Thursday, July 25, 2024
HomeGovt Schemeಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಬಿಡುಗಡೆ : ನಿಮ್ಮ ಜಿಲ್ಲೆಯ ಹೆಸರು...

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಬಿಡುಗಡೆ : ನಿಮ್ಮ ಜಿಲ್ಲೆಯ ಹೆಸರು ಇದೆಯೇ.?

ನಮಸ್ಕಾರ ಸ್ನೇಹಿತರೆ, ಎಲ್ಲಾ ಮಹಿಳೆಯರಿಗೂ ಈಗಾಗಲೇ ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಸಿಗುತ್ತಿದ್ದು ಇದರ ಬಗ್ಗೆ ಇರುವಂತಹ ಮತ್ತೊಂದು ಸಿಹಿ ಸುದ್ದಿ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ ಎಂಬುದರ ಬಗ್ಗೆ. ಅನೇಕ ಮಹಿಳೆಯರು ಸಹಾಯಧನ ಪಡೆಯುವ ವಿಚಾರದಲ್ಲಿ ಸಾಕಷ್ಟು ಗೊಂದಲದಲ್ಲಿದ್ದಾರೆ. 1.10 ಕೋಟಿ ಮಹಿಳೆಯರು ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮೊದಲನೇ ಕಂತನ ಹಣ ಪಡೆಯಲು ಅರ್ಹರಾಗಿದ್ದರು. ಅದರಲ್ಲಿ ಇದೀಗ ಕೇವಲ 70% ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿದ್ದು ಇನ್ನೂ 30% ಮಹಿಳೆಯರಿಗೆ ಹಣ ವರ್ಗಾವಣೆಯಾಗಿರುವುದಿಲ್ಲ.

gruhalkshmi-second-installment-money
gruhalkshmi-second-installment-money
Join WhatsApp Group Join Telegram Group

ಈ ಸಮಸ್ಯೆಗಳಿಂದ ಹಣ ವರ್ಗಾವಣೆಯಾಗುತ್ತಿಲ್ಲ :

ಇನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಆರರಿಂದ ಏಳು ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ಸಕ್ರಿಯವಾಗಿಲ್ಲ ಅಲ್ಲದೆ ಕೆಲವರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಎಪಿಸಿಐ ಮ್ಯಾಪಿಂಗ್ ಆಗಿರೋದ ಕಾರಣ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ನೀಡಿರುವ ದಾಖಲೆಗಳಾದ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿಗಳಲ್ಲಿ ಒಂದೇ ರೀತಿಯಲ್ಲಿ ಹೆಸರು ಇರದ ಕಾರಣ ಹಣ ವರ್ಗಾವಣೆ ಮಾಡಲು ಇಂತಹ ಸಮಸ್ಯೆಗಳಿಂದ ಸಾಧ್ಯವಾಗುತ್ತಿಲ್ಲ. ಆದರೆ ಸೆಪ್ಟೆಂಬರ್ ಅಂತ್ಯದೊಳಗೆ ಉಳಿದ ಫಲಾನುಭವಿಗಳ ಖಾತೆಗೆ ಖಂಡಿತವಾಗಿಯೂ ಹಣ ವರ್ಗಾವಣೆ ಮಾಡಲಾಗುತ್ತದೆ ಎನ್ನುವ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಾಜ್ಯದ ಮಹಿಳೆಯರಿಗೆ ನೀಡಿದ್ದಾರೆ. ಡಿ ಬಿ ಟಿ ಮೂಲಕ ಹಣವನ್ನು ಆರ್ಬಿಐ ಸೂತ್ರಗಳ ಪ್ರಕಾರವೇ ಸರ್ಕಾರವು ವರ್ಗಾವಣೆ ಮಾಡುತ್ತಿದೆ ಹಾಗಾಗಿ ಪ್ರತಿಯೊಬ್ಬರ ಖಾತೆಯನ್ನು ಪರಿಶೀಲಿಸುವ ಮೂಲಕ ಪರಿಶೀಲಿಸಿದ ನಂತರವೇ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಸಮಯ ಹಿಡಿಯುತ್ತದೆ.

ಎರಡನೇ ಕಂತಿನ ಹಣ ವರ್ಗಾವಣೆ :

ಆರ್ಬಿಐ ಪ್ರಕಾರ ದಿನಕ್ಕೆ ಇಂತಿಷ್ಟೇ ಖಾತೆಗಳು ಎನ್ನುವ ಮಿತಿ ರಾಜ್ಯ ಸರ್ಕಾರಕ್ಕೆ ಇರುವುದರಿಂದ ಸರ್ಕಾರವು ಹಂತಹಂತವಾಗಿ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗೂ ವರ್ಗಾವಣೆ ಮಾಡುತ್ತಿದೆ. ಫಲಾನುಭವಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಿರುವ ಕಾರಣದಿಂದಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಹಣ ತಲುಪಲು ತಟವಾಗುತ್ತಿದೆ. ಅಲ್ಲದೆ ಇದರ ನಡುವೆ ಎರಡನೇ ಕಂತಿನ ಹಣ ವರ್ಗಾವಣೆಯಾಗುತ್ತಿದೆ ಎಂಬುದರ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಎರಡನೇ ಕಂತಿನ ಹಣವನ್ನು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರವು ಎರಡು ತಿಂಗಳ ಸಹಾಯಧನಕ್ಕೆ 4600 ಕೋಟಿ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಂಜೂರು ಮಾಡಿದೆ ಆದ್ದರಿಂದ ಕರ್ನಾಟಕ ಸರ್ಕಾರವು ಎರಡನೇ ಕಂತಿನ ಹಣವನ್ನು ನೀಡಲು ನಿರ್ಧರಿಸಿದೆ. ಎರಡನೇ ಕಂತಿನ ಹಣವು ಈಗಾಗಲೇ ಮೊದಲನೇ ಕಾಂತಿನ ಹಣವನ್ನು ಪಡೆದಿರುವ ಮಹಿಳೆಯರಿಗೆ ನೀಡಲಾಗುತ್ತಿದ್ದು ಈವರೆಗೂ ಸಹ ಎರಡು ಕಂತಿನ ಹಣವನ್ನು ಪಡೆಯದೇ ಇರುವಂತಹ ಅರ್ಹ ಮಹಿಳೆಯರಿಗೆ ಒಟ್ಟಿಗೆ ಈ ತಿಂಗಳಲ್ಲಿ ನಾಲ್ಕು ಸಾವಿರ ಹಣವನ್ನು ಜಮಾ ಮಾಡಲಾಗುತ್ತಿದೆ. ಈಗಾಗಲೇ ಎರಡನೇ ಕಂತಿನ ಹಣವನ್ನು ಕೆಲವೊಂದು ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದಾಗಿದೆ.

ಇದನ್ನು ಓದಿ : ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ಎರಡನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ :

ಈಗಾಗಲೇ 2ನೇ ಕ್ರಾಂತಿನ ಹಣವನ್ನು ಕೆಲವೊಂದು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದ್ದು ಆ ಜಿಲ್ಲೆಗಳ ಎಂದರೆ ಬಾಗಲಕೋಟೆ ವಿಜಯಪುರ ಕೊಡಗು ವಿಜಯನಗರ ಚಿತ್ರದುರ್ಗ ಬೀದರ್ ಕಲಬುರ್ಗಿ ಯಾದಗಿರಿ ಬಳ್ಳಾರಿ ರಾಯಚೂರು ಜಿಲ್ಲೆಗಳಿಗೆ ಎರಡನೇ ಕಂತಿನ ಹಣವು ಸೆಪ್ಟೆಂಬರ್ 26ರಂದು ಸಿಗಲಿದೆ. ಅಲ್ಲದೆ ಎಲ್ಲಾ ಫಲಾನುಭವಿಗಳ ಖಾತೆಗೆ ಸೆಪ್ಟೆಂಬರ್ 30ರ ಒಳಗಾಗಿ ಹಣ ತಲುಪಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಹೊರ ಬಿದ್ದಿದ್ದು ರಾಜ್ಯದಲ್ಲಿ ಈಗಾಗಲೇ ಸೆಪ್ಟೆಂಬರ್ ತಿಂಗಳಲ್ಲಿ ಎರಡನೇ ಕಂತಿನ ಹಣವು ಸಹ ಬಿಡುಗಡೆ ಮಾಡಲು ನಿರ್ಧರಿಸಿರುವುದರ ಬಗ್ಗೆ ಈ ಮೂಲಕ ತಿಳಿಸಲಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿರುವ ನಿಮ್ಮೆಲ್ಲ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?

ಪೋಷಕರ ಗಮನಕ್ಕೆ: ಮಕ್ಕಳಿಗೆ ಈ ದಾಖಲೆ ಇನ್ನು ಮುಂದೆ ಕಡ್ಡಾಯ! ಕೇಂದ್ರ ಸರ್ಕಾರ ತಿಳಿಸಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments