Friday, June 14, 2024
HomeTrending Newsಶಾಲಾ ಕಾಲೇಜು ವಿದ್ಯಾರ್ಥಿಗಳೇ ನಿಮಗೂ ಉಚಿತ ಬಸ್ ಪಾಸ್ ಫ್ರೀ.. ಫ್ರೀ.. ಫ್ರೀ..

ಶಾಲಾ ಕಾಲೇಜು ವಿದ್ಯಾರ್ಥಿಗಳೇ ನಿಮಗೂ ಉಚಿತ ಬಸ್ ಪಾಸ್ ಫ್ರೀ.. ಫ್ರೀ.. ಫ್ರೀ..

ಶಾಲಾ ಕಾಲೇಜು ವಿದ್ಯಾರ್ಥಿಗಳೇ ನಿಮಗೂ ಉಚಿತ ಬಸ್ ಪಾಸ್

ನಮಸ್ತೆ ಕರ್ನಾಟಕದ ಜನತೆಗೆ ನಮ್ಮ ರಾಜ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳಿಗೆ ಒಂದು ಬಂಪರ್ ಆಫರನ್ನು ನೀಡುತ್ತಿದೆ ಅದೇನಂದರೆ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಜೂನ್ 15ರ ತನಕ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದು

Free bus pass student
Join WhatsApp Group Join Telegram Group

ಹೌದು ಈ ಲೇಖನದಲ್ಲಿ ಹೇಳುತ್ತಿರುವುದು ನಿಜ ರಾಜ್ಯದ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳಲು ಉಚಿತ ಬಸ್ ಪಾಸ್ ಪ್ರಯಾಣವನ್ನು ನೀಡುತ್ತಿದೆ ಈಗಾಗಲೇ ಅನೇಕ ಶಾಲಾ-ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಶಾಲಾ ಕಾಲೇಜಿಗೆ ಹೋಗಲು ಸಿದ್ದರಾಗಿದ್ದಾರೆ ಆದ್ದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಮ್ಮ ರಾಜ್ಯದ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣ ಮಾಡಲು ಆದೇಶವನ್ನು ಹೊರಡಿಸಿದೆ ಈ ಆದೇಶದ ಅನ್ವಯ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಅವರಿಗೆ ಯಾವುದೇ ರೀತಿ ತೊಂದರೆ ಆಗಬಾರದೆಂದು ಜೂನ್ 15 ರವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದೆ

ಎಲ್ಲಿಯವರೆಗೂ ಉಚಿತ ಪ್ರಯಾಣಕ್ಕೆ ಅನುಮತಿ

ರಾಜ್ಯದ ವಿದ್ಯಾರ್ಥಿಗಳಿಗೆ ಇದೇ ತಿಂಗಳು ಅಂದರೆ ಜೂನ್ ತಿಂಗಳ 15 ರ ವರೆಗೂ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಈಗಾಗಲೇ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಮಹಿಳೆಯರಿಗೂ ಉಚಿತ ಪ್ರಯಾಣ ಕುರಿತಂತೆ ಅನೇಕ ಚರ್ಚೆಗಳು ಆಗುತ್ತಿದ್ದು ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯನ್ನು ಈಡೇರಿಸುವ ಸಲುವಾಗಿ ಆರ್ಥಿಕ ಹೊರೆಯಾದರೂ ಸಹ ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ

ಇದರ ಬೆನ್ನಲ್ಲೇ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಾಜ್ಯ ರಸ್ತೆ ಸಾರಿಗೆ ನಿಗಮ ಮಕ್ಕಳಿಗೆ ಉಚಿತ ಪ್ರಯಾಣ ಅವಕಾಶ ನೀಡಿದ್ದು ಅವರಿಗೆ ಪಾಸ್ ನೀಡುವುದು ಸ್ವಲ್ಪ ತಡವಾಗಬಹುದು ಹಾಗಾಗಿ ಈ ರೀತಿ ಅವಕಾಶ ಮಾಡಿಕೊಟ್ಟು ವಿದ್ಯಾರ್ಥಿಗಳಿಗೆ ತೊಂದರೆ ಆಗದ ಹಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಆದೇಶ ಹೊರಡಿಸಿದೆ

ಸರ್ಕಾರ ಹೇಳಿದ್ದು ಮಹಿಳೆಯರಿಗೆ ಮಾತ್ರ ಆದರೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲು ಕಾರಣವೇನು

ರಾಜ್ಯದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳು ಆರಂಭವಾಗಿದ್ದು ದೂರ ದೂರದಿಂದ ಬರುವಂತಹ ವಿದ್ಯಾರ್ಥಿಗಳಿಗೆ ಪಾಸಿನ ಅವಶ್ಯಕತೆ ಇದ್ದು ಈ ಪಾಸ್ ಅನ್ನು ನೀಡಲು ಸಮಯ ತೆಗೆದುಕೊಳ್ಳುತ್ತದೆ ಆದರೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಉಚಿತ ಗ್ಯಾರಂಟಿಯಲ್ಲಿ ಒಂದಾದಂತಹ ಮಹಿಳೆಯರಿಗೆ ಉಚಿತ ಪ್ರಯಾಣ ಈ ಗ್ಯಾರಂಟಿ ಜಾರಿ ಮಾಡುವ ಅನೇಕ ಕಾರ್ಯಗಳು ಪ್ರಗತಿಯಲ್ಲಿ ಇರುವುದರಿಂದ ವಿದ್ಯಾರ್ಥಿಗಳ ಬಸ್ ಪಾಸ್ ನೀಡಲು ಕನಿಷ್ಠವಾದರೂ 20 ದಿನಗಳು ತೆಗೆದುಕೊಳ್ಳುತ್ತದೆ ಅಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಮ್ಮ ರಾಜ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ ಇದು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ

ವಿದ್ಯಾರ್ಥಿಗಳು ಯಾವ ದಾಖಲೆಗಳನ್ನು ತೋರಿಸಬೇಕು ಉಚಿತ ಪ್ರಯಾಣಕ್ಕೆ

ಈ ಮೇಲ್ಕಂಡಂತೆ ತಿಳಿಸಿರುವ ಹಾಗೆ ಜೂನ್ 15 ರವರೆಗೂ ಸಹ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದು ವಿದ್ಯಾರ್ಥಿಗಳು ಶಾಲೆಗೆ ಅಥವಾ ಕಾಲೇಜಿಗೆ ತೆರಳಲು ಪ್ರಯಾಣ ಮಾಡುವ ಸಂದರ್ಭದಲ್ಲಿ ಟಿಕೆಟ್ ಕೇಳುವಾಗ ನಿಮ್ಮ ಹತ್ತಿರ ಹಳೆ ಪಾಸಿದ್ದರೆ ಅಥವಾ ಈಗಾಗಲೇ ನೀವು ದಾಖಲಾಗಿರುವ ಶಾಲಾ ಮತ್ತು ಕಾಲೇಜುಗಳಿಂದ ನೀಡಿರುವಂತಹ ಹಣಪಾವತಿಸಿದ ರಶೀದಿಯನ್ನು ನೀವು ಕಂಡಕ್ಟರ್ ಗೆ ತೋರಿಸಬೇಕಾಗುತ್ತದೆ ಅವರು ಅದನ್ನು ಪರಿಶೀಲಿಸಿ ನಿಮಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬಹುದು ಎನ್ನಲಾಗುತ್ತಿದೆ ಪ್ರತಿಯೊಂದು ವಿದ್ಯಾರ್ಥಿಗೂ ಸಹ ಇದರ ಬಗ್ಗೆ ತಿಳಿಸಿ

ಜೂನ್ 15ರ ನಂತರ ಏನು ಮಾಡಬೇಕು

ವಿದ್ಯಾರ್ಥಿಗಳೇ ತೊಂದರೆ ಬೇಡ 2023 ಮತ್ತು 24ನೇ ಸಾಲಿನ ಹೊಸ ಬಾಸ್ ವಿತರಣೆಗೆ ಅರ್ಜಿಯನ್ನು ಸಹ ಸಲ್ಲಿಸಬಹುದು ಹೊಸ ಪಾಸ್ ಅನ್ನು ಪಡೆದುಕೊಳ್ಳಬಹುದು ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿರುವಂತಹ ಅರ್ಜಿ ನಮೂನೆಯನ್ನು ಆನ್ಲೈನ್ ಮೂಲಕ ಭರ್ತಿ ಮಾಡಿ ನಿಮ್ಮ ಕಾಲೇಜು ವಿಭಾಗಕ್ಕೆ ಅಥವಾ ಸಾರಿಗೆ ಸಂಸ್ಥೆಗೆ ತೆಗೆದುಕೊಂಡು ಹೋಗಿ ನೀವು ಹೊಸ ಪಾಸ್ ಅನ್ನು ಮಾಡಿಸಿಕೊಳ್ಳಬೇಕು ಹಾಗೆ ನೀವು ಪಾಸ್ ಮಾಡಿಸಿಕೊಳ್ಳಲು ಕೆಲವೊಂದು ನಿಯಮಗಳಿವೆ ಅದೇನೆಂದರೆ ನಿಮ್ಮ ದಾಖಲಾತಿಗಳಿಗೆ ಸೀಲ್ ಹಾಗೂ ಸಹಿಯನ್ನು ನಿಮ್ಮ ಕಾಲೇಜು ಆಡಳಿತ ಮಂಡಳಿಯಿಂದ ಪ್ರಿನ್ಸಿಪಲ್ ಸಿಗ್ನೇಚರ್ ಒಂದಿಗೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ

ಈ ಮೇಲ್ಕಂಡಂತೆ ಪ್ರತಿದಿನ ಹೊಸ ಹೊಸ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ಬೇಕಾದರೆ ಹಾಗೂ ಸರ್ಕಾರದ ಯೋಜನೆ ಸರ್ಕಾರದ ಉದ್ಯೋಗ ಇನ್ನಿತರ ಮಾಹಿತಿಗಳ ಬಗ್ಗೆ ಸ್ಪಷ್ಟವಾಗಿ ಹಾಗೂ ನಿಖರವಾಗಿ ಮಾಹಿತಿ ಒದಗಿಸುವುದು ನಮ್ಮ ಉದ್ದೇಶವಾಗಿದ್ದು ನೀವು ನಮ್ಮ ಗ್ರೂಪಿನಲ್ಲಿ ಜಾಯಿನ್ ಆಗಬಹುದು ಇದರಿಂದ ನಿಮಗೆ ಪ್ರತಿದಿನ ಮಾಹಿತಿ ಬೇಗನೆ ದೊರೆಯಲಿದೆ ಧನ್ಯವಾದಗಳು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments