Friday, July 26, 2024
HomeInformationಕರ್ನಾಟಕ ಸರ್ಕಾರದಿಂದ 8 ಯೋಜನೆ ಸಬ್ಸಿಡಿ : ಸೆಪ್ಟೆಂಬರ್ 30ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ...

ಕರ್ನಾಟಕ ಸರ್ಕಾರದಿಂದ 8 ಯೋಜನೆ ಸಬ್ಸಿಡಿ : ಸೆಪ್ಟೆಂಬರ್ 30ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಎಂಟು ಸಬ್ಸಿಡಿ ಯೋಜನೆಗಳಿಗೆ ಕರ್ನಾಟಕ ಸರ್ಕಾರ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಕೆಎಂಡಿಸಿ ಕರ್ನಾಟಕ ಸರ್ಕಾರದ ಆನ್ ಲೈನ್ ಅಪ್ಲಿಕೇಶನ್ ಪೋರ್ಟ್ ನ ಮೂಲಕ ಅತ್ಯಾಕರ್ಷಕ ಸಬ್ಸಿಡಿ ಮತ್ತು ಸಾಲದ ಯೋಜನೆಗಳ ವಿವರಗಳನ್ನು ಸರ್ಕಾರದಿಂದ ನಾವು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಆ ಎಂಟು ಸಬ್ಸಿಡಿ ಯೋಜನೆಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

scheme subsidy from Karnataka Govt
scheme subsidy from Karnataka Govt
Join WhatsApp Group Join Telegram Group

ವಾಹನ ಖರೀದಿಸಲು ಸಬ್ಸಿಡಿ :

ಉದಾರವಾದ ಸಬ್ಸಿಡಿಯನ್ನು ಕರ್ನಾಟಕ ಸರ್ಕಾರವು ಕೆಎಂ ಡಿಸಿ ಅಡಿಯಲ್ಲಿ ನೀಡುತ್ತಿದೆ. ಸರಕು ವಾಹನಗಳು ಅಥವಾ ಪ್ರಯಾಣಿಕರ ಆಟೋರಿಕ್ಷಗಳನ್ನು ಖರೀದಿಸಲು 3 ಲಕ್ಷ ರೂಪಾಯಿಗಳವರೆಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ನಿಮಗೆ ಬ್ಯಾಂಕುಗಳು ಸಾಲವನ್ನು ನಿರಾಕರಿಸಿದರೆ ಸರ್ಕಾರವು 50% ರಷ್ಟು ಕೆಎಂಡಿಸಿ ವಾಹನದ ಮೌಲ್ಯದ ಮೂಲಕ ಸಬ್ಸಿಡಿಯನ್ನು ನೀಡುತ್ತದೆ. ಇದರಿಂದ ಸುಲಭವಾಗಿ ಸ್ವಂತ ವಾಹನವನ್ನು ಖರೀದಿಸಿ ಸ್ವಂತ ಉದ್ಯೋಗವನ್ನು ಮಾಡಬಹುದಾಗಿದೆ

ಗಂಗಾ ಕಲ್ಯಾಣ ಯೋಜನೆ :

ಅಲ್ಪಸಂಖ್ಯಾತ ಸಮುದಾಯಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಈ ಯೋಜನೆ ವರದಾನವಾಗಿದೆ ಎಂದು ಹೇಳಬಹುದಾಗಿದೆ. ಈ ಯೋಜನೆಯಡಿಯಲ್ಲಿ ರೈತರು ಬೋರ್ವೆಲ್ಗಳನ್ನು ಕೊರೆಯಲು ಪಂಪುಗಳನ್ನು ಅಳವಡಿಸಲು ಹಾಗೂ ನೀರಾವರಿ ವಿದ್ಯುತ್ ಕರಣ ಮಾಡಿಸಲು ಸರ್ಕಾರದಿಂದ ಸಂಪೂರ್ಣ ಸಹಾಯಧನವನ್ನು ನೀಡಲಾಗುತ್ತಿದೆ. ಇದಕ್ಕೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 2023 ಕೊನೆಯ ದಿನಾಂಕವಾಗಿದೆ.

ವೃತ್ತಿ ಪ್ರೋತ್ಸಾಹ ಯೋಜನೆ :

ಸರ್ಕಾರವು ಅಲ್ಪಸಂಖ್ಯಾತ ಸಮುದಾಯದವರಿಗೆ ವ್ಯಾಪಾರ ಪ್ರಾರಂಭಿಸಲು ಹಾಗೂ ವಿಸ್ತರಿಸುವ ಬಗ್ಗೆ ವೃತ್ತಿ ಪ್ರೋತ್ಸಾಹ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಕೆಎಮ್‌ಟಿಸಿ ಉದ್ಯಮವನ್ನು ಕಿಕ್ ಸ್ಟಾರ್ಟ್ ಮಾಡಲು ಸರ್ಕಾರವು 50% ರವರಿಗೆ ಸಬ್ಸಿಡಿಯನ್ನು ನೀಡುವುದರ ಜೊತೆಗೆ ಒಂದು ಲಕ್ಷ ರೂಪಾಯಿಗಳನ್ನು ಮೆಕ್ಯಾನಿಕ್ ಕುಶಲಕರ್ಮಿಗಳು ಅಥವಾ ಆಟಿಕೆ ತಯಾರಿಕರಿಗೆ ಈ ಯೋಜನೆಯು ಸಹಕಾರಿಯಾಗಿದೆ ಎಂದು ಹೇಳಬಹುದು. ಹಾಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು 2023 ಸೆಪ್ಟೆಂಬರ್ 25 ಕೊನೆಯ ದಿನಾಂಕವಾಗಿರುವುದರಿಂದ ಈ ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆಯಿರಿ.ಅರಿವು ಯೋಜನೆ :

ಅರಿವು ಯೋಜನೆಯ ಮೂಲಕ ಸರ್ಕಾರವು ವೃತ್ತಿಪರ ಕೋರ್ಸ್ ಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮುಂದುವರೆಸಲು ಹಣಕಾಸಿನ ನೆರವನ್ನು ನೀಡುತ್ತಿದೆ. ವರ್ಷಕ್ಕೆ 50 ಸಾವಿರದಿಂದ 3 ಲಕ್ಷದವರೆಗೆ ಈ ಯೋಜನೆಯ ಮೂಲಕ ಸಹಾಯಧನವನ್ನು ನೀಡುವುದರ ಜೊತೆಗೆ ಕನಿಷ್ಠ 2% ವರೆಗೆ ಸೇವಾ ಶುಲ್ಕದೊಂದಿಗೆ ಈ ಸಾಲವನ್ನು ಮರುಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಗೆ ಕೊನೆಯ ದಿನಾಂಕ ಸೆಪ್ಟೆಂಬರ್ 25 ಆಗಿದೆ.

ಶ್ರಮಶಕ್ತಿ ಯೋಜನೆ :

ಅಲ್ಪಸಂಖ್ಯಾತ ಸಮುದಾಯಗಳ ಕುಶಲಕರ್ಮಿಗಳಿಗೆ ಅವರ ಕೌಶಲ್ಯಗಳನ್ನು ಹೆಚ್ಚಿಸಲು ಶ್ರಮಶಕ್ತಿ ಯೋಜನೆ ಮೂಲಕ ತರಬೇತಿಯನ್ನು ನೀಡಿ ಅವರನ್ನು ಸಬಲೀಕರಣ ಗೊಳಿಸುವ ಉದ್ದೇಶವನ್ನು ಹೊಂದಿದೆ. ಶೇಕಡ 50% ರಷ್ಟು ಕೆಎಂಬಿಸಿ ಯಿಂದ ಸಬ್ಸಿಡಿ ಮತ್ತು ಸಾವಿರದವರೆಗೆ ಕಡಿಮೆ ಬಡ್ಡಿಯ ಸಾಲವನ್ನು ಕುಶಲಕರ್ಮಿಗಳು ತಮ್ಮ ಕರಕುಶಲತೆಯನ್ನು ಅಭಿವೃದ್ಧಿಪಡಿಸಲು ಹಾಗೂ ತಮ್ಮ ವ್ಯವಹಾರಗಳನ್ನು ಸ್ಥಾಪಿಸಲು ಆರ್ಥಿಕ ನೆರವನ್ನು ಪಡೆಯಬಹುದಾಗಿದೆ.ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ :

ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯ ಅಡಿಯಲ್ಲಿ ವಿಧವೆಯರು ವಿಚ್ಛೇದರು ಮತ್ತು ಅವಿವಾಹಿತ ವ್ಯಕ್ತಿಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಐವತ್ತು ಸಾವಿರ ರೂಪಾಯಿಗಳ ಸಾಲವನ್ನು ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರದಿಂದ ಪಡೆಯಬಹುದಾಗಿತ್ತು ಸಬ್ಸಿಡಿಯನ್ನು ನೀಡುವುದರ ಮೂಲಕ ಇದರಿಂದ ಆರ್ಥಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ.

ಇದನ್ನು ಓದಿ : ಜಿಯೋ ಗಣೇಶ ಹಬ್ಬದ ಆಫರ್: ಈ ದಿನ ರೀಚಾರ್ಜ್‌ ಮಾಡಿಸಿದರೆ ಡಿಸೆಂಬರ್ 31 ರವರೆಗೆ ಎಲ್ಲವೂ ಸಂಪೂರ್ಣ ಉಚಿತ

ಸಮುದಾಯ ಆಧಾರಿತ ತರಬೇತಿ ಯೋಜನೆ :

ಸಮುದಾಯಾಧಾರಿತ ತರಬೇತಿ ಯೋಜನೆಯ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ನಿರುದ್ಯೋಗಿ ಯುವಕರು ತಮ್ಮ ಉದ್ಯೋಗಾವಕಾಶವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಭಾರಿ ವಾಹನ ಚಾಲನೆಯಿಂದ ಬ್ಯೂಟಿ ಪಾರ್ಲರ್ ಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕ್ರಮವು ತರಬೇತಿಯನ್ನು ನೀಡುತ್ತದೆ. ಇದರಿಂದಾಗಿ ಈ ತರಬೇತಿಯು ಉದ್ಯೋಗವಕಾಶಗಳನ್ನು ವಿವಿಧ ಕ್ಷೇತ್ರಗಳಲ್ಲಿ ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ.

ವಿದೇಶಿ ಶಿಕ್ಷಣಕ್ಕಾಗಿ ಸಾಲ :

ಕೆಎಂಡಿಸಿ ಕರ್ನಾಟಕ ಸರ್ಕಾರವು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಇಚ್ಚಿಸುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ 20 ಲಕ್ಷಗಳ ವರೆಗೆ ಸಾಲಗಳನ್ನು ಆಸ್ತಿಯ ವಿರುದ್ಧ ಸುರಕ್ಷಿತಗೊಳಿಸಲು ಈ ಯೋಜನೆಯನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳಿಗೆ ತಮ್ಮ ಮಟ್ಟದ ಶಿಕ್ಷಣವನ್ನು ನನಸಾಗಿಕೊಳ್ಳಲು ಹಾಗೂ ವಿದೇಶದಲ್ಲಿ ಓದುವ ಕನಸು ಹೊಂದಿದ್ದರೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದಾಗಿದೆ.

ಹೀಗೆ ಕರ್ನಾಟಕ ಸರ್ಕಾರವು ಸುಮಾರು ಎಂಟು ಯೋಜನೆಗಳಿಗೆ ಸಬ್ಸಿಡಿಯನ್ನು ನೀಡುವುದರ ಮೂಲಕ ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ಬಡ ಕುಟುಂಬಗಳು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತಿದೆ. ಎಂಟು ಸಬ್ಸಿಡಿ ಯೋಜನೆಗಳಿಗೆ ಸೆಪ್ಟೆಂಬರ್ 25 ಕೊನೆಯ ದಿನಾಂಕವಾಗಿದ್ದು ತಕ್ಷಣವೇ ಸೆಪ್ಟೆಂಬರ್ ೩೦ರ ಒಳಗಾಗಿ ಆನ್ಲೈನ್ ಮೂಲಕ ಈ 8 ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿ. ಹೀಗೆ ಕರ್ನಾಟಕ ಸರ್ಕಾರದ ಈ ಸಬ್ಸಿಡಿ ಯೋಜನೆಗಳಿಗೆ ಸಂಬಂಧಿಸಿದಂತಹ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಭಾರತದಲ್ಲಿ ಚಿನ್ನದ ಬೆಲೆ 2024 ರಲ್ಲೀ ಎಷ್ಟಾಗುತ್ತದೆ : ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರದಿಂದ ಮತ್ತೊಂದು ಭಾಗ್ಯ : ಮನೆ ಕಟ್ಟಲು ಸೈಟ್ ವಿತರಣೆ ,ಆನ್ಲೈನ್ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments