Saturday, July 27, 2024
HomeNewsಅಕ್ಕಿ ಹಣ ಸೆಪ್ಟೆಂಬರ್ ತಿಂಗಳಿನದ್ದು ಕೊಡುತ್ತಾರೋ ಇಲ್ಲವೋ.?

ಅಕ್ಕಿ ಹಣ ಸೆಪ್ಟೆಂಬರ್ ತಿಂಗಳಿನದ್ದು ಕೊಡುತ್ತಾರೋ ಇಲ್ಲವೋ.?

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಕುಟುಂಬದ ಪ್ರತಿ ಸದಸ್ಯರಿಗೂ ತಲಾ ಹತ್ತು ಕೆಜಿ ಅಕ್ಕಿ ನೀಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷವು ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದ ನಂತರ ನೀಡಿತ್ತು ಆದರೆ ಇದೀಗ ಹೆಚ್ಚುವರಿಯಾಗಿ ಲಭ್ಯವಿಲ್ಲದ ಕಾರಣ 5 ಕೆಜಿ ಅಕ್ಕಿಗೆ ಬದಲಾಗಿ 5 ಕೆಜಿ ಅಕ್ಕಿಯ ಹಣವನ್ನು ನೀಡುವ ನಿರ್ಧಾರವನ್ನು ಇದೀಗ ರಾಜ್ಯ ಸರ್ಕಾರ ಮಾಡಿತ್ತು. ಅದರಂತೆ ಕುಟುಂಬದ ಪ್ರತಿ ಸದಸ್ಯರಿಗೂ ಅಂದರೆ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ 170 ರೂಪಾಯಿಗಳನ್ನು ಕೊಡಲಾಗುತ್ತಿತ್ತು ಆದರೆ ಇದೀಗ ಬರಬೇಡಿ ಚಿಂತನೆ ನಡೆಸಿ ಬರಪೀಡಿತ ತಾಲೂಕುಗಳಿಗೆ ಅಕ್ಕಿಯನ್ನು ನೀಡಲು ನಿರ್ಧರಿಸಿದೆ. ಹರಿದೀಗ ಸೆಪ್ಟೆಂಬರ್ ತಿಂಗಳಿನಲ್ಲಿ ಯಾವಾಗ ಹಣ ಬಿಡುಗಡೆ ಆಗಲಿದೆ .ಅದರಂತೆ ಇದೀಗ ಇದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ನಿಮಗೀಗ ತಿಳಿಸಲಾಗುತ್ತಿದೆ.

rice-money-is-for-the-month-of-september
rice-money-is-for-the-month-of-september
Join WhatsApp Group Join Telegram Group

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ :

ಸೆಪ್ಟೆಂಬರ್ ಮಾಹಿತಿ ಅನ್ವಯವಾಗುವಂತೆ ಪಡಿತರ ಧಾನ್ಯವನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ. 21 ಕೆಜಿ ಅಕ್ಕಿ ಮತ್ತು ರಾಗಿ ಹದಿನಾಲ್ಕು ಕೆಜಿಯನ್ನು ಪ್ರತಿ ಕಾರ್ಡಿಗೆ ಅಂದರೆ ಅಂತ್ಯೋದಯ ಪಡಿತರ ಚೀಟಿದಾರರಿಗೆ ಆದ್ಯತೆ ಹಾಗೂ 3 ಕೆಜಿ ಅಕ್ಕಿ ಮತ್ತು ಎರಡು ಕೆಜಿ ರಾಗಿ ಉಚಿತವಾಗಿ ಬಿಪಿಲ್ ಪಡಿತರ ಚೀಟಿದಾರರಿಗೆ ಸರ್ಕಾರ ವಿತರಿಸುತ್ತಿದೆ. ಅದರಂತೆ ಎಪಿಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ ಪ್ರತಿ ಕೆಜಿಗೆ 15 ರೂಪಾಯಿ ಒಪ್ಪಿಗೆ ನೀಡಿದ್ದು 5 ಕೆಜಿ ಅಕ್ಕಿ ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇದ್ದರೆ ಅಕ್ಕಿಗೆ ಎಷ್ಟು ವೆಚ್ಚವಾಗುತ್ತದೆಯೋ ಅಷ್ಟು ಹಣವನ್ನು ನೀಡಲಾಗುತ್ತಿದೆ ಆದರೆ ಇದೀಗ ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಸಹ ಅಕ್ಕಿ ಅಣ ಇನ್ನು ಬಂದಿರುವುದಿಲ್ಲ ಹೀಗಾಗಿ ಯಾವಾಗ ಹಣ ಬರುತ್ತದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಹಣ ಒಂದೇ ಸಮಯಕ್ಕೆ ಎಲ್ಲರಿಗೂ ಬರುವುದಿಲ್ಲ ಯಾಕೆ ಗೊತ್ತಾ ?

5 ಕೆಜಿ ಅಕ್ಕಿ ಕೊಡುವ ಭರವಸೆಯನ್ನು ಕರ್ನಾಟಕ ಸರ್ಕಾರವು ನೀಡಿದ್ದು ಆದರೆ ಇದೀಗ ಅಕ್ಕಿಯನ್ನು ಒದಗಿಸಲು ಯಾವ ರಾಜ್ಯವು ಸಹ ರಾಜ್ಯ ಸರ್ಕಾರಕ್ಕೆ ಬೇಕಾಗಿರುವಷ್ಟು ಮುಂದಾಗಿಲ್ಲ. ಇದರಿಂದಾಗಿ 1.40 ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯ ಸರ್ಕಾರವು ಪ್ರತಿ ತಿಂಗಳು ಒದಗಿಸುವುದು ಸುಲಭದ ಮಾತಲ್ಲ ಈ ಕಾರಣಕ್ಕಾಗಿ ಸರ್ವೇ ಒಂದನ್ನು ಸರ್ಕಾರವು ನಡೆಸುತ್ತಿದ್ದು ಜನರಿಂದಲೇ ಅಭಿಪ್ರಾಯವನ್ನು ಸಂಗ್ರಹಿಸುತ್ತಿದೆ. ನಿಮ್ ಜ ಸಾಮಾನ್ಯರಿಗೆ ಹಕ್ಕಿ ಬೇಕು ಬೇಡವೋ ಅಥವಾ ಹಣ ಬೇಕು ಬೇಡವೋ ಎಂಬುದನ್ನು ಮುಂದುವರಿಸಬೇಕು ಎನ್ನುವ ಅಭಿಪ್ರಾಯವನ್ನು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಅಧಿಕಾರಿಗಳು ಜನರಿಂದಲೇ ಸಂಗ್ರಹಿಸುತ್ತಿದ್ದಾರೆ.

ಜನರ ಅಭಿಪ್ರಾಯ ಸಂಗ್ರಹ :

ಈಗ ಜನರೇ ಉಚಿತ ಅಕ್ಕಿ ಅಥವಾ ಹಣ ಎನ್ನುವುದನ್ನು ನಿರ್ಧಾರ ಮಾಡಬೇಕಾಗಿದೆ. ಒಂದು ವೇಳೆ ಅಕ್ಕಿಯ ಬದಲು ಪ್ರತಿ ತಿಂಗಳು 34 ರೂಪಾಯಿಗಳಂತೆ ಹಣವನ್ನೇ ಕೊಡುವುದನ್ನು ಸರ್ಕಾರ ಮುಂದುವರೆಸಬಹುದು ಇನ್ನು ಕಳೆದ ಎರಡು ತಿಂಗಳಿನಲ್ಲಿ ಅಕ್ಕಿಯ ಹಣ ಸಿಕ್ಕಿರುವವರಿಗೆ ಹಣವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಆದರೂ ಈ ತಾಲೂಕುಗಳಿಗೆ ಮಾತ್ರ ಹಣ ಸಿಗುತ್ತಿಲ್ಲ. ಏಕೆಂದರೆ ಬರಪೀಡಿತ ತಾಲೂಕುಗಳಲ್ಲಿ ಹಣದ ಬದಲು ಅಕ್ಕಿಯನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದನ್ನು ಓದಿ : ಕರ್ನಾಟಕ ವಿದ್ಯಾರ್ಥಿಗಳ ಖಾತೆಗೆ 25,000ರೂ : ಈ ಕೂಡಲೇ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಿರಿ

ಜನರ ಅಭಿಪ್ರಾಯ ವ್ಯಕ್ತವಾಗಿದೆ :

ಈಗಾಗಲೇ ರಾಜ್ಯ ಸರ್ಕಾರ ಸಂಗ್ರಹಿಸಿರುವ ಮಾಹಿತಿಯಲ್ಲಿ ಸಾಕಷ್ಟು ಜನರು ಅಕ್ಕಿ ಬೇಡ ಹಣವೇ ಇರಲಿ ಎಂಬ ಅಭಿಪ್ರಾಯವನ್ನು ತಿಳಿಸಿದ್ದು, ಆದರೆ 5 ಕೆಜಿ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿ ಎಂದರೆ ಹತ್ತು ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರವು ಉಚಿತವಾಗಿ ಕೊಟ್ಟರೆ ಹೆಚ್ಚು ಅನುಕೂಲವಾಗಬಹುದು ಎಂಬುದಾಗಿ ಕೆಲವೊಂದಿಷ್ಟು ಜನರು ತಮ್ಮ ಅಭಿಪ್ರಾಯವನ್ನು ಸೂಚಿಸಿದ್ದಾರೆ ಹಾಗಾಗಿ ಅಕ್ಕಿಯ ಹಣವನ್ನು ನೀಡಲು ರಾಜ್ಯ ಸರ್ಕಾರವು ಮುಂದಾಗಿದ್ದು ಈಗಾಗಲೇ ಸೆಪ್ಟೆಂಬರ್ ತಿಂಗಳ ಬಿಡುಗಡೆಯಾಗಿದ್ದು ಇದೇ ತಿಂಗಳ 25ನೇ ತಾರೀಖಿನಿಂದ ಅಕ್ಕಿಯ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಿಡುಗಡೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಯಾವೆಲ್ಲ ತೊಡಕುಗಳು ಗೃಹಲಕ್ಷ್ಮಿ ಯೋಜನೆಯೆಲ್ಲಿ ಆಗಿದೆಯೋ ಅಂದರೆ ಎಲ್ಲರಿಗೂ ಕೂಡ ಒಂದೇ ಸಮಯದಲ್ಲಿ ಹಣ ಬಿಡುಗಡೆ ಆಗುತ್ತಿಲ್ಲ ಆದರೆ ಈ ರೀತಿ ಅನ್ನ ಭಾಗ್ಯ ಯೋಜನೆಯಲ್ಲಿಯೂ ಸಹ ಇದ್ದು ಈ ರೀತಿಯಾಗುವ ಸಾಧ್ಯತೆಗಳು ಇದೆ ಎಂದು ಸಹ ರಾಜ್ಯ ಸರ್ಕಾರ ಹೇಳುತ್ತಿದೆ. ಹಾಗಾಗಿ ಸೆಪ್ಟೆಂಬರ್ 25ನೇ ತಾರೀಕಿನಂದೆ ಎಲ್ಲರಿಗೂ ಹಣ ಬರುತ್ತದೆ. ಸ್ವಲ್ಪ ಸ್ವಲ್ಪ ಜನರ ಖಾತೆಗೆ ಮುಂದಿನ ತಿಂಗಳ 15ನೇ ತಾರೀಖಿನವರೆಗೂ ಹಣ ವರ್ಗಾವಣೆ ಯಾಗುತ್ತದೆ. ಹಾಗಾಗಿ ಎಲ್ಲರಿಗೂ ಸೆಪ್ಟೆಂಬರ್ ತಿಂಗಳ ಹಣ ಬರುತ್ತದೆ ಆದರೆ ಒಂದೇ ದಿನ ಬರುವುದಿಲ್ಲ ಎಲ್ಲರೂ ತಾಳ್ಮೆಯಿಂದ ಕಾಯಬೇಕು. ಎಂದು ಈ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ಗೃಹಲಕ್ಷ್ಮಿ 2,000 ಹಣ ಬರದಿದ್ದವರಿಗೆ ಡಬಲ್ ಧಮಾಕ! ಹಣ ಬರದೆ ಇರುವವರು ತಪ್ಪದೇ ಈ ಸುದ್ದಿ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments