Thursday, July 25, 2024
HomeTrending Newsರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ 7 ಕಂಡಿಷನ್ಸ್ : ಅರ್ಹತೆ ಮತ್ತು ಅಗತ್ಯ ದಾಖಲೆಗಳೇನು ಇಲ್ಲಿದೆ...

ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ 7 ಕಂಡಿಷನ್ಸ್ : ಅರ್ಹತೆ ಮತ್ತು ಅಗತ್ಯ ದಾಖಲೆಗಳೇನು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾದ ನಂತರ ತಾವು ನೀಡಿದಂತಹ ಭರವಸೆ ಯೋಜನೆಗಳಲ್ಲಿ ನಾಲ್ಕು ಭರವಸೆ ಯೋಜನೆಗಳಿಗೆ ಈಗಾಗಲೇ ಚಾಲನೆಯನ್ನು ನೀಡಿದ್ದು ಅದರಲ್ಲಿ ಈಗ ಮತ್ತೊಂದು ಭರವಸೆ ಯೋಜನೆಯಾದ ಯುವನಿಧಿ ಯೋಜನೆಗೆ ರಾಜ್ಯ ಸರ್ಕಾರವು ಚಾಲನೆ ನೀಡಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಯುವ ನಿಧಿ ಯೋಜನೆಯು ಯಾವಾಗ ಜಾರಿಗೆ ಬರುತ್ತದೆ ಹಾಗೂ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಈಗ ನಿಮಗೆ ತಿಳಿಸಲಾಗುತ್ತದೆ.

Eligibility of Yuva Nidhi Scheme
Join WhatsApp Group Join Telegram Group

ಯುವ ನಿಧಿ ಯೋಜನೆಯ ಅರ್ಹತೆಗಳು :

ಯುವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ ಅವುಗಳೆಂದರೆ, 2022- 23ನೇ ಸಾಲಿನಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ವರ್ಷದಲ್ಲಿ ಅಂದರೆ 2022 23ನೇ ಸಾಲಿನಲ್ಲಿ ಶಿಕ್ಷಣವನ್ನು ಮುಗಿಸಿ ಆರು ತಿಂಗಳು ಉದ್ಯೋಗ ಸಿಗದಂತಹ ಅಭ್ಯರ್ಥಿಗಳು, ವೃತ್ತಿಪರ ಕೋರ್ಸ್ ಗಳು ಹಾಗೂ ಪದವೀಧರರಿಗೆ ಪ್ರತಿ ತಿಂಗಳು 3000ಗಳನ್ನು ನೀಡಲಾಗುತ್ತದೆ ಜೊತೆಗೆ ಡಿಪ್ಲೋಮೋ ಪದವೀಧರರಿಗೆ 1500 ಗಳನ್ನು ಪ್ರತಿ ತಿಂಗಳು ಯೋಜನೆಯಡಿಯಲ್ಲಿ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಆರಂಭ : ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ 4 ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಅದೇ ರೀತಿ ಯುವನಿಧಿ ಯೋಜನೆಗೂ ಸಹ ಶೀಘ್ರದಲ್ಲಿ ಅರ್ಜಿಯನ್ನು ಸಲ್ಲಿಸಲು ರಾಜ್ಯ ಸರ್ಕಾರ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಅದರಂತೆ ಈಗ ರಾಜ್ಯ ಸರ್ಕಾರ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಿದ ನಂತರವೇ ಈ ಯೋಜನೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ.

ಯುವನಿಧಿ ಯೋಜನೆಯ ಅವಧಿ :

ಯುವನಿಧೀ ಯೋಜನೆಯು ಕೇವಲ ಎರಡು ವರ್ಷಗಳಿಗೆ ಮಾತ್ರ ಸೀಮಿತವಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳು ಎರಡು ವರ್ಷದೊಳಗಾಗಿ ಉದ್ಯೋಗವನ್ನು ಪಡೆದುಕೊಂಡರೆ ಅವರಿಗೆ ಈ ಯೋಜನೆಯ ಪ್ರಯೋಜನವನ್ನು ನೀಡಲು ಸಾಧ್ಯವಾಗುವುದಿಲ್ಲ. ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಪ್ರಯೋಜನವನ್ನು ಪಡೆಯುತ್ತಿರುವಂತಹ ಅಭ್ಯರ್ಥಿಗಳು ಉದ್ಯೋಗ ದೊರೆತ ನಂತರ ತಮಗೆ ಉದ್ಯೋಗ ದೊರೆತಿದೆ ಎಂದು ಘೋಷಣೆ ಮಾಡಿಕೊಳ್ಳುವಬೇಕು ಇಲ್ಲದಿದ್ದರೆ ಅವರು ದಂಡವನ್ನು ನೀಡಬೇಕಾಗುತ್ತದೆ.

ಇದನ್ನು ಓದಿ : ಶೂನ್ಯ ವಿದ್ಯುತ್ ಬಿಲ್‌ ವಿತರಣೆ ಪ್ರಾರಂಭ! ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಜೀರೋ ವಿದ್ಯುತ್ ಬಿಲ್‌, ಯಾವಾಗ ನಿಮ್ಮ ಕೈ ಸೇರಲಿದೆ ಗೊತ್ತಾ?

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು :

ಯುವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ,ಪದವಿ ಅಂಕಪಟ್ಟಿ ,ವಿಶ್ವವಿದ್ಯಾನಿಲಯದ ಪದವಿ ಪ್ರಮಾಣ ಪತ್ರ, ಡಿಪ್ಲೋಮೋ ಅಂಕಪಟ್ಟಿ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.

ಹೀಗೆ ರಾಜ್ಯ ಸರ್ಕಾರವು ಯುವ ನಿಧಿ ಯೋಜನೆಯನ್ನು ಪ್ರಾರಂಭಿಸುವುದರ ಮೂಲಕ ನಿರುದ್ಯೋಗ ಯುವಕ ಯುವತಿಯರಿಗೆ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ಯೋಜನೆಯ ಪ್ರಯೋಜನವನ್ನು ಅರ್ಹ ಯುವಕ ಯುವತಿಯರು ಪಡೆಯುವಂತೆ ಈ ಮಾಹಿತಿಯನ್ನು ನಿಮ್ಮೆಲ್ಲ ನಿರುದ್ಯೋಗ ಯುವಕ ಯುವತಿಯರಿಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರಿ ನೌಕರರಿಗೆ ಹೊಡೀತು ಲಾಟ್ರಿ: ಹಳೆಯ ಪಿಂಚಣಿ ಯೋಜನೆ ಮತ್ತೆ ಮರುಜಾರಿ! ಆರ್‌ಬಿಐ ನಿಂದ ಮಹತ್ವದ ನಿರ್ಧಾರ

Adhar Card New Update: ನಿಮ್ಮ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಗಳನ್ನು ಕೇವಲ 1 ನಿಮಿಷದಲ್ಲಿ ಬದಲಾಯಿಸಿ! ಇಲ್ಲಿದೆ ಹೊಸ ಡೈರೆಕ್ಟ್‌ ಲಿಂಕ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments