Thursday, July 25, 2024
HomeTrending Newsಶೂನ್ಯ ವಿದ್ಯುತ್ ಬಿಲ್‌ ವಿತರಣೆ ಪ್ರಾರಂಭ! ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಜೀರೋ ವಿದ್ಯುತ್ ಬಿಲ್‌, ಯಾವಾಗ...

ಶೂನ್ಯ ವಿದ್ಯುತ್ ಬಿಲ್‌ ವಿತರಣೆ ಪ್ರಾರಂಭ! ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಜೀರೋ ವಿದ್ಯುತ್ ಬಿಲ್‌, ಯಾವಾಗ ನಿಮ್ಮ ಕೈ ಸೇರಲಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೆ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗ ನಂತರ ಭರವಸೆ ನೀಡಿದ ಹಾಗೆ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ನಂತರ ಒಂದಾದ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದ್ದು ಅದರಂತೆ ಈಗ ಗೃಹ ಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರವು ಈಗಾಗಲೇ ಚಾಲನೆ ನೀಡಿರುವುದರ ಮೂಲಕ ಈ ಯೋಜನೆಯ ಅಡಿಯಲ್ಲಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ಅರ್ಹ ಫಲಾನುಭವಿಗಳಿಗೆ ಶೂನ್ಯ ಬಿಲ್ಲನ್ನು ಕೊಡಲು ಪ್ರಾರಂಭಿಸಲಾಗಿದೆ. ಹಾಗಾದರೆ ಗೃಹಜೋತಿ ಯೋಜನೆಯ ಶೂನ್ಯ ಬಿಲ್ ಹೇಗೆ ಬರಲಿದೆ ಹಾಗೂ ಇದರ ಲಾಭ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

Zero Bill for Grihajoti Yojana beneficiaries
Zero Bill for Grihajoti Yojana beneficiaries
Join WhatsApp Group Join Telegram Group

ಶೂನ್ಯ ಬಿಲ್ ವಿತರಣೆ :

ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಈಗಾಗಲೇ ಎಸ್ಕಾಂಗಳಿಂದ ಶೂನ್ಯ ಬಿಲ್ ವಿತರಣೆ ಆರಂಭ ಮಾಡಲಾಗಿದ್ದು ಆ ಭಾಗದ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಅಭ್ಯರ್ಥಿಗಳಿಗೆ ಅಂದರೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಅರ್ಹ ಫಲಾನುಭವಿಗಳಿಗೆ ಶೂನ್ಯ ಬಿಲ್ ವಿತರಣೆಯನ್ನು ಮಾಡಲಾಗಿದೆ. ಶೂನ್ಯ ಬಿಲ್ ವಿತರಣೆಯು ಆಗಸ್ಟ್ ಒಂದರಿಂದ ಆರಂಭವಾಗಿದ್ದು ಸುಮಾರು 5 ಲಕ್ಷ ಜನರಿಗೆ ಒಂದೇ ದಿನದಲ್ಲಿ ಶೂನ್ಯ ಬಿಲ್ಲನ್ನು ಬೆಸ್ಕಾಂ ಅಧಿಕಾರಿಗಳು ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ.

ಬೆಸ್ಕಾಂ ವಿಭಾಗದಿಂದ ಶೂನ್ಯ ಬಿಲ್ :

ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಜಿಲ್ಲೆಗಳಿಗೆ ಸೇರಿ ಸುಮಾರು 89 ಲಕ್ಷ ಗೃಹಬಳಕೆಯ ವಿದ್ಯುತ್ತನ್ನು ಹೊಂದಿದ್ದು ಅದರಲ್ಲಿ ಈಗ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಅರ್ಹ ಅಭ್ಯರ್ಥಿಗಳಿಗೆ ಜುಲೈ 27ರವರೆಗೆ ಸುಮಾರು 55 ಲಕ್ಷ ಗ್ರಾಹಕರಿಗೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ನೊಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನವೇ ಈಗ ಅವರಿಗೆ ಸುಮಾರು 5 ಲಕ್ಷ ಮಂದಿಗೆ ಶೂನ್ಯ ಬಿಲ್ಲನ್ನು ನೀಡಲಾಗಿದ್ದು ಮುಂದಿನ ಎರಡು ಅಥವಾ ಮೂರು ವಾರದಲ್ಲಿ ಶೂನ್ಯ ಬಿಲ್ಲನ್ನು ಎಲ್ಲ ಗ್ರಾಹಕರಿಗೆ ಕೊಡುವ ಗುರಿಯನ್ನು ವಿಭಾಗವು ಹೊಂದಿದೆ.

ಶೂನ್ಯ ಬಿಲ್ ಮಾದರಿಯ ವಿಧಾನ :

ಗೃಹಜೋತಿ ಯೋಜನೆಗೆ ಹಲವಾರು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದಾರೆ ಹಾಗಾಗಿ ಗ್ರಾಹಕರಲ್ಲಿ ಯಾವುದೇ ಗೊಂದಲ ಇರುವುದರಿಂದ ಇದ್ದರೆ ಅವರು ತಮ್ಮ ಮಾಡಿಕೊಳ್ಳಬಹುದಾಗಿದೆ. ಅರ್ಜಿಯನ್ನು ಸಲ್ಲಿಸಿದಂತಹ ಗ್ರಾಹಕರ ಅರ್ಜಿಯ ಸ್ಥಿತಿ ಅವರು ಚೆಕ್ ಮಾಡಿದಾಗ ಅವರ ಅರ್ಜಿಗಳು ಇನ್ನೂ ಪ್ರೋಸಸಿಂಗ್ ನಲ್ಲಿ ಇರುವುದರಿಂದ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಅಪ್ರುವಲ್ ಆಗಿದೆ ಎಂದು ತೋರಿಸುವುದಿಲ್ಲ. ಹಾಗಾಗಿ ಶೂನ್ಯ ಬಿಲ್ಲವರಿಗೆ ಈ ತಿಂಗಳು ಬರುತ್ತದೆ ಅಥವಾ ಇಲ್ಲವೋ ಎಂದು ಗೊಂದಲ ಇದ್ದವರಿಗೆ ಬೆಸ್ಕಾಂ ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ನೀಡಿದ್ದು ಅವರು ಆತಂಕ ಗೊಳ್ಳಬೇಕಾಗಿಲ್ಲ ಅವರ ಅರ್ಜಿಗಳು ಪ್ರಕ್ರಿಯೆ ಪೂರ್ಣಗೊಳ್ಳಲಿದೆ ವಿದ್ಯುತ್ ಬಿಲ್ ಅವಧಿ ಆಧಾರದ ಮೇಲೆ ಮೀಟರ್ ರೀಡಿಂಗ್ ಮಾಡಿ ಶೂನ್ಯ ಬಿಲ್ಲನ್ನು ಗ್ರಾಹಕರಿಗೆ ನೀಡಲಾಗುತ್ತದೆ ಎಂದು ಬೆಸ್ಕಾಂನ ಅಧಿಕಾರಿಗಳು ತಿಳಿಸಿದ್ದಾರೆ.

ಶೂನ್ಯ ಬಿಲ್ ಯಾವಾಗ ಬರಲಿದೆ :

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಶೂನ್ಯ ಬಿಲ್ಲನ್ನು ನೀಡುವುದಾಗಿ, ರಾಜ್ಯ ಸರ್ಕಾರವು ತಿಳಿಸಿದೆ. ಅದರಂತೆ ಶೂನ್ಯ ಬಿಲ್ಲನ್ನು ಒಂದು ತಿಂಗಳ ಮೊದಲ ವಾರದಲ್ಲಿ ಬಿಲ್ ವಿತರಿಸಲಾಗಿದ್ದು ಮತ್ತೊಂದು ಕಡೆ ಎರಡನೇ ವಾರದಲ್ಲಿ ಬಿಲ್ಲನ್ನು ವಿತರಿಸಲಾಗುತ್ತದೆ ಎಂದು ಹೇಳಲಾಗುತ್ತದೆ ಅಂದರೆ ಉದಾಹರಣೆಗೆ ಜುಲೈ ಒಂದರಿಂದ ಆಗಸ್ಟ್ ಅಂದರು ಒಂದರವರಿಗೆ ಅದಾದ ನಂತರ ಜುಲೈ 10 ರಿಂದ ಆಗಸ್ಟ್ 10ರವರೆಗೆ ಶೂನ್ಯ ಬಿಲ್ಲನ್ನು ಗ್ರಾಹಕರ ಮನೆಯ ಮೀಟರ್ ರೀಡಿಂಗ್ ಅವಧಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ವ್ಯತ್ಯಾಸವಿರುತ್ತದೆ ಹಾಗಾಗಿ ಅವರ ಸರದಿ ಬಂದಾಗ ಮೀಟರ್ ರೀಡ್ ಮಾಡಿ ಸಿಬ್ಬಂದಿ ಅರ್ಹರಿಗೆ ಉಚಿತ ಬಿಲ್ಲನ್ನು ನೀಡುತ್ತಾರೆ.

ಅರ್ಜಿ ಸ್ಥಿತಿಗತಿಯನ್ನು ಚೆಕ್ ಮಾಡುವ ವಿಧಾನ :

ಗ್ರಾಹಕರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಅವರು ಅರ್ಜಿ ಯ ಸ್ಥಿತಿಯನ್ನು ಚೆಕ್ ಮಾಡಬೇಕಾದರೆ ಅವರು ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಅರ್ಜಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಎಂದರೆ https://sevasindhu.karnataka.gov.in/StatucTrack/Track_Status ಈ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಗೃಹ ಜ್ಯೋತಿ ಯೋಜನೆಯ ಸ್ಥಿತಿಗತಿಯನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬಹುದಾಗಿದೆ.

ಹೀಗೆ ರಾಜ್ಯ ಸರ್ಕಾರದ ಗೃಹಜೋತಿ ಯೋಜನೆಗೆ ಸಂಬಂಧಿಸಿ ದಂತೆ ಶೂನ್ಯ ಬಿಲ್ಲನ್ನು ಯಾವಾಗ ನೀಡಲಾಗುತ್ತದೆ ಎಂಬುದರ ಬಗ್ಗೆ ಗೊಂದಲವನ್ನು ಹೊಂದಿದಂತಹ ಫಲಾನುಭವಿಗಳಿಗೆ ಈಗ ರಾಜ್ಯ ಸರ್ಕಾರವು ಉತ್ತರ ನೀಡುವುದರ ಮೂಲಕ ಅವರ ಗೊಂದಲಗಳಿಗೆ ಪೂರ್ಣವಿರಾಮವನ್ನು ನೀಡಿದಂತಾಗಿದೆ. ಹೀಗೆ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಗೃಹಜೋತಿ ಯೋಜನೆಯ ಶೂನ್ಯ ಬಿಲ್ಲನ್ನು ಪಡೆಯುವಂತೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರಿ ನೌಕರರಿಗೆ ಹೊಡೀತು ಲಾಟ್ರಿ: ಹಳೆಯ ಪಿಂಚಣಿ ಯೋಜನೆ ಮತ್ತೆ ಮರುಜಾರಿ! ಆರ್‌ಬಿಐ ನಿಂದ ಮಹತ್ವದ ನಿರ್ಧಾರ

ರಾಜ್ಯ ಸರ್ಕಾರದಿಂದ ಯುವಕ ಯುವತಿಯರಿಗೆ ಗುಡ್ ನ್ಯೂಸ್! ರಾಜ್ಯದಲ್ಲಿ ಬರೋಬ್ಬರಿ 14 ಸಾವಿರ ಉದ್ಯೋಗ ಸೃಷ್ಟಿ, ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments