Thursday, July 25, 2024
HomeNewsಪ್ರಥಮ ಬಾರಿಗೆ KSRTCಯಿಂದ ದೊಡ್ಡ ಬದಲಾವಣೆ! ಅಷ್ಟಕ್ಕೂ KSRTC ಈ ನಿರ್ಧಾರ ತೆಗೆದುಕೊಂಡಿದ್ದೇಕೆ ಕಾರಣ ಇಲ್ಲಿದೆ

ಪ್ರಥಮ ಬಾರಿಗೆ KSRTCಯಿಂದ ದೊಡ್ಡ ಬದಲಾವಣೆ! ಅಷ್ಟಕ್ಕೂ KSRTC ಈ ನಿರ್ಧಾರ ತೆಗೆದುಕೊಂಡಿದ್ದೇಕೆ ಕಾರಣ ಇಲ್ಲಿದೆ

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಸರ್ಕಾರದಲ್ಲಿ ಒಂದೊಂದೇ ಯೋಜನೆಗಳು ಹೆಚ್ಚಿನ ಮಾನ್ಯತೆಯನ್ನು ಪಡೆಯುತ್ತಲೇ ಇದ್ದು ಅದರಲ್ಲಿ ಈಗ ಹೆಚ್ಚು ಪ್ರಚಲಿತವಾದ ಯೋಜನೆ ಎಂದರೆ ಅದು ಶಕ್ತಿ ಯೋಜನೆಯಾಗಿದೆ. ಜನರಿಂದ ಸರ್ಕಾರದ ಈ ಶಕ್ತಿ ಯೋಜನೆಗೆ ಉತ್ತಮ ರೀತಿಯ ಸ್ಪಂದನೆ ದೊರೆಯುತ್ತಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಈ ಮೂಲಕ ಸರ್ಕಾರಿ ಬಸ್ ನಲ್ಲಿ ಹೆಚ್ಚಾಗುತ್ತಿದೆ. ಈ ಕಾರಣದಿಂದ ಕೆಎಸ್ಆರ್ಟಿಸಿ ಈಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಆ ನಿರ್ಧಾರ ಏನು ಎಂಬುದರ ಮಾಹಿತಿಯನ್ನು ನಿಮಗೀಗ ತಿಳಿಸಲಾಗುತ್ತದೆ.

big change from KSRTC for the first time
big change from KSRTC for the first time
Join WhatsApp Group Join Telegram Group

ಕೆಎಸ್ಆರ್ಟಿಸಿ ಇಂದ ಮಹತ್ವದ ನಿರ್ಧಾರ :

ರಾಜ್ಯದಲ್ಲಿ ಶಕ್ತಿ ಯೋಜನೆಯ ಯಶಸ್ವಿಯಾಗುವುದರ ಮೂಲಕ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಿಳಾ ಪ್ರಯಾಣಿಕರೆ ಈ ಮೂಲಕ ಸರ್ಕಾರಿ ಬಸ್ ನಲ್ಲಿ ಹೆಚ್ಚಾದ ಕಾರಣ ರಾಜ್ಯ ಸರ್ಕಾರವು ಅಧಿಕ ಬಸ್ ಗಳ ಏರ್ಪಾಡನ್ನು ಮಾಡಲು ತೀರ್ಮಾನವನ್ನು ಕೈಗೊಂಡಿದೆ. ಈ ಬಗ್ಗೆ ತೀರ್ಮಾನ ಕೈಗೊಂಡಿರುವುದರಿಂದ ಹೆಚ್ಚುವರಿ ಬಸ್ಸನ್ನು ಖರೀದಿಸಲು ನಿರ್ಧರಿಸಿದೆ.

ಸರ್ಕಾರದಿಂದ ಹೊಸ ನಿರ್ಣಯ :

ಶಕ್ತಿ ಯೋಜನೆ ಬಂದ ಕಾರಣ ಖಾಸಗಿ ಬಸ್ಗೆ ಹೊಡೆತ ನೀಡುವ ಕಾರ್ಯ ನಡೆಯುತ್ತಿದೆ. ಹಾಗಾಗಿ ಖಾಸಗಿ ಕ್ಷೇತ್ರದಿಂದ ಸರ್ಕಾರಿ ಬಸ್ಗೆ ಡ್ರೈವರ್ ಗಳನ್ನು ನೇಮಕ ಮಾಡಲಾಗುತ್ತದೆ ಎಂಬ ಹೊಸ ಸುದ್ದಿಯು ಹಬ್ಬಿದೆ. ಹಾಗಾಗಿ ಸರ್ಕಾರಿ ಬಸ್ ಖಾಸಗಿ ಡ್ರೈವರ್ ಗಳ ನೇಮಕ ಆಗುವುದರ ಮೂಲಕ ಖಾಸಗಿ ಬಸ್ಸಾಗಿ ಮಾರ್ಪಡುತ್ತದೆ ಎಂಬ ಭಯ ಜನರನ್ನು ಕಾಡುತ್ತಿದೆ. ಎಲೆಕ್ಟ್ರಾನಿಕ್ ವಾಹನಕ್ಕೆ ಈ ಹಿಂದೆ ಖಾಸಗಿ ಡ್ರೈವರ್ ಗಳ ನೇಮಕ ಮಾಡಿದ್ದು ಅಧಿಕ ಬಸ್ ನೇಮಕ ಶಕ್ತಿ ಯೋಜನೆಯಿಂದ ಮಾಡಲಾಗುತ್ತಿದ್ದು ಇದಕ್ಕೆ ಖಾಸಗಿ ಬಸ್ ಡ್ರೈವರ್ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್! ವಿದ್ಯಾಸಿರಿ ಸ್ಕಾಲರ್ಶಿಪ್ ಅಪ್ಲಿಕೇಶನ್ ಮತ್ತೆ ಆರಂಭ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

ಡ್ರೈವರ್ ಗಳ ಸಮಸ್ಯೆ :

ರಾಜ್ಯ ಸರ್ಕಾರವು ಸರ್ಕಾರಿ ಬಸ್ ಗಳಿಗೆ ಕೋವಿಡ್ ನಂತರ ಚಾಲಕರನ್ನು ನೇಮಕ ಮಾಡೆ ಇರಲಿಲ್ಲ. ಇದಾದ ನಂತರ ನಿವೃತ್ತರಾದವರ ಸ್ಥಾನ ಕೂಡ ಮರುನೇಮಕ ಮಾಡಲಿಲ್ಲ. ಅದರಲ್ಲಿ ಈ ನಡುವೆ ಕೆಲವು ಚಾಲಕರು ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಸಹ ನೀಡಿದ್ದಾರೆ ಹಾಗಾಗಿ ಸರ್ಕಾರಿ ಬಸ್ ನಲ್ಲಿ ಚಾಲಕರ ಕೊರತೆ ಎದ್ದು ಕಾಣುತ್ತಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಹಾಗಾಗಿ 2000 ಕ್ಕೂ ಹೆಚ್ಚಿನ ಡ್ರೈವರ್ ಗಳನ್ನು ಖಾಸಗಿ ಬಸ್ ನಿಂದ ಸರ್ಕಾರಿ ಬಸ್ಗೆ ನೇಮಕ ಮಾಡಲು ರಾಜ್ಯ ಸರ್ಕಾರವು ಈಗಾಗಲೇ ತೀರ್ಮಾನ ಕೈಗೊಂಡಿರುವುದರಿಂದ ಟೆಂಡರ್ ಪ್ರಕ್ರಿಯೆಯು ಸಹ ಈ ಬಗ್ಗೆ ನಡೆಯಲಿದೆ. ಸಾರಿಗೆ ಇಲಾಖೆಯ ಈ ಖಾಸಗಿ ಚಾಲಕರ ಪ್ರವೇಶ ಈ ಹಿಂದಿನ ತೀರ್ಮಾನವೇ ಆಗಿದ್ದು ಇದಕ್ಕೆ ಶಕ್ತಿ ಯೋಜನೆಯ ಬಲವು ಸಹ ಎನ್ನಬಹುದಾಗಿದೆ. ಹೊಸ ಬಸ್ ಗಳ ಸೇರ್ಪಡೆ ಮಾಡಲು ಶಕ್ತಿ ಯೋಜನೆ, ಅನುವು ಮಾಡಿ ಕೊಟ್ಟಿದ್ದು ಈ ಹೊಸ ಬಸ್ ಗಳಿಗೆ ಖಾಸಗಿ ಬಸ್ ಚಾಲಕರನ್ನು ಕರೆತಾರಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬರುತ್ತಿದೆ.

ಹೀಗೆ ಕೆಎಸ್ಆರ್ಟಿಸಿಯಿಂದ ಈ ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದ್ದು ಇದೇ ಮೊದಲ ಬಾರಿಗೆ ೆಎಸ್ಆರ್‌ಟಿಸಿಯು ಇಂತಹ ಬದಲಾವಣೆಯನ್ನು ಮಾಡಲು ಮುಂದಾಗುತ್ತಿದೆ. ಇದರಿಂದ ಖಾಸಗಿ ಬಸ್ಗಳಲ್ಲಿ ಕೆಲಸ ಮಾಡುತ್ತಿರುವಂತಹ ಚಾಲಕರು ಸರ್ಕಾರಿ ಬಸ್ಗಳಲ್ಲಿ ಕೆಲಸ ಮಾಡಲು ಸಹಕಾರಿಯಾಗಿದೆ ಎಂದು ಹೇಳಬಹುದಾಗಿದೆ. ಕೆಎಸ್ಆರ್ಟಿಸಿ ತೀರ್ಮಾನವನ್ನು ನಿಮ್ಮ ಸ್ನೇಹಿತರು ಹಾಗೂ ಬಂದು ಮಿತ್ರರಲ್ಲಿ ಯಾರಾದರೂ ಕೆಎಸ್ಆರ್ಟಿಸಿಯಲ್ಲಿ ಚಾಲಕರಾಗಿ ಅಥವಾ ಖಾಸಗಿ ಬಸ್ ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ವಿದ್ಯಾರ್ಥಿಗಳಿಗೆ ಆತಂಕದ ಸುದ್ದಿ: ದೇಶದಲ್ಲಿದೆ 21 ಫೇಕ್ ಯುನಿವರ್ಸಿಟಿ! ಕರ್ನಾಟಕದ ಯಾವ ಯುನಿವರ್ಸಿಟಿ ನಕಲಿ ಗೊತ್ತಾ? ಇಲ್ಲಿದೆ ಎಕ್ಸ್‌ಕ್ಲೂಸಿವ್ ಡೀಟೇಲ್ಸ್

ನಿಮ್ಮ ಕನಸಿನ ವಸ್ತುಗಳನ್ನು ಖರೀದಿಸಲು ಅಮೇಜಾನ್‌ ತಂದಿದೆ ಗ್ರೇಟ್ ಫ್ರೀಡಂ ಫೆಸ್ಟಿವಲ್! ಸ್ಮಾರ್ಟ್ ಫೋನ್​ಗಳ ಮೇಲೆ ಭರ್ಜರಿ​ ಡಿಸ್ಕೌಂಟ್, ಕೇವಲ 2 ದಿನ ಮಾತ್ರ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments