Thursday, July 25, 2024
HomeGovt Schemeಅನ್ನಭಾಗ್ಯ ಯೋಜನೆ ಫಲಾನುಭವಿಗಳ ಗಮನಕ್ಕೆ! ಕೂಡಲೇ ಈ ಕೆಲಸ ಮಾಡಿ ಇಲ್ಲ ಅಂದ್ರೆ ಈ ತಿಂಗಳ...

ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಗಮನಕ್ಕೆ! ಕೂಡಲೇ ಈ ಕೆಲಸ ಮಾಡಿ ಇಲ್ಲ ಅಂದ್ರೆ ಈ ತಿಂಗಳ ರೇಷನ್ ಬಂದ್! ಹಣಭಾಗ್ಯಾನೂ ಬಂದ್..!

ನಮಸ್ಕಾರ ಸ್ನೇಹಿತರೆ ಈಗಾಗಲೇ ರಾಜ್ಯ ಸರ್ಕಾರವು ಜಾರಿಗೊಳಿಸುವ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ರಾಜ್ಯ ಸರ್ಕಾರವು ಈಗ ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ಹಾಗಾದರೆ ಅನ್ನ ಭಾಗ್ಯ ಯೋಜನೆಯ ಬದಲಾವಣೆಗಳು ಯಾವುವು ಯಾರಿಗೆ ಈ ಅನ್ನ ಭಾಗ್ಯ ಯೋಜನೆ ದೊರೆಯಲಿದೆ ಎಂಬುದರ ಸಂಪೂರ್ಣ ಮಾಹಿತಿಯು ನೀವು ನೋಡಬಹುದಾಗಿದೆ.

EKYC is mandatory for Annabhagya Yojana beneficiaries
EKYC is mandatory for Annabhagya Yojana beneficiaries
Join WhatsApp Group Join Telegram Group

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ :

ಈಗಾಗಲೇ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿತ್ತು ಆದರೆ ಕೇಂದ್ರ ಸರ್ಕಾರದಿಂದ ಅಕ್ಕಿ ಬರೆದ ಕಾರಣ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ನೀಡಲು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಈಗಾಗಲೇ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡಿತರ ಚೀಟಿ ಹೊಂದಿರುವವರು ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಒಂದು ಕುಟುಂಬದಲ್ಲಿ ಮೂರಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರು ಇದ್ದಾರೆ ಅವರಿಗೆ ಮಾತ್ರ ಹೆಚ್ಚುವರಿ ಹಣ ಸಿಗಲಿದೆ ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ. 170 ರೂಪಾಯಿಗಳನ್ನು ಒಂದು ಕುಟುಂಬದಲ್ಲಿ ನಾಲ್ಕು ಜನ ಸದಸ್ಯರಿದ್ದಾರೆ ಅವರಿಗೆ ನೀಡಲಾಗುತ್ತದೆ ಐದು ಜನ ಸದಸ್ಯರಿದ್ದಾರೆ ಅವರಿಗೆ 340ಗಳನ್ನು ಹಾಗೆಯೇ ಆರು ಜನ ಸದಸ್ಯರಿದ್ದಾರೆ ಅಂತ ಅವರಿಗೆ 510 ರೂಪಾಯಿಗಳನ್ನು ರಾಜ್ಯ ಸರ್ಕಾರ ನೀಡಲಾಗುತ್ತದೆ ಎಂದು ಘೋಷಿಸಿದೆ. ಅದೇ ರೀತಿ ಒಂದು ಕುಟುಂಬದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೆ ಈ ರೀತಿಯಾಗಿ ಅವರ ಹಣವನ್ನು ಅನುಪಾತದಲ್ಲಿ ನೀಡಲಾಗುತ್ತದೆ ಎಂದು ಹೇಳಿದೆ. ಪಡಿತರ ಸೌಲಭ್ಯವನ್ನು ಕಳೆದ ಮೂರು ತಿಂಗಳಲ್ಲಿ ಪಡೆದಿದ್ದರೆ ಮಾತ್ರ ಅಂಥವರಿಗೆ ಅನ್ನ ಭಾಗ್ಯ ಯೋಜನೆಯ ನಗದು ಹಣ ವರ್ಗಾವಣೆ ಆಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಮಹಿಳಾ ಮುಖ್ಯಸ್ಥರ ಹೆಸರಿನಲ್ಲಿ ಪಡಿತರ ಚೀಟಿ ಇರಬೇಕು :

ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಆ ಕುಟುಂಬದಲ್ಲಿ ಮುಖ್ಯಸ್ಥರು ಇರಬೇಕು. ಆದರೆ ಆ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚಿನ ಮುಖ್ಯಸ್ಥರನ್ನು ಹೊಂದಿದ್ದರೆ ಅದನ್ನು ಈ ಕೂಡಲೇ ಸರಿಪಡಿಸಿಕೊಳ್ಳಿ ಹಾಗೂ ಒಬ್ಬ ಮುಖ್ಯಸ್ಥರನ್ನು ಪಡಿತರ ಚೀಟಿಯಲ್ಲಿ ಹೊಂದಿರುವಂತೆ ಅಲ್ಲದೆ ಮಹಿಳಾ ಸದಸ್ಯರೇ ಮುಖ್ಯಸ್ಥರಾಗಿರುವಂತೆ ಪಡಿತರ ಚೀಟಿಯಲ್ಲಿ ಬದಲಾವಣೆಗೆ ಈಗ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದೆ. ಇದರ ಜೊತೆಗೆ ಪಡಿತರ ಚೀಟಿಯಲ್ಲಿ ಮುಖ್ಯಸ್ಥರಾಗಿರುವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಹೇಗಿದ್ದರೆ ಮಾತ್ರ ಅವರಿಗೆ ಅನ್ನ ಭಾಗ್ಯ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಇದನ್ನು ಓದಿ : Health Breaking News! ಎಲ್ಲಾ ಕಡೆ ಅತಿಯಾಗಿ ಹರಡುತ್ತಿರುವ ಖಾಯಿಲೆ!‌ ಈ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿದರೆ ಸೋಂಕಿನಿಂದ ಮುಕ್ತಿ..! ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗ ಸೂಚಿ! ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

ಇ ಕೆ ವೈ ಸಿ ಕಡ್ಡಾಯ :

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದಂತಹ ಪಡಿತರ ಚೀಟಿ ಕುಟುಂಬಗಳಿಗೆ ಹಣ ವರ್ಗಾವಣೆ ಮಾಡಲಿದೆ ಎಂದು ರಾಜ್ಯ ಸರ್ಕಾರವು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. ನ್ಯಾಯಬೆಲೆ ಅಂಗಡಿಯಲ್ಲಿಯೇ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಬೇಕು ಎಂದು ಸರ್ಕಾರ ತಿಳಿಸಿದೆ. ಹೀಗಿರುವ ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಬ್ಯಾಂಕಿ ಈಕೆ ವೈ ಸಿ ಆಗದೇ ಇರುವ ಅಂತಿಯೋದಯ ಅನ್ನಭಾಗ್ಯ ಯೋಜನೆಯ ಅಥವಾ ಪಡಿತರ ಚೀಟಿ ಫಲಾನುಭವಿಗಳು ಅಂತವರ ಬ್ಯಾಂಕ್ ಖಾತೆಯನ್ನು ಸರಿಪಡಿಸಿಕೊಳ್ಳಲು ಆಹಾರ ಇಲಾಖೆಯ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಈ ಕೆವೈಸಿಯನ್ನು ಮಾಡಿಸದೆ ಇರುವ ಪಡಿತರ ಚೀಟಿ ದಾರರಿಗೆ ತಾತ್ಕಾಲಿಕವಾಗಿ ಆಹಾರ ಧಾನ್ಯ ಹಾಗೂ ನಗದು ವರ್ಗಾವಣೆಯನ್ನು ಸಹಿತಗೊಳಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಹೀಗೆ ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ಹಲವಾರು ಬದಲಾವಣೆಗಳನ್ನು ಜಾರಿಗೊಳಿಸುತ್ತಿದೆ. ಈ ಬದಲಾವಣೆಯ ಮಾಹಿತಿಯು ನಿಮ್ಮ ಪಡಿತರ ಚೀಟಿಯನ್ನು ಹೊಂದಿದಂತಹ ಸ್ನೇಹಿತರು ಸಂಬಂಧಿಕರು ಹಾಗೂ ಬಂಧು ಮಿತ್ರರಿಗೆ ಕಳಿಸಿ ಅವರು ಸಹ ಪಡಿತರ ಚೀಟಿಯಲ್ಲಿ ಆಗಿರುವಂತಹ ಬದಲಾವಣೆಗಳ ಬಗ್ಗೆ ತಿಳಿದುಕೊಂಡು ಸರಿಪಡಿಸಿಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Jio ಗ್ರಾಹಕರಿಗೆ ಭರ್ಜರಿ ಬ್ರೇಕಿಂಗ್‌ ನ್ಯೂಸ್!‌ ರೀಚಾರ್ಜ್‌ ಇಲ್ಲದೆ ಒಂದು ತಿಂಗಳು ಎಲ್ಲವೂ ಉಚಿತ.!‌ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

New Ration Card Update: ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ನಿಯಮ ಬದಲಾವಣೆ, ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments