Saturday, July 27, 2024
HomeSchemeಮುಂಗಾರು ಬೆಳೆ ಸಮೀಕ್ಷೆ ಆರಂಭ : ಸಮೀಕ್ಷೆ ಮಾಡಿ ಸೌಲಭ್ಯ ಪಡೆಯಿರಿ! ಕೃಷಿ ಇಲಾಖೆ

ಮುಂಗಾರು ಬೆಳೆ ಸಮೀಕ್ಷೆ ಆರಂಭ : ಸಮೀಕ್ಷೆ ಮಾಡಿ ಸೌಲಭ್ಯ ಪಡೆಯಿರಿ! ಕೃಷಿ ಇಲಾಖೆ

ನಮಸ್ಕಾರ ಸ್ನೇಹಿತರೆ, ರೈತರು ತಾವೇ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುವುದರ ಮೂಲಕ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರೈತರ ಬೆಳೆ ಸಮೀಕ್ಷೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಸರ್ಕಾರವು ತಮ್ಮ ಮೊಬೈಲ್ಗಳಲ್ಲಿ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಸಮೀಕ್ಷೆಯನ್ನು ಮಾಡಿಕೊಳ್ಳಲು ಅವಕಾಶವನ್ನು ರೈತರಿಗೆ ನೀಡಿದ್ದು ಈ ಸಮೀಕ್ಷೆಯಿಂದ ಏನೆಲ್ಲಾ ಉಪಯೋಗಗಳು ರೈತರಿಗೆ ಆಗಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Survey and get facility Agriculture Department
Survey and get facility Agriculture Department
Join WhatsApp Group Join Telegram Group

ಬೆಳೆ ಸಮೀಕ್ಷೆ :

ಕುರುಗೋಡು ಹೋಬಳಿಯ ಮುಸ್ತಘಟ್ಟ ಗ್ರಾಮದ ರೈತರೊಂದಿಗೆ ಬಳ್ಳಾರಿಯ ಉಪ ಕೃಷಿ ನಿರ್ದೇಶಕ ಡಾಕ್ಟರ್ ಎನ್ ಕೆಂಗೇಗೌಡ ರವರು ಬೆಳೆ ಸಮೀಕ್ಷೆ ಕುರಿತು ಪ್ರಾತ್ಯಕ್ಷಿಕೆ ನೀಡಿ ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರೈತರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಎನ್ .ಕೆಂಗೇಗೌಡ ಕರೆ :

ರೈತರ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರವು ಕಲ್ಪಿಸಿದೆ ಎಂದು ಡಾಕ್ಟರ್ ಎನ್ ಕೆಂಗೇಗೌಡ ಅವರು ಮಾತನಾಡಿದ್ದು ರೈತರೇ ತಾವು ಬೆಳೆದ ಬೆಳೆಯ ಚಿತ್ರಗಳ ಸಮೇತ ಮಾಹಿತಿಯನ್ನು ಮೊಬೈಲ್ ನಲ್ಲಿಯೇ ಅಪ್ಲಿಕೇಶನ್ ಬಳಸಿ ದಾಖಲಿಸಬಹುದಾಗಿದೆ ಎಂದು ತಿಳಿಸಿದರು ಹಾಗೂ ಹೀಗೆ ಮಾಡುವ ಮೂಲಕ ಸರ್ಕಾರದಿಂದ ನಿಮ್ಮ ಬೆಳೆ ಏನಾದರೂ ಹಾನಿಯಾಗಿದ್ದರೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಇದು ಅನುಕೂಲವಾಗುತ್ತದೆ ಎಂದು ರೈತರಿಗೆ ವಿವರಣೆ ನೀಡಿದರು.

ಬೆಳೆ ಸಮೀಕ್ಷೆಯ ಮೂಲ :

ಸರ್ಕಾರಗಳ ಸೌಲಭ್ಯ ಸಿಗಲು ರೈತರಿಗೆ ಬೆಳೆ ಸಮೀಕ್ಷೆಯ ಮೂಲವಾಗಿದ್ದು ರೈತರು ಬೆಳೆ ಸಮೀಕ್ಷೆಯನ್ನು ತಮ್ಮ ಜಮೀನಿನ ಪಹಣಿ ರಕ್ಷಣೆಯಷ್ಟೇ ಮುಖ್ಯವಾಗಿ ಮಾಡಲು ಮುತುವರ್ಜಿ ವಹಿಸಬೇಕೆಂದು ಡಾಕ್ಟರ್ ಎನ್ ಕೆಂಗೇಗೌಡ ಅವರು ರೈತರಿಗೆ ಕರೆ ನೀಡಿದರು. ತಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ರೈತರೇ ನೇರವಾಗಿ ಬೆಳೆ ಸಮೀಕ್ಷೆಯನ್ನು ಮಾಡಬಹುದು. ಹಿಂದಿಲ್ಲ ಗುತ್ತಿಗೆ ಸಿಬ್ಬಂದಿ ಅಥವಾ ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡುತ್ತಿದ್ದರು ಆದರೆ ಈಗ ತಂತ್ರಜ್ಞಾನವು ಬೆಳೆದಿದ್ದು ರೈತರೇ ತಮ್ಮ ಮೊಬೈಲ್ಗಳಲ್ಲಿಯೇ ಬೆಳೆ ಸಮೀಕ್ಷೆಯನ್ನು ಮಾಡುವುದರ ಮೂಲಕ ಸರ್ಕಾರದಿಂದ ಹಾನಿಯಾದ ಬೆಳಗೆ ಸೌಲಭ್ಯವನ್ನು ಹಾಗೂ ಪರಿಹಾರವನ್ನು ಪಡೆಯಬಹುದಾಗಿದೆ ಎಂದು ರೈತರಿಗೆ ವಿವರಣೆಯನ್ನು ನೀಡಿದರು.

ಬೆಳೆ ಸಮೀಕ್ಷೆಯ ಹಂತಗಳು :

ಬೆಳೆ ಸಮೀಕ್ಷೆಯ ವಿಷಯದಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಮೊದಲ ಹಂತದಲ್ಲಿ ಅವಕಾಶ ನೀಡಲಾಗುತ್ತದೆ ಅದಾದ ನಂತರ ಗುತ್ತಿಗೆ ಆಧಾರದ ಮೇಲೆ ಬೆಳೆ ಸಮೀಕ್ಷೆ ಮಾಡಲು ಖಾಸಗಿ ವ್ಯಕ್ತಿಗಳನ್ನು ಕಳುಹಿಸಲಾಗುತ್ತದೆ. ಖಾಸಗಿ ವ್ಯಕ್ತಿಗಳು ಕೊಟ್ಟ ಮಾಹಿತಿಯನ್ನು ಮೂರನೇ ಹಂತದಲ್ಲಿ ಕಂದಾಯ ಕೃಷಿ ತೋಟಗಾರಿಕೆ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಿದರಷ್ಟೇ ಬೆಳೆ ಸಮೀಕ್ಷೆ ಅಂತಿಮವಾಗಲಿದೆ ಎಂದು ಈ ಇದರಿಂದ ರೈತರಿಗೆ ಸರಿಯಾದ ಪರಿಹಾರ ಸಿಗೋದಿಲ್ಲ. ಹಾಗಾಗಿ ರೈತರು ಬೆಳೆದ ಬೆಳೆಗೆ ಬದಲಾಗಿ ಬೇರೆ ಬೆಳೆ ನಮೂದಿಸಲಾಗಿದೆ ಎಂದು ದೂರು ಕೊಡುವುದನ್ನು ಬಿಟ್ಟು ಇಲಾಖೆಗಳಿಗೆ ಬೆಳೆ ಸಮೀಕ್ಷೆಗೆ ಕಾಲಕಾಲಕ್ಕೆ ಹೊತ್ತು ಕೊಡಬೇಕಾಗಿದೆ ಎಂದು ರೈತರಿಗೆ ತಿಳಿಸಿದರು. ಹಾಗಾಗಿ ತಾವೇ ಫೋಟೋ ಸಮೇತ ಜಮೀನಿನ ಬೆಳೆಯನ್ನು ಸಮೀಕ್ಷೆ ನಡೆಸುವ ಅಪ್ಲಿಕೇಶನ್ ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ ಎಂದು ತಿಳಿಸಿದರು.

ರೈತರಿಗೆ ಸರ್ಕಾರದ ಯೋಜನೆ :

ಬೆಳೆ ಸಮೀಕ್ಷೆಯು ಪ್ರಕೃತಿ ವಿಕೋಪಗಳಾದ ನಷ್ಟದ ಸಮೀಕ್ಷೆ,, ಬೆಂಬಲ ಬೆಲೆಯಲ್ಲಿ ಖರೀದಿ, ಬೆಳೆ ವಿಮೆ, ಸಹಾಯಧನ ,ಬೆಳೆ ಪರಿಹಾರ ಹೀಗೆ ಎಲ್ಲದಕ್ಕೂ ಕಡ್ಡಾಯವಾಗಿದೆ ಎಂದು ಹೇಳಬಹುದಾಗಿದೆ. ಯಾವ ಬೆಳೆಯನ್ನು ನಿಮ್ಮ ಜಮೀನಿನಲ್ಲಿ ಬೆಳೆಯಲಾಗುತ್ತಿದೆ ಎನ್ನುವುದರ ಆಧಾರದ ಮೇಲೆ ರೈತರಿಗೆ ಸರ್ಕಾರದ ಯೋಜನೆಗಳು ಸಿಗಲಿವೆ. ಹೀಗಾಗಿ ತಮ್ಮ ಜಮೀನಿನ ದಾಖಲೆಗಳ ಕಡೆ ಎಲ್ಲ ರೈತರು ಹೇಗೆ ಗಮನಹರಿಸುತ್ತೀರೋ ಹಾಗೆ ಬೆಳೆ ಸಮೀಕ್ಷೆಯನ್ನು ಮಾಡಬೇಕಾದ ಅನಿವಾರ್ಯತೆ ರೈತರಿಗೆ ಒದಗಿದೆ ಎಂದು ಹೇಳಬಹುದಾಗಿದೆ.

ಇದನ್ನು ಓದಿ : ಸಾಲ ಮನ್ನಾಕ್ಕೆ ಹೊಸ ರೂಲ್ಸ್:‌ ಈಗ ಈ ಬ್ಯಾಂಕ್‌ ನಲ್ಲಿ ಖಾತೆಯಿದ್ದರೆ ಮಾತ್ರ ಸಂಪೂರ್ಣ ಸಾಲ ಮನ್ನಾ

ಖಾರಿಫ್ ಫಾರ್ಮರ್ ಕ್ರಾಪ್ :

ಬೆಳೆ ಸಮೀಕ್ಷೆ ಮಾಡಲು ಇರುವ ಅಪ್ಲಿಕೇಶನ್ ಎಂದರೆ ಖಾರಿ ಫಾರ್ಮರ್ ಕ್ರಾಫ್ಟ್ 2023-24 ಈ ಅಪ್ಲಿಕೇಶನ್ ಮೂಲಕ ಪ್ಲೇ ಸ್ಟೋರ್ ಗೆ ಹೋಗಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವುದರ ಮೂಲಕ ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತಹ ಎಲ್ಲಾ ಮಾಹಿತಿಯನ್ನು ರೈತರು ಪಡೆಯಬಹುದಾಗಿದೆ. ಅಪ್ಲಿಕೇಶನ್ ನಲ್ಲಿ ಬೆಳೆಯ ಫೋಟೋಗಳ ಜೊತೆಗೆ ರೈತರು ಸರ್ವೇ ನಂಬರ್ ಬೆಳೆಯ ಸ್ಥಿತಿ ಎಲ್ಲವನ್ನು ಈ ಅಪ್ಲಿಕೇಶನ್ ನಲ್ಲಿ ಡೌನ್ಲೋಡ್ ಮಾಡುವುದರ ಮೂಲಕ ಸರ್ಕಾರ ಈ ಅಪ್ಲಿಕೇಶನ್ ರೈತರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಅಭಿವೃದ್ಧಿಪಡಿಸಿದ್ದು, ಇದು ರೈತರಿಗೆ ತಿಳಿಯದೆ ಇದ್ದರೆ ನಿಮ್ಮ ಮನೆಯಲ್ಲಿನ ವಿದ್ಯಾವಂತರಿಂದ ಈ ಬೆಳೆ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಮೂಲಕ ಮಾಡಿಸಬಹುದಾಗಿದೆ.

ಹೀಗೆ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳನ್ನಾಗಲಿ ಅಥವಾ ತೋಟಗಾರಿಕಾ ಅಧಿಕಾರಗಳನ್ನಾಗಲಿ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಆಗಲಿ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಯೋಜಿತ ಖಾಸಗಿ ನಿವಾಸಿಗಳನ್ನು ಸಹ ರೈತರು ಸಂಪರ್ಕಿಸುವ ಮೂಲಕ ಬೆಳೆ ಸಮೀಕ್ಷೆಯನ್ನು ತಮ್ಮ ಮೊಬೈಲ್ಗಳಲ್ಲಿಯೇ ಮಾಡಿ ಬೆಳೆ ನಷ್ಟವಾದರೆ ಸರ್ಕಾರದಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದಾಗಿದೆ. ಹೀಗೆ ಬೆಳೆ ಸಮೀಕ್ಷೆಯನ್ನು ತಮ್ಮ ಮೊಬೈಲ್ಗಳಲ್ಲಿಯೇ ಮಾಡಬಹುದು ಎಂಬುದರ ಬಗ್ಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಕಳುಹಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಮನೆಯಲ್ಲಿ ಬಂಗಾರ ಇಟ್ಟುಕೊಂಡಿದ್ದೀರಾ: ಹಾಗಾದರೆ ನಿಮಗೆ ಈ ವಿಷಯ ಗೊತ್ತಾ..?

ರಸ ಪ್ರಶ್ನೆಯಲ್ಲಿ ಗೆದ್ದರೆ 1 ಲಕ್ಷ ಬಹುಮಾನ: ಪ್ರವೇಶ ಶುಲ್ಕ ಇಲ್ಲ ಉಚಿತವಾಗಿ ಭಾಗವಹಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments