Friday, June 21, 2024
HomeTrending NewsBreaking News: ಶೀಘ್ರದಲ್ಲೇ ಬಿಪಿಎಲ್‌ ಕಾರ್ಡ್‌ ಅರ್ಜಿ ಸಲ್ಲಿಕೆ ಪ್ರಾರಂಭ! ಹೊಸ ಬಿಪಿಎಲ್‌ ಕಾರ್ಡ್‌ ಬೇಕೆಂದ್ರೆ...

Breaking News: ಶೀಘ್ರದಲ್ಲೇ ಬಿಪಿಎಲ್‌ ಕಾರ್ಡ್‌ ಅರ್ಜಿ ಸಲ್ಲಿಕೆ ಪ್ರಾರಂಭ! ಹೊಸ ಬಿಪಿಎಲ್‌ ಕಾರ್ಡ್‌ ಬೇಕೆಂದ್ರೆ ಈ ಕಂಡೀಷನ್ಸ್ ಅಪ್ಲೈ‌

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕಾಂಗ್ರೆಸ್‌ ಗ್ಯಾರೆಂಟಿ ಎಫೆಕ್ಟ್‌ ನಿಂದ ರಾಜ್ಯದ ಎಲ್ಲಾ ಜನಸಾಮಾನ್ಯರು ಇದೀಗ‌ ಹೊಸ ರೇಷನ್‌ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರವು ರೇಷನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಲು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಬಿಪಿಎಲ್‌ ಕಾರ್ಡ್‌ ಮಾಡಿಸಲು ಪ್ರತಿಯೊಬ್ಬರು ಕೂಡ ಮುಂದಾಗಿದ್ದಾರೆ. ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ, ಅವರೆಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಕೆಲವು ಕಂಡಿಶನ್‌ಗಳಿವೆ ಅವು ಏನೆಂದು ನಾವು ಈ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

bpl ration card apply online karnataka
Join WhatsApp Group Join Telegram Group

3 ತಿಂಗಳ ಬಳಿಕ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇದೀಗ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಶುರುವಾಗಲಿದೆ. ಹೊಸ ಬಿಪಿಎಲ್‌ ಕಾರ್ಡ್‌ ಬೇಕೆಂದರೆ ಕಂಡಿಶನ್‌ ಅಪ್ಲೈ, ಕಾಂಗ್ರೆಸ್ ಗ್ಯಾರಂಟಿ ಎಫೆಕ್ಟ್ ನಿಂದಾಗಿ ಬಿಪಿಎಲ್‌ ಕಾರ್ಡ್‌ ಗೆ ತುಂಬಾ ಡಿಮ್ಯಾಂಡ್‌ ಶುರು ಆಗಿದೆ. ಮೊದಮೊದಲು ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹೊಸ ಕಾರ್ಡ್‌ ಗೆ ಅರ್ಜಿ ಸಲ್ಲಿಕೆ ಮಾಡಲು ಆಗುತ್ತಿರಲಿಲ್ಲ. ಆಹಾರ ಇಲಾಖೆ ಕೂಡ ವೆಬ್ಸೈ ಟ್‌ ಅನ್ನು ಸ್ಥಗಿತ ಮಾಡಿತ್ತು. ಆದರೆ ಈಗ ರಾಜ್ಯ ಸರ್ಕಾರ ಬಿಪಿಎಲ್‌ ಕಾರ್ಡ್‌ ಗೆ ಅರ್ಜಿ ಹಾಕಲು ಗುಡ್‌ ನ್ಯೂಸ್‌ ಕೊಟ್ಟಿದೆ. ಇಂದು ಬಿಪಿಎಲ್‌ ಕಾರ್ಡ್‌ ಅರ್ಜಿ ಹಾಕಲು ಆಹಾರ ಇಲಾಖೆಯು ಇಂದು ಇದರ ಬಗ್ಗೆ ಮಹತ್ವದ ಸಭೆ ನಡೆಯಲಿದೆ.

ಹೊಸದಾಗಿ ಬಿಪಿಎಲ್‌ ಕಾರ್ಡ್‌ ಗೆ ಅರ್ಜಿ ಹಾಕಲು ಹೊಸ ವೆಬ್ಸೈಟ್‌ ಅನ್ನು ಓಪನ್‌ ಮಾಡಬೇಕಾಗಿದ್ದು ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಅರ್ಜಿ ಸಲ್ಲಿಕೆಗೆ ರಾಜ್ಯದಲ್ಲಿ 2016 ರಲ್ಲಿ ಇರುವ ಮಾನದಂಡಗಳೇ ಮುಂದುವರೆಯಲಿದೆ. ಬಿಪಿಎಲ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಲು ಇರುವ ಮಾನದಂಡಗಳು ಏನೆಂದೆರೆ

  • ಸರ್ಕಾರಿ ಅರೆ ಸರ್ಕಾರಿ ಹಾಗೂ ಖಾಯಂ ನೌಕರರು ಆಗಿರಬಾರದು
  • ವೃತ್ತಿ ತೆರಿಗೆ ಜಿಎಸ್‌ ಟಿ, ಆದಾಯ ತೆರಿಗೆ ಪಾವತಿದಾರರಾಗಿಬಾರದು.
  • ಗ್ರಾಮೀಣ ಭಾಗದಲ್ಲಿ 3 ಹೆಕ್ಟೆರ್‌ ಗಿಂತ ಭೂಮಿ ಹೆಚ್ಚು ಹೊಂದಿರಬಾರದು.
  • ನಗರದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮೆನಯಿರಬಾರದು.
  • ಟ್ಯಾಕ್ಸಿ, ಕ್ಯಾಬ್‌ ಟ್ಯಾಕ್ಟರ್‌ ಹೊರತಾಗಿ ವೈಟ್‌ ಬೋರ್ಡ್ ಕಾರು ಇರಬಾರದು.
  • ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ ಕುಟುಂಬ ಆಗಿರಬಾರದು.

ಹೊಸ ಕಾರ್ಡ್‌ಗಳ ಬಗ್ಗೆ ಮಾಹಿತಿ ಕೊಟ್ಟ ಆಹಾರ ಸಚಿವ ಕೆ. ಹೆಚ್‌ ಮುನಿಯಪ್ಪ ಹೊಸ ಕಾರ್ಡ್ ಗಳ ಅರ್ಜಿ ಸ್ವೀಕಾರ ಬೇಗನೆ ಆಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಅದೇಶವನ್ನು ಕೊಡಲಾಗಿದೆ. ಆಹಾರ ಇಲಾಖೆ ಇದೀಗ ಮನೆ ಮನೆ ಸರ್ವೆ ಮಾಡಲು ಮುಂದಾಗಿದೆ. ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರಾಗಿದ್ದೀರಾ ಅವರೆಲ್ಲರೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇತರೆ ವಿಷಯಗಳು:

Ration Card Breaking News! ಇನ್ಮುಂದೆ ಇಂಥವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ:‌ ಕರ್ನಾಟಕ ಸರ್ಕಾರದ ಅಧಿಕೃತ ಆದೇಶ

ನಟ ವಿಜಯ ರಾಘವೇಂದ್ರ ಪತ್ನಿಯವರ ನಿಧನದ ಸುದ್ದಿಯ ಬೆನ್ನಲ್ಲೇ ಅವರ ಕುಟುಂಬಕ್ಕೆ ಮತ್ತೊಂದು ಸಂಕಷ್ಟ! ಏನು ಗೊತ್ತಾ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments