Friday, June 14, 2024
HomeTrending Newsಯುವನಿಧಿ ಯೋಜನೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಅರ್ಜಿ ಸಲ್ಲಿಸಲು ಬೇಕಾದಂತಹ ದಾಖಲೆಗಳು DBT ಮೂಲಕ ಜಮಾ

ಯುವನಿಧಿ ಯೋಜನೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಅರ್ಜಿ ಸಲ್ಲಿಸಲು ಬೇಕಾದಂತಹ ದಾಖಲೆಗಳು DBT ಮೂಲಕ ಜಮಾ

ಯುವನಿಧಿ ಯೋಜನೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರ ಯುವ ನಿಧಿ ಯೋಜನೆಯನ್ನು ಜಾರಿ ಮಾಡಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಬೇಕಾದಂತಹ ದಾಖಲೆಗಳು ಹಾಗೂ ಯಾವ ಅಭ್ಯರ್ಥಿಗಳಿಗೆ ಈ ಯೋಜನೆ ಸೌಲಭ್ಯವನ್ನು ಪಡೆಯುವ ಅವಕಾಶವಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗುತ್ತದೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು ಹಾಗೂ ಅರ್ಜಿ ಫಾರಂ ಎಲ್ಲಿ ದೊರೆಯುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಗಾಗಿ ಕೊನೆವರೆಗೂ ಓದಿ!!

ಯುವನಿಧಿ ಯೋಜನೆಗೆ ಸಂಪೂರ್ಣ ಮಾಹಿತಿ
Join WhatsApp Group Join Telegram Group

ಕರ್ನಾಟಕ ಸರ್ಕಾರವು ಸಚಿವ ಸಂಪುಟ ನಡೆಸಿದ ನಂತರ ರಾಜ್ಯದಲ್ಲಿ ಇರುವಂತಹ ಪದವಿ ಹಾಗೂ ಡಿಪ್ಲೋಮೋ ಓದಿದಂತಹ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಯೋಜನೆಯನ್ನು ಜಾರಿ ಮಾಡಿದೆ ಯಾರು ಪದವಿಯನ್ನು ಮುಗಿಸಿ ಕೆಲಸ ಸಿಗದೇ ಇರುವಂತಹ ಅಭ್ಯರ್ಥಿಗಳಿಗೆ ಈ ಯೋಜನೆಯ ಮೂಲಕ ಸಹಕಾರಿಯಾಗಲಿದೆ ಈ ಹಣವನ್ನು ಬಳಸಿಕೊಂಡು ಕಿರು ಉದ್ಯೋಗ ಅಥವಾ ಸರ್ಕಾರದ ನೌಕರಿಗೆ ಬೇಕಾಗುವಂತಹ ತರಬೇತಿ ಪಡೆಯಲು ಸಹ ಅನುಕೂಲಕರವಾಗಲಿದೆ ಪ್ರತಿ ತಿಂಗಳು 3000 ಕೊಡುವುದಾಗಿ ಸರ್ಕಾರ ಖಚಿತವಾಗಿ ತಿಳಿಸಿದೆ ಹಾಗಾಗಿ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಈ ಯುವನಿಧಿ ಯೋಜನೆ ಬಗ್ಗೆ ಯಾವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಅರ್ಜಿ ಫಾರಂ ಅನ್ನು ಹೇಗೆ ಭರ್ತಿ ಮಾಡುವುದು ಎಂಬುದು ಕುರಿತು ನೋಡೋಣ

ಕರ್ನಾಟಕ ರಾಜ್ಯದ ಪದವಿ ಹಾಗೂ ಡಿಪ್ಲೋಮೋ ಓದಿದಂತಹ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದ ಪದವಿ ವಿದ್ಯಾರ್ಥಿಗಳಿಗೆ 3000 ಹಾಗೂ ಡಿಪ್ಲೋಮೋ ಓದಿದಂತಹ ವಿದ್ಯಾರ್ಥಿಗಳಿಗೆ ಒಂದೂವರೆ ಸಾವಿರ ನೀಡುವುದಾಗಿ ಘೋಷಣೆ ಮಾಡಿದೆ ಹಾಗಾಗಿ ಈ ಯೋಜನೆಗೆ ಬೇಕಾಗುವಂತಹ ದಾಖಲೆಗಳು ಹಾಗೂ ಅರ್ಜಿಗೆ ಕಡ್ಡಾಯವಾಗಿ ಹೊಂದಿರಲೇ ಬೇಕಾದಂತಹ ದಾಖಲೆಗಳು ಯಾವುವು ಎಂಬುದು ತಿಳಿದುಕೊಂಡು ಈ ಅರ್ಜಿಗಳನ್ನು ಮೊದಲೇ ನಿಮ್ಮ ಬಳಿ ಇಟ್ಟುಕೊಂಡಿರಿ ಇಲ್ಲವಾದರೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ದಾಖಲೆಗಳಿಲ್ಲದಿದ್ದರೆ ಕಷ್ಟಕರವಾಗಬಹುದು

ಕರ್ನಾಟಕ ರಾಜ್ಯದಲ್ಲಿ ಯುವ ನಿಧಿ ಯೋಜನೆ 2022-23 ಸಾಲಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೂ ಯೋಜನೆ ಸಹಕಾರಿಯಾಗಲಿದ್ದು ತಮ್ಮ ವಿದ್ಯಾಭ್ಯಾಸ ಮುಗಿಸಿದರು ಸಹ ಕೆಲಸ ದೊರೆಯದೆ ಇರುವಂತಹ ನಿರುದ್ಯೋಗಿ ಯುವಕರಿಗೆ ಸರ್ಕಾರ ನೀಡುವಂತಹ ಸಹಾಯಧನವು ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ

ಹಾಗಾದರೆ ಸರ್ಕಾರ ಯಾವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ ಹಾಗೂ ಯಾವ ಕೋರ್ಸ್ ಅನ್ನು ಪಡೆದು ಇರಬೇಕು ಎಂಬುದನ್ನು ತಿಳಿಯೋಣ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಬಿಎ ಬಿಕಾಂ ಬಿಬಿಎಂಎ ಹಾಗೂ ಇಂಜಿನಿಯರಿಂಗ್ ಮತ್ತು ಇನ್ನಿತರ ಕೋರ್ಸ್ ಗಳನ್ನು ಸಹ ಸರ್ಕಾರ ತಿಳಿಸಿದೆ

ಈ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಪೂರ್ಣಗೊಂಡಿದ್ದರೆ 3000 ನೀಡುವುದಾಗಿ ಸರ್ಕಾರ ತಿಳಿಸಿದೆ ಹಾಗಿದ್ದರೆ ಡಿಪ್ಲೋಮೋ ಓದಿದ ವಿದ್ಯಾರ್ಥಿಗಳಿಗೆ ಎಷ್ಟು ಹಣ ದೊರೆಯುತ್ತದೆ ಎಂಬುದು ನಿಮ್ಮ ಪ್ರಶ್ನೆ ಆದರೆ ಅವರಿಗೂ ಸಹ ಪ್ರತಿ ತಿಂಗಳಿಗೆ ವಿದ್ಯಾರ್ಥಿಗೆ ಒಂದುವರೆ ಸಾವಿರ ಹಣವನ್ನು ನೇರವಾಗಿ DBT ಮೂಲಕ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುವುದು

ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ ಖಾತೆಗೆ ಹಣ ಹಾಕಲು ಇರುವ ನಿಯಮಗಳೇನು
?

ಕರ್ನಾಟಕ ರಾಜ್ಯ ಸರ್ಕಾರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತೀರ್ಮಾನ ಮಾಡಿ ಮಾಧ್ಯಮಗಳ ಮೂಲಕ ಹೇಳಿರುವ ಹಾಗೆ 2022 23ನೇ ಸಾಲಿನಲ್ಲಿ ಪದವಿಯನ್ನು ಪೂರ್ಣಗೊಳಿಸಿರುವ ಹಾಗೂ ಡಿಪ್ಲೋಮೋ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಖಾತೆಗೆ ಹಣ ಹಾಕಲು ತೀರ್ಮಾನಿಸಲಾಗಿದ್ದು ವಿದ್ಯಾರ್ಥಿಗಳಿಗೆ ಪಾಸ್ ಆದ ತಕ್ಷಣ ಹಣ ಆಗುವುದಿಲ್ಲ ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದು ಕೆಲವು ಸಮಯ ತೆಗೆದುಕೊಳ್ಳಬಹುದು ನೀವು ಹಣವನ್ನು ಪಡೆಯಬೇಕಾದರೆ ನಿಮ್ಮ ವಿದ್ಯಾಭ್ಯಾಸ ಪೂರ್ಣಗೊಂಡ ದಿನದಿಂದ ನಾಲ್ಕು ತಿಂಗಳವರೆಗೂ ಕೆಲಸ ದೊರೆಯದೆ ಇದ್ದವರಿಗೆ ಮಾತ್ರ

ಎಷ್ಟು ದಿನವುಗಳವರೆಗೂ ಹಣವನ್ನು ನೀಡುತ್ತಾರೆ

ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 24 ತಿಂಗಳವರೆಗೆ ಅಂದರೆ ವರ್ಷಕ್ಕೆ 12 ತಿಂಗಳಂತಾದರೆ 24 ತಿಂಗಳು ಅಂದರೆ ಎರಡು ವರ್ಷ ಸರ್ಕಾರ ನಿಮ್ಮ ಖಾತೆಗೆ ಉದ್ಯೋಗ ಸಿಗದಿದ್ದರೆ ಹಣವನ್ನು ಹಾಕುತ್ತದೆ ಮಧ್ಯದಲ್ಲಿ ನಿಮಗೆ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆತರೆ ಈ ಹಣವನ್ನು ನಿಮ್ಮ ಖಾತೆಗೆ ಹಾಕಲಾಗುವುದಿಲ್ಲ ಎಂಬುದನ್ನು ತಿಳಿಸಿದೆ

ಯುವ ನಿಧಿ ಯೋಜನೆ ಬೇಕಾಗುವಂತಹ ದಾಖಲೆಗಳು

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದಲ್ಲಿ ವಾಸಿಸುತ್ತಿರಬೇಕು ಅಂದರೆ ಕರ್ನಾಟಕದ ನಿವಾಸಿ ಆಗಿರಬೇಕು
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನಿಮ್ಮ ಬಳಿ ಇರಬೇಕು
  • ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿರಬೇಕು ಹಾಗೂ ನಿಮ್ಮ ಬಳಿ ಮಾಸ್ ಕಾರ್ಡ್ ಇರಬೇಕು
  • ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಹೊಂದಿರಬೇಕು

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು

ಸರ್ಕಾರ ಇದರ ಬಗ್ಗೆ ಯೋಜನೆಯ ಜಾರಿ ಮಾಡುತ್ತಿದ್ದು ಹಾಗಾಗಿ ಅರ್ಜಿ ಬಿಡುಗಡೆ ಪ್ರಕ್ರಿಯೆಯಲ್ಲಿದ್ದು ಹಾಗಾಗಿ ಸಿದ್ಧತೆ ಮಾಡಲಾಗುತ್ತಿದ್ದು ತಕ್ಷಣ ಸರ್ 22 23ನೇ ಸಾಲಿನಲ್ಲಿ ಸೂಕ್ತವಾದಂತ ಅರ್ಜಿ ಫಾರಂ ಅನ್ನು ಹಾಗೂ ಕೆಲವ ನಿಯಮಗಳನ್ನು ಸರ್ಕಾರ ಜಾರಿ ಮಾಡಲಿದೆ ಹಾಗಾಗಿ ಅರ್ಜಿ ಫಾರಂ ಬಿಡುಗಡೆಗೆ ಕಾಯಬೇಕಾಗಿದೆ

ಇದೇ ರೀತಿಯಾದಂತಹ ಸರ್ಕಾರಿ ಯೋಜನೆ ಇತರೆ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಯೋಜನೆಯ ಸದುಪಯೋಗ ಅವರು ಪಡೆದುಕೊಳ್ಳಿ ಅವರ ಜೀವನಕ್ಕೆ ಈ ಯೋಜನೆ ಸಹಕಾರಿಯಾಗಲಿದೆ ಧನ್ಯವಾದಗಳು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments