿಸಿ ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನ ಹೆಸರನ್ನು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ ಅದಕ್ಕೂ ಸಹ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಲಾಭ ಗೊಳ್ಳುವವರೆಗೂ ತಡೆಹಿಡಿಯಲಾಗುತ್ತದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ರಾಜ್ಯದ ಜನತೆಗೆ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 1ರಿಂದ 10ರವರೆಗೆ ಮಾತ್ರ ಈ ಮೊದಲು ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯಕ್ಕೆ ಕಾಲಾವಕಾಶ ನೀಡಲಾಗಿತ್ತು ಆದರೆ ಸರ್ವರ್ ಸಮಸ್ಯೆ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಹಲವಾರು ಜನರು ಇರುವುದರಿಂದ ಈ ದಿನಾಂಕವನ್ನು ಸರ್ಕಾರವು ವಿಸ್ತರಣೆ ಮಾಡಿದೆ ಎಂದು ಹೇಳಬಹುದಾಗಿದೆ. ಹೀಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿಯನ್ನು ವಿಸ್ತರಣೆ ಮಾಡಿದ್ದು ಈ ಕೂಡಲೇ ಇದುವರೆಗೂ ತಿದ್ದುಪಡಿ ಮಾಡಿಸಿಕೊಳ್ಳದೆ ಇರುವವರು ಹತ್ತಿರದ ಕರ್ನಾಟಕವನ್ನು ಅಟಲ್ಕೇಂದ್ರ ಹಾಗೂ ಬೆಂಗಳೂರು ಒನ್ ಸೇರಿದಂತೆ, ಸರ್ಕಾರದ ಇತರ ಕೇಂದ್ರಗಳಿಗೆ ಹೋಗಿ ಸರಿಪಡಿಸಿಕೊಳ್ಳಬಹುದಾಗಿದೆ.

ಹೀಗೆ ರಾಜ್ಯ ಸರ್ಕಾರವು ಇದೀಗ ರದ್ದದಾ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಈ ತಿಂಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದನ್ನು ಚೆಕ್ ಮಾಡುವ ಮೂಲಕ ಮಹಿಳೆಯರು ಇದಕ್ಕೆ ಸಂಬಂಧಿಸಿದಂತಹ ಕ್ರಮವನ್ನು ಕೈಗೊಳ್ಳಲು ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ರದ್ದದಾ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ನಾ ಪಟ್ಟಿಯನ್ನು ಚೆಕ್ ಮಾಡಲು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಲೇಖನದ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ರೇಷನ್ ಕಾರ್ಡ್ ನ ಸ್ಥಿತಿಗತಿಯನ್ನು ಅವರ ಸ್ಮಾರ್ಟ್ ಫೋನ್ ನಲ್ಲಿ ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರಧಾನ ಮಂತ್ರಿ ಕಿಸಾನ್ ಯೋಜನೆ: 15 ನೇ ಕಂತಿಗೆ ದಿನಾಂಕ ಫಿಕ್ಸ್! ಈ ದಿನ ನಿಮ್ಮ ಖಾತೆಗೆ 2 ಸಾವಿರ

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್;‌ ಅಗ್ಗದ ಯೋಜನೆ ನಿಲ್ಲಿಸಿದ ಜಿಯೋ! ಈ ತಿಂಗಳಿನಿಂದ ರೀಚಾರ್ಜ್‌ ಪ್ಲಾನ್‌ ದರ ಮತ್ತಷ್ಟು ಹೆಚ್ಚಳ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments