Thursday, June 13, 2024
HomeTrending Newsಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಈ ಆರು ಲಕ್ಷ ಜನರಿಗೆ ಹಣ ಸಿಗುವುದಿಲ್ಲ

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಈ ಆರು ಲಕ್ಷ ಜನರಿಗೆ ಹಣ ಸಿಗುವುದಿಲ್ಲ

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಜಾರಿಗೆ ತಂದಂತಹ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿಗೆ ಅಕ್ಕಿಗೆ ಬದಲಾಗಿ ಹಣವನ್ನು ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಅದರಂತೆ ಈ ಹಣ ಯಾರಿಗೆ ಸಿಗಲಿದೆ ಎಂಬುದರ ಬಗ್ಗೆ ಹಾಗೂ ಈ ಹಣವನ್ನು ಹೇಗೆ ವರ್ಗಾವಣೆ ಮಾಡಲಾಗುತ್ತದೆ ಹಾಗೂ ಎಷ್ಟು ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ನೀಡಲಾಗುತ್ತದೆ ಹಾಗೂ ಯಾರಿಗೆ ಈ ಹಣ ಸಿಗುವುದಿಲ್ಲ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

bpl-card-update
bpl-card-update
Join WhatsApp Group Join Telegram Group

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿಗೆ ಹಣ :

ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದಂತಹ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರವು ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದ ಕೆಲವು ಧೋರಣೆಗಳಿಂದ ರಾಜ್ಯ ಸರ್ಕಾರಕ್ಕೆ ಸಂಪೂರ್ಣವಾಗಿ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿಗೆ ಹಣವನ್ನು ನೀಡಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಅದರಂತೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳನ್ನು ನೀಡಲಾಗುತ್ತಿದೆ.

ಬಿಪಿಎಲ್ ಕಾರ್ಡ್ದಾರರಿಗೆ ಹಣ ಸಿಗಲಿದೆ :

ಹುಟ್ಟು ಕರ್ನಾಟಕ ರಾಜ್ಯದಲ್ಲಿ 1.78 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವವರು ಇದ್ದಾರೆ. ಇದರಲ್ಲಿ ಸುಮಾರು 6 ಲಕ್ಷ ಜನರ ಕಾರ್ಡುಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದಿಲ್ಲ ಅಂದರೆ ಆಧಾರ್ ಸಂಖ್ಯೆಗೆ ರೇಷನ್ ಕಾರ್ಡ್ ಲಿಂಕ್ ಆಗಿರಬೇಕು ಜೊತೆಗೆ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಮ್ಯಾಪಿಂಗ್ ಆಗಿರಬೇಕು. ಕರ್ನಾಟಕದಲ್ಲಿರುವ 6 ಲಕ್ಷ ಕಾಡುದಾರರು ಈ ಬ್ಯಾಂಕ್ ಖಾತೆಗೆ ತಮ್ಮ ಪಡಿತರ ಚೀಟಿಯನ್ನು ಲಿಂಕ್ ಮಾಡಿರುವುದಿಲ್ಲ. ಹಾಗಾಗಿ ಹೀಗೆ ಮ್ಯಾಪಿಂಗ್ ಆಗದ ಬಿಪಿಎಲ್ ಕಾರ್ಡುದಾರರಿಗೆ ಈ ಅನ್ನಭಾಗ್ಯ ಯೋಜನೆಯ ಹಣ ತಲಿಪೆರಿಸಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯನ್ನು ತಿಳಿಸಿದ್ದಾರೆ. ಹಾಗಾಗಿ ತಕ್ಷಣವೇ ನಿಮ್ಮ ರೇಷನ್ ಕಾರ್ಡ್ ಹೊಂದಿರುವ ಆಧಾರ್ ಕಾರ್ಡ್ಗೆ ಮ್ಯಾಪಿಂಗ್ ಮಾಡಿಸಿಕೊಳ್ಳಿ.

ಆಧಾರ್ ಕಾರ್ಡ್ ಜೊತೆಗೆ ಡಿ ಬಿ ಟಿ ಲಿಂಕ್ :

ಮಹಿಳೆಯರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ಹಾಗೂ ಅನ್ನಭಾಗ್ಯ ಯೋಜನೆಯಡಿಯಲ್ಲಿ 120 ರೂಪಾಯಿಗಳನ್ನು ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಹೀಗೆ ನೇರವಾಗಿ ಜಮಾ ಮಾಡಲು ನಿಮ್ಮ ಆಧಾರ್ ಕಾರ್ಡ್ ಗೆ ಡಿಬಿಟಿ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಈ ಡಿ ಬಿ ಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದು ಅರ್ಥ. ಇದರ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಮಹಿಳೆಯರಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಬಹುದಾಗಿದೆ.

ಇದನ್ನು ಓದಿ :ಪಿಎಂ ಕಿಸಾನ್ 14ನೇ ಕಂತಿಗೆ ಅಂತಿಮ ದಿನಾಂಕ ಘೋಷಣೆ : ಎಲ್ಲರ ಖಾತೆಗೆ ಜುಲೈ 7 ರಂದು ಹಣ ಬರಲಿದೆ

ಡಿಬಿಟಿ ಲಿಂಕ್ ಮಾಡುವುದು ಹೇಗೆ :

ಆಧಾರ್ ಕಾರ್ಡ್ ನೊಂದಿಗೆ ಡಿ ಬಿ ಟಿ ಲಿಂಕ್ ಅನ್ನು ಮಾಡಲು ಮೊದಲು ಆಧಾರ್ ಕಾರ್ಡ್ ಅಧಿಕೃತ ವೆಬ್ಸೈಟ್ ಆದ https://resident.uidai.gov./bank-mapper ವೆಬ್ಸೈಟ್ನ ಮೂಲಕ ಅರ್ಜಿದಾರರು ಆಧಾರ್ ಕಾರ್ಡನ್ನು ಡಿ ಬಿ ಟಿಗೆ ಲಿಂಕ್ ಮಾಡಿಕೊಳ್ಳಬೇಕು. ಇದರಿಂದ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅರ್ಜಿದಾರರಿಗೆ ಅವರು ಫಲಾನುಭವಿಗಳಾಗಿದ್ದರೆ ನೇರವಾಗಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಸರ್ಕಾರ ನೀಡುತ್ತದೆ.

ಹೀಗೆ ಕರ್ನಾಟಕ ಸರ್ಕಾರದ ಈ ಮಹತ್ವದ ಎರಡು ಯೋಜನೆಗಳ ಬಗ್ಗೆ ಕೆಲವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಈ ಮಾಹಿತಿಯನ್ನು ಅವರಿಗೆ ತಿಳಿಸುವುದರ ಮೂಲಕ ಅವರು ಸಹ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಹಾಯ ಮಾಡಿ ಧನ್ಯವಾದಗಳು.

ಇಷ್ಟು ಜನರಿಗೆ ಹಣ ದೊರೆಯುವುದಿಲ್ಲ ?

ಆರು ಲಕ್ಷ ಜನರಿಗೆ ಹಣ ದೊರೆಯುವುದಿಲ್ಲ

ಎಷ್ಟು ಕೆಜಿ ಅಕ್ಕಿ ಎಷ್ಟು ಹಣ ನೀಡುತ್ತಾರೆ ?

5 ಕೆಜಿ ಅಕ್ಕಿ ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂಪಾಯಿ

ಯಾವ ವಿಧಾನದ ಮೂಲಕ ಹಣ ನೀಡಲಾಗುವುದು ?

ಡಿಬಿಟಿ ವಿಧಾನದ ಮೂಲಕ ಹಣ ಜಮಾ ಆಗಲಿದೆ

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗಾಗಿ ಪ್ರತ್ಯೇಕ ಆ್ಯಪ್! ಈ ಆ್ಯಪ್ ನಲ್ಲಿ ಅರ್ಜಿ ಸಲ್ಲಿಕೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments