Thursday, July 25, 2024
HomeTrending Newsರೆಡ್ ಕ್ವೀನ್ ನ ರೇಟ್ ಮತ್ತೆ ಹೆಚ್ಚಳ : ಟೊಮೊಟೊ ಬೆಲೆ ಏರಿಕೆಯಿಂದ ಜನರು ಶಾಕ್...

ರೆಡ್ ಕ್ವೀನ್ ನ ರೇಟ್ ಮತ್ತೆ ಹೆಚ್ಚಳ : ಟೊಮೊಟೊ ಬೆಲೆ ಏರಿಕೆಯಿಂದ ಜನರು ಶಾಕ್ ರೈತರು ರಾಕ್

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿರುವುದರ ಬಗ್ಗೆ. ಈ ಮಾಹಿತಿ ಸಾಮಾನ್ಯ ಜನರಿಗೆ ನೀಡುವುದು ಬಹಳ ಮುಖ್ಯವಾಗಿದೆ. ತರಕಾರಿಯ ಬೆಲೆಯು 200 ರೂಪಾಯಿಗಳಿಗೆ ದೇಶದ 35 ನಗರಗಳಲ್ಲಿ ಏರಿಕೆಯಾಗಿದ್ದು ಅದರಂತೆ ಟೊಮೊಟೊ ಬೆಲೆಯೂ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನೋಡಬಹುದಾಗಿದೆ. ಈ ಬೆಲೆ ಏರಿಕೆಯೂ ಭಾರಿ ಹೊಡೆತವನ್ನು ಜನ ಸಾಮಾನ್ಯರಿಗೆ ನೀಡುತ್ತಿದ್ದು ಈ ಬೆಲೆ ಏರಿಕೆಯಿಂದ ಯಾವಾಗ ಜನರಿಗೆ ಮುಕ್ತಿ ಸಿಗುತ್ತದೆಯೋ ತಿಳಿಯದು. ಹಾಗಾದರೆ ಯಾವೆಲ್ಲ ತರಕಾರಿಗಳು ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Tomato price hike
Tomato price hike
Join WhatsApp Group Join Telegram Group

ದೇಶದ 35 ನಗರಗಳಲ್ಲಿ ಟೊಮೆಟೊ ಬೆಲೆ :

ಟೊಮೊಟೊ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಭಾರತ ದೇಶದಲ್ಲಿ 35 ನಗರಗಳಲ್ಲಿ ಸುಮಾರು 200 ರೂಪಾಯಿಗಳಷ್ಟು ಟೊಮೆಟೊ ಬೆಲೆಯು ದಾಟಿದೆ. ಅದರಂತೆ ಈಗ ಟೊಮೆಟೊ ಬೆಲೆಯಲ್ಲಿದೆ ತರಕಾರಿಗಳ ಬೆಲೆಯೂ ಸಹ ಹೆಚ್ಚಾಗುತ್ತಿರುವುದನ್ನು ನೋಡಬಹುದಾಗಿದೆ. ಜನಸಾಮಾನ್ಯರು ತರಕಾರಿ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. 20,621 ಲಕ್ಷ ಟನ್ಗಳಷ್ಟು ಉತ್ಪಾದನೆ ಯಿಂದಾಗಿ ಹೊಸ ಬೆಳೆಗಳು ಬರುವವರೆಗೂ ಟೊಮೆಟೊ ಬೆಲೆ ಏರಿಕೆಯಿಂದಾಗಿ ಕಡಿಮೆಯಾಗಲು ಯಾವುದೇ ಸಹ ಪರಿಹಾರ ಸಿಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸೆಪ್ಟೆಂಬರ್ ನಿಂದಲೂ ಸಹ ಬೆಲೆಗಳು ಹೆಚ್ಚಾಗುತ್ತದೆ ಎಂಬುದನ್ನು ನೋಡಬಹುದಾಗಿದೆ.

ಈರುಳ್ಳಿಯ ಬೆಲೆ ಏರಿಕೆ :

ಟೊಮೊಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರು ಈಗ ಈರುಳ್ಳಿ ಬೆಲೆ ಕೇಳಿ ಸಾಮಾನ್ಯ ಜನರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈರುಳ್ಳಿ ಬೆಲೆಯೂ ಅತಿ ವೇಗವಾಗಿ ಹೇರುತ್ತಿದ್ದು ಕೆಲವು ವರದಿಯ ಪ್ರಕಾರ ಈರುಳ್ಳಿಯೂ ಸೆಪ್ಟೆಂಬರ್ ಆರಂಭದಲ್ಲಿ ಬರುವುದು ಅವಾಗ ಬೆಲೆಯೂ ಕಡಿಮೆಯಾಗಲಿದೆ ಹಾಗಾಗಿ ಈಗ ಈರುಳ್ಳಿ ಬೆಲೆಯೂ ಕೆಜಿಗೆ 70 ರೂಪಾಯಿಗಳು ಹೇರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಟೊಮೊಟೊ ಬೆಲೆಯಿಂದ ಗೊಂದಲಕ್ಕೀಡಾಗಿದ್ದ ಜನಸಾಮಾನ್ಯರಿಗೆ ಮತ್ತಿದ್ದೀಗ ಬೆಳೆಕಾಳುಗಳು ಮತ್ತು ಹಿಟ್ಟು ಕೂಡ ದುಬಾರಿಯಾಗಿದೆ ಎಂದು ಸರ್ಕಾರವು ಸಂಸತ್ತಿಗೆ ತಿಳಿಸಿದೆ.

ಇದನ್ನು ಓದಿ : Adhar Card New Update: ನಿಮ್ಮ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಗಳನ್ನು ಕೇವಲ 1 ನಿಮಿಷದಲ್ಲಿ ಬದಲಾಯಿಸಿ! ಇಲ್ಲಿದೆ ಹೊಸ ಡೈರೆಕ್ಟ್‌ ಲಿಂಕ್

ಅಕ್ಕಿ ಬೇಳೆ ಕಾಳುಗಳ ಬೆಲೆ ಏರಿಕೆ :

ಟೊಮೊಟೊ ನಂತರ ಈರುಳ್ಳಿಯ ಬೆಲೆ ಏರಿಕೆಯಾಯಿತು ಈರುಳ್ಳಿ ಬೆಲೆಯ ನಂತರ ಅಕ್ಕಿ ಬೆಳೆ ಕಾಳು ಹಿಟ್ಟು ಹಾಗೂ ಎಣ್ಣೆಗಳ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ದೊಡ್ಡ ಹೊಡೆತವನ್ನು ಕೊಡುತ್ತಿದೆ. ಶೇಕಡ 28ರಷ್ಟು ಬೇಳೆಕಾಳುಗಳ ಬೆಲೆ ಹೆಚ್ಚಾಗಿದ್ದು ಹಿಟ್ಟಿನ ಬೆಲೆಯೂ ಹೆಚ್ಚಾಗಿರುವುದನ್ನು ನೋಡಬಹುದಾಗಿದೆ. ದಿನದಿಂದ ದಿನಕ್ಕೆ ವೇಗವಾಗಿ ಏರುತ್ತಿರುವ ಬೆಲೆಗಳಿಂದ ದೇಶದಾದ್ಯಂತ ಜನಸಾಮಾನ್ಯರು ತೊಂದರೆಗೊಳಗಾಗಿದ್ದಾರೆ. ಮುಂದೆ ಏನಾಗುತ್ತದೆ ಎನ್ನುವ ಆತಂಕ ಈ ಜನಸಾಮಾನ್ಯರಲ್ಲಿ ಕಾಡುತ್ತಿದ್ದು ಇಂತಹ ಹಣದುಬ್ಬರ ಯಾವಾಗ ನಿಲ್ಲುತ್ತದೆ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.

ಹೀಗೆ ಟೊಮೊಟೊ ಬೆಲೆಯೂ ಸದ್ಯ ಈಗ 200 ರೂಪಾಯಿಗಳಷ್ಟು ಇದ್ದು ಮುಂದಿನ ದಿನಗಳಲ್ಲಿ ಹೇರಿಕೆಯಾಗಬಹುದು ಎಂಬ ಮಾಹಿತಿಯು ಕೇಳಿ ಬರುತ್ತಿರುವುದನ್ನು ಕಂಡ ಜನರು ಕಂಗಾಲಾಗಿದ್ದು ಇದು ಅವರಿಗೆ ಆರ್ಥಿಕವಾಗಿ ಹೊಡೆತವನ್ನು ನೀಡುತ್ತಿದೆ. ಕೇವಲ ಟೊಮೆಟೋ ಬೆಲೆ ಹೆಚ್ಚಾಗದೆ ಈರುಳ್ಳಿ ಬೆಲೆ ಹಾಗೂ ಅಕ್ಕಿ ಬೇಳೆ ಕಾಳುಗಳ ಬೆಲೆಯೂ ಸಹ ಹೆಚ್ಚಾಗಿರುವುದು ಜನಸಾಮಾನ್ಯರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಸಾಕಷ್ಟು ಹೆಣೆಗಾಡದ ಭಾಗ ಆಗುತ್ತಿದೆ. ಹೀಗೆ ತರಕಾರಿ ಹಾಗೂ ಬೇಳೆಕಾಳುಗಳ ಬೆಲೆಯು ಹೆಚ್ಚಾಗಿರುವುದರ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೂ ಸಹ ಶೇರ್ ಮಾಡುವುದರ ಮೂಲಕ ಬೆಲೆ ಏರಿಕೆಯ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Instagram Reels ನೋಡುವ ಮೂಲಕ ಹಣಗಳಿಸುವ ಸುಲಭ ಮಾರ್ಗ: ಇಲ್ಲಿ ನೋಡಿ ಹಣಗಳಿಸಿ

ಸರ್ಕಾರಿ ನೌಕರರಿಗೆ ಹೊಡೀತು ಲಾಟ್ರಿ: ಹಳೆಯ ಪಿಂಚಣಿ ಯೋಜನೆ ಮತ್ತೆ ಮರುಜಾರಿ! ಆರ್‌ಬಿಐ ನಿಂದ ಮಹತ್ವದ ನಿರ್ಧಾರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments